Psalms · chapter 138 · verse 6
Psalm 138:6 in Kannada
ಕರ್ತನು ಉನ್ನತನಾಗಿದ್ದರೂ ದೀನನನ್ನು ಗಮನಿ ಸುತ್ತಾನೆ. ಆದರೆ ಗರ್ವಿಷ್ಟನನ್ನು ದೂರದಿಂದ ತಿಳು ಕೊಳ್ಳುತ್ತಾನೆ.
Kartanu unnatanaagiddaroo deenanannu gamani suttaane. Aadare garvishtanannu dooradinda tilu kolluttaane.
Psalm 138:6 in English
- King James Version (KJV)
- Though the LORD [be] high, yet hath he respect unto the lowly: but the proud he knoweth afar off.
- World English Bible (WEB)
- For though the LORD is high, yet he looks after the lowly; but he knows the proud from afar.
- American Standard Version (ASV)
- For though Jehovah is high, yet hath he respect unto the lowly; But the haughty he knoweth from afar.
- Bible in Basic English (BBE)
- Though the Lord is high, he sees those who are low; and he has knowledge from far off of those who are lifted up.
- Darby Translation (DBY)
- For Jehovah is high; but he looketh upon the lowly, and the proud he knoweth afar off.
- Webster's Bible (WBS)
- Though the LORD [is] high, yet hath he respect to the lowly: but the proud he knoweth afar off.
- Young's Literal Translation (YLT)
- For high [is] Jehovah, and the lowly He seeth, And the haughty from afar He knoweth.
Read in context
- 4ಓ ಕರ್ತನೇ, ನಿನ್ನ ಬಾಯಿಯ ಮಾತುಗಳನ್ನು ಕೇಳುವಾಗ ಭೂಮಿಯ ಅರಸರೆಲ್ಲರೂ ನಿನ್ನನ್ನು ಕೊಂಡಾಡುವರು.
- 5ಹೌದು, ಅವರು ಕರ್ತನ ಮಾರ್ಗಗಳಲ್ಲಿ ಕರ್ತನ ಘನವು ದೊಡ್ಡದೆಂದು ಹಾಡುವರು.
- 6ಕರ್ತನು ಉನ್ನತನಾಗಿದ್ದರೂ ದೀನನನ್ನು ಗಮನಿ ಸುತ್ತಾನೆ. ಆದರೆ ಗರ್ವಿಷ್ಟನನ್ನು ದೂರದಿಂದ ತಿಳು ಕೊಳ್ಳುತ್ತಾನೆ.
- 7ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ ನೀನು ನನ್ನನ್ನು ಬದುಕಿಸಿ ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿನ್ನ ಕೈಯನ್ನು ಚಾಚುತ್ತೀ; ನಿನ್ನ ಬಲಗೈ ನನ್ನನ್ನು ರಕ್ಷಿಸುತ್ತದೆ.ಕರ್ತನು ನನಗಿ ರುವದನ್ನು ಸಿದ್ದಿಗೆ ತರುತ್ತಾನೆ; ಕರ್ತನೇ, ನಿನ್ನ ಕೃಪೆಯು ಎಂದೆಂದಿಗೂ ಅದೆ; ನಿನ್ನ ಸ್ವಂತ ಕೈಕೆಲಸಗಳನ್ನು ತೊರೆದುಬಿಡಬೇಡ.
- 8ಕರ್ತನು ನನಗಿ ರುವದನ್ನು ಸಿದ್ದಿಗೆ ತರುತ್ತಾನೆ; ಕರ್ತನೇ, ನಿನ್ನ ಕೃಪೆಯು ಎಂದೆಂದಿಗೂ ಅದೆ; ನಿನ್ನ ಸ್ವಂತ ಕೈಕೆಲಸಗಳನ್ನು ತೊರೆದುಬಿಡಬೇಡ.
Cross references
- Psalm 113:5–6 ಕೀರ್ತನೆಗಳು 113:5–6ನಮ್ಮ ದೇವರಾದ ಕರ್ತನ ಹಾಗೆ ಯಾರಿದ್ದಾರೆ? ಉನ್ನತದಲ್ಲಿ ಆತನು ವಾಸಿಸುತ್ತಾನೆ. ಆಕಾಶದ ಮೇಲೆಯೂ ಭೂಮಿಯ ಮೇಲೆಯೂ ದೃಷ್ಟಿ ಇಡುವದಕ್ಕೆ ಆತನು ತನ್ನನ್ನು ತಗ್ಗಿಸಿಕೊಳ್ಳುತ್ತಾನೆ.
- Isaiah 57:15 ಯೆಶಾಯ 57:15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- 1 Samuel 2:7–8 1 ಸಮುವೇಲನು 2:7–8ಕರ್ತನು ಬಡತನವನ್ನು ಐಶ್ವರ್ಯ ವನ್ನು ಕೊಡುವಾತನೂ ತಗ್ಗಿಸುವಾತನೂ ಉನ್ನತಮಾಡು ವಾತನೂ ಆಗಿದ್ದಾನೆ. ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುವಾ ತನೂ ಭಿಕ್ಷುಕನನ್ನು ತಿಪ್ಪೆಗುಂಡಿಯಿಂದ ತೆಗೆದು ಉನ್ನತ ಮಾಡುವಾತನೂ ಆಗಿದ್ದಾನೆ. ಅವರನ್ನು ಪ್ರಧಾ ನರ ಮಧ್ಯದಲ್ಲಿ ಕೂಡ್ರಿಸುತ್ತಾನೆ; ಘನತೆಯ ಸಿಂಹಾ ಸನವನ್ನು ಬಾಧ್ಯವಾಗಿ ಕೊಡುತ್ತಾನೆ. ಯಾಕಂದರೆ ಭೂಮಿಯ ಆಧಾರಸ್ತಂಭಗಳು ಕರ್ತನದಾಗಿವೆ, ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾನೆ.
- Proverbs 3:34 ಜ್ಞಾನೋಕ್ತಿಗಳು 3:34ಆತನು ನಿಶ್ಚಯವಾಗಿಯೂ ಪರಿಹಾಸ್ಯಕರನ್ನು ತಿರಸ್ಕರಿಸುತ್ತಾನೆ; ಆದರೆ ದೀನರಿಗೆ ಆತನು ಕೃಪೆಯನ್ನು ಕೊಡುತ್ತಾನೆ.ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು.
- James 4:6 ಯಾಕೋಬನು 4:6ಆತನು ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದದರಿಂದ--ದೇವರು ಅಹಂಕಾರಿಗಳನ್ನು ಎದುರಿಸು ತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸು ತ್ತಾನೆ ಎಂದು ಆತನು ಹೇಳುತ್ತಾನೆ.
- Isaiah 66:2 ಯೆಶಾಯ 66:2ಇವುಗಳ ನ್ನೆಲ್ಲಾ ನನ್ನ ಕೈ ಉಂಟುಮಾಡಿತು; ಇವುಗಳೆಲ್ಲಾ ಇದ್ದವೆಂದು ಕರ್ತನು ಅನ್ನುತ್ತಾನೆ. ಆದರೆ ಇವನ ಮೇಲೆ ದೃಷ್ಟಿ ಇಡುವೆನು ದೀನನೂ ಜಜ್ಜಿದ ಆತ್ಮವುಳ್ಳ ವನೂ ನನ್ನ ವಾಕ್ಯಕ್ಕೆ ನಡುಗುವವನೂ ಯಾವನೋ ಅವನ ಮೇಲೆಯೂ ದೃಷ್ಟಿ ಇಡುವೆನು.
- Luke 14:11 ಲೂಕನು 14:11ಯಾವನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳು ತ್ತಾನೋ ಅವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- 1 Peter 5:5–6 1 ಪೇತ್ರನು 5:5–6ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ. ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.
- Psalm 51:17 ಕೀರ್ತನೆಗಳು 51:17ಮುರಿದ ಮನಸ್ಸೇ ದೇವರ ಯಜ್ಞಗಳು. ಓ ದೇವರೇ, ಪಶ್ಚಾತ್ತಾಪದಿಂದ ಜಜ್ಜಿ ಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.
- Luke 1:48 ಲೂಕನು 1:48ಆತನು ತನ್ನ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾನೆ. ಇಗೋ, ಇಂದಿನಿಂದ ತಲತಲಾಂತರಗಳವರು ನನ್ನನ್ನು ಧನ್ಯಳೆಂದು ಕರೆಯುವರು.
- Luke 18:14 ಲೂಕನು 18:14ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.