Psalms · chapter 141 · verse 5
Psalm 141:5 in Kannada
ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.
Neetivantanu nannannu hodeyali; adu karuneye; avanu nannannu gadarisali; adu nanna talege shreshtha enneye. Adannu nanna tale bedavennadirali; aadare innoo avara kedugalalli nanna praarthane iruvadu.
Psalm 141:5 in English
- King James Version (KJV)
- Let the righteous smite me; [it shall be] a kindness: and let him reprove me; [it shall be] an excellent oil, [which] shall not break my head: for yet my prayer also [shall be] in their calamities.
- World English Bible (WEB)
- Let the righteous strike me, it is kindness; let him reprove me, it is like oil on the head; don’t let my head refuse it; Yet my prayer is always against evil deeds.
- American Standard Version (ASV)
- Let the righteous smite me, [it shall be] a kindness; And let him reprove me, [it shall be as] oil upon the head; Let not my head refuse it: For even in their wickedness shall my prayer continue.
- Bible in Basic English (BBE)
- Let the upright give me punishment; and let the god-fearing man put me in the right way; but I will not let the oil of sinners come on my head: when they do evil I will give myself to prayer.
- Darby Translation (DBY)
- Let the righteous smite me, it is kindness; and let him reprove me, it is an excellent oil which my head shall not refuse: for yet my prayer also is [for them] in their calamities.
- Webster's Bible (WBS)
- Let the righteous smite me; [it shall be] a kindness: and let him reprove me; [it shall be] an excellent oil, [which] shall not break my head: for yet my prayer also [shall be] in their calamities.
- Young's Literal Translation (YLT)
- The righteous doth beat me [in] kindness. And doth reprove me, Oil of the head my head disalloweth not, For still my prayer [is] about their vexations.
Read in context
- 3ಓ ಕರ್ತನೇ, ನನ್ನ ಬಾಯಿಗೆ ಕಾವ ಲಿಡು; ನನ್ನ ತುಟಿಗಳ ಕದವನ್ನು ಕಾಯಿ. ಅಪರಾಧ ಮಾಡುವ ಮನುಷ್ಯರ ಸಂಗಡ ದುಷ್ಟತ್ವದಿಂದ ಕರ್ಮಗಳನ್ನು ನಡಿಸುವ ಕೆಟ್ಟ ಕಾರ್ಯಕ್ಕೆ
- 4ನನ್ನ ಹೃದಯವನ್ನು ಲಾಲಿಸದೆ ಮಾಡು; ಅವರ ಸವಿ ಊಟಗಳನ್ನು ನಾನು ಉಣ್ಣುವದಿಲ್ಲ.
- 5ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.
- 6ಅವರ ನ್ಯಾಯಾ ಧಿಪತಿಗಳು ಬಂಡೆಯ ಸ್ಥಳಗಳಲ್ಲಿ ಕೆಡವಲ್ಪಡುವಾಗ ಅವರು ನನ್ನ ಮಾತುಗಳನ್ನು ಕೇಳುವರು; ಅವು ಸಿಹಿಯಾಗಿವೆ.
- 7ಭೂಮಿಯಲ್ಲಿ ಮರವನ್ನು ಕಡಿದು ಸೀಳುವವನ ಹಾಗೆ ನಮ್ಮ ಎಲುಬುಗಳು ಸಮಾಧಿಯ ಬಾಯಿಯ ಹತ್ತಿರ ಚದುರಿ ಅವೆ.
Cross references
- Ecclesiastes 7:5 ಪ್ರಸಂಗಿ 7:5ಮೂಢರ ಹಾಡನ್ನು ಒಬ್ಬ ಮನುಷ್ಯನು ಕೇಳುವದಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Galatians 6:1 ಗಲಾತ್ಯದವರಿಗೆ 6:1ಸಹೋದರರೇ, ಒಬ್ಬನು ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕಭಾವದಿಂದ ಯಥಾಸ್ಥಾನ ಪಡಿಸಿರಿ; ನೀನಾದರೋ ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.
- Proverbs 27:5–6 ಜ್ಞಾನೋಕ್ತಿಗಳು 27:5–6ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು. ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ; ಶತ್ರುವಿನ ಮುದ್ದುಗಳು ಮೋಸಕರವಾಗಿವೆ.
- Proverbs 25:12 ಜ್ಞಾನೋಕ್ತಿಗಳು 25:12ಕೇಳುವ ಕಿವಿಗೆ ಜ್ಞಾನಿಯ ಗದರಿಕೆಯು ಹೇಗೋ ಹಾಗೇ ಬಂಗಾ ರದ ಕಿವಿಯ ಓಲೆಯು ಚೊಕ್ಕಬಂಗಾರದ ಆಭರಣ ದಂತಿದೆ.
- Proverbs 19:25 ಜ್ಞಾನೋಕ್ತಿಗಳು 19:25ಪರಿಹಾಸ್ಯಗಾರರನ್ನು ಹೊಡೆದರೆ ಮೂಢರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿ ದರೆ ಅವನು ತಿಳುವಳಿಕೆಯನ್ನು ಗ್ರಹಿಸುವನು.
- Proverbs 9:8–9 ಜ್ಞಾನೋಕ್ತಿಗಳು 9:8–9ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು. ಜ್ಞಾನಿಗೆ ಶಿಕ್ಷಣ ಮಾಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತ ನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿ ಕೊಳ್ಳುವನು. ಕರ್ತನ ಭಯವೇ ಜ್ಞಾನಕ್ಕೆ ಮೂಲವು.
- Proverbs 15:5 ಜ್ಞಾನೋಕ್ತಿಗಳು 15:5ತನ್ನ ತಂದೆಯ ಬೋಧನೆಯನ್ನು ಬುದ್ಧಿಹೀನನು ತಿರಸ್ಕರಿಸುತ್ತಾನೆ. ವಿವೇಕಿಯು ಗದರಿಕೆಯನ್ನು ಲಕ್ಷಿಸುವನು;
- Galatians 2:11–14 ಗಲಾತ್ಯದವರಿಗೆ 2:11–14ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು. ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದ್ದರಿಂದ ನಾನು ಅವ ನನ್ನು ಮುಖಾಮುಖಿಯಾಗಿ ಎದುರಿಸಿದೆನು. ಇದಲ್ಲದೆ ಮಿಕ್ಕಾದ ಯೆಹೂದ್ಯರೂ ಅವನೊಂದಿಗೆ ಸೇರಿ ಹಾಗೆಯೇ ಕಪಟಮಾಡಿದರು; ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಬಿದ್ದನು. ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ನೆಟ್ಟಗೆ ನಡೆಯಲಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಪೇತ್ರನಿಗೆ ಹೇಳಿದ್ದೇನಂದರೆ--ನೀನು ಯೆಹೂದ್ಯ ನಾಗಿದ್ದು ಯೆಹೂದ್ಯರಂತೆ ನಡೆಯದೆ ಅನ್ಯಜನರಂತೆ ನಡೆದ ಮೇಲೆ ಅನ್ಯಜನರಿಗೆ--ನೀವು ಯೆಹೂದ್ಯರಂತೆ ನಡಕೊಳ್ಳಬೇಕೆಂದು ನೀನು ಬಲಾತ್ಕಾರ
- 2 Chronicles 25:16 2 ಪೂರ್ವಕಾಲವೃತ್ತಾಂತ 25:16ಅವನು ಅರ ಸನ ಸಂಗಡ ಮಾತನಾಡುತ್ತಿರುವಾಗ ಅರಸನು ಅವ ನಿಗೆ--ಅರಸನ ಯೋಚನಾಕರ್ತರಲ್ಲಿ ನೀನು ಒಬ್ಬ ನಾಗಿದ್ದೀಯೋ? ನೀನು ಯಾಕೆ ಹೊಡೆಯಲ್ಪಡಬೇಕು ಅಂದನು. ಆಗ ಪ್ರವಾದಿಯು--ನೀನು ನನ್ನ ಯೋಚನೆ ಯನ್ನು ಕೇಳದೆ ಇದನ್ನು ಮಾಡಿದ್ದರಿಂದ ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾನೆಂದು ನಾನು ಬಲ್ಲೆನು ಎಂದು ಹೇಳಿಬಿಟ್ಟನು.
- 1 Samuel 25:31–34 1 ಸಮುವೇಲನು 25:31–34ನನ್ನ ಒಡೆಯನ ಹೃದಯಕ್ಕೆ ಅಪರಾಧವಾಗಿರುವದಿಲ್ಲ. ಆದರೆ ನನ್ನ ಒಡೆಯನಿಗೆ ಕರ್ತನು ಚೆನ್ನಾಗಿ ನಡೆಸಿದಾಗ ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು ಅಂದಳು. ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ. ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ. ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು.
- 2 Chronicles 16:7–10 2 ಪೂರ್ವಕಾಲವೃತ್ತಾಂತ 16:7–10ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು. ಕೂಷಿಯರೂ ಲೂಬ್ಯರೂ ಮಹಾಸೈನ್ಯವಲ್ಲವೋ? ಅವರ ಸಂಗಡ ಅನೇಕ ರಥಗಳೂ ರಾಹುತರೂ ಇದ್ದರಲ್ಲವೇ? ಆಗ ನೀನು ಕರ್ತನ ಮೇಲೆ ಆತುಕೊಂಡದ್ದರಿಂದ ಆತನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದನು. ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ. ಈಗ ನೀನು ಬುದ್ಧಿ ಹೀನನಾಗಿ ನಡಕೊಂಡಿದ್ದೀ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಉಂಟಾಗಿರುವವು ಅಂದನು. ಆಗ ಆಸನು ಪ್ರವಾದಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಅವನ ಮಾತು ಗಳ ನಿಮಿತ್ತ ಅವನ ಮೆಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವ ರನ್ನು ಬಾಧಿಸಿದನು.