Psalms · chapter 108 · verse 11
Psalm 108:11 in Kannada
ದೇವರೇ, ನಮ್ಮನ್ನು ತೊರೆದು ಬಿಟ್ಟವನು ನೀನೇ ಅಲ್ಲವೋ? ನಮ್ಮ ಸೈನ್ಯಗಳ ಸಂಗಡ ಹೊರಟು ಹೋಗದೆ ಇದ್ದ ದೇವರು ನೀನಲ್ಲವೋ?
Devare, nammannu toredu bittavanu neene allavo? Namma sainyagala sangada horatu hogade idda devaru neenallavo?
Psalm 108:11 in English
- King James Version (KJV)
- [Wilt] not [thou], O God, [who] hast cast us off? and wilt not thou, O God, go forth with our hosts?
- World English Bible (WEB)
- Haven’t you rejected us, God? You don’t go out, God, with our armies.
- American Standard Version (ASV)
- Hast not thou cast us off, O God? And thou goest not forth, O God, with our hosts.
- Bible in Basic English (BBE)
- Have you not sent us away from you, O God? and you go not out with our armies.
- Darby Translation (DBY)
- [Wilt] not [thou], O God, who didst cast us off? and didst not go forth, O God, with our armies?
- Webster's Bible (WBS)
- [Wilt] not [thou] , O God, [who] hast cast us off? and wilt not thou, O God, go forth with our armies?
- Young's Literal Translation (YLT)
- Hast not Thou, O God, cast us off? And Thou goest not out, O God, with our hosts!
Read in context
- 9ಮೋವಾಬ್ ನನ್ನನ್ನು ತೊಳೆಯುವ ಪಾತ್ರೆಯು; ಏದೋಮಿನ ಮೇಲೆ ನನ್ನ ಕೆರವನ್ನು ಎಸೆಯುವೆನು; ಫಿಲಿಷ್ಟಿಯದ ಮೇಲೆ ಜಯಧ್ವನಿಗೈಯುವೆನು.
- 10ಬಲ ವುಳ್ಳ ಪಟ್ಟಣಕ್ಕೆ ನನ್ನನ್ನು ಕರೆತರುವವನಾರು? ಏದೋಮಿನ ವರೆಗೆ ನನ್ನನ್ನು ನಡಿಸುವವನಾರು?
- 11ದೇವರೇ, ನಮ್ಮನ್ನು ತೊರೆದು ಬಿಟ್ಟವನು ನೀನೇ ಅಲ್ಲವೋ? ನಮ್ಮ ಸೈನ್ಯಗಳ ಸಂಗಡ ಹೊರಟು ಹೋಗದೆ ಇದ್ದ ದೇವರು ನೀನಲ್ಲವೋ?
- 12ಇಕ್ಕಟ್ಟಿ ನಲ್ಲಿರುವ ನಮಗೆ ಸಹಾಯಕೊಡು; ಮನುಷ್ಯನ ಸಹಾಯವು ವ್ಯರ್ಥವಾಗಿದೆ.ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.
- 13ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.
Cross references
- 2 Chronicles 13:12 2 ಪೂರ್ವಕಾಲವೃತ್ತಾಂತ 13:12ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು.
- Psalm 44:9 ಕೀರ್ತನೆಗಳು 44:9ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ.
- 1 Samuel 29:1–11 1 ಸಮುವೇಲನು 29:1–11ಆದರೆ ಫಿಲಿಷ್ಟಿಯರು ತಮ್ಮ ಎಲ್ಲಾ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿ ಕೊಂಡರು. ಹಾಗೆಯೇ ಇಸ್ರಾಯೇಲ್ಯರು ಇಜ್ರೇಲ್ ನಲ್ಲಿರುವ ಬುಗ್ಗೆಯ ಬಳಿಯಲ್ಲಿ ದಂಡಿಳಿದರು. ಫಿಲಿಷ್ಟಿ ಯರ ಅಧಿಪತಿಗಳು ನೂರು ನೂರಾಗಿಯೂ ಸಾವಿರ ಸಾವಿರವಾಗಿಯೂ ನಡೆದು ಬಂದರು; ಆದರೆ ದಾವೀ ದನೂ ಅವನ ಮನುಷ್ಯರೂ ಆಕೀಷನ ಸಂಗಡ ಹಿಂದಿನ ದಂಡಿನಲ್ಲಿ ಬಂದರು. ಆಗ ಫಿಲಿಷ್ಟಿಯರ ಅಧಿಪತಿ ಗಳು--ಈ ಇಬ್ರಿಯರು ಯಾಕೆ ಅಂದರು. ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ--ಇಸ್ರಾಯೇಲಿನ ಅರಸ ನಾದ ಸೌಲನ ಸೇವಕ ಈ ದಾವೀದನು ಇಷ್ಟು ದಿವಸ ಗಳೂ ಇಷ್ಟು ವರುಷಗಳೂ ನನ್ನ ಸಂಗಡ ಇದ್ದದ್ದಿ ಲ್ಲವೋ? ಇವನು ನಮ್ಮ ಬಳಿಗೆ ಬಂದು ಇದ್ದ ದಿವಸದ ಮೊದಲುಗೊಂಡು ಇಂದಿನ ವರೆಗೂ ನಾನು ಅವ ನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ ಅಂದನು. ಆದರೆ ಫಿಲಿಷ್ಟಿಯರ ಅಧಿಪತಿಗಳು ಅವನ ಮೇಲೆ ರೌದ್ರವಾಗಿ ಅವನಿಗೆ--ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದ ಹಾಗೆ ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ ನೀನು ಅವನಿಗೆ ನೇಮಿಸಿದ ತನ್ನ ಸ್ಥಳಕ್ಕೆ ತಿರಿಗಿ ಹೋಗುವ ಹಾಗೆ ಅವನನ್ನು ಕಳುಹಿಸಿಬಿಡು. ಇವನು ಯಾತರಿಂದ ತನ್ನ ದೊರೆಗೆ ತನ್ನನ್ನು ಇಷ್ಟನಾಗ ಮಾಡಿಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ? ಸೌಲನು ಸಾವಿರ ಜನರನ್ನೂ ದಾವೀದನು ಹತ್ತು ಸಾವಿರ ಜನರನ್ನೂ ಹೊಡೆದನೆಂದು ನಾಟ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದ್ದು ಈ ದಾವೀದನನ್ನು ಕುರಿತಲ್ಲವೋ ಅಂದರು. ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ--ನಿಜವಾಗಿಯೂ ಕರ್ತನಾಣೆ, ನೀನು ಯಥಾರ್ಥನು, ನೀನು ನನ್ನ ಸಂಗಡ ದಂಡಿನಲ್ಲಿ ಹೋಗುತ್ತಾ ಬರುತ್ತಾ ಇರುವದು ನನ್ನ ದೃಷ್ಟಿಗೆ ಒಳ್ಳೇದು. ನೀನು ನನ್ನ ಬಳಿಗೆ ಬಂದ ದಿನದಿಂದ ಈವರೆಗೂ ನಿನ್ನಲ್ಲಿ ಕೆಟ್ಟದ್ದನ್ನು ಕಂಡದ್ದಿಲ್ಲ. ಆದರೆ ಈಗ ನೀನು ಅಧಿಪತಿಗಳ ದೃಷ್ಟಿಗೆ ಒಳ್ಳೆಯವನಲ್ಲ. ಆದದರಿಂದ ನೀನು ಫಿಲಿಷ್ಟಿಯರ ಅಧಿಪತಿಗಳ ದೃಷ್ಟಿಗೆ ಮೆಚ್ಚಿಕೆ ಇಲ್ಲದ್ದನ್ನು ಮಾಡದ ಹಾಗೆ ಈಗ ಸಮಾಧಾನವಾಗಿ ಹಿಂದಕ್ಕೆ ನಿನ್ನ ಸ್ಥಳಕ್ಕೆ ಹೋಗು ಅಂದನು. ದಾವೀದನು ಆಕೀಷನಿಗೆ--ನನ್ನ ಯಜಮಾನನಾದ ಅರಸನ ಶತ್ರುಗಳ ಸಂಗಡ ಯುದ್ಧ ಮಾಡಲು ಹೋಗದ ಹಾಗೆ ನಾನೇನು ಮಾಡಿ ದೆನು? ನಿನ್ನ ದಾಸನು ನಿನ್ನ ಬಳಿಗೆ ಬಂದಂದಿನಿಂದ ಈ ದಿನದ ವರೆಗೂ ನನ್ನಲ್ಲಿ ಏನು ಕಂಡುಕೊಂಡಿ ಅಂದನು. ಆಕೀಷನು ದಾವೀದನಿಗೆ ಪ್ರತ್ಯುತ್ತರವಾಗಿನೀನು ನನ್ನ ದೃಷ್ಟಿಯಲ್ಲಿ ಒಬ್ಬ ದೇವದೂತನ ಹಾಗೆಯೇ ಉತ್ತಮನಾಗಿದ್ದೀ ಎಂದು ನಾನು ಬಲ್ಲೆನು. ಆದರೆ ಯುದ್ಧಕ್ಕೆ ಇವನು ನಮ್ಮ ಸಂಗಡ ಬರಬಾರದೆಂದು ಫಿಲಿಷ್ಟಿಯರ ಅಧಿಪತಿಗಳು ಹೇಳಿದ್ದಾರೆ. ಆದದರಿಂದ ನಾಳೆ ಉದಯಕ್ಕೆ ಎದ್ದು ನಿನ್ನ ಸಂಗಡ ಬಂದ ನಿನ್ನ ದೊರೆಯ ಸೇವಕರನ್ನು ಕರಕೊಂಡು ಏಳುತ್ತಲೇ ಅವರ ಸಂಗಡ ಉದಯದಲ್ಲಿ ಬೆಳಕು ಆಗುವಾಗ ಹೊರಟು ಹೋಗು ಅಂದನು.ಹಾಗೆಯೇ ದಾವೀದನೂ ಅವನ ಜನರೂ ಉದಯದಲ್ಲಿ ಫಿಲಿಷ್ಟಿಯರ ದೇಶಕ್ಕೆ ತಿರಿಗಿ ಹೋಗಲು ಮುಂಜಾನೆ ಎದ್ದರು. ಆದರೆ ಫಿಲಿಷ್ಟಿ ಯರು ಇಜ್ರೇಲಿಗೆ ಹೊರಟುಹೋದರು. ಹಾಗೆಯೇ ದಾವೀದನೂ ಅವನ ಜನರೂ ಉದಯದಲ್ಲಿ ಫಿಲಿಷ್ಟಿಯರ ದೇಶಕ್ಕೆ ತಿರಿಗಿ ಹೋಗಲು ಮುಂಜಾನೆ ಎದ್ದರು. ಆದರೆ ಫಿಲಿಷ್ಟಿ ಯರು ಇಜ್ರೇಲಿಗೆ ಹೊರಟುಹೋದರು.
- 1 Samuel 17:36 1 ಸಮುವೇಲನು 17:36ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ ಆ ಕರಡಿಯನ್ನೂ ಕೊಂದು ಬಿಟ್ಟನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಪ್ರತಿಭಟಿಸಿದ್ದರಿಂದ ಅವುಗಳಲ್ಲಿ ಒಂದರ ಹಾಗೆ ಆಗುವನು ಅಂದನು.
- 2 Chronicles 20:15 2 ಪೂರ್ವಕಾಲವೃತ್ತಾಂತ 20:15ಆಗ ಅವನುಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿ ಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಕರ್ತನು ನಿಮಗೆ ಹೀಗೆ ಹೇಳುತ್ತಾನೆ--ಈ ಮಹಾಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರ ಬೇಡಿರಿ. ಯಾಕಂದರೆ ಯುದ್ಧವು ನಿಮ್ಮದಲ್ಲ, ದೇವ ರದೇ.
- 1 Samuel 17:26 1 ಸಮುವೇಲನು 17:26ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ--ಈ ಫಿಲಿಷ್ಟಿಯನನ್ನು ಕೊಂದು ಇಸ್ರಾಯೇಲಿನ ಮೇಲಿನಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಮಾಡಲ್ಪಡುವದು? ಯಾಕಂದರೆ ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಹೀಯಾ ಳಿಸುವದಕ್ಕೆ ಎಷ್ಟರವನು ಅಂದನು.
- Deuteronomy 20:3–4 ಧರ್ಮೋಪದೇಶಕಾಂಡ 20:3–4ಓ ಇಸ್ರಾಯೇಲೇ ಕೇಳು, ನೀವು ಈಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸವಿಾಪ ಬಂದಿದ್ದೀರಿ; ನಿಮ್ಮ ಹೃದಯಗಳು ಬಳಲಬಾರದು; ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂಬೇಡಿರಿ; ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.
- Numbers 10:9 ಅರಣ್ಯಕಾಂಡ 10:9ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ನೀವು ತುತೂರಿಗಳನ್ನು ಎಚ್ಚರಿಸುವಂತೆ ಊದಬೇಕು. ಆಗ ನಿಮ್ಮ ದೇವರಾದ ಕರ್ತನ ಸಮ್ಮುಖದಲ್ಲಿ ನೀವು ಜ್ಞಾಪಕ ಮಾಡಲ್ಪಟ್ಟು ನಿಮ್ಮ ಶತ್ರುಗಳಿಂದ ರಕ್ಷಿಸಲ್ಪಡುವಿರಿ.
- 2 Chronicles 14:11 2 ಪೂರ್ವಕಾಲವೃತ್ತಾಂತ 14:11ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.