Psalms · chapter 119 · verse 144
Psalm 119:144 in Kannada
ನಿನ್ನ ಸಾಕ್ಷಿಗಳ ನೀತಿ ನಿತ್ಯವಾದದ್ದು; ನನಗೆ ಗ್ರಹಿಕೆಯನ್ನು ಕೊಡು; ಆಗ ಬದುಕುವೆನು.
Ninna saakshigala neeti nityavaadaddu; nanage grahikeyannu kodu; aaga badukuvenu.
Psalm 119:144 in English
- King James Version (KJV)
- The righteousness of thy testimonies [is] everlasting: give me understanding, and I shall live.
- World English Bible (WEB)
- Your testimonies are righteous forever. Give me understanding, that I may live. QOPH
- American Standard Version (ASV)
- Thy testimonies are righteous for ever: Give me understanding, and I shall live.
- Bible in Basic English (BBE)
- The righteousness of your unchanging word is eternal; give me wisdom so that I may have life.
- Darby Translation (DBY)
- The righteousness of thy testimonies is for ever: give me understanding, and I shall live.
- Webster's Bible (WBS)
- The righteousness of thy testimonies [is] everlasting: give me understanding, and I shall live.
- Young's Literal Translation (YLT)
- The righteousness of Thy testimonies [is] to Cause me to understand, and I live!
Read in context
- 142ನಿನ್ನ ನೀತಿಯು ನಿತ್ಯವಾದ ನೀತಿಯೇ; ನಿನ್ನ ನ್ಯಾಯಪ್ರಮಾಣವು ಸತ್ಯವೇ.
- 143ಇಕ್ಕಟ್ಟೂ ಸಂಕಟವೂ ನನ್ನನ್ನು ಹಿಡಿದವೆ; ಆದರೂ ನಿನ್ನ ಆಜ್ಞೆಗಳು ನನಗೆ ಆನಂದವಾಗಿವೆ.
- 144ನಿನ್ನ ಸಾಕ್ಷಿಗಳ ನೀತಿ ನಿತ್ಯವಾದದ್ದು; ನನಗೆ ಗ್ರಹಿಕೆಯನ್ನು ಕೊಡು; ಆಗ ಬದುಕುವೆನು.
- 145ಪೂರ್ಣಹೃದಯದಿಂದ ನಾನು ಕೂಗಿದ್ದೇನೆ; ಓ ಕರ್ತನೇ, ನನಗೆ ಉತ್ತರಕೊಡು; ನಾನು ನಿನ್ನ ನಿಯಮಗಳನ್ನು ಕೈಕೊಳ್ಳುವೆನು.
- 146ನಿನಗೆ ಮೊರೆ ಯಿಟ್ಟಿದ್ದೇನೆ; ನನ್ನನ್ನು ರಕ್ಷಿಸು, ಆಗ ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವೆನು.
Cross references
- 1 Peter 1:23–25 1 ಪೇತ್ರನು 1:23–25ೀವು ತಿರಿಗಿ ಹುಟ್ಟಿದವರಾಗಿದ್ದೀರಲ್ಲಾ; ಆ ಜನ್ಮವು ನಾಶವಾಗುವ ಬೀಜದಿಂದ ಉಂಟಾದದ್ದಲ್ಲ. ನಾಶವಾಗದ ಬೀಜ ದಿಂದಲೇ ಉಂಟಾದದ್ದು ಅದು ದೇವರ ಸದಾ ಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಯಿತು. ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯನ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವದು, ಅದರ ಹೂವು ಉದುರಿ ಹೋಗು ವದು;ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ. ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.
- Daniel 12:10 ದಾನಿಯೇಲನು 12:10ಅನೇಕರು ಇನ್ನು ಶುದ್ಧಮಾಡಲ್ಪಟ್ಟು, ಶುಭ್ರ ಮಾಡಲ್ಪಟ್ಟು, ಶೋಧಿಸಲ್ಪಟ್ಟಿರುವರು; ಆದರೆ ಕೆಟ್ಟವರು ಕೆಟ್ಟದ್ದನ್ನೇ ಮಾಡುವರು; ಕೆಟ್ಟವರಲ್ಲಿ ಅದನ್ನು ಒಬ್ಬನೂ ಅರ್ಥ ಮಾಡಿಕೊಳ್ಳುವದಿಲ್ಲ; ಆದರೆ ಬುದ್ಧಿವಂತರು ಅರ್ಥ ಮಾಡಿಕೊಳ್ಳುವರು.
- Psalm 119:169 ಕೀರ್ತನೆಗಳು 119:169ಓ ಕರ್ತನೇ, ನನ್ನ ಕೂಗು ನಿನ್ನ ಸನ್ನಿಧಿಗೆ ಮುಟ್ಟಲಿ; ನಿನ್ನ ವಾಕ್ಯದ ಪ್ರಕಾರ ನನಗೆ ಜ್ಞಾನವನ್ನು ಕೊಡು.
- Jeremiah 4:22 ಯೆರೆಮೀಯ 4:22ನನ್ನ ಜನರು ಮೂಢರಾಗಿದ್ದಾರೆ, ನನ್ನನ್ನು ಅವರು ಅರಿಯರು; ಕುಡಿಕರಾದ ಮಕ್ಕಳಾಗಿದ್ದಾರೆ, ಗ್ರಹಿಕೆ ಯುಳ್ಳವರಲ್ಲ; ಕೆಟ್ಟದ್ದನ್ನು ಮಾಡುವದಕ್ಕೆ ಜಾಣರಾಗಿ ದ್ದಾರೆ, ಒಳ್ಳೇದನ್ನು ಮಾಡುವದನ್ನು ಅರಿಯರು.
- 2 Corinthians 4:6 2 ಕೊರಿಂಥದವರಿಗೆ 4:6ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.
- Proverbs 10:21 ಜ್ಞಾನೋಕ್ತಿಗಳು 10:21ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ. ಜ್ಞಾನದ ಕೊರತೆಯಿಂದ ಅವಿವೇಕಿಗಳು ಸಾಯುತ್ತಾರೆ.
- 1 John 5:20–21 1 ಯೋಹಾನನು 5:20–21ದೇವರ ಮಗನು ಬಂದು ನಾವು ಸತ್ಯವಾಗಿರುವಾತ ನನ್ನು ಅರಿತುಕೊಳ್ಳುವ ಹಾಗೆ ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾನೆಂಬದು ನಮಗೆ ಗೊತ್ತದೆ. ನಾವು ಆ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಈತನೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾನೆ.ಚಿಕ್ಕ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. ಆಮೆನ್. ಚಿಕ್ಕ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. ಆಮೆನ್.
- Isaiah 27:11 ಯೆಶಾಯ 27:11ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿ ಯಲ್ಪಡುವವು, ಹೆಂಗಸರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು; ಅದು ವಿವೇಕವುಳ್ಳ ಜನ ವಲ್ಲ. ಆದದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವದಿಲ್ಲ. ಅವರನ್ನು ರೂಪಿಸಿದಾತನು ಅವರನ್ನು ಕರುಣಿಸುವದಿಲ್ಲ.
- Psalm 119:73 ಕೀರ್ತನೆಗಳು 119:73ನಿನ್ನ ಕೈಗಳು ನನ್ನನ್ನು ರೂಪಿಸಿ ನಿರ್ಮಿಸಿದವು; ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳುವ ಹಾಗೆ ಗ್ರಹಿಕೆಯನ್ನು ನನಗೆ ಕೊಡು.
- Psalm 119:138 ಕೀರ್ತನೆಗಳು 119:138ನಿನ್ನ ಸಾಕ್ಷಿ ಗಳನ್ನು ನೀತಿಯಾಗಿಯೂ ಬಹು ನಂಬಿಕೆಯುಳ್ಳವು ಗಳಾಗಿಯೂ ಆಜ್ಞಾಪಿಸಿದ್ದೀ.
- Psalm 119:152 ಕೀರ್ತನೆಗಳು 119:152ನೀನು ಎಂದೆಂದಿಗೂ ಅವು ಗಳನ್ನು ಸ್ಥಾಪಿಸಿದ್ದೀ ಎಂದು ನಿನ್ನ ಸಾಕ್ಷಿಗಳಿಂದ ಪೂರ್ವದಲ್ಲಿ ತಿಳಿದೆನು.
- Isaiah 6:9–10 ಯೆಶಾಯ 6:9–10ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು. ತಮ್ಮ ಕಣ್ಣುಗಳಿಂದ ನೋಡದಂತೆಯೂ ತಮ್ಮ ಕಿವಿಗಳಿಂದ ಕೇಳದಂತೆಯೂ ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗ ದಂತೆಯೂ ಈ ಜನರ ಹೃದಯವನ್ನು ಕೊಬ್ಬಿಸಿ ಕಿವಿ ಯನ್ನು ಮಂದಗೊಳಿಸಿ ಅವರ ಕಣ್ಣುಗಳನ್ನು ಮುಚ್ಚು ಎಂದು ನನಗೆ ಹೇಳಿದನು.