Psalms · chapter 109 · verse 13
Psalm 109:13 in Kannada
ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
Avana santaanavu nirnaamavaagali; eradane talaantaradalli avara hesaru alidu hogali.
Psalm 109:13 in English
- King James Version (KJV)
- Let his posterity be cut off; [and] in the generation following let their name be blotted out.
- World English Bible (WEB)
- Let his posterity be cut off. In the generation following let their name be blotted out.
- American Standard Version (ASV)
- Let his posterity be cut off; In the generation following let their name be blotted out.
- Bible in Basic English (BBE)
- Let his seed be cut off; in the coming generation let their name go out of memory.
- Darby Translation (DBY)
- Let his posterity be cut off; in the generation following let their name be blotted out:
- Webster's Bible (WBS)
- Let his posterity be cut off; [and] in the generation following let their name be blotted out.
- Young's Literal Translation (YLT)
- His posterity is for cutting off, In another generation is their name blotted out.
Read in context
- 11ಸಾಲಗಾರನು ಅವನಿಗೆ ಇರುವದನ್ನೆಲ್ಲಾ ದೋಚಿ ಕೊಳ್ಳಲಿ; ಅನ್ಯರು ಅವನ ಕಷ್ಟಾರ್ಜಿತವನ್ನು ಸುಲು ಕೊಳ್ಳಲಿ.
- 12ಅವನಿಗೆ ಕರುಣೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ಇಲ್ಲವೆ ದಿಕ್ಕಿಲ್ಲದ ಅವನ ಮಕ್ಕಳನ್ನು ಕರುಣಿಸುವವನು ಯಾವನೂ ಇಲ್ಲದೆ ಇರಲಿ.
- 13ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
- 14ಅವನ ತಂದೆಗಳ ಅಕ್ರಮವು ಕರ್ತನ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.
- 15ಅವು ಯಾವಾಗಲೂ ಕರ್ತನ ಮುಂದೆ ಇರಲಿ; ಆತನು ಅವನ ಜ್ಞಾಪಕವನ್ನು ಭೂಮಿಯೊಳಗಿಂದ ಕಡಿದುಬಿಡಲಿ.
Cross references
- Proverbs 10:7 ಜ್ಞಾನೋಕ್ತಿಗಳು 10:7ನೀತಿ ವಂತರ ಸ್ಮರಣೆಯು ಧನ್ಯಕರವಾಗಿದೆ; ದುಷ್ಟರ ಹೆಸರು ಕೊಳೆಯುತ್ತದೆ.
- Job 18:19 ಯೋಬನು 18:19ಅವನ ಜನರಲ್ಲಿ ಅವನಿಗೆ ಮಗನೂ ಇಲ್ಲ, ಮೊಮ್ಮಗನೂ ಇಲ್ಲ; ಅವನ ನಿವಾಸಗಳಲ್ಲಿ ಉಳಿ ದವನೂ ಇಲ್ಲ.
- Psalm 37:28 ಕೀರ್ತನೆಗಳು 37:28ಕರ್ತನು ನ್ಯಾಯವನ್ನು ಪ್ರೀತಿಮಾಡುತ್ತಾನೆ; ತನ್ನ ಪರಿಶುದ್ಧರನ್ನು ತೊರೆದುಬಿಡನು; ಅವರು ಯುಗ ಯುಗಕ್ಕೂ ಕಾಪಾಡಲ್ಪಡುವರು; ಆದರೆ ದುಷ್ಟರ ಸಂತತಿಯು ಕಡಿದುಹಾಕಲ್ಪಡುವದು.
- Isaiah 14:20–22 ಯೆಶಾಯ 14:20–22ನೀನು ಅವರೊಂದಿಗೆ ಹೂಣಿಡುವಿಕೆ ಯಲ್ಲಿ ಕೂಡಿಕೊಳ್ಳದೆ ಇರುವಿ. ನಿನ್ನ ದೇಶವನ್ನು ನೀನು ನಾಶಮಾಡಿ ನಿನ್ನ ಜನರನ್ನು ಕೊಂದುಹಾಕಿದಿ. ಕೆಟ್ಟವರ ಸಂತಾನವು ಎಂದೆಂದಿಗೂ ಹೆಸರು ಹೊಂದು ವದಿಲ್ಲ. ಅವರು ಏಳದೆ ಇಲ್ಲವೆ ದೇಶವನ್ನು ವಶ ಪಡಿಸಿಕೊಳ್ಳದೆ ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ ಅವರ ತಂದೆಗಳ ಅಪರಾಧದ ನಿಮಿತ್ತ ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ. ಅವರಿಗೆ ವಿರುದ್ಧವಾಗಿ ಏಳುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬಾಬೆಲಿನಿಂದ ಹೆಸರನ್ನೂ ಉಳಿದ ಜನರನ್ನೂ ಮಗನನ್ನೂ ಸೋದರಳಿಯನನ್ನೂ ನಿರ್ಮೂಲ ಮಾಡುವೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 2 Kings 10:10–11 2 ಅರಸುಗಳು 10:10–11ಆದರೆ ಇವರೆಲ್ಲರನ್ನು ಸಂಹರಿಸಿದವರಾರು? ಕರ್ತನು ಅಹಾ ಬನ ಮನೆಯನ್ನು ಕುರಿತು ಹೇಳಿದ ಕರ್ತನ ಮಾತು ಗಳಲ್ಲಿ ಒಂದೂ ವ್ಯರ್ಥವಾಗುವದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಕರ್ತನು ತನ್ನ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾನೆ ಅಂದನು. ಈ ಪ್ರಕಾರ ಯೇಹುವು ಅಹಾಬನಿಗೆ ಯಾರನ್ನೂ ಉಳಿಯಗೊಡಿಸದೆ ಇರುವ ವರೆಗೂ ಇಜ್ರೇಲಿನಲ್ಲಿ ಅವನಿಗೆ ಉಳಿದ ಎಲ್ಲಾ ಮನೆಯವರನ್ನೂ ಅವನ ಎಲ್ಲಾ ಹಿರಿಯರನ್ನೂ ನೆಂಟರನ್ನೂ ಯಾಜಕರನ್ನೂ ಸಂಹರಿಸಿದನು.
- Deuteronomy 29:20 ಧರ್ಮೋಪದೇಶಕಾಂಡ 29:20ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು.
- Deuteronomy 9:14 ಧರ್ಮೋಪದೇಶಕಾಂಡ 9:14ನನ್ನನ್ನು ಬಿಡು; ಆಗ ಅವರನ್ನು ನಾಶಮಾಡಿ ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು ನಿನ್ನನ್ನು ಅವರಿಗಿಂತ ಬಲವಾದ ಬಹು ಜನಾಂಗವಾಗ ಮಾಡುವೆನು ಎಂದು ಹೇಳಿದನು.
- Jeremiah 22:30 ಯೆರೆಮೀಯ 22:30ಕರ್ತನು ಹೀಗೆ ಹೇಳುತ್ತಾನೆ--ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆ ಯಿರಿ; ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕೂತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವದಿಲ್ಲ.
- Deuteronomy 25:19 ಧರ್ಮೋಪದೇಶಕಾಂಡ 25:19ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು.
- 1 Samuel 2:31–33 1 ಸಮುವೇಲನು 2:31–33ಇಗೋ, ನಿನ್ನ ಮನೆಯಲ್ಲಿ ಒಬ್ಬ ಮುದುಕನೂ ಇಲ್ಲದ ಹಾಗೆ ನಿನ್ನ ತೋಳನ್ನೂ ನಿನ್ನ ತಂದೆಯ ಮನೆಯವರ ತೋಳನ್ನೂ ನಾನು ಛೇದಿಸುವ ದಿವಸಗಳು ಬರುವವು. ಇದಲ್ಲದೆ ಇಸ್ರಾಯೇಲಿಗೆ ಮಾಡುವ ಸಕಲ ಉತ್ತಮವಾದವು ಗಳಿಗೆ ಬದಲಾಗಿ ನೀನು ನನ್ನ ವಾಸಸ್ಥಳದಲ್ಲಿ ಒಬ್ಬ ವೈರಿಯನ್ನು ಕಾಣುವಿ; ಎಂದಿಗೂ ನಿನ್ನ ಮನೆಯಲ್ಲಿ ಒಬ್ಬ ಮುದುಕನೂ ಇರುವದಿಲ್ಲ. ನನ್ನ ಯಜ್ಞ ವೇದಿಯ ಬಳಿಯಿಂದ ನಾನು ಕಡಿದು ಬಿಡದ ಮನು ಷ್ಯನು ನಿನ್ನ ಕಣ್ಣುಗಳನ್ನು ಕಳೆದು ನಿನ್ನ ಹೃದಯವನ್ನು ವೇದನೆಪಡಿಸುವದಕ್ಕೆ ಇರುವನು; ನಿನ್ನ ಮನೆಯವ ರೆಲ್ಲಾ ಯೌವನಸ್ಥರಾದಾಗಲೇ ಸಾಯುವರು.
- Psalm 21:10 ಕೀರ್ತನೆಗಳು 21:10ನೀನು ಅವರ ಫಲವನ್ನು ಭೂಮಿಯೊಳ ಗಿಂದಲೂ ಅವರ ಸಂತತಿಯನ್ನು ಮನುಷ್ಯನ ಮಕ್ಕ ಳೊಳಗಿಂದಲೂ ನಾಶಮಾಡುವಿ.
- 1 Samuel 3:13 1 ಸಮುವೇಲನು 3:13ತನ್ನ ಕುಮಾರರು ತಮ್ಮ ಭ್ರಷ್ಟತ ನಕ್ಕೆ ಈಡಾದಾಗ ಅವರನ್ನು ಹತೋಟಿಗೆ ತರಲಿಲ್ಲ. ಆದದರಿಂದ ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯ ತೀರಿಸುವೆನು ಎಂದು ಹೇಳಿದ್ದೇನೆ.