Psalms · chapter 32 · verse 4
Psalm 32:4 in Kannada
ರಾತ್ರಿ ಹಗಲು ನಿನ್ನ ಕೈ ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ಬರಗಾಲಕ್ಕೆ ನನ್ನ ಸಾರವು ತಿರುಗಿಕೊಂಡಿತು. ಸೆಲಾ.
Raatri hagalu ninna kai nanna mele bhaaravaagittu; besigeya baragaalakke nanna saaravu tirugikonditu. Selaa.
Psalm 32:4 in English
- King James Version (KJV)
- For day and night thy hand was heavy upon me: my moisture is turned into the drought of summer. Selah.
- World English Bible (WEB)
- For day and night your hand was heavy on me. My strength was sapped in the heat of summer. Selah.
- American Standard Version (ASV)
- For day and night thy hand was heavy upon me: My moisture was changed [as] with the drought of summer. [Selah
- Bible in Basic English (BBE)
- For the weight of your hand was on me day and night; my body became dry like the earth in summer. (Selah.)
- Darby Translation (DBY)
- For day and night thy hand was heavy upon me; my moisture was turned into the drought of summer. Selah.
- Webster's Bible (WBS)
- For day and night thy hand was heavy upon me: my moisture is turned into the drouth of summer. Selah.
- Young's Literal Translation (YLT)
- When by day and by night Thy hand is heavy upon me, My moisture hath been changed Into the droughts of summer. Selah.
Read in context
- 2ಕರ್ತನು ಯಾವನಿಗೆ ಅಪರಾಧ ವನ್ನು ಎಣಿಸುವದಿಲ್ಲವೋ, ಯಾವನ ಹೃದಯದಲ್ಲಿ ವಂಚನೆ ಇರುವದಿಲ್ಲವೋ, ಆ ಮನುಷ್ಯ ಧನ್ಯನು.
- 3ನಾನು ಮೌನವಾಗಿದ್ದಾಗ ದಿನವೆಲ್ಲಾ ನರಳುವದ ರಿಂದ ನನ್ನ ಎಲುಬುಗಳು ಸವೆದು ಹೋದವು.
- 4ರಾತ್ರಿ ಹಗಲು ನಿನ್ನ ಕೈ ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ಬರಗಾಲಕ್ಕೆ ನನ್ನ ಸಾರವು ತಿರುಗಿಕೊಂಡಿತು. ಸೆಲಾ.
- 5ನನ್ನ ಪಾಪವನ್ನು ನಿನಗೆ ತಿಳಿಸಿದೆನು. ನನ್ನ ಅಪರಾಧವನ್ನು ಮುಚ್ಚಲಿಲ್ಲ. ನನ್ನ ದ್ರೋಹಗಳನ್ನು ಕುರಿತು ಕರ್ತನಿಗೆ ಅರಿಕೆಮಾಡುವೆನೆಂದು ಹೇಳಿದೆನು; ಆಗ ನೀನು ನನ್ನ ಪಾಪದ ಅಕ್ರಮವನ್ನು ಪರಿಹರಿ ಸಿದಿ--ಸೆಲಾ.
- 6ಇದಕ್ಕೋಸ್ಕರ ಭಕ್ತರೆಲ್ಲರು ನಿನ್ನನ್ನು ಕಂಡುಕೊಳ್ಳುವ ಕಾಲದಲ್ಲಿ ನಿನಗೆ ಪ್ರಾರ್ಥನೆ ಮಾಡುವರು; ನಿಶ್ಚಯವಾಗಿ ಬಹಳ ನೀರಿನ ಪ್ರವಾಹ ಗಳು ಅವನ ಸವಿಾಪಕ್ಕೆ ಬರುವದಿಲ್ಲ.
Cross references
- 1 Samuel 5:11 1 ಸಮುವೇಲನು 5:11ಆಗ ಆ ಪಟ್ಟಣದಲ್ಲೆಲ್ಲಾ ಮರಣಕರವಾದ ನಾಶನ ಉಂಟಾಗಿ ದೇವರ ಕೈ ಅಲ್ಲಿ ಮಹಾಭಾರವಾಗಿದ್ದರಿಂದ ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ಒಟ್ಟು ಗೂಡಿಸಿ ಇಸ್ರಾಯೇಲ್ ದೇವರ ಮಂಜೂಷವು ನಮ್ಮನ್ನೂ ನಮ್ಮ ಜನರನ್ನೂ ಕೊಂದುಹಾಕದ ಹಾಗೆ ನೀವು ಅದನ್ನು ಅದರ ಸ್ವಸ್ಥಳಕ್ಕೆ ತಿರಿಗಿ ಹೋಗುವಂತೆ ಕಳುಹಿಸಿಬಿಡಿರಿ ಅಂದರು.ಉಳಿದ ಮನುಷ್ಯರು ಸತ್ತುಹೋಗದೆ ಗಡ್ಡೆವ್ಯಾಧಿಯಿಂದ ಬಾಧಿಸಲ್ಪಟ್ಟರು; ಆ ಪಟ್ಟಣದ ಗೋಳಾಟವು ಆಕಾಶಕ್ಕೆ ಮುಟ್ಟಿತು.
- Psalm 38:2–8 ಕೀರ್ತನೆಗಳು 38:2–8ನಿನ್ನ ಬಾಣಗಳು ನನ್ನಲ್ಲಿ ಬಲವಾಗಿ ನೆಟ್ಟಿವೆ; ನಿನ್ನ ಕೈ ನನ್ನ ಮೇಲೆ ಭಾರವಾಗಿದೆ. ನಿನ್ನ ಕೋಪದ ನಿಮಿತ್ತವಾಗಿ ನನ್ನ ಶರೀರದಲ್ಲಿ ಸ್ವಸ್ಥವೇನೂ ಇಲ್ಲ; ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ವಿಶ್ರಾಂತಿಯೇ ಇಲ್ಲ. ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿಹೋಗಿವೆ; ಭಾರವಾದ ಹೊರೆಯ ಹಾಗೆ ನನಗೆ ವಿಾರಿದ ಭಾರವಾಗಿವೆ. ನನ್ನ ಬಾಸುಂಡೆಗಳು ನನ್ನ ಮೂಢತ್ವದ ನಿಮಿತ್ತ ನಾರುತ್ತಾ ಕೀವು ತುಂಬಿ ಅವೆ. ನಾನು ಕುಗ್ಗಿದ್ದೇನೆ, ಬಹಳವಾಗಿ ಬೊಗ್ಗಿದ್ದೇನೆ; ದಿನವೆಲ್ಲಾ ದುಃಖವುಳ್ಳವನಾಗಿ ತಿರುಗಾಡುತ್ತೇನೆ. ನನ್ನ ನಡುವು ಉರಿಯಿಂದ ತುಂಬಿದೆ; ನನ್ನ ಮಾಂಸದಲ್ಲಿ ಸ್ವಸ್ಥವೇನೂ ಇಲ್ಲ. ನಾನು ಬಹಳವಾಗಿ ಜಜ್ಜಲ್ಪಟ್ಟು ಬಲಹೀನನಾಗಿದ್ದೇನೆ; ನನ್ನ ಹೃದಯದ ನರಳುವಿಕೆ ಯಿಂದ ಮೂಲ್ಗುತ್ತೇನೆ.
- Job 33:7 ಯೋಬನು 33:7ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು; ಇಲ್ಲವೆ ನನ್ನ ಕೈ ನಿನ್ನ ಮೇಲೆ ಭಾರವಾಗದು.
- Psalm 39:10–11 ಕೀರ್ತನೆಗಳು 39:10–11ನನ್ನಿಂದ ನಿನ್ನ ಪೆಟ್ಟನ್ನು ತೊಲಗಿಸು; ನಿನ್ನ ಕೈಹೊಡೆ ತದಿಂದ ನಾನು ಸತ್ತು ಹೋಗುತ್ತೇನೆ. ಅಕ್ರಮ ಕ್ಕೋಸ್ಕರ ಗದರಿಕೆಗಳಿಂದ ನೀನು ಮನುಷ್ಯನನ್ನು ಶಿಕ್ಷಿಸಿದರೆ ಅವನ ಸೌಂದರ್ಯವನ್ನು ನುಸಿಯ ಹಾಗೆ ಹಾಳುಮಾಡುತ್ತೀ; ನಿಶ್ಚಯವಾಗಿ ಪ್ರತಿ ಮನುಷ್ಯನು ವ್ಯರ್ಥವಾದವನೇ--ಸೆಲಾ.
- Psalm 22:15 ಕೀರ್ತನೆಗಳು 22:15ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ.
- Psalm 102:3–4 ಕೀರ್ತನೆಗಳು 102:3–4ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ. ನನ್ನ ಹೃದಯವು ಹೊಡೆಯಲ್ಪಟ್ಟ ಹುಲ್ಲಿನ ಹಾಗೆ ಒಣಗಿಹೋಗಿದೆ; ಆದದರಿಂದ ನಾನು ನನ್ನ ರೊಟ್ಟಿಯನ್ನು ತಿನ್ನುವದಕ್ಕೆ ಮರೆತುಬಿಡುತ್ತೇನೆ.
- Psalm 90:6–7 ಕೀರ್ತನೆಗಳು 90:6–7ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ. ಸಂಜೆಯಲ್ಲಿ ಕೊಯ್ಯಲ್ಪಟ್ಟು ಒಣಗುತ್ತದೆ. ನಾವು ನಿನ್ನ ಕೋಪದಿಂದ ತೀರಿಹೋಗಿ, ನಿನ್ನ ರೌದ್ರದಿಂದ ತಲ್ಲಣಿಸುತ್ತೇವೆ.
- Job 30:30 ಯೋಬನು 30:30ನನ್ನ ಮೇಲಿನ ಚರ್ಮವು ಕಪ್ಪಗಾಯಿತು; ನನ್ನ ಎಲುಬುಗಳು ಉಷ್ಣ ದಿಂದ ಬೆಂದಿವೆ.ನನ್ನ ಕಿನ್ನರಿ ಗೋಳಾಟವೂ ನನ್ನ ಕೊಳಲು ಅಳುವವರ ಶಬ್ಧವೂ ಆಯಿತು.
- 1 Samuel 5:6–7 1 ಸಮುವೇಲನು 5:6–7ಆದರೆ ಕರ್ತನ ಕೈ ಅಷ್ಡೋದಿನವರ ಮೇಲೆ ಭಾರ ವಾಗಿದ್ದು ಅವರನ್ನು ನಾಶಮಾಡಿ ಅಷ್ಡೋದನ್ನೂ ಅದರ ಮೇರೆಗಳನ್ನೂ ಗಡ್ಡೆರೋಗದಿಂದ ಹೊಡೆದನು. ಈ ಪ್ರಕಾರ ಸಂಭವಿಸಿದ್ದನ್ನು ಅಷ್ಡೋದಿನ ಜನರು ನೋಡಿ--ಇಸ್ರಾಯೇಲ್ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಯಾಕಂದರೆ ಆತನ ಕೈ ನಮ್ಮ ಮೇಲೆಯೂ ನಮ್ಮ ದೇವರಾದ ದಾಗೋನನ ಮೇಲೆಯೂ ಕಠಿಣವಾಗಿದೆ ಅಂದರು.
- 1 Samuel 6:9 1 ಸಮುವೇಲನು 6:9ಅದು ತನ್ನ ಮೇರೆಯಾದ ಬೇತ್ಷೆಮೆಷಿನ ಮಾರ್ಗವನ್ನು ಹಿಡಿದು ಹೋದರೆ ಆತನು ಈ ದೊಡ್ಡ ಕೇಡನ್ನು ನಮಗೆ ಮಾಡಿದ್ದಾನೆ; ಇಲ್ಲದೆ ಹೋದರೆ ಆತನ ಹಸ್ತವು ನಮ್ಮನ್ನು ಮುಟ್ಟಲಿಲ್ಲ; ಅದು ನಮಗೆ ಪ್ರಾಪ್ತಿಯಾಯಿತೆಂದು ತಿಳುಕೊಳ್ಳಿರಿ ಅಂದರು.
- Lamentations 5:10 ಪ್ರಲಾಪಗಳು 5:10ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
- Job 16:21 ಯೋಬನು 16:21ಒಬ್ಬನು ತನ್ನ ನೆರೆಯವನಿಗೋಸ್ಕರ ವ್ಯಾಜ್ಯವಾಡುವಂತೆ ಮನುಷ್ಯನಿಗೋಸ್ಕರ ದೇವರ ಮುಂದೆ ವ್ಯಾಜ್ಯವಾಡುತ್ತಿದ್ದರೆ ಎಷ್ಟೋ ಒಳ್ಳೇದು.ಕೆಲವು ವರುಷಗಳು ಮುಗಿದಾಗ ನಾನು ತಿರುಗಿ ಬಾರದ ದಾರಿಹಿಡಿದು ಹೋಗುತ್ತೇನೆ.