Psalms · chapter 119 · verse 29
Psalm 119:29 in Kannada
ಸುಳ್ಳು ಮಾರ್ಗವನ್ನು ನನ್ನಿಂದ ತೊಲ ಗಿಸು. ನಿನ್ನ ನ್ಯಾಯಪ್ರಮಾಣವನ್ನು ನನಗೆ ಕೃಪೆಯಿಂದ ಅನುಗ್ರಹಿಸು.
Sullu maargavannu nanninda tola gisu. Ninna nyaayapramaanavannu nanage krupeyinda anugrahisu.
Psalm 119:29 in English
- King James Version (KJV)
- Remove from me the way of lying: and grant me thy law graciously.
- World English Bible (WEB)
- Keep me from the way of deceit. Grant me your law graciously!
- American Standard Version (ASV)
- Remove from me the way of falsehood; And grant me thy law graciously.
- Bible in Basic English (BBE)
- Take from me every false way; and in mercy give me your law.
- Darby Translation (DBY)
- Remove from me the way of falsehood, and graciously grant me thy law.
- Webster's Bible (WBS)
- Remove from me the way of lying: and grant me thy law graciously.
- Young's Literal Translation (YLT)
- The way of falsehood turn aside from me And with Thy law favour me.
Read in context
- 27ನಿನ್ನ ಕಟ್ಟಳೆಗಳ ಮಾರ್ಗವನ್ನು ನಾನು ಗ್ರಹಿಸಮಾಡು; ಆಗ ನಿನ್ನ ಅದ್ಭುತಗಳ ವಿಷಯವಾಗಿ ಮಾತನಾಡುವೆನು.
- 28ನನ್ನ ಪ್ರಾಣವು ಭಾರದಿಂದ ಕರಗಿಹೋಗುತ್ತದೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಸ್ಥಿರಮಾಡು;
- 29ಸುಳ್ಳು ಮಾರ್ಗವನ್ನು ನನ್ನಿಂದ ತೊಲ ಗಿಸು. ನಿನ್ನ ನ್ಯಾಯಪ್ರಮಾಣವನ್ನು ನನಗೆ ಕೃಪೆಯಿಂದ ಅನುಗ್ರಹಿಸು.
- 30ಸತ್ಯದ ಮಾರ್ಗವನ್ನು ಆದು ಕೊಂಡಿದ್ದೇನೆ; ನಿನ್ನ ನ್ಯಾಯವಿಧಿಗಳನ್ನು ಮುಂದಿಟ್ಟು ಕೊಂಡಿದ್ದೇನೆ;
- 31ನಿನ್ನ ಸಾಕ್ಷಿಗಳಿಗೆ ಹತ್ತಿಕೊಂಡಿದ್ದೇನೆ; ಓ ಕರ್ತನೇ, ನನ್ನನ್ನು ನಾಚಿಕೆಪಡಿಸಬೇಡ.
Cross references
- 1 John 2:4 1 ಯೋಹಾನನು 2:4ಒಬ್ಬನು--ನಾನು ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ; ಸತ್ಯವು ಅವನಲ್ಲಿ ಇಲ್ಲ.
- 1 John 1:8 1 ಯೋಹಾನನು 1:8ನಮ್ಮಲ್ಲಿ ಪಾಪವಿಲ್ಲ ವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸ ಪಡಿಸಿಕೊಳ್ಳುತ್ತೇವೆ, ಸತ್ಯವು ನಮ್ಮಲ್ಲಿಲ್ಲ.
- Proverbs 30:8 ಜ್ಞಾನೋಕ್ತಿಗಳು 30:8ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು;
- Hebrews 8:10–11 ಇಬ್ರಿಯರಿಗೆ 8:10–11ಆ ದಿನಗಳ ತರುವಾಯ ನಾನು ಇಸ್ರಾಯೇಲ್ ಮನೆತನದ ವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು, ಅದೇನಂದರೆ--ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು; ಅವರ ಹೃದಯಗಳಲ್ಲಿ ಅವುಗಳನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರ ಇದಲ್ಲದೆ ಪ್ರತಿ ಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದ ರನಿಗೂ--ಕರ್ತನನ್ನು ತಿಳಿದುಕೊಳ್ಳಿರಿ ಎಂದು ಉಪ ದೇಶಿಸುವದಿಲ್ಲ; ಯಾಕಂದರೆ ಚಿಕ್ಕವರಿಂದ ದೊಡ್ಡವರ ವರೆಗೂ ನನ್ನನ್ನು ಅರಿತುಕೊಳ್ಳುವರು.
- Psalm 119:37 ಕೀರ್ತನೆಗಳು 119:37ವ್ಯರ್ಥತೆಯನ್ನು ನೋಡದ ಹಾಗೆ ನನ್ನ ಕಣ್ಣುಗಳನ್ನು ತೊಲಗಿಸು; ನಿನ್ನ ಮಾರ್ಗಗಳಲ್ಲಿ ನನ್ನನ್ನು ಚೈತನ್ಯ ಪಡಿಸು.
- Ephesians 4:22–25 ಎಫೆಸದವರಿಗೆ 4:22–25ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು. ನೀವು ನಿಮ್ಮ ಮನಸ್ಸಿನಭಾವದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ನೀತಿಯಲ್ಲಿಯೂ ನಿಜವಾದ ಪರಿಶುದ್ಧತೆಯಲ್ಲಿಯೂ ನಿರ್ಮಿಸಲ್ಪಟ್ಟಿದೆ. ಆದ ಕಾರಣ ಸುಳ್ಳಾಡುವದನ್ನು ಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.
- Revelation 22:15 ಪ್ರಕಟನೆ 22:15ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
- Psalm 141:3–4 ಕೀರ್ತನೆಗಳು 141:3–4ಓ ಕರ್ತನೇ, ನನ್ನ ಬಾಯಿಗೆ ಕಾವ ಲಿಡು; ನನ್ನ ತುಟಿಗಳ ಕದವನ್ನು ಕಾಯಿ. ಅಪರಾಧ ಮಾಡುವ ಮನುಷ್ಯರ ಸಂಗಡ ದುಷ್ಟತ್ವದಿಂದ ಕರ್ಮಗಳನ್ನು ನಡಿಸುವ ಕೆಟ್ಟ ಕಾರ್ಯಕ್ಕೆ ನನ್ನ ಹೃದಯವನ್ನು ಲಾಲಿಸದೆ ಮಾಡು; ಅವರ ಸವಿ ಊಟಗಳನ್ನು ನಾನು ಉಣ್ಣುವದಿಲ್ಲ.
- Psalm 119:5 ಕೀರ್ತನೆಗಳು 119:5ನನ್ನ ಮಾರ್ಗಗಳು ನಿನ್ನ ನಿಯಮಗಳನ್ನು ಕೈಕೊಳ್ಳುವದಕ್ಕೆ ನನ್ನನ್ನು ನಡಿ ಸಲಿ.
- Jeremiah 16:19 ಯೆರೆಮೀಯ 16:19ಓ ಕರ್ತನೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಅನ್ಯರು ನಿನ್ನ ಬಳಿಗೆ ಬಂದು--ನಿಶ್ಚಯ ವಾಗಿ ನಮ್ಮ ತಂದೆಗಳು ಸುಳ್ಳನ್ನು ವ್ಯರ್ಥವನ್ನು ಲಾಭ ವಿಲ್ಲದವುಗಳನ್ನು ಬಾಧ್ಯವಾಗಿ ಹೊಂದಿದ್ದಾರೆ.
- Jonah 2:8 ಯೋನ 2:8ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.
- Psalm 119:163 ಕೀರ್ತನೆಗಳು 119:163ಸುಳ್ಳನ್ನು ಹಗೆಮಾಡಿ ಅಸಹ್ಯಿಸಿಬಿಡುತ್ತೇನೆ. ನಿನ್ನ ನ್ಯಾಯಪ್ರಮಾಣವನ್ನು ಪ್ರೀತಿಮಾಡುತ್ತೇನೆ.