Psalms · chapter 119 · verse 139
Psalm 119:139 in Kannada
ನನ್ನ ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಡುವದರಿಂದ ನನ್ನ ಆಸಕ್ತಿಯು ನನ್ನನ್ನು ದಹಿಸಿಯದೆ.
Nanna vairigalu ninna vaakyagalannu maretubiduvadarinda nanna aasaktiyu nannannu dahisiyade.
Psalm 119:139 in English
- King James Version (KJV)
- My zeal hath consumed me, because mine enemies have forgotten thy words.
- World English Bible (WEB)
- My zeal wears me out, because my enemies ignore your words.
- American Standard Version (ASV)
- My zeal hath consumed me, Because mine adversaries have forgotten thy words.
- Bible in Basic English (BBE)
- My passion has overcome me; because my haters are turned away from your words.
- Darby Translation (DBY)
- My zeal destroyeth me, because mine oppressors have forgotten thy words.
- Webster's Bible (WBS)
- My zeal hath consumed me; because my enemies have forgotten thy words.
- Young's Literal Translation (YLT)
- Cut me off hath my zeal, For mine adversaries forgot Thy words.
Read in context
- 137ಕರ್ತನೇ, ನೀನು ನೀತಿವಂತನು; ನಿನ್ನ ನ್ಯಾಯ ವಿಧಿಗಳು ಯಥಾರ್ಥವಾದವುಗಳೇ.
- 138ನಿನ್ನ ಸಾಕ್ಷಿ ಗಳನ್ನು ನೀತಿಯಾಗಿಯೂ ಬಹು ನಂಬಿಕೆಯುಳ್ಳವು ಗಳಾಗಿಯೂ ಆಜ್ಞಾಪಿಸಿದ್ದೀ.
- 139ನನ್ನ ವೈರಿಗಳು ನಿನ್ನ ವಾಕ್ಯಗಳನ್ನು ಮರೆತುಬಿಡುವದರಿಂದ ನನ್ನ ಆಸಕ್ತಿಯು ನನ್ನನ್ನು ದಹಿಸಿಯದೆ.
- 140ನಿನ್ನ ವಾಕ್ಯವು ಬಹಳ ಶುದ್ಧವಾಗಿದೆ; ಆದದರಿಂದ ನಿನ್ನ ಸೇವಕನು ಅದನ್ನು ಪ್ರೀತಿಮಾಡುತ್ತಾನೆ.
- 141ನಾನು ಅಲ್ಪನೂ ತಿರಸ್ಕರಿಸ ಲ್ಪಟ್ಟವನೂ ಆಗಿದ್ದರೂ ನಿನ್ನ ಕಟ್ಟಳೆಗಳನ್ನು ನಾನು ಮರೆತುಬಿಡುವದಿಲ್ಲ.
Cross references
- John 2:17 ಯೋಹಾನನು 2:17ಆಗ ಆತನ ಶಿಷ್ಯರು--ನಿನ್ನ ಆಲಯದ ಆಸಕ್ತಿಯು ನನ್ನನ್ನು ದಹಿಸಿ ಬಿಟ್ಟಿದೆ ಎಂದು ಬರೆದಿರುವದನ್ನು ಜ್ಞಾಪಕಮಾಡಿ ಕೊಂಡರು.
- Psalm 69:9 ಕೀರ್ತನೆಗಳು 69:9ನಿನ್ನ ಆಲಯದ ಆಸಕ್ತಿಯು ನನ್ನನ್ನು ತಿಂದುಬಿಟ್ಟಿದೆ; ನಿನ್ನನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.
- 1 Kings 19:10 1 ಅರಸುಗಳು 19:10ಅದಕ್ಕವನು--ಸೈನ್ಯಗಳ ದೇವ ರಾದ ಕರ್ತನಿಗೋಸ್ಕರ ನಾನು ಬಹು ರೋಷವುಳ್ಳವ ನಾಗಿದ್ದೇನೆ; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿ ಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನು ಹೌದು, ನಾನೊಬ್ಬನೇ ಉಳಿದಿ ದ್ದೇನೆ; ಆದರೆ ಅವರು ನನ್ನ ಪ್ರಾಣವನ್ನು ತೆಗೆದುಬಿಡಲು ಹುಡುಕುತ್ತಾರೆ ಅಂದನು.
- Acts 13:27 ಅಪೊಸ್ತಲರ ಕೃತ್ಯಗಳು 13:27ಯೆರೂ ಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿ ಗಳೂ ಆತನನ್ನಾಗಲೀ ಪ್ರತಿ ಸಬ್ಬತ್ದಿನದಲ್ಲಿ ಪಾರಾ ಯಣವಾಗುವ ಪ್ರವಾದಿಗಳ ವಾಕ್ಯಗಳನ್ನಾಗಲೀ ಗ್ರಹಿಸದೆ ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ವಾಕ್ಯಗಳನ್ನೇ ನೆರವೇರಿಸಿದರು.
- Matthew 21:13 ಮತ್ತಾಯನು 21:13ಆತನು ಅವರಿಗೆ--ನನ್ನ ಮನೆಯು ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದಾಗಿ ಬರೆದದೆ; ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
- Psalm 53:4 ಕೀರ್ತನೆಗಳು 53:4ರೊಟ್ಟಿತಿನ್ನುವ ಪ್ರಕಾರ ನನ್ನ ಜನರನ್ನು ತಿಂದು ದೇವರನ್ನು ಸ್ಮರಿಸದೆ ಅಪರಾಧಮಾಡುವವರು ಅರಿ ಯರೋ?
- Matthew 22:29 ಮತ್ತಾಯನು 22:29ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ.
- Matthew 21:16 ಮತ್ತಾಯನು 21:16ಇವರು ಹೇಳುವದೇನೆಂದು ನೀನು ಕೇಳುತ್ತೀಯೋ ಎಂದು ಕೇಳಿದ್ದಕ್ಕೆ ಯೇಸು ಅವರಿಗೆ -- ಹೌದು, ಸಣ್ಣ ಮಕ್ಕಳ ಮತ್ತು ಮೊಲೇಕೂಸುಗಳ ಬಾಯಿಂದ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿದ್ದೀ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ ಅಂದನು.
- Matthew 15:4–6 ಮತ್ತಾಯನು 15:4–6ಯಾಕಂ ದರೆ ದೇವರು ಅಪ್ಪಣೆ ಕೊಟ್ಟು ಹೇಳಿದ್ದೇನಂದರೆ--ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು--ಯಾವನಾದರೂ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಶಪಿಸಿದರೆ ಅವನು ಸಾಯಲೇಬೇಕು ಎಂಬದೇ. ಆದರೆ ನೀವು--ಯಾವನಾದರೂ ತನ್ನ ತಂದೆಗಾಗಲೀ ತಾಯಿಗಾಗಲೀ-- ನನ್ನಿಂದ ನಿನಗೆ ಪ್ರಯೋಜನ ವಾಗತಕ್ಕದ್ದು ಕಾಣಿಕೆಯಾಯಿತು ಎಂದು ಹೇಳುವದಾ ದರೆ ಅವನು ತನ್ನ ತಂದೆಯನ್ನಾಗಲೀ ತಾಯಿಯನ್ನಾ ಗಲೀ ಸನ್ಮಾನಿಸುವದರಿಂದ ಬಿಡುಗಡೆಯಾಗಿದ್ದಾನೆಂದು ನೀವು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ನಿರರ್ಥಕ ಮಾಡಿದ್ದೀರಿ.
- 1 Kings 19:14 1 ಅರಸುಗಳು 19:14ಅದಕ್ಕೆ ಅವನು--ಸೈನ್ಯಗಳ ದೇವರಾದ ಕರ್ತನಿಗೋಸ್ಕರ ನಾನು ಮಹಾ ರೋಷವು ಳ್ಳವನಾಗಿದ್ದೆನು; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನೊಬ್ಬನೇ ಉಳಿದಿದ್ದೇನೆ; ಅವರು ನನ್ನ ಪ್ರಾಣವನ್ನು ತೆಗೆಯಲು ಹುಡುಕುತ್ತಾರೆ ಅಂದನು.
- Acts 28:23–27 ಅಪೊಸ್ತಲರ ಕೃತ್ಯಗಳು 28:23–27ಅವರು ಅವನಿಗೆ ಒಂದು ದಿನವನ್ನು ನೇಮಿಸಿ ದಾಗ ಅನೇಕರು ಅವನ ನಿವಾಸಕ್ಕೆ ಬಂದರು; ಆಗ ಬೆಳಗಿನಿಂದ ಸಾಯಂಕಾಲದವರೆಗೆ ಮೋಶೆಯ ನ್ಯಾಯ ಪ್ರಮಾಣದಿಂದಲೂ ಪ್ರವಾದನೆಗಳಿಂದಲೂ ಯೇಸು ವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಅವರಿಗೆ ದೇವರ ರಾಜ್ಯವನ್ನು ವಿವರಿಸಿ ಸಾಕ್ಷೀಕರಿಸಿದನು. ಅವನು ಹೇಳಿದ ಮಾತುಗಳನ್ನು ಕೆಲವರು ನಂಬಿ ದರು; ಆದರೆ ಕೆಲವರು ನಂಬದೆ ಹೋದರು. ಹೀಗೆ ಅವರಲ್ಲಿ ವಿಭಾಗವಾದಾಗ ಪೌಲನು ಅವರಿಗೆ--ಯೆಶಾಯನು ಪವಿತ್ರಾತ್ಮನಿಂದ ನಮ್ಮ ಪಿತೃಗಳಿಗೆ ವಿಹಿತ ವಾಗಿ ಹೇಳಿದ್ದೇನಂದರೆ-- ನೀವು ಕೇಳಿದರೂ ಕೇಳಿ ಗ್ರಹಿಸುವದಿಲ್ಲ; ನೋಡಿದರೂ ನೋಡಿ ಕಾಣುವದಿಲ್ಲ; ಯಾಕಂದರೆ ಅವರು ತಮ್ಮ ಕಣ್ಣುಗಳಿಂದ ನೋಡಿ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದಂತೆಯೂ ನಾನು ಅವರನ್ನು ಸ್ವಸ್ಥ ಮಾಡ ದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಕೇಳುವದಕ್ಕೆ ಅವರ ಕಿವಿಗಳು ಮಂದವಾದವು; ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ
- Matthew 9:13 ಮತ್ತಾಯನು 9:13ನೀವು ಹೋಗಿ--ನಾನು ಯಜ್ಞವನ್ನಲ್ಲ; ಕರುಣೆಯನ್ನೇ ಅಪೇಕ್ಷಿಸುತ್ತೇನೆ ಎಂಬದರ ಅರ್ಥವನ್ನು ಕಲಿಯಿರಿ; ಯಾಕಂದರೆ ನಾನು ನೀತಿ ವಂತರನ್ನಲ್ಲ, ಪಾಪಿಗಳನ್ನು ಮಾನಸಾಂತರಪಡು ವದಕ್ಕಾಗಿ ಕರೆಯಲು ಬಂದೆನು ಎಂದು ಹೇಳಿದನು.