Psalms · chapter 43 · verse 2
Psalm 43:2 in Kannada
ನೀನು ನನ್ನ ಬಲವಾದ ದೇವರಾಗಿದ್ದೀ; ಯಾಕೆ ನನ್ನನ್ನು ತಳ್ಳಿ ಬಿಟ್ಟಿದ್ದೀ? ಯಾಕೆ ನಾನು ಶತ್ರುವಿನ ಬಾಧೆಯಲ್ಲಿ ಇದ್ದು ದುಃಖದಲ್ಲಿ ನಡೆದುಕೊಳ್ಳಬೇಕು?
Neenu nanna balavaada devaraagiddee; yaake nannannu talli bittiddee? Yaake naanu shatruvina baadheyalli iddu duhkhadalli nadedukollabeku?
Psalm 43:2 in English
- King James Version (KJV)
- For thou [art] the God of my strength: why dost thou cast me off? why go I mourning because of the oppression of the enemy?
- World English Bible (WEB)
- For you are the God of my strength. Why have you rejected me? Why do I go mourning because of the oppression of the enemy?
- American Standard Version (ASV)
- For thou art the God of my strength; why hast thou cast me off? Why go I mourning because of the oppression of the enemy?
- Bible in Basic English (BBE)
- You are the God of my strength; why have you put me from you? why do I go in sorrow because of the attacks of my haters?
- Darby Translation (DBY)
- For thou art the God of my strength: why hast thou cast me off? why go I about mourning because of the oppression of the enemy?
- Webster's Bible (WBS)
- For thou [art] the God of my strength: why dost thou cast me off? why go I mourning because of the oppression of the enemy?
- Young's Literal Translation (YLT)
- For thou [art] the God of my strength. Why hast Thou cast me off? Why mourning do I go up and down, In the oppression of an enemy?
Read in context
- 1ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
- 2ನೀನು ನನ್ನ ಬಲವಾದ ದೇವರಾಗಿದ್ದೀ; ಯಾಕೆ ನನ್ನನ್ನು ತಳ್ಳಿ ಬಿಟ್ಟಿದ್ದೀ? ಯಾಕೆ ನಾನು ಶತ್ರುವಿನ ಬಾಧೆಯಲ್ಲಿ ಇದ್ದು ದುಃಖದಲ್ಲಿ ನಡೆದುಕೊಳ್ಳಬೇಕು?
- 3ನಿನ್ನ ಬೆಳ ಕನ್ನೂ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡಿಸಿ ನಿನ್ನ ಪರಿಶುದ್ಧ ಪರ್ವತಕ್ಕೂ ಗುಡಾರಗಳಿಗೂ ನನ್ನನ್ನು ಬರಮಾಡಲಿ.
- 4ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ಓ ದೇವರೇ, ನಿನ್ನನ್ನು ಕೊಂಡಾಡುವೆನು.ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
Cross references
- Psalm 28:7 ಕೀರ್ತನೆಗಳು 28:7ಕರ್ತನು ನನ್ನ ಬಲವೂ ಗುರಾಣಿಯೂ ಆಗಿದ್ದಾನೆ; ನನ್ನ ಹೃದಯವು ಆತನಲ್ಲಿ ಭರವಸವಿಟ್ಟದ್ದರಿಂದ ಸಹಾಯ ಹೊಂದಿದೆನು; ಆದದರಿಂದ ನನ್ನ ಹೃದಯವು ಬಹಳವಾಗಿ ಉತ್ಸಾಹ ಪಡುವದು; ನನ್ನ ಹಾಡಿನಿಂದ ಆತನನ್ನು ಕೊಂಡಾ ಡುವೆನು.
- Psalm 42:9 ಕೀರ್ತನೆಗಳು 42:9ದೇವರೇ, ಯಾಕೆ ನನ್ನನ್ನು ಮರೆತುಬಿಟ್ಟಿದ್ದೀ? ಯಾಕೆ ನಾನು ಶತ್ರುವಿನ ಬಾಧೆಯಲ್ಲಿ ಇದ್ದು ದುಃಖದಲ್ಲಿ ನಡೆದು ಕೊಳ್ಳಬೇಕೆಂದು ನನ್ನ ಬಂಡೆಯಾದ ದೇವರಿಗೆ ನಾನು ಹೇಳುವೆನು?
- Ephesians 6:10 ಎಫೆಸದವರಿಗೆ 6:10ಕಡೇದಾಗಿ ನನ್ನ ಸಹೋದರರೇ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
- Psalm 94:14 ಕೀರ್ತನೆಗಳು 94:14ಕರ್ತನು ತನ್ನ ಜನರನ್ನು ತೊರೆಯನು; ಇಲ್ಲವೆ ತನ್ನ ಸ್ವಾಸ್ಥ್ಯವನ್ನು ಬಿಟ್ಟುಬಿಡನು.
- Isaiah 40:31 ಯೆಶಾಯ 40:31ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.
- Psalm 44:9 ಕೀರ್ತನೆಗಳು 44:9ಆದರೆ ನೀನು ನಮ್ಮನ್ನು ತಳ್ಳಿಬಿಟ್ಟು ನಮ್ಮನ್ನು ಅವಮಾನಪಡಿಸುತ್ತೀ; ನಮ್ಮ ಸೈನ್ಯಗಳ ಸಂಗಡ ನೀನು ಹೊರಟುಹೋಗುವದಿಲ್ಲ.
- Psalm 140:7 ಕೀರ್ತನೆಗಳು 140:7ನನ್ನ ರಕ್ಷಣೆಯ ಬಲವಾಗಿರುವ ಕರ್ತನಾದ ಓ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಮುಚ್ಚಿದ್ದೀ.
- Psalm 71:9 ಕೀರ್ತನೆಗಳು 71:9ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡ. ನನ್ನ ಶಕ್ತಿಯು ಕುಂದಿಹೋಗುವಾಗ ನನ್ನನ್ನು ಕೈಬಿಡ ಬೇಡ.
- Zechariah 10:12 ಜೆಕರ್ಯ 10:12ಕರ್ತನಲ್ಲಿ ನಾನು ಅವರನ್ನು ಬಲಪಡಿಸುವೆನು; ಆತನ ಹೆಸರಿನಲ್ಲಿ ಅವರು ಮೇಲೆ ಕೆಳಗೆ ನಡೆಯುವರು ಎಂದು ಕರ್ತನು ಅನ್ನುತ್ತಾನೆ.
- Isaiah 45:24 ಯೆಶಾಯ 45:24ಕರ್ತನಲ್ಲಿ ಮಾತ್ರ ನನಗೆ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಆತನ ಬಳಿಗೆ ಬರುವರು; ಆತನ ಮೇಲೆ ಉರಿಗೊಂಡವ ರೆಲ್ಲರೂ ನಾಚಿಕೆಗೆ ಈಡಾಗುವರು ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
- 1 Chronicles 28:9 1 ಪೂರ್ವಕಾಲವೃತ್ತಾಂತ 28:9ಇದಲ್ಲದೆ ನನ್ನ ಮಗನಾದ ಸೊಲೊಮೋನನೇ, ನೀನು ನಿನ್ನ ತಂದೆಯ ದೇವ ರನ್ನು ತಿಳಿದು ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸು. ಕರ್ತನು ಸಕಲ ಹೃದಯಗಳನ್ನು ಶೋಧಿಸಿ ಯೋಚನೆಗಳ ಕಲ್ಪನೆಯ ನ್ನೆಲ್ಲಾ ತಿಳಿದಿದ್ದಾನೆ. ನೀನು ಆತನನ್ನು ಹುಡುಕಿದರೆ ಆತನು ನಿನಗೆ ಸಿಕ್ಕುವನು; ನೀನು ಆತನನ್ನು ಬಿಟ್ಟು ಬಿಟ್ಟರೆ ಆತನು ನಿನ್ನನ್ನು ಎಂದೆಂದಿಗೂ ತೊರೆದುಬಿಡು ವನು.
- Exodus 15:2 ವಿಮೋಚನಕಾಂಡ 15:2ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು.