Psalms · chapter 24 · verse 8
Psalm 24:8 in Kannada
ಈ ಮಹಿಮೆಯ ಅರಸನು ಯಾರು? ಬಲವೂ ಪರಾಕ್ರಮವೂ ಉಳ್ಳ ಕರ್ತನು; ಯುದ್ಧದಲ್ಲಿ ಪರಾಕ್ರಮವುಳ್ಳ ಕರ್ತನು.
Ee mahimeya arasanu yaaru? Balavoo paraakramavoo ulla kartanu; yuddhadalli paraakramavulla kartanu.
Psalm 24:8 in English
- King James Version (KJV)
- Who [is] this King of glory? The LORD strong and mighty, the LORD mighty in battle.
- World English Bible (WEB)
- Who is the King of glory? The LORD strong and mighty, the LORD mighty in battle.
- American Standard Version (ASV)
- Who is the King of glory? Jehovah strong and mighty, Jehovah mighty in battle.
- Bible in Basic English (BBE)
- Who is the King of glory? The Lord of strength and power, the Lord strong in war.
- Darby Translation (DBY)
- Who is this King of glory? Jehovah strong and mighty, Jehovah mighty in battle.
- Webster's Bible (WBS)
- Who [is] this King of glory? the LORD strong and mighty, the LORD mighty in battle.
- Young's Literal Translation (YLT)
- Who [is] this — 'the king of glory?' Jehovah — strong and mighty, Jehovah, the mighty in battle.
Read in context
- 6ಆತನನ್ನು ಹುಡುಕುವ ಸಂತತಿಯು ಇದೇ; ಓ ಯಾಕೋಬ್ಯರ ದೇವರೇ, ನಿನ್ನ ಸನ್ನಿಧಿಯನ್ನು ಹುಡುಕುವವರು ಇಂಥವರೇ. ಸೆಲಾ.
- 7ಬಾಗಲುಗಳೇ, ನಿಮ್ಮ ತಲೆಗಳನ್ನು ಎತ್ತಿರಿ; ನಿತ್ಯ ದ್ವಾರಗಳೇ, ಎತ್ತಲ್ಪಡಿರಿ; ಮಹಿಮೆಯುಳ್ಳ ಅರಸನು ಒಳಗೆ ಬರುತ್ತಾನೆ.
- 8ಈ ಮಹಿಮೆಯ ಅರಸನು ಯಾರು? ಬಲವೂ ಪರಾಕ್ರಮವೂ ಉಳ್ಳ ಕರ್ತನು; ಯುದ್ಧದಲ್ಲಿ ಪರಾಕ್ರಮವುಳ್ಳ ಕರ್ತನು.
- 9ಬಾಗಲುಗಳೇ, ನಿಮ್ಮ ತಲೆಗಳನ್ನೆತ್ತಿರಿ; ನಿತ್ಯದ್ವಾರ ಗಳೇ, ಅವುಗಳನ್ನು ಎತ್ತಿರಿ; ಮಹಿಮೆಯ ಅರಸನು ಒಳಗೆ ಬರುತ್ತಾನೆ.ಮಹಿಮೆಯ ಅರಸನಾದ ಈತನು ಯಾರು? ಸೈನ್ಯಗಳ ಕರ್ತನು, ಈತನೇ ಮಹಿಮೆಯ ಅರಸನು--ಸೆಲಾ.
- 10ಮಹಿಮೆಯ ಅರಸನಾದ ಈತನು ಯಾರು? ಸೈನ್ಯಗಳ ಕರ್ತನು, ಈತನೇ ಮಹಿಮೆಯ ಅರಸನು--ಸೆಲಾ.
Cross references
- Exodus 15:3 ವಿಮೋಚನಕಾಂಡ 15:3ಕರ್ತನು ಯುದ್ಧ ಶೂರನು; ಕರ್ತನು ಎಂಬದೇ ಆತನ ಹೆಸರು.
- Revelation 19:11–21 ಪ್ರಕಟನೆ 19:11–21ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಬಿಳೀ ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದಾತನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಟ್ಟನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಯುದ್ಧ ಮಾಡುತ್ತಾನೆ; ಆತನ ಕಣ್ಣುಗಳು ಬೆಂಕಿಯ ಉರಿಯಂತಿದ್ದವು; ಆತನ ತಲೆಯ ಮೇಲೆ ಅನೇಕ ಕಿರೀಟಗಳು ಇದ್ದವು. ಬರೆಯಲ್ಪಟ್ಟ ಹೆಸರು ಆತನಿಗೆ ಇತ್ತು. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿದಿರಲಿಲ್ಲ. ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿ ಕೊಂಡಿದ್ದನು. ಆತನ ಹೆಸರು ದೇವರವಾಕ್ಯ ವೆಂದು ಕರೆಯಲ್ಪಡುತ್ತದೆ. ಪರಲೋಕದಲ್ಲಿರುವ ಸೈನ್ಯಗಳು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು. ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ. ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ. ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವದನ್ನು ನಾನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ--ಬನ್ನಿರಿ, ಮಹಾ ದೇವರ ಭೋಜನಕ್ಕೆ ಕೂಡಿಕೊಳ್ಳಿರಿ, ರಾಜರ ಮಾಂಸವನ್ನೂ ಸೈನ್ಯಾಧಿಪತಿ ಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ಅವುಗಳ ಮೇಲೆ ಕೂತವರ ಮಾಂಸವನ್ನೂ ಮತ್ತು ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು. ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು. ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು. ಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- Revelation 6:2 ಪ್ರಕಟನೆ 6:2ಆಗ ಇಗೋ, ಒಂದು ಬಿಳೀ ಕುದುರೆ ಯನ್ನು ನಾನು ನೋಡಿದೆನು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ಬಿಲ್ಲು ಇತ್ತು; ಅವನಿಗೆ ಕಿರೀಟ ಕೊಡಲ್ಪಟ್ಟಿತ್ತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು.
- Colossians 2:15 ಕೊಲೊಸ್ಸೆಯವರಿಗೆ 2:15ಆತನು ದೊರೆತನಗಳನ್ನೂ ಅಧಿಕಾರ ಗಳನ್ನೂ ಕೆಡಿಸಿ ಶಿಲುಬೆಯಲ್ಲಿ ಅವುಗಳ ಮೇಲೆ ವಿಜಯ ಗೊಂಡು ಅವುಗಳನ್ನು ಬಹಿರಂಗವಾಗಿ ತೋರಿಸಿದನು.
- Psalm 45:3–6 ಕೀರ್ತನೆಗಳು 45:3–6ಓ ಪರಾಕ್ರಮಿಯೇ, ನಿನ್ನ ಮಹಿಮೆಯಿಂದಲೂ ಘನತೆಯಿಂದಲೂ ನಿನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿ ದುಕೋ. ಸತ್ಯತೆ ಸಾತ್ವಿಕತೆ ನೀತಿಗೋಸ್ಕರವೂ ನಿನ್ನ ಘನತೆಯಿಂದ ಅಭಿವೃದ್ಧಿಹೊಂದಿ ಸವಾರಿಮಾಡು; ನಿನ್ನ ಬಲಗೈ ಭಯಂಕರವಾದವುಗಳನ್ನು ನಿನಗೆ ಕಲಿಸುವದು. ನಿನ್ನ ಹದವಾದ ಬಾಣಗಳು ಅರಸನ ಶತ್ರು ಗಳ ಹೃದಯದಲ್ಲಿ ನೆಟ್ಟಿವೆ; ಅವುಗಳಿಂದ ಜನರು ನಿನ್ನ ಕೆಳಗೆ ಬೀಳುತ್ತಾರೆ ಓ ದೇವರೇ, ನಿನ್ನ ಸಿಂಹಾಸ ನವು ಎಂದೆಂದಿಗೂ ಇರುವದು; ನಿನ್ನ ರಾಜ್ಯದಂಡವು ನ್ಯಾಯದಂಡವಾಗಿದೆ.
- Isaiah 63:1–6 ಯೆಶಾಯ 63:1–6ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ. ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ? ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು. ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು. ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು. ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.
- Psalm 93:1 ಕೀರ್ತನೆಗಳು 93:1ಕರ್ತನು ಆಳುತ್ತಾನೆ, ಆತನು ಘನತೆಯನ್ನು ಹೊದ್ದುಕೊಂಡಿದ್ದಾನೆ; ಕರ್ತನು ಬಲ ದಿಂದ ಹೊದ್ದುಕೊಂಡಿದ್ದಾನೆ, ಅದರಿಂದ ತನ್ನ ನಡು ವನ್ನು ಕಟ್ಟಿಕೊಂಡಿದ್ದಾನೆ; ಲೋಕವು ಸಹ ಸ್ಥಿರವಾಗಿದೆ; ಕದಲುವದಿಲ್ಲ.
- Isaiah 9:6 ಯೆಶಾಯ 9:6ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
- Psalm 50:1 ಕೀರ್ತನೆಗಳು 50:1ಬಲಿಷ್ಠ ದೇವರಾಗಿರುವ ಕರ್ತನು ತಾನೇ ಮಾತನಾಡಿ ಸೂರ್ಯೋದಯದಿಂದ ಅಸ್ತಮಾನದ ವರೆಗೂ ಭೂನಿವಾಸಿಗಳನ್ನು ಕರೆದಿದ್ದಾನೆ.
- Isaiah 19:24–25 ಯೆಶಾಯ 19:24–25ಆ ದಿನದಲ್ಲಿ ಇಸ್ರಾಯೇಲು ಐಗುಪ್ತ್ಯರ ಸಂಗ ಡಲೂ ಅಶ್ಶೂರ್ಯರ ಸಂಗಡಲೂ ಮೂರನೆಯ ದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವದು.ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು. ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು.
- Psalm 76:3–6 ಕೀರ್ತನೆಗಳು 76:3–6ಅಲ್ಲಿಯೇ ಬಿಲ್ಲಿನ ಬಾಣಗಳನ್ನೂ ಗುರಾಣಿಯನ್ನೂ ಕತ್ತಿಯನ್ನೂ ಯುದ್ಧವನ್ನೂ ಮುರಿದುಬಿಟ್ಟನು. ಸೆಲಾ. ಬೇಟೆಗಳಿರುವ ಬೆಟ್ಟಗಳಿಗಿಂತ ನೀನು ಪ್ರಕಾಶವು ಳ್ಳವನೂ ಶ್ರೇಷ್ಠನೂ ಆಗಿದ್ದೀ. ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ. ಓ ಯಾಕೋಬನ ದೇವರೇ, ನಿನ್ನ ಗದರಿಕೆಯಿಂದ ರಥವೂ ಕುದುರೆಯೂ ಗಾಢ ನಿದ್ರೆಯಲ್ಲಿ ಬಿದ್ದಿವೆ.