Psalms · chapter 2 · verse 10
Psalm 2:10 in Kannada
ಆದದರಿಂದ ಓ ಅರಸುಗಳೇ, ಈಗ ಜ್ಞಾನವಂತ ರಾಗಿರಿ; ಭೂ ನ್ಯಾಯಾಧಿಪತಿಗಳೇ, ಶಿಕ್ಷಣ ಪಡೆಯಿರಿ.
Aadadarinda o arasugale, eega jnyaanavanta raagiri; bhoo nyaayaadhipatigale, shikshana padeyiri.
Psalm 2:10 in English
- King James Version (KJV)
- Be wise now therefore, O ye kings: be instructed, ye judges of the earth.
- World English Bible (WEB)
- Now therefore be wise, you kings. Be instructed, you judges of the earth.
- American Standard Version (ASV)
- Now therefore be wise, O ye kings: Be instructed, ye judges of the earth.
- Bible in Basic English (BBE)
- So now be wise, you kings: take his teaching, you judges of the earth.
- Darby Translation (DBY)
- And now, O kings, be ye wise, be admonished, ye judges of the earth.
- Webster's Bible (WBS)
- Be wise now therefore, O ye kings: be instructed, ye judges of the earth.
- Young's Literal Translation (YLT)
- And now, O kings, act wisely, Be instructed, O judges of earth,
Read in context
- 8ನನ್ನನ್ನು ಕೇಳು; ಆಗ ಅನ್ಯಜನರನ್ನು ನಿನ್ನ ಬಾಧ್ಯತೆಯಾಗಿಯೂ ಭೂಮಿಯ ಕಟ್ಟಕಡೆಯ ವರೆಗೆ ನಿನ್ನ ಸ್ವಾಸ್ಥ್ಯವಾಗಿಯೂ ಕೊಡುವೆನು.
- 9ಕಬ್ಬಿಣದ ಕೋಲಿನಿಂದ ಅವರನ್ನು ಮುರಿದುಬಿಡುವಿ. ಕುಂಬಾರನ ಗಡಿಗೆಯ ಹಾಗೆ ಅವ ರನ್ನು ಒಡೆದು ಚೂರುಚೂರಾಗಿ ಮಾಡಿಬಿಡುವಿ.
- 10ಆದದರಿಂದ ಓ ಅರಸುಗಳೇ, ಈಗ ಜ್ಞಾನವಂತ ರಾಗಿರಿ; ಭೂ ನ್ಯಾಯಾಧಿಪತಿಗಳೇ, ಶಿಕ್ಷಣ ಪಡೆಯಿರಿ.
- 11ಭಯದಿಂದ ಕರ್ತನನ್ನು ಸೇವಿಸಿರಿ, ನಡು ಗುತ್ತಾ ಉಲ್ಲಾಸಪಡಿರಿ.ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು.
- 12ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು.
Cross references
- Hosea 14:9 ಹೋಶೇಯ 14:9ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
- Isaiah 60:10–11 ಯೆಶಾಯ 60:10–11ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ.
- Isaiah 52:15 ಯೆಶಾಯ 52:15ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
- Isaiah 60:3 ಯೆಶಾಯ 60:3ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು.
- Psalm 72:10–11 ಕೀರ್ತನೆಗಳು 72:10–11ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು. ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು.
- Psalm 82:1–8 ಕೀರ್ತನೆಗಳು 82:1–8ದೇವರು ಬಲಶಾಲಿಗಳ ಮಧ್ಯದಲ್ಲಿ ನಿಂತು ದೇವರುಗಳಿಗೆ ನ್ಯಾಯತೀರಿಸುತ್ತಾನೆ. ಎಷ್ಟರ ವರೆಗೂ ಅನ್ಯಾಯವಾಗಿ ತೀರ್ಪುಮಾಡಿ ದುಷ್ಟ ರಿಗೆ ಮುಖದಾಕ್ಷಿಣ್ಯ ಮಾಡುವಿರಿ? ಸೆಲಾ. ದರಿದ್ರ ನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿ ದೀನನಿಗೂ ಬಡವ ನಿಗೂ ನೀತಿಯನ್ನು ಮಾಡಿರಿ. ದರಿದ್ರನನ್ನೂ ಬಡವ ನನ್ನೂ ದುಷ್ಟರ ಕೈಯಿಂದ ಬಿಡಿಸಿರಿ. ಅವರು ಅರಿಯರು; ಗ್ರಹಿಸುವದಿಲ್ಲ; ಕತ್ತಲೆಯಲ್ಲಿ ನಡೆದುಕೊಳ್ಳುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕ್ರಮವಿಲ್ಲದವುಗಳು. ನಾನು--ನೀವು ದೇವರುಗಳು; ನೀವೆಲ್ಲರು ಮಹೋನ್ನತನ ಮಕ್ಕಳು ಎಂದು ಹೇಳಿದೆನು. ಆದಾಗ್ಯೂ ಮನುಷ್ಯರ ಹಾಗೆ ನೀವು ಸಾಯುವಿರಿ; ಪ್ರಧಾನರಲ್ಲಿ ಒಬ್ಬನ ಹಾಗೆ ಬೀಳುವಿರಿ.ಓ ದೇವರೇ, ಏಳು; ಭೂಮಿಗೆ ನ್ಯಾಯತೀರಿಸು; ನೀನು ಜನಾಂಗಗಳನ್ನೆಲ್ಲಾ ಬಾಧ್ಯವಾಗಿ ಹೊಂದುವಿ. ಓ ದೇವರೇ, ಏಳು; ಭೂಮಿಗೆ ನ್ಯಾಯತೀರಿಸು; ನೀನು ಜನಾಂಗಗಳನ್ನೆಲ್ಲಾ ಬಾಧ್ಯವಾಗಿ ಹೊಂದುವಿ.
- Psalm 45:12 ಕೀರ್ತನೆಗಳು 45:12ತೂರಿನ ಮಗಳು ಕಾಣಿಕೆಯೊಂದಿಗೆ ಅಲ್ಲಿ ಇರುವಳು; ಅಂದರೆ ಪ್ರಜೆ ಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು.
- Jeremiah 6:8 ಯೆರೆಮೀಯ 6:8ಯೆರೂಸಲೇಮೇ, ನನ್ನ ಪ್ರಾಣವು ನಿನ್ನ ಕಡೆಯಿಂದ ಹೊರಟು ಹೋಗದ ಹಾಗೆ ನಾನು ನಿಮ್ಮನ್ನು ಹಾಳಾಗಿಯೂ ನಿವಾಸಿಗಳಿಲ್ಲದ ದೇಶವಾಗಿಯೂ ಮಾಡದ ಹಾಗೆ ಶಿಕ್ಷಣವನ್ನು ತಕ್ಕೋ.
- Isaiah 49:23 ಯೆಶಾಯ 49:23ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.