Psalms · chapter 38 · verse 19
Psalm 38:19 in Kannada
ಆದರೆ ನನ್ನ ಶತ್ರುಗಳು ಚುರು ಕಾಗಿ ಬಲವಾಗಿದ್ದಾರೆ; ನನ್ನನ್ನು ತಪ್ಪಾಗಿ ಹಗೆಮಾಡು ವವರು ಹೆಚ್ಚಿದ್ದಾರೆ.
Aadare nanna shatrugalu churu kaagi balavaagiddaare; nannannu tappaagi hagemaadu vavaru hechchiddaare.
Psalm 38:19 in English
- King James Version (KJV)
- But mine enemies [are] lively, [and] they are strong: and they that hate me wrongfully are multiplied.
- World English Bible (WEB)
- But my enemies are vigorous and many. Those who hate me without reason are numerous.
- American Standard Version (ASV)
- But mine enemies are lively, [and] are strong; And they that hate me wrongfully are multiplied.
- Bible in Basic English (BBE)
- But they are strong who have hate for me without cause: those who are against me falsely are increased in numbers.
- Darby Translation (DBY)
- But mine enemies are lively, they are strong; and they that hate me wrongfully are multiplied:
- Webster's Bible (WBS)
- But my enemies [are] lively, [and] they are strong: and they that hate me wrongfully are multiplied.
- Young's Literal Translation (YLT)
- And mine enemies [are] lively, They have been strong, and those hating me without cause, Have been multiplied.
Read in context
- 17ನಾನು ಕೆಡಲ್ಪಡುವ ಸ್ಥಿತಿಯಲ್ಲಿದ್ದೇನೆ; ನನ್ನ ವ್ಯಸನವು ಯಾವಾಗಲೂ ನನ್ನ ಮುಂದೆ ಅದೆ.
- 18ನನ್ನ ಅಕ್ರಮವನ್ನು ತಿಳಿಸುವೆನು; ನನ್ನ ಪಾಪಕ್ಕೋಸ್ಕರ ದುಃಖಪಡುವೆನು.
- 19ಆದರೆ ನನ್ನ ಶತ್ರುಗಳು ಚುರು ಕಾಗಿ ಬಲವಾಗಿದ್ದಾರೆ; ನನ್ನನ್ನು ತಪ್ಪಾಗಿ ಹಗೆಮಾಡು ವವರು ಹೆಚ್ಚಿದ್ದಾರೆ.
- 20ಒಳ್ಳೇದಕ್ಕೆ ಬದಲಾಗಿ ಕೇಡನ್ನು ಸಲ್ಲಿಸುವವರು ನನ್ನ ಶತ್ರುಗಳಾಗಿದ್ದಾರೆ. ನಾನು ಒಳ್ಳೇ ದನ್ನು ಅನುಸರಿಸುವವನಾಗಿದ್ದೇನೆ.
- 21ಓ ಕರ್ತನೇ, ನನ್ನನ್ನು ಬಿಡಬೇಡ; ನನ್ನ ದೇವರೇ, ನನಗೆ ದೂರವಾಗಿರಬೇಡ.ನನ್ನ ರಕ್ಷಣೆ ಯಾಗಿರುವ ಕರ್ತನೇ, ನನ್ನ ಸಹಾಯಕ್ಕೆ ಬೇಗ ಬಾ.
Cross references
- Psalm 35:19 ಕೀರ್ತನೆಗಳು 35:19ನನ್ನ ಶತ್ರುಗಳು ನನ್ನ ವಿಷ ಯದಲ್ಲಿ ಸುಳ್ಳಾಗಿ ಸಂತೋಷಪಡದೆ ಇರಲಿ; ಇಲ್ಲವೆ ನನ್ನನ್ನು ಕಾರಣವಿಲ್ಲದೆ ಹಗೆಮಾಡುವವರು ಕಣ್ಣು ಸನ್ನೆಮಾಡದೆ ಇರಲಿ.
- John 15:18–25 ಯೋಹಾನನು 15:18–25ಲೋಕವು ನಿಮ್ಮನ್ನು ದ್ವೇಷಮಾಡಿದರೆ ನಿಮಗಿಂತ ಮೊದಲು ಅದು ನನ್ನನ್ನು ದ್ವೇಷಮಾಡಿದೆ ಎಂದು ನಿಮಗೆ ತಿಳಿದದೆ. ನೀವು ಲೋಕದವರಾಗಿದ್ದರೆ ಲೋಕವು ತನ್ನವರನ್ನು ಪ್ರೀತಿಸುತ್ತಿತ್ತು; ಆದರೆ ನೀವು ಲೋಕದವರಲ್ಲದೆ ಇರುವದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಮಾಡುತ್ತದೆ. ತನ್ನ ದಣಿಗಿಂತ ಆಳು ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ನನ್ನನ್ನು ಹಿಂಸಿಸಿದರೆ ನಿಮ್ಮನ್ನು ಸಹ ಹಿಂಸಿಸುವರು. ಅವರು ನನ್ನ ಮಾತನ್ನು ಕೈ ಕೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಕೊಳ್ಳುವರು. ಆದರೆ ಅವರು ನನ್ನನ್ನು ಕಳುಹಿಸಿದಾತನನ್ನು ತಿಳಿಯದಿರುವದರಿಂದ ನನ್ನ ಹೆಸ ರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು. ನಾನು ಬಂದು ಅವರಿಗೆ ಹೇಳದಿದ್ದರೆ ಅವರಲ್ಲಿ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರ ಪಾಪಕ್ಕೆ ನೆವವಿಲ್ಲ. ನನ್ನನ್ನು ದ್ವೇಷಮಾಡುವವನು ನನ್ನ ತಂದೆಯನ್ನು ಸಹ ದ್ವೇಷಮಾಡುತ್ತಾನೆ. ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರೊಳಗೆ ಮಾಡದಿದ್ದರೆ ಅವರಿಗೆ ಪಾಪವು ಇರು ತ್ತಿರಲಿಲ್ಲ; ಆದರೆ ಈಗ ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ನೋಡಿ ದ್ವೇಷಮಾಡಿದ್ದಾರೆ. ಆದರೆ--ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷ ಮಾಡಿದರೆಂದು ಅವರ ನ್ಯಾಯಪ್ರಮಾಣದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.
- Matthew 10:22 ಮತ್ತಾಯನು 10:22ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡುವರು; ಆದರೆ ಕಡೆಯ ವರೆಗೆ ತಾಳುವವನು ರಕ್ಷಣೆ ಹೊಂದುವನು.
- Psalm 69:4 ಕೀರ್ತನೆಗಳು 69:4ಕಾರಣವಿಲ್ಲದೆ ನನ್ನನ್ನು ಹಗೆ ಮಾಡು ವವರು ನನ್ನ ತಲೆಯ ಕೂದಲುಗಳಿಗಿಂತ ಹೆಚ್ಚಾಗಿ ದ್ದಾರೆ; ನನ್ನನ್ನು ಅನ್ಯಾಯವಾಗಿ ಸಂಹರಿಸುವ ನನ್ನ ಶತ್ರುಗಳೂ ಪ್ರಬಲವಾಗಿದ್ದಾರೆ; ನಾನು ತೆಗೆದು ಕೊಳ್ಳದ್ದನ್ನು ನನ್ನಿಂದ ದೋಚಿಕೊಂಡರು.
- Acts 4:25–28 ಅಪೊಸ್ತಲರ ಕೃತ್ಯಗಳು 4:25–28ನಿನ್ನ ಸೇವಕ ನಾದ ದಾವೀದನ ಬಾಯಿಂದ--ಅನ್ಯಜನರು ಯಾಕೆ ರೇಗಿದರು? ಮತ್ತು ಜನರು ವ್ಯರ್ಥವಾದವುಗಳನ್ನು ಯಾಕೆ ಊಹಿಸಿದರು? ಕರ್ತನಿಗೂ ಆತನ ಕ್ರಿಸ್ತ ನಿಗೂ ವಿರೋಧವಾಗಿ ಭೂರಾಜರು ಎದ್ದುನಿಂತರು; ಅಧಿಪತಿಗಳು ಒಂದಾಗಿ ಕೂಡಿಕೊಂಡರು ಎಂದು ಹೇಳಿದ್ದೀ. ನಿಜವಾಗಿಯೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನರ ಮತ್ತು ಇಸ್ರಾಯೇಲ್ ಜನರ ಸಹಿತ ಒಂದಾಗಿ ಕೂಡಿಕೊಂಡು ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು.
- Psalm 25:19 ಕೀರ್ತನೆಗಳು 25:19ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ.
- Psalm 56:1–2 ಕೀರ್ತನೆಗಳು 56:1–2ಓ ದೇವರೇ, ನನ್ನನ್ನು ಕರುಣಿಸು; ಮನುಷ್ಯನು ನನ್ನನ್ನು ನುಂಗಬೇಕೆಂದಿದ್ದಾನೆ; ದಿನವೆಲ್ಲಾ ಯುದ್ಧಮಾಡುತ್ತಾ ನನ್ನನ್ನು ಬಾಧಿಸುತ್ತಾನೆ. ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.
- Psalm 59:1–3 ಕೀರ್ತನೆಗಳು 59:1–3ಓ ನನ್ನ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸು. ಅಪರಾಧ ಮಾಡುವವರಿಂದ ನನ್ನನ್ನು ಬಿಡಿಸು; ಕೊಲೆಪಾತಕರಿಂದ ನನ್ನನ್ನು ರಕ್ಷಿಸು. ಓ ಕರ್ತನೇ, ನನ್ನ ಅಪರಾಧಕ್ಕಾಗಿ ಇಲ್ಲವೆ ನನ್ನ ಪಾಪಕ್ಕಾಗಿ ಅಲ್ಲ; ಆದರೂ ಇಗೋ, ಅವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಾರೆ; ಪರಾಕ್ರಮಶಾಲಿಗಳು ನನಗೆ ವಿರೋಧವಾಗಿ ಕೂಡಿ ಕೊಳ್ಳುತ್ತಾರೆ.
- Psalm 18:17 ಕೀರ್ತನೆಗಳು 18:17ಆತನು ನನ್ನನ್ನು ಬಲವುಳ್ಳ ಶತ್ರುವಿ ನಿಂದಲೂ ಹಗೆಮಾಡಿದವನಿಂದಲೂ ಬಿಡಿಸಿದನು; ಅವರು ನನಗಿಂತ ಬಲಿಷ್ಠರಾಗಿದ್ದರು.
- Psalm 3:1 ಕೀರ್ತನೆಗಳು 3:1ಕರ್ತನೇ, ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ! ನನಗೆ ವಿರೋಧವಾಗಿ ಏಳುವವರು ಅನೇಕರು.