Psalms · chapter 40 · verse 3
Psalm 40:3 in Kannada
ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
Nanna baayalli nootana haadannu ittiddaane; adu namma devara stotrave; anekaru idannu nodi bhayapattu kartanalli bharavasaviduvaru.
Psalm 40:3 in English
- King James Version (KJV)
- And he hath put a new song in my mouth, [even] praise unto our God: many shall see [it], and fear, and shall trust in the LORD.
- World English Bible (WEB)
- He has put a new song in my mouth, even praise to our God. Many shall see it, and fear, and shall trust in the LORD.
- American Standard Version (ASV)
- And he hath put a new song in my mouth, even praise unto our God: Many shall see it, and fear, And shall trust in Jehovah.
- Bible in Basic English (BBE)
- And he put a new song in my mouth, even praise to our God; numbers have seen it with fear, and put their faith in the Lord.
- Darby Translation (DBY)
- And he hath put a new song in my mouth, praise unto our God. Many shall see it, and fear, and shall confide in Jehovah.
- Webster's Bible (WBS)
- And he hath put a new song in my mouth, [even] praise to our God: many shall see [it] , and fear, and shall trust in the LORD.
- Young's Literal Translation (YLT)
- And He putteth in my mouth a new song, 'Praise to our God.' Many do see and fear, and trust in Jehovah.
Read in context
- 1ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು.
- 2ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
- 3ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
- 4ಕರ್ತನನ್ನು ತನ್ನ ಭರವಸವಾಗಿ ಮಾಡಿಕೊಂಡು ಅಹಂಕಾರಿಗಳನ್ನು ಗೌರವಿಸದೆಯೂ ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳ ದೆಯೂ ಇರುವ ಮನುಷ್ಯನು ಧನ್ಯನು.
- 5ಓ ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
Cross references
- Psalm 33:3 ಕೀರ್ತನೆಗಳು 33:3ಆತನಿಗೆ ಹೊಸ ಹಾಡನ್ನು ಹಾಡಿರಿ; ಮಹಾಧ್ವನಿಯಿಂದ ಇಂಪಾಗಿ ಬಾರಿಸಿರಿ.
- Psalm 103:1–5 ಕೀರ್ತನೆಗಳು 103:1–5ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು. ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ. ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ.
- Psalm 34:1–6 ಕೀರ್ತನೆಗಳು 34:1–6ನಾನು ಎಲ್ಲಾ ಕಾಲಗಳಲ್ಲಿ ಕರ್ತನನ್ನು ಸ್ತುತಿಸುವೆನು; ಆತನ ಸ್ತೋತ್ರವು ಯಾವಾ ಗಲೂ ನನ್ನ ಬಾಯಲ್ಲಿ ಇರುವದು. ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು. ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ. ನಾನು ಕರ್ತನನ್ನು ಹುಡು ಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು. ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ. ಈ ಬಡವನು ಮೊರೆ ಯಿಡಲು; ಕರ್ತನು ಅದನ್ನು ಕೇಳಿ ಅವನ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವನನ್ನು ರಕ್ಷಿಸಿದನು.
- Psalm 52:6 ಕೀರ್ತನೆಗಳು 52:6ನೀತಿವಂತರು ಸಹ ಭಯಪಟ್ಟು ಅವನನ್ನು ನೋಡಿ ನಗುವರು.
- Isaiah 12:1–4 ಯೆಶಾಯ 12:1–4ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ. ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ. ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ. ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ.
- Psalm 35:27 ಕೀರ್ತನೆಗಳು 35:27ನನ್ನ ನೀತಿಯಲ್ಲಿ ಸಂತೋಷ ಪಡುವವರು ಉತ್ಸಾಹಧ್ವನಿಮಾಡಿ ಆನಂದಪಡಲಿ; ಹೌದು, ತನ್ನ ಸೇವಕನ ಅಭಿವೃದ್ಧಿಯಲ್ಲಿ ಸಂತೋ ಷಪಡುವ ಕರ್ತನು ಮಹಿಮೆಹೊಂದಲಿ ಎಂದು ಅವರು ಯಾವಾಗಲೂ ಹೇಳಲಿ.ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.
- Revelation 14:3 ಪ್ರಕಟನೆ 14:3ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡಿನಂತಿದ್ದ ಹಾಡನ್ನು ಅವರು ಹಾಡಿದರು. ಭೂ ಲೋಕದೊಳಗಿಂದ ವಿಮೋಚಿಸಲ್ಪಟ್ಟ ಆ ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
- Revelation 5:9–10 ಪ್ರಕಟನೆ 5:9–10ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ; ನಮ್ಮನ್ನು ನಮ್ಮ ದೇವರಿಗೊಸ್ಕರ ರಾಜರನ್ನಾಗಿಯೂ ಯಾಜಕರನ್ನಾ ಗಿಯೂ ಮಾಡಿದ್ದೀ; ನಾವು ಭೂಮಿಯ ಮೇಲೆ ಆಳುವೆವು ಎಂದು ಹೇಳಿದರು.
- Psalm 144:9 ಕೀರ್ತನೆಗಳು 144:9ಓ ದೇವರೇ, ನಾನು ಹೊಸ ಹಾಡನ್ನು ನಿನಗೆ ಹಾಡುವೆನು; ಹತ್ತು ತಂತಿಗಳ ವೀಣೆಯಿಂದ ನಿನ್ನನ್ನು ಕೀರ್ತಿಸುವೆನು.
- Psalm 142:7 ಕೀರ್ತನೆಗಳು 142:7ನಿನ್ನ ಹೆಸರನ್ನು ಕೊಂಡಾಡುವ ಹಾಗೆ ನನ್ನ ಪ್ರಾಣ ವನ್ನು ಸೆರೆಯಿಂದ ಹೊರಗೆ ಬರಮಾಡು; ನೀತಿವಂತರು ನನ್ನನ್ನು ಮುತ್ತಿಕೊಳ್ಳುವರು; ನನಗೆ ನೀನು ಉಪಕಾರ ಮಾಡುವಿ.
- Psalm 64:9–10 ಕೀರ್ತನೆಗಳು 64:9–10ಎಲ್ಲಾ ಮನುಷ್ಯರು ಭಯಪಟ್ಟು ದೇವರ ಕಾರ್ಯವನ್ನು ತಿಳಿಸುವರು; ಆತನ ಕೆಲಸ ವನ್ನು ಬುದ್ಧಿಯಿಂದ ಗ್ರಹಿಸುವರು;ನೀತಿವಂತನು ಕರ್ತನಲ್ಲಿ ಸಂತೋಷಪಟ್ಟು ಆತನಲ್ಲಿ ಭರವಸವಿ ಡುವನು. ಯಥಾರ್ಥ ಹೃದಯವುಳ್ಳವರೆಲ್ಲರು ಹೆಚ್ಚಳ ಪಡುವರು. ನೀತಿವಂತನು ಕರ್ತನಲ್ಲಿ ಸಂತೋಷಪಟ್ಟು ಆತನಲ್ಲಿ ಭರವಸವಿ ಡುವನು. ಯಥಾರ್ಥ ಹೃದಯವುಳ್ಳವರೆಲ್ಲರು ಹೆಚ್ಚಳ ಪಡುವರು.
- Hosea 3:5 ಹೋಶೇಯ 3:5ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.