Psalms · chapter 37 · verse 9
Psalm 37:9 in Kannada
ದುರ್ಮಾರ್ಗಿಗಳು ಕಡಿದು ಹಾಕಲ್ಪಡುವರು; ಕರ್ತನನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವರು.
Durmaargigalu kadidu haakalpaduvaru; kartanannu nireekshisuvavare bhoomiyannu svaadheena maadikolluvaru.
Psalm 37:9 in English
- King James Version (KJV)
- For evildoers shall be cut off: but those that wait upon the LORD, they shall inherit the earth.
- World English Bible (WEB)
- For evildoers shall be cut off, but those who wait for the LORD shall inherit the land.
- American Standard Version (ASV)
- For evil-doers shall be cut off; But those that wait for Jehovah, they shall inherit the land.
- Bible in Basic English (BBE)
- For the evil-doers will be cut off: but those who have faith in the Lord will have the earth for their heritage.
- Darby Translation (DBY)
- For evil-doers shall be cut off; but those that wait on Jehovah, they shall possess the land.
- Webster's Bible (WBS)
- For evil doers shall be cut off: but those that wait upon the LORD, they shall inherit the earth.
- Young's Literal Translation (YLT)
- For evil doers are cut off, As to those waiting on Jehovah, they possess the land.
Read in context
- 7ಕರ್ತನಲ್ಲಿ ಶಾಂತವಾಗಿರು; ಮೌನವಾಗಿದ್ದು ಆತನಿಗಾಗಿ ಎದುರುನೋಡು; ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ.
- 8ಕೋಪವನ್ನು ನಿಲ್ಲಿಸು; ಉರಿಯನ್ನು ಬಿಟ್ಟುಬಿಡು; ಹೇಗಾದರೂ ಕೇಡುಮಾಡದ ಹಾಗೆ ಕೋಪಿಸಿಕೊಳ್ಳ ಬೇಡ.
- 9ದುರ್ಮಾರ್ಗಿಗಳು ಕಡಿದು ಹಾಕಲ್ಪಡುವರು; ಕರ್ತನನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವರು.
- 10ಇನ್ನು ಸ್ಪಲ್ಪ ಸಮಯದಲ್ಲಿ ದುಷ್ಟನು ಇರನು; ಹೌದು, ಅವನ ಸ್ಥಳವನ್ನು ನೀನು ಜಾಗ್ರತೆಯಾಗಿ ವಿಚಾರಿಸಿದರೂ ಇಗೋ, ಅದು ಇರು ವದಿಲ್ಲ.
- 11ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬಹಳ ಸಮಾಧಾನದಲ್ಲಿ ಆನಂದ ಪಡುವರು.
Cross references
- Isaiah 60:21 ಯೆಶಾಯ 60:21ನಿನ್ನ ಜನರೆಲ್ಲರು ನೀತಿವಂತರಾಗಿರುವರು, ದೇಶವನ್ನು ಸದಾ ಕಾಲಕ್ಕೆ ಸ್ವಾಧೀನ ಮಾಡಿಕೊಳ್ಳುವರು; ನಾನು ಮಹಿಮೆ ಹೊಂದುವದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ ನನ್ನ ಕೈ ಸೃಷ್ಟಿಯೂ ದೇಶವನ್ನು ಸದಾ ಅನುಭವಿಸುವರು.ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು.
- Psalm 25:13 ಕೀರ್ತನೆಗಳು 25:13ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು.
- Proverbs 2:21 ಜ್ಞಾನೋಕ್ತಿಗಳು 2:21ಯಥಾ ರ್ಥವಂತರು ದೇಶದಲ್ಲಿ ವಾಸಿಸುವರು. ಸಂಪೂರ್ಣರು ಅದರಲ್ಲಿ ನೆಲೆಯಾಗಿ ಇರುವರು.ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ಅಪರಾಧಿ ಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು.
- Psalm 37:29 ಕೀರ್ತನೆಗಳು 37:29ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.
- Isaiah 57:13 ಯೆಶಾಯ 57:13ನೀನು ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ತಪ್ಪಿಸಲಿ; ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವದು; ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವದು; ಆದರೆ ನನ್ನಲ್ಲಿ ನಂಬಿಕೆ ಇಡುವವನು ದೇಶವನ್ನು ವಶಮಾಡಿ ಕೊಂಡು ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.
- Psalm 55:23 ಕೀರ್ತನೆಗಳು 55:23ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
- Psalm 37:11–12 ಕೀರ್ತನೆಗಳು 37:11–12ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬಹಳ ಸಮಾಧಾನದಲ್ಲಿ ಆನಂದ ಪಡುವರು. ದುಷ್ಟನು ನೀತಿವಂತನಿಗಾಗಿ ಹೊಂಚುಹಾಕು ವನು, ಅವನ ಮೇಲೆ ತನ್ನ ಹಲ್ಲುಗಳನ್ನು ಕಡಿಯುತ್ತಾನೆ.
- Isaiah 58:14 ಯೆಶಾಯ 58:14ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ.
- Revelation 5:10 ಪ್ರಕಟನೆ 5:10ನಮ್ಮನ್ನು ನಮ್ಮ ದೇವರಿಗೊಸ್ಕರ ರಾಜರನ್ನಾಗಿಯೂ ಯಾಜಕರನ್ನಾ ಗಿಯೂ ಮಾಡಿದ್ದೀ; ನಾವು ಭೂಮಿಯ ಮೇಲೆ ಆಳುವೆವು ಎಂದು ಹೇಳಿದರು.
- Hebrews 11:16 ಇಬ್ರಿಯರಿಗೆ 11:16ಆದರೆ ಈಗ ಅವರು ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ ರಾಗಿದ್ದಾರೆ. ಆದದರಿಂದ ದೇವರು ಅವರ ದೇವರೆನಿ ಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾನೆ.
- Job 20:23–29 ಯೋಬನು 20:23–29ಏನಾಗುವದಂದರೆ ಅವನ ಹೊಟ್ಟೆಯನ್ನು ತುಂಬು ವದಕ್ಕಿರುವಾಗ ದೇವರು ತನ್ನ ಕೋಪದ ಉರಿಯನ್ನು ಅವನ ಮೇಲೆ ಕಳುಹಿಸುವನು; ಅವನ ಆಹಾರಕ್ಕಾಗಿ ಅವನ ಮೇಲೆ ಸುರಿಸುವನು. ಅವನು ಕಬ್ಬಿಣದ ಆಯುಧಕ್ಕೆ ಓಡಿಹೋದರೆ ಹಿತ್ತಾಳೆಯ ಬಿಲ್ಲು ಅವ ನನ್ನು ತಿವಿಯುವದು. ಅವನು ಎಳೆದರೆ ಅದು ಬೆನ್ನಿನಿಂದ ಹೊರಡುವದು; ಅವನ ಪಿತ್ತದೊಳಗಿಂದ ಮಿಂಚುವ ಖಡ್ಗ ಬರುವದು; ಅವನ ಮೇಲೆ ಹೆದರಿಕೆ ಗಳು ಅವೆ. ಎಲ್ಲಾ ಅಂಧಕಾರವು ಅವನ ಗುಪ್ತ ಸ್ಥಳಗಳಲ್ಲಿ ಇಡಲ್ಪಟ್ಟಿದೆ; ಯಾರೂ ಹೊತ್ತಿಸದ ಬೆಂಕಿ ಅವನನ್ನು ತಿನ್ನುವದು; ಅವನ ಗುಡಾರದಲ್ಲಿ ಉಳಿ ದವನು ನಾಶವಾಗುವನು. ಆಕಾಶಗಳು ಅವನ ಅಕ್ರಮವನ್ನು ಪ್ರಕಟಮಾಡುವವು; ಭೂಮಿಯು ಅವನಿಗೆ ವಿರೋಧವಾಗಿ ಏಳುವದು. ಅವನ ಮನೆಯ ಆದಾಯವು ತೊಲಗಿ ಹೋಗುವದು; ಅವನ ಕೋಪದ ದಿವಸದಲ್ಲಿ ಅದು ಕರಗಿ ಹೋಗುವದು.ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ. ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
- Psalm 37:35–36 ಕೀರ್ತನೆಗಳು 37:35–36ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು. ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ.