Psalms · chapter 31 · verse 17
Psalm 31:17 in Kannada
ಓ ಕರ್ತನೇ, ನಿನಗೆ ಮೊರೆಯಿಟ್ಟಿದ್ದೇನೆ; ನಾನು ಆಶಾಭಂಗಪಡ ದಂತೆ ಮಾಡು; ದುಷ್ಟರು ಆಶಾಭಂಗಪಡಲಿ; ಅವರು ಸಮಾಧಿಯಲ್ಲಿ ಮೌನವಾಗಿರಲಿ.
O kartane, ninage moreyittiddene; naanu aashaabhangapada dante maadu; dushtaru aashaabhangapadali; avaru samaadhiyalli maunavaagirali.
Psalm 31:17 in English
- King James Version (KJV)
- Let me not be ashamed, O LORD; for I have called upon thee: let the wicked be ashamed, [and] let them be silent in the grave.
- World English Bible (WEB)
- Let me not be disappointed, LORD, for I have called on you. Let the wicked be disappointed. Let them be silent in Sheol.
- American Standard Version (ASV)
- Let me not be put to shame, O Jehovah; for I have called upon thee: Let the wicked be put to shame, let them be silent in Sheol.
- Bible in Basic English (BBE)
- Let me not be shamed, O Lord, for I have made my prayer to you; let the sinners be shamed, and let their mouths be shut in the underworld.
- Darby Translation (DBY)
- Jehovah, let me not be ashamed; for I have called upon thee: let the wicked be ashamed, let them be silent in Sheol.
- Webster's Bible (WBS)
- Let me not be ashamed, O LORD; for I have called upon thee: let the wicked be ashamed, and let them be silent in the grave.
- Young's Literal Translation (YLT)
- O Jehovah, let me not be ashamed, For I have called Thee, let the wicked be ashamed, Let them become silent to Sheol.
Read in context
- 15ನನ್ನ ಆಯ ಷ್ಕಾಲವು ನಿನ್ನ ಕೈಯಲ್ಲಿದೆ; ಶತ್ರುಗಳ ಕೈಯಿಂದಲೂ ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸು.
- 16ನಿನ್ನ ಮುಖವು ನಿನ್ನ ಸೇವಕನ ಮೇಲೆ ಪ್ರಕಾಶಿಸಲಿ, ನಿನ್ನ ಕರುಣೆಯಿಂದ ನನ್ನನ್ನು ರಕ್ಷಿಸು.
- 17ಓ ಕರ್ತನೇ, ನಿನಗೆ ಮೊರೆಯಿಟ್ಟಿದ್ದೇನೆ; ನಾನು ಆಶಾಭಂಗಪಡ ದಂತೆ ಮಾಡು; ದುಷ್ಟರು ಆಶಾಭಂಗಪಡಲಿ; ಅವರು ಸಮಾಧಿಯಲ್ಲಿ ಮೌನವಾಗಿರಲಿ.
- 18ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ ಕಠಿಣ ವಾಗಿ ಮಾತನಾಡುವ ಸುಳ್ಳಿನ ತುಟಿಗಳು ಮೌನ ವಾಗಲಿ.
- 19ನಿನಗೆ ಭಯಪಡುವವರಿಗೋಸ್ಕರ ಮನುಷ್ಯ ಪುತ್ರರ ಮುಂದೆ ನಿನ್ನಲ್ಲಿ ಭರವಸೆ ಇಟ್ಟವರಿಗೋಸ್ಕರ ನೀನು ಇಟ್ಟಿರುವ ಒಳ್ಳೇತನವು ಎಷ್ಟೋ ದೊಡ್ಡದು.
Cross references
- Psalm 25:2–3 ಕೀರ್ತನೆಗಳು 25:2–3ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ. ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ.
- Jeremiah 20:11 ಯೆರೆಮೀಯ 20:11ಆದರೆ ಕರ್ತನು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾನೆ; ಆದದರಿಂದ ನನ್ನನ್ನು ಹಿಂಸಿಸು ವವರು ಎಡವುವರು, ಗೆಲ್ಲುವದಿಲ್ಲ; ಅನುಕೂಲ ವಾಗದೆ ಇದ್ದದರಿಂದ ಅವರು ಬಹಳ ನಾಚಿಕೆಪಡುವರು; ಅವರ ಗಲಿಬಿಲಿಯು ನಿತ್ಯವಾಗಿರುವದು. ಅದು ಮರೆತು ಹೋಗಲ್ಪಡುವದಿಲ್ಲ.
- Psalm 34:5 ಕೀರ್ತನೆಗಳು 34:5ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ.
- Psalm 115:17 ಕೀರ್ತನೆಗಳು 115:17ಸತ್ತವರೂ ಮೌನಕ್ಕೆ ಇಳಿದವರೆಲ್ಲರೂ ಕರ್ತನನ್ನು ಸ್ತುತಿಸುವ ದಿಲ್ಲ.ನಾವಾದರೋ ಇಂದಿನಿಂದ ಯುಗಯುಗಕ್ಕೂ ಕರ್ತನನ್ನು ಸ್ತುತಿಸುವೆವು. ಕರ್ತನನ್ನು ಸ್ತುತಿಸಿರಿ.
- Isaiah 41:11–12 ಯೆಶಾಯ 41:11–12ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು; ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.
- Psalm 35:26 ಕೀರ್ತನೆಗಳು 35:26ನನ್ನ ಕೇಡಿನಲ್ಲಿ ಸಂತೋಷ ಪಡುವವರು ಕೂಡ ನಾಚಿಕೊಂಡು ಒಟ್ಟಿಗೆ ಗಲಿಬಿಲಿ ಯಾಗಿಲಿ, ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊದ್ದುಕೊಳ್ಳಲಿ.
- Psalm 35:4 ಕೀರ್ತನೆಗಳು 35:4ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.
- Psalm 69:6–7 ಕೀರ್ತನೆಗಳು 69:6–7ಸೈನ್ಯಗಳ ಕರ್ತನಾದ ದೇವರೇ, ನಿನ್ನನ್ನು ನಿರೀಕ್ಷಿಸು ವವರು ನನ್ನ ದೆಸೆಯಿಂದ ನಾಚಿಕೆಪಡದಿರಲಿ; ಓ ಇಸ್ರಾಯೇಲಿನ ದೇವರೇ, ನಿನ್ನನ್ನು ಹುಡುಕುವವರು ನನ್ನಿಂದ ಅವಮಾನಪಡದಿರಲಿ. ನಿನ್ನ ನಿಮಿತ್ತ ನಿಂದೆ ಯನ್ನು ತಾಳಿದ್ದೇನೆ; ಅವಮಾನವು ನನ್ನ ಮುಖವನ್ನು ಮುಚ್ಚಿಯದೆ.
- Psalm 40:14–15 ಕೀರ್ತನೆಗಳು 40:14–15ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ. ಆಹಾ, ಆಹಾ ಎಂದು ನನಗೆ ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ಹಾಳಾಗಲಿ;
- 1 Samuel 2:9 1 ಸಮುವೇಲನು 2:9ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು.
- Psalm 94:17 ಕೀರ್ತನೆಗಳು 94:17ಕರ್ತನು ನನಗೆ ಸಹಾಯಕ ನಾಗಿರದಿದ್ದರೆ ನನ್ನ ಪ್ರಾಣವು ಮೌನದಲ್ಲಿ ವಾಸಿಸ ಬೇಕಾಗಿತ್ತು.
- Psalm 71:24 ಕೀರ್ತನೆಗಳು 71:24ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.