Psalms · chapter 14 · verse 1
Psalm 14:1 in Kannada
ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಕೃತ್ಯಗಳನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
Devarillavendu moorkhanu tanna hrudayadalli helikondiddaane. Avaru kettuhogi asahyavaada krutyagalannu maadiddaare; olledannu maaduvavanu yaavanoo illa.
Psalm 14:1 in English
- King James Version (KJV)
- To the chief Musician, [A Psalm] of David. The fool hath said in his heart, [There is] no God. They are corrupt, they have done abominable works, [there is] none that doeth good.
- World English Bible (WEB)
- For the Chief Musician. By David. The fool has said in his heart, “There is no God.” They are corrupt. They have done abominable deeds. There is no one who does good.
- American Standard Version (ASV)
- For the Chief Musician. [A Psalm] of David. The fool hath said in his heart, There is no God. They are corrupt, they have done abominable works; There is none that doeth good.
- Bible in Basic English (BBE)
- To the chief music-maker. Of David. The foolish man has said in his heart, God will not do anything. They are unclean, they have done evil works; there is not one who does good.
- Darby Translation (DBY)
- To the chief Musician. [A Psalm] of David. The fool hath said in his heart, There is no God. They have corrupted themselves, they have done abominable works: there is none that doeth good.
- Webster's Bible (WBS)
- To the chief Musician, [A Psalm] of David. The fool hath said in his heart, [There is] no God. They are corrupt, they have done abominable works, [there is] none that doeth good.
- Young's Literal Translation (YLT)
- To the Overseer. — By David. A fool hath said in his heart, 'God is not;' They have done corruptly, They have done abominable actions, There is not a doer of good.
Read in context
- 1ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಕೃತ್ಯಗಳನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
- 2ದೇವರನ್ನು ಹುಡುಕುವ ಬುದ್ಧಿವಂತನು ಇದ್ದಾನೋ ಎಂದು ನೋಡುವದಕ್ಕೆ ಕರ್ತನು ಆಕಾಶದಿಂದ ಮನುಷ್ಯನ ಮಕ್ಕಳ ಮೇಲೆ ಕಣ್ಣಿಟ್ಟನು.
- 3ಅವರೆಲ್ಲರೂ ತಪ್ಪಿಹೋಗಿದ್ದಾರೆ, ಅವರೆಲ್ಲರೂ ಏಕವಾಗಿ ಹೊಲೆ ಯಾಗಿದ್ದಾರೆ; ಒಳ್ಳೆಯದನ್ನು ಮಾಡುವವನು ಇಲ್ಲ; ಒಬ್ಬನಾದರೂ ಇಲ್ಲ.
Cross references
- Psalm 10:4 ಕೀರ್ತನೆಗಳು 10:4ದುಷ್ಟನು ತನ್ನ ಗರ್ವದ ಮುಖದಿಂದ ದೇವರನ್ನು ಹುಡುಕುವದಿಲ್ಲ; ಅವನ ಯೋಚನೆಗಳೆಲ್ಲಾ ದೇವ ರಿಲ್ಲದವುಗಳು.
- Psalm 53:1 ಕೀರ್ತನೆಗಳು 53:1ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಅಂದುಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಅಪರಾಧವನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
- Romans 3:10–12 ರೋಮಾಪುರದವರಿಗೆ 3:10–12ಬರೆದಿರುವ ಪ್ರಕಾರ--ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ; ತಿಳುವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನೂ ಇಲ್ಲ. ಎಲ್ಲರೂ ದಾರಿತಪ್ಪಿದವರಾಗಿ ಕೆಲಸಕ್ಕೆ ಬಾರದವರಾದರು, ಒಳ್ಳೆ ಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.
- Romans 1:21–32 ರೋಮಾಪುರದವರಿಗೆ 1:21–32ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು. ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು; ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು. ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು; ಅವರು ದೇವರ ವಿಷಯವಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿ ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನೇ ಆರಾಧಿಸಿ ಸೇವಿಸಿದರು; ಆತನು (ಸೃಷ್ಟಿಕರ್ತನು) ಎಂದೆಂದಿಗೂ ಸ್ತುತಿ ಹೊಂದತಕ್ಕವನು. ಆಮೆನ್. ಈ ಕಾರಣದಿಂದ ದೇವರು ಅವರನ್ನು ತುಚ್ಛ ವಾದ ಮನೋಭಾವಗಳಿಗೆ ಒಪ್ಪಿಸಿಬಿಟ್ಟನು. ಹೇಗೆಂದರೆ ಅವರ ಹೆಂಗಸರು ಸಹ ಸ್ವಾಭಾವಿಕವಾದ ಭೋಗ ವನ್ನು ಸ್ವಭಾವ ವಿರುದ್ಧವಾದ ಭೋಗಕ್ಕೆ ಮಾರ್ಪಡಿ ಸಿದರು. ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀ ಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು. ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು. ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ ಚಾಡಿಹೇಳುವವರೂ ದೇವರನ್ನು ಹಗೆ ಮಾಡುವವರೂ ಧಿಕ್ಕರಿಸುವವರೂ ಅಹಂಕಾರಿಗಳೂ ಉಬ್ಬಿಕೊಳ್ಳುವವರೂ ಕೆಟ್ಟವುಗಳನ್ನು ಕಲ್ಪಿಸುವವರೂ ತಂದೆತಾಯಿಗಳಿಗೆ ಅವಿಧೇಯರೂ ತಿಳುವಳಿಕೆಯಿಲ್ಲ ದವರೂ ಪ್ರಮಾಣಕ್ಕೆ ತಪ್ಪುವವರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಸಮಾಧಾನವಾಗದವರೂ ಕರುಣೆಯಿಲ್ಲದವರೂ ಆದರು.ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ. ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ.
- Psalm 92:6 ಕೀರ್ತನೆಗಳು 92:6ಇದನ್ನು ಪಶುಪ್ರಾಯದವನಾದ ಮೂರ್ಖನು ಅರಿಯನು. ಇಲ್ಲವೆ ಹುಚ್ಚನು ತಿಳಿಯನು.
- Ephesians 2:1–3 ಎಫೆಸದವರಿಗೆ 2:1–3ಇದಲ್ಲದೆ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಆತನು ಬದುಕಿಸಿದನು. ನೀವು ಪೂರ್ವದಲ್ಲಿ ಅಪರಾಧ ಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹ ಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡಿಸುವ ಆತ್ಮನಿಗನುಸಾರವಾಗಿ ನಡೆದುಕೊಂಡಿರಿ; ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.
- Matthew 12:34 ಮತ್ತಾಯನು 12:34ಓ ಸರ್ಪಸಂತತಿಯವರೇ, ಕೆಟ್ಟವರಾಗಿ ರುವ ನೀವು ಒಳ್ಳೆಯವುಗಳನ್ನು ಹೇಗೆ ಮಾತನಾಡೀರಿ? ಯಾಕಂದರೆ ಹೃದಯದಲ್ಲಿ ಸಮೃದ್ಧಿಯಾಗಿರುವದನ್ನೇ ಬಾಯಿ ಮಾತನಾಡುತ್ತದೆ.
- Proverbs 1:7 ಜ್ಞಾನೋಕ್ತಿಗಳು 1:7ಕರ್ತನ ಭಯವೇ ಜ್ಞಾನದ ಮೂಲ; ಮೂರ್ಖರು ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುತ್ತಾರೆ.
- Genesis 6:5 ಆದಿಕಾಂಡ 6:5ಮನುಷ್ಯನ ದುಷ್ಟತ್ವವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳ ಕಲ್ಪನೆಗಳೆಲ್ಲಾ ಯಾವಾಗಲೂ ಬರೀ ಕೆಟ್ಟವುಗಳೆಂದೂ ದೇವರು ನೋಡಿದನು.
- Matthew 15:19 ಮತ್ತಾಯನು 15:19ಯಾಕಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು, ಕೊಲೆಗಳು, ಹಾದರಗಳು, ಜಾರತ್ವ ಗಳು, ಕಳ್ಳತನಗಳು, ಸುಳ್ಳುಸಾಕ್ಷಿ, ದೇವ ದೂಷಣೆಗಳು ಹೊರಗೆ ಬರುತ್ತವೆ.
- Luke 12:20 ಲೂಕನು 12:20ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು.
- Psalm 94:4–8 ಕೀರ್ತನೆಗಳು 94:4–8ಎಷ್ಟುಕಾಲ ಕಠಿಣ ವಾದವುಗಳನ್ನು ನುಡಿದು ಮಾತಾಡುತ್ತಾರೆ? ದುಷ್ಟತನ ಮಾಡುವವರೆಲ್ಲರು ಹೆಚ್ಚಿಸಿಕೊಳ್ಳುತ್ತಾರೆ; ಓ ಕರ್ತನೇ, ನಿನ್ನ ಜನರನ್ನು ತುಂಡುತುಂಡು ಮಾಡುತ್ತಾರೆ; ನಿನ್ನ ಸ್ವಾಸ್ಥ್ಯವನ್ನು ಬಾಧಿಸುತ್ತಾರೆ. ವಿಧವೆಯನ್ನೂ ಪರ ದೇಶಸ್ಥನನ್ನೂ ಅವರು ಕೊಲ್ಲುತ್ತಾರೆ; ದಿಕ್ಕಿಲ್ಲದವರನ್ನು ಹತಮಾಡುತ್ತಾರೆ. ಕರ್ತನು ನೋಡುವದಿಲ್ಲ; ಇಲ್ಲವೆ ಯಾಕೋಬನ ದೇವರು ಲಕ್ಷಿಸುವದಿಲ್ಲ ಅನ್ನುತ್ತಾರೆ. ಜನರಲ್ಲಿ ಪಶುಪ್ರಾಯದವರೇ, ನೀವು ಗ್ರಹಿಸಿರಿ; ಹುಚ್ಚರೇ, ಯಾವಾಗ ಬುದ್ಧಿವಂತರಾಗುವಿರಿ?