Psalms · chapter 25 · verse 16
Psalm 25:16 in Kannada
ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.
Neenu nanna kadege tirugi nanna mele karuneyidu; naanu ontiga naagiyoo baadhepaduvavanaagiyoo iddene.
Psalm 25:16 in English
- King James Version (KJV)
- Turn thee unto me, and have mercy upon me; for I [am] desolate and afflicted.
- World English Bible (WEB)
- Turn to me, and have mercy on me, for I am desolate and afflicted.
- American Standard Version (ASV)
- Turn thee unto me, and have mercy upon me; For I am desolate and afflicted.
- Bible in Basic English (BBE)
- Be turned to me, and have mercy on me; for I am troubled and have no helper.
- Darby Translation (DBY)
- Turn toward me, and be gracious unto me; for I am solitary and afflicted.
- Webster's Bible (WBS)
- Turn thee to me, and have mercy upon me; for I [am] desolate and afflicted.
- Young's Literal Translation (YLT)
- Turn Thou unto me, and favour me, For lonely and afflicted [am] I.
Read in context
- 14ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು.
- 15ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.
- 16ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.
- 17ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ನೀನು ನನ್ನ ಸಂಕಟಗಳೊಳಗಿಂದ ನನ್ನನ್ನು ಹೊರಗೆ ಬರಮಾಡು.
- 18ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು.
Cross references
- Psalm 86:16 ಕೀರ್ತನೆಗಳು 86:16ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.
- Micah 7:19 ಮೀಕ 7:19ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- Daniel 9:17 ದಾನಿಯೇಲನು 9:17ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು.
- Psalm 143:4 ಕೀರ್ತನೆಗಳು 143:4ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.
- Psalm 69:14–20 ಕೀರ್ತನೆಗಳು 69:14–20ನಾನು ಮುಳುಗದಂತೆ ನನ್ನನ್ನು ಕೆಸರಿನೊಳಗಿಂದ ಬಿಡಿಸು; ಹಗೆಮಾಡುವವರಿಂದ ನನ್ನನ್ನು ತಪ್ಪಿಸು, ನೀರಿನ ಅಗಾಧಗಳೊಳಗಿಂದಲೂ ನನಗೆ ಬಿಡುಗಡೆ ಯಾಗಲಿ ನೀರಿನ ಪ್ರವಾಹವು ನನ್ನ ಮೇಲೆ ಹಾದು ಹೋಗದೇ ಇರಲಿ; ಅಗಾಧವು ನನ್ನನ್ನು ನುಂಗದೆ ಇರಲಿ; ಕುಣಿಯು ನನಗಾಗಿ ತನ್ನ ಬಾಯನ್ನು ಮುಟ್ಟ ದಿರಲಿ. ಓ ಕರ್ತನೇ, ನನಗೆ ಉತ್ತರಕೊಡು;ನಿನ್ನ ಪ್ರೀತಿ ಕರುಣೆಯು ಒಳ್ಳೇದಾಗಿದೆ; ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ಕಡೆಗೆ ತಿರುಗು. ನಿನ್ನ ಮುಖವನ್ನು ನಿನ್ನ ಸೇವಕನಿಗೆ ಮರೆಮಾಡಬೇಡ; ನಾನು ಇಕ್ಕಟ್ಟಿನಲ್ಲಿದ್ದೇನೆ; ಬೇಗ ನನಗೆ ಉತ್ತರಕೊಡು. ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು. ನೀನು ನನ್ನ ನಿಂದೆಯನ್ನೂ ನಾಚಿಕೆಯನ್ನೂ ಅವಮಾನವನ್ನೂ ತಿಳಿದಿದ್ದೀ; ನನ್ನ ವೈರಿಗಳೆಲ್ಲರು ನಿನ್ನ ಮುಂದೆ ಇದ್ದಾರೆ. ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ.
- Psalm 88:15–18 ಕೀರ್ತನೆಗಳು 88:15–18ನಾನು ಕುಂದಿದವನೂ ಯೌವನದಾರಭ್ಯ ಸಾಯು ವದಕ್ಕೆ ಸಿದ್ಧನೂ ಆಗಿದ್ದೇನೆ. ನಿನ್ನ ಬೆದರಿಕೆಗಳನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ. ನನ್ನ ಮೇಲೆ ನಿನ್ನ ಕೋಪಾಗ್ನಿಯು ದಾಟುವದು. ನಿನ್ನ ಹೆದರಿಕೆಗಳು ನನ್ನನ್ನು ಸಂಹರಿಸುತ್ತವೆ. ನೀರಿನ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಂಡಿವೆ; ಏಕವಾಗಿ ನನ್ನನ್ನು ಮುತ್ತಿಕೊಂಡಿವೆ.ಪ್ರಿಯನನ್ನೂ ಸ್ನೇಹಿತನನೂ ನನಗೆ ದೂರ ಮಾಡಿದ್ದೀ; ನನ್ನ ಕತ್ತಲೆಯ ಸ್ಥಳವೇ ನನ್ನ ಪರಿಚಿತರು. ಪ್ರಿಯನನ್ನೂ ಸ್ನೇಹಿತನನೂ ನನಗೆ ದೂರ ಮಾಡಿದ್ದೀ; ನನ್ನ ಕತ್ತಲೆಯ ಸ್ಥಳವೇ ನನ್ನ ಪರಿಚಿತರು.
- Psalm 60:1 ಕೀರ್ತನೆಗಳು 60:1ಓ ದೇವರೇ, ಕೋಪಿಸಿಕೊಂಡು ನಮ್ಮನ್ನು ತಳ್ಳಿ ಚದರಿಸಿಬಿಟ್ಟಿದ್ದೀ; ಮತ್ತೆ ನಮ್ಮ ಕಡೆಗೆ ತಿರುಗಿಕೋ.
- Mark 15:33–35 ಮಾರ್ಕನು 15:33–35ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು. ಒಂಭತ್ತ ನೆಯ ತಾಸಿನಲ್ಲಿ ಯೇಸು--ಎಲೋಹಿ, ಎಲೋಹಿ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು. ಹತ್ತಿರದಲ್ಲಿ ನಿಂತಿದ್ದ ಕೆಲವರು ಅದನ್ನು ಕೇಳಿ--ಇಗೋ, ಈತನು ಎಲೀಯ ನನ್ನು ಕರೆಯುತ್ತಾನೆ ಅಂದರು.