Psalms · chapter 115 · verse 1
Psalm 115:1 in Kannada
ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
Namagalla, o kartane, namagalla, ninna hesarige maatra, ninna karuneya nimittavoo ninna satyada nimittavoo ghanavuntaagali.
Psalm 115:1 in English
- King James Version (KJV)
- Not unto us, O LORD, not unto us, but unto thy name give glory, for thy mercy, [and] for thy truth’s sake.
- World English Bible (WEB)
- Not to us, LORD, not to us, but to your name give glory, for your loving kindness, and for your truth’s sake.
- American Standard Version (ASV)
- Not unto us, O Jehovah, not unto us, But unto thy name give glory, For thy lovingkindness, and for thy truth’s sake.
- Bible in Basic English (BBE)
- Not to us, O Lord, not to us, but to your name let glory be given, because of your mercy and your unchanging faith.
- Darby Translation (DBY)
- Not unto us, O Jehovah, not unto us, but unto thy name give glory, for thy loving-kindness and for thy truth's sake.
- Webster's Bible (WBS)
- Not to us, O LORD, not to us, but to thy name give glory, for thy mercy, [and] for thy truth's sake.
- Young's Literal Translation (YLT)
- Not to us, O Jehovah, not to us, But to Thy name give honour, For Thy kindness, for Thy truth.
Read in context
- 1ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
- 2ಅವರ ದೇವರು ಎಲ್ಲಿ ಎಂದು ಅನ್ಯ ಜನಾಂಗಗಳು ಯಾಕೆ ಹೇಳಬೇಕು?
- 3ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಇಚ್ಚಿಸುವ ದನ್ನೆಲ್ಲಾ ಮಾಡುತ್ತಾನೆ.
Cross references
- Psalm 79:9–10 ಕೀರ್ತನೆಗಳು 79:9–10ಓ ನಮ್ಮ ರಕ್ಷಣೆಯ ದೇವರೇ, ನಿನ್ನ ಹೆಸರಿನ ಘನದ ನಿಮಿತ್ತ ನಮಗೆ ಸಹಾಯ ಮಾಡು; ನಿನ್ನ ಹೆಸರಿಗಾಗಿ ನಮ್ಮನ್ನು ಬಿಡಿಸಿ ನಮ್ಮ ಪಾಪಗಳನ್ನು ತೊಳೆದುಬಿಡು. ಅವರ ದೇವರು ಎಲ್ಲಿ ಎಂದು ಅನ್ಯಜನಾಂಗಗಳು ಯಾಕೆ ಹೇಳಬೇಕು? ಚೆಲ್ಲಿರುವ ನಿನ್ನ ಸೇವಕರ ರಕ್ತದ ಪ್ರತಿ ದಂಡನೆಯನ್ನು ನಮ್ಮ ಕಣ್ಣುಗಳ ಮುಂದೆ ಅನ್ಯ ಜನಾಂಗಗಳಲ್ಲಿ ತಿಳಿಯಲ್ಪಡಲಿ.
- Isaiah 48:11 ಯೆಶಾಯ 48:11ನನಗಾಗಿಯೇ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಯಾಕೆ ಅಪವಿತ್ರ ವಾಗುವದು? ನನ್ನ ಮಹಿಮೆಯನ್ನು ನಾನು ಮತ್ತೊ ಬ್ಬನಿಗೆ ಸಲ್ಲಗೊಡಿಸೆನು.
- Psalm 96:8 ಕೀರ್ತನೆಗಳು 96:8ಕರ್ತನಿಗೆ, ಆತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕಾಣಿಕೆ ತೆಗೆದುಕೊಂಡು ಆತನ ಅಂಗಳಗಳಿಗೆ ಬನ್ನಿರಿ.
- Ezekiel 20:14 ಯೆಹೆಜ್ಕೇಲನು 20:14ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ ಆ ಅನ್ಯಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.
- Ezekiel 36:32 ಯೆಹೆಜ್ಕೇಲನು 36:32ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ದೇವರಾದ ಕರ್ತನು ಹೇಳುತ್ತಾನೆ; ಓ ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾ ರ್ಗಗಳಿಗೆ ನಾಚಿಕೆ ಪಟ್ಟು ಲಜ್ಜೆಹೊಂದಿರಿ.
- Ezekiel 36:22 ಯೆಹೆಜ್ಕೇಲನು 36:22ಆದದರಿಂದ ನೀನು ಇಸ್ರಾ ಯೇಲನ ಮನೆತನದವರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು--ಓ ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡು ತ್ತಿಲ್ಲ, ಆದರೆ ನೀವು ಹೋಗುವಾಗ ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಪರಿಶುದ್ಧನಾಮಕ್ಕಾಗಿ ಮಾಡುತ್ತೇನೆ.
- Ephesians 1:6 ಎಫೆಸದವರಿಗೆ 1:6ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ.
- Revelation 4:10–11 ಪ್ರಕಟನೆ 4:10–11ಆಗ ಆ ಇಪ್ಪತ್ತನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಿದ್ದಾತನ ಮುಂದೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಯುಗಯುಗಾಂತರ ಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾ--ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು. ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
- Psalm 89:1–2 ಕೀರ್ತನೆಗಳು 89:1–2ಕರ್ತನ ಕರುಣೆಗಳನ್ನು ಯುಗಯುಗಕ್ಕೂ ಹಾಡುವೆನು; ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯನ್ನು ನನ್ನ ಬಾಯಿಂದ ತಿಳಿಯಪಡಿ ಸುವೆನು. ಎಂದೆಂದಿಗೂ ಕರುಣೆಯು ಸ್ಥಾಪಿಸಲ್ಪಡು ವದು; ಆಕಾಶಗಳಲ್ಲಿಯೂ ನಿನ್ನ ನಂಬಿಗಸ್ತಿಕೆಯನ್ನು ಸ್ಥಿರಪಡಿಸುವಿ ಎಂದು ಹೇಳಿದ್ದೇನೆ.
- Daniel 9:19 ದಾನಿಯೇಲನು 9:19ಓ ದೇವರೇ, ನಿನ್ನ ಪಟ್ಟಣವೂ ನಿನ್ನ ಜನರೂ ನಿನ್ನ ಹೆಸರಿನಿಂದ ಕರೆಯಲ್ಪಟ್ಟ ಕಾರಣ ಓ ಕರ್ತನೇ, ತಡಮಾಡದೆ ಕಿವಿಗೊಡು, ಓ ಕರ್ತನೇ, ಕ್ಷಮಿಸು; ಓ ಕರ್ತನೇ ಲಾಲಿಸು.
- Joshua 7:9 ಯೆಹೋಶುವ 7:9ಯಾಕಂದರೆ ಕಾನಾನ್ಯರೂ ದೇಶ ವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿ ಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದು ಬಿಡುವರು; ಆಗ ನಿನ್ನ ಮಹತ್ತಾದ ಹೆಸರಿಗೆ ಏನು ಮಾಡುವಿ ಅಂದನು.
- Psalm 61:7 ಕೀರ್ತನೆಗಳು 61:7ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.