Psalms · chapter 119 · verse 110
Psalm 119:110 in Kannada
ದುಷ್ಟರು ನನಗೆ ಉರ್ಲು ಒಡ್ಡಿದ್ದಾರೆ. ಆದರೂ ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
Dushtaru nanage urlu oddiddaare. Aadaroo naanu ninna kattalegalannu bittu tappihogalilla.
Psalm 119:110 in English
- King James Version (KJV)
- The wicked have laid a snare for me: yet I erred not from thy precepts.
- World English Bible (WEB)
- The wicked have laid a snare for me, yet I haven’t gone astray from your precepts.
- American Standard Version (ASV)
- The wicked have laid a snare for me; Yet have I not gone astray from thy precepts.
- Bible in Basic English (BBE)
- Sinners have put a net to take me; but I was true to your orders.
- Darby Translation (DBY)
- The wicked have laid a snare for me; but I have not wandered from thy precepts.
- Webster's Bible (WBS)
- The wicked have laid a snare for me: yet I erred not from thy precepts.
- Young's Literal Translation (YLT)
- The wicked have laid a snare for me, And from thy precepts I wandered not.
Read in context
- 108ಕರ್ತನೇ, ನನ್ನ ಮನಃಪೂರ್ವಕವಾದ ಸ್ತುತಿ ಸಮರ್ಪಣೆಗಳನ್ನು ದಯವಿಟ್ಟು ಅಂಗೀಕರಿಸು. ನಿನ್ನ ವಿಧಿಗಳನ್ನು ನನಗೆ ಬೋಧಿಸು.
- 109ನನ್ನ ಪ್ರಾಣವು ಯಾವಾಗಲೂ ನನ್ನ ಕೈಯಲ್ಲಿ ಅದೆ; ಆದಾಗ್ಯೂ ನಿನ್ನ ನ್ಯಾಯಪ್ರಮಾಣವನ್ನು ಮರೆತುಬಿಡೆನು.
- 110ದುಷ್ಟರು ನನಗೆ ಉರ್ಲು ಒಡ್ಡಿದ್ದಾರೆ. ಆದರೂ ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
- 111ನಿನ್ನ ಸಾಕ್ಷಿಗಳನ್ನು ನಿತ್ಯಸ್ವಾಸ್ತ್ಯವಾಗಿ ತೆಗೆದುಕೊಂಡಿದ್ದೇನೆ; ಅವು ನನ್ನ ಹೃದಯಕ್ಕೆ ಆನಂದವಾಗಿವೆ.
- 112ನಿನ್ನ ನಿಯಮಗಳನ್ನು ಕಡೇ ವರೆಗೂ ಈಡೇರಿಸುವದಕ್ಕೆ ನಾನು ಮನಸ್ಸು ಮಾಡಿದ್ದೇನೆ.
Cross references
- Psalm 140:5 ಕೀರ್ತನೆಗಳು 140:5ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.
- Psalm 119:95 ಕೀರ್ತನೆಗಳು 119:95ದುಷ್ಟರು ನನ್ನನ್ನು ನಾಶಮಾಡುವದಕ್ಕೆ ನನಗಾಗಿ ಕಾದುಕೊಳ್ಳುತ್ತಾರೆ. ನಿನ್ನ ಸಾಕ್ಷಿಗಳನ್ನು ಗ್ರಹಿಸಿ ಕೊಳ್ಳುತ್ತೇನೆ.
- Psalm 141:9 ಕೀರ್ತನೆಗಳು 141:9ಅವರು ನನಗೆ ಒಡ್ಡಿದ ಉರ್ಲಿ ನಿಂದಲೂ ಅಪರಾಧಿಗಳ ನೇಣುಗಳಿಂದಲೂ ನನ್ನನ್ನು ಕಾಪಾಡು.ನಾನು ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ದುಷ್ಟರು ತಮ್ಮ ಬಲೆಗಳಲ್ಲಿ ಬೀಳಲಿ.
- Psalm 119:10 ಕೀರ್ತನೆಗಳು 119:10ನನ್ನ ಪೂರ್ಣಹೃದಯದಿಂದ ನಿನ್ನನ್ನು ಹುಡುಕಿದ್ದೇನೆ; ನಿನ್ನ ಆಜ್ಞೆಗಳಿಂದ ನಾನು ತಪ್ಪಿಹೋಗ ದಂತೆ ಮಾಡು.
- Psalm 119:85 ಕೀರ್ತನೆಗಳು 119:85ನಿನ್ನ ನ್ಯಾಯ ಪ್ರಮಾಣದ ಪ್ರಕಾರವಾಗಿರದ ಅಹಂಕಾರಿಗಳು ನನಗೆ ಕುಣಿಗಳನ್ನು ಅಗೆದಿದ್ದಾರೆ.
- Psalm 124:6–7 ಕೀರ್ತನೆಗಳು 124:6–7ಆದರೆ ನಮ್ಮನ್ನು ಅವರ ಹಲ್ಲುಗಳಿಗೆ ಬೇಟೆ ಯಾಗಿ ಕೊಡದೆ ಇದ್ದ ಕರ್ತನಿಗೆ ಸ್ತೋತ್ರವಾಗಲಿ. ನಮ್ಮ ಪ್ರಾಣವು ಪಕ್ಷಿಯ ಹಾಗೆ ಬೇಟೆಗಾರರ ಉರ್ಲಿನಿಂದ ತಪ್ಪಿಸಿಕೊಂಡಿತು; ಬಲೆಯು ಹರಿಯಿತು; ನಾವು ತಪ್ಪಿಸಿಕೊಂಡೆವು.ನಮ್ಮ ಸಹಾಯವು ಆಕಾ ಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನ ಹೆಸರಿನಲ್ಲಿ ಇದೆ.
- Psalm 10:8–18 ಕೀರ್ತನೆಗಳು 10:8–18ಅವನು ಹೊಂಚು ಹಾಕುವ ಗ್ರಾಮಗಳ ಸ್ಥಳಗಳಲ್ಲಿ ಕೂತುಕೊಂಡು ಗುಪ್ತವಾದ ಸ್ಥಳಗಳಲ್ಲಿ ನಿರಪರಾಧಿಯನ್ನು ಕೊಲ್ಲು ತ್ತಾನೆ. ಅವನ ಕಣ್ಣುಗಳು ಗತಿಯಿಲ್ಲದವನನ್ನು ಹೊಂಚಿ ನೋಡು ತ್ತವೆ; ಗವಿಯಲ್ಲಿರುವ ಸಿಂಹದ ಹಾಗೆ ಮರೆಯಲ್ಲಿ ಹೊಂಚು ಹಾಕುತ್ತಾನೆ; ಬಡವನನ್ನು ಹಿಡಿ ಯುವದಕ್ಕೆ ಹೊಂಚು ಹಾಕುತ್ತಾನೆ; ಬಡವನನ್ನು ತನ್ನ ಬಲೆಯಲ್ಲಿ ಎಳೆದು ಹಿಡಿಯುತ್ತಾನೆ. ಅವನು ಕುಗ್ಗಿ ಬೊಗ್ಗುತ್ತಾನೆ; ಆದದರಿಂದ ಗತಿಯಿಲ್ಲದವರು ಅವನ ಬಲದಿಂದ ಬೀಳುತ್ತಾರೆ. ದೇವರು ಮರೆತು ಬಿಟ್ಟಿ ದ್ದಾನೆ; ತನ್ನ ಮುಖವನ್ನು ಮರೆಮಾಡುತ್ತಾನೆ; ಆತನು ಎಂದೂ ನೋಡನು ಎಂದು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಓ ಕರ್ತನೇ, ಏಳು; ಓ ದೇವ ರೇ, ನಿನ್ನ ಕೈ ಎತ್ತು, ದೀನರನ್ನು ಮರೆತು ಬಿಡಬೇಡ. ದುಷ್ಟನು ದೇವರನ್ನು ಅಲಕ್ಷ್ಯಮಾಡುವದು ಯಾಕೆ? --ನೀನು ಅದನ್ನು ವಿಚಾರಿಸುವದಿಲ್ಲವೆಂದು ಅವನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ನೀನು ಅದನ್ನು ನೋಡಿದ್ದೀ; ನಿನ್ನ ಕೈಯಿಂದ ಪ್ರತಿಫಲಕೊಡು ವದಕ್ಕೆ ಅವನ ಕುಯುಕ್ತಿಯನ್ನೂ ಹಗೆತನವನ್ನೂ ದೃಷ್ಟಿ ಸುತ್ತೀ. ಗತಿಯಿಲ್ಲದವನು ನಿನಗೆ ತನ್ನನ್ನು ಒಪ್ಪಿಸುತ್ತಾನೆ; ದಿಕ್ಕಿಲ್ಲದವನಿಗೆ ಸಹಾಯಕನು ನೀನೇ. ದುಷ್ಟನ ಮತ್ತು ಕೆಡುಕನ ತೋಳನ್ನು ಮುರಿ; ಅದು ಸಿಕ್ಕದೆ ಹೋಗುವ ವರೆಗೂ ಅವನ ದುಷ್ಟತ್ವ ವನ್ನು ನೀನು ಹುಡುಕು. ಕರ್ತನು ಯುಗ ಯುಗಾಂತರಗಳಿಗೂ ಅರಸನಾಗಿದ್ದಾನೆ; ಅನ್ಯಜನಾಂಗಗಳು ಆತನ ದೇಶದೊ ಳಗಿಂದ ನಾಶವಾದರು. ಕರ್ತನೇ, ದೀನರ ಆಶೆ ಯನ್ನು ಕೇಳಿದ್ದೀ; ನೀನು ಅವರ ಹೃದಯವನ್ನು ಸಿದ್ಧ ಪಡಿಸಿ ಅವರ ಮೊರೆಗೆ ಕಿವಿಗೊಡುತ್ತೀ.ಭೂಮಿಯ ಮನುಷ್ಯನು ಇನ್ನು ಭಯಪಡಿಸದ ಹಾಗೆ ದಿಕ್ಕಿಲ್ಲದ ವರಿಗೂ ಕುಗ್ಗಿದವರಿಗೂ ನ್ಯಾಯತೀರಿಸುವದಕ್ಕೆ ಕಿವಿಗೊಟ್ಟಿದ್ದೀ. ಭೂಮಿಯ ಮನುಷ್ಯನು ಇನ್ನು ಭಯಪಡಿಸದ ಹಾಗೆ ದಿಕ್ಕಿಲ್ಲದ ವರಿಗೂ ಕುಗ್ಗಿದವರಿಗೂ ನ್ಯಾಯತೀರಿಸುವದಕ್ಕೆ ಕಿವಿಗೊಟ್ಟಿದ್ದೀ.
- Psalm 119:51 ಕೀರ್ತನೆಗಳು 119:51ಅಹಂಕಾರಿಗಳು ಬಹಳವಾಗಿ ನನ್ನನ್ನು ಹಾಸ್ಯ ಮಾಡಿ ದರೂ ನಿನ್ನ ನ್ಯಾಯಪ್ರಮಾಣದಿಂದ ನಾನು ತೊಲ ಗಲಿಲ್ಲ.
- Psalm 119:87 ಕೀರ್ತನೆಗಳು 119:87ಅವರು ನನ್ನನ್ನು ಬಹಳ ಮಟ್ಟಿಗೆ ಭೂಮಿಯಲ್ಲಿ ಸಂಹರಿಸುವದಕ್ಕಿದ್ದರು. ಆದರೆ ನಾನು ನಿನ್ನ ಕಟ್ಟಳೆಗಳನ್ನು ಬಿಡಲಿಲ್ಲ.
- Jeremiah 18:22 ಯೆರೆಮೀಯ 18:22ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ ಕೂಗು ಅವರ ಮನೆಗಳೊಳಗಿಂದ ಕೇಳಬರಲಿ; ನನ್ನನ್ನು ಹಿಡಿಯು ವದಕ್ಕೆ ಕುಣಿ ಅಗೆದಿದ್ದಾರೆ; ನನ್ನ ಕಾಲುಗಳಿಗೆ ಉರ್ಲು ಗಳನ್ನು ಒಡ್ಡಿದ್ದಾರೆ.ಆದಾಗ್ಯೂ ಕರ್ತನೇ, ಅವರು ನನ್ನನ್ನು ಸಾಯಿಸುವದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀನು ಬಲ್ಲೆ; ಅವರ ಅಕ್ರಮವನ್ನು ಮನ್ನಿಸಬೇಡ; ಪಾಪವನ್ನು ನಿನ್ನ ಸನ್ನಿಧಿ ಯೊಳಗಿಂದ ಅಳಿಸಿಬಿಡಬೇಡ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪದ ಕಾಲದಲ್ಲಿ ಅವರಿಗೆ ಹಾಗೆ ಮಾಡು.
- Daniel 6:10 ದಾನಿಯೇಲನು 6:10ಯಾವಾಗ ಬರಹಕ್ಕೆ ರುಜುಹಾಕಿದ್ದಾ ಯಿತ್ತೆಂದು ದಾನಿಯೇಲನಿಗೆ ತಿಳಿಯಿತೋ ಆಗ ಅವನು ತನ್ನ ಮನೆಗೆ ಹೋದನು; ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆಯಲ್ಪಟ್ಟಿದ್ದ ರಿಂದ ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ಸ್ತೋತ್ರವನ್ನೂ ಸಲ್ಲಿಸಿ ದನು.
- Psalm 119:21 ಕೀರ್ತನೆಗಳು 119:21ನಿನ್ನ ಆಜ್ಞೆಗಳಿಂದ ತಪ್ಪಿಹೋಗುವ ಶಾಪಗ್ರಸ್ಥರಾದ ಅಹಂಕಾರಿಗಳನ್ನು ನೀನು ಗದರಿಸಿದ್ದೀ.