Psalms · chapter 48 · verse 3
Psalm 48:3 in Kannada
ದೇವರು ಅದರ ಅರಮನೆಗಳಲ್ಲಿ ಆಶ್ರಯ ವೆಂದು ಗೊತ್ತಾಗಿದೆ.
Devaru adara aramanegalalli aashraya vendu gottaagide.
Psalm 48:3 in English
- King James Version (KJV)
- God is known in her palaces for a refuge.
- World English Bible (WEB)
- God has shown himself in her citadels as a refuge.
- American Standard Version (ASV)
- God hath made himself known in her palaces for a refuge.
- Bible in Basic English (BBE)
- In its buildings God is seen to be a high tower.
- Darby Translation (DBY)
- God is known in her palaces as a high fortress.
- Webster's Bible (WBS)
- God is known in her palaces for a refuge.
- Young's Literal Translation (YLT)
- God in her high places is known for a tower.
Read in context
- 1ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ.
- 2ಉತ್ತರದ ಪಾರ್ಶ್ವಗಳಲ್ಲಿ ದೊಡ್ಡ ಅರಸನ ಪಟ್ಟಣವಾದ ಚೀಯೋನ್ ಪರ್ವತವು ರಮಣೀಯವಾ ದದ್ದೂ ಎಲ್ಲಾ ಭೂಮಿಗೆ ಸಂತೋಷಕರವಾದದ್ದೂ ಆಗಿದೆ.
- 3ದೇವರು ಅದರ ಅರಮನೆಗಳಲ್ಲಿ ಆಶ್ರಯ ವೆಂದು ಗೊತ್ತಾಗಿದೆ.
- 4ಇಗೋ, ಅರಸರುಗಳು ಕೂಡಿಕೊಂಡು ಒಟ್ಟಾಗಿ ಹಾದುಹೋದರು;
- 5ಅವರು ಅದನ್ನು ನೋಡಿ ಆಶ್ಚ ರ್ಯಪಟ್ಟರು; ಅವರು ಕಳವಳಪಟ್ಟು ಓಡಿ ಹೋದರು.
Cross references
- Zechariah 2:4–5 ಜೆಕರ್ಯ 2:4–5ಇವನು ಅವನಿಗೆ ಹೀಗಂದನು--ಓಡಿಹೋಗಿ ಈ ಯೌವನಸ್ಥನಿಗೆ ಹೀಗೆ ಹೇಳು, ಏನಂದರೆ--ಯೆರೂಸಲೇಮು ಅದರಲ್ಲಿರುವ ಮನು ಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾದದ್ದರಿಂದ ಗೋಡೆ ಇಲ್ಲದ ಊರುಗಳಂತೆ ನಿವಾಸವಾಗುವದು. ಯಾಕಂ ದರೆ ನಾನು ಅದರ ಸುತ್ತಲೂ ಬೆಂಕಿಯ ಗೋಡೆಯಾ ಗಿಯೂ ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನೆಂದು ಕರ್ತನು ಅನ್ನುತ್ತಾನೆ.
- Psalm 46:7 ಕೀರ್ತನೆಗಳು 46:7ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Psalm 125:1 ಕೀರ್ತನೆಗಳು 125:1ಕರ್ತನಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿ ದ್ದಾರೆ; ಅದು ಕದಲದೆ ಯುಗಯುಗಕ್ಕೂ ಇರುವದು.
- Isaiah 37:33–36 ಯೆಶಾಯ 37:33–36ಆದದರಿಂದ ಕರ್ತನು ಅಶ್ಶೂರದ ಅರಸನ ವಿಷಯವಾಗಿ ಹೇಳುವ ದೇನಂದರೆ ಅವನು ಈ ಪಟ್ಟಣಕ್ಕೆ ಬರಲಾರನು ಬಾಣವನ್ನು ಎಸೆಯನು, ಇಲ್ಲವೇ ಅದರ ಮುಂದೆ ಗುರಾಣಿಯೊಂದಿಗೆ ಬರಲಾರನು ಇಲ್ಲವೆ ಅದಕ್ಕೆ ವಿರೋಧವಾಗಿ ಮಣ್ಣಿನ ದಿಬ್ಬವನ್ನು ಹಾಕುವದಿಲ್ಲ. ಅವನು ಬಂದ ದಾರಿಯಿಂದಲೇ ಹಿಂತಿರುಗಿ ಹೋಗುವನು ಈ ಪಟ್ಟಣಕ್ಕೆ ಬರುವದೇ ಇಲ್ಲ. ಈ ಪಟ್ಟಣವನ್ನು ನನಗಾಗಿಯೂ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಕಾಪಾಡು ವೆನು ಎಂದು ಕರ್ತನು ಹೇಳುತ್ತಾನೆ. ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.
- Psalm 76:1–5 ಕೀರ್ತನೆಗಳು 76:1–5ದೇವರು ಯೆಹೂದದಲ್ಲಿ ಪ್ರಸಿದ್ಧವಾಗಿದ್ದಾನೆ; ಇಸ್ರಾಯೇಲಿನಲ್ಲಿ ಆತನ ಹೆಸರು ದೊಡ್ಡದಾಗಿದೆ. ಸಾಲೇಮಿನಲ್ಲಿ ಆತನ ಗುಡಾರವೂ ಚೀಯೋನಿನಲ್ಲಿ ಆತನ ವಾಸಸ್ಥಾನವೂ ಉಂಟು. ಅಲ್ಲಿಯೇ ಬಿಲ್ಲಿನ ಬಾಣಗಳನ್ನೂ ಗುರಾಣಿಯನ್ನೂ ಕತ್ತಿಯನ್ನೂ ಯುದ್ಧವನ್ನೂ ಮುರಿದುಬಿಟ್ಟನು. ಸೆಲಾ. ಬೇಟೆಗಳಿರುವ ಬೆಟ್ಟಗಳಿಗಿಂತ ನೀನು ಪ್ರಕಾಶವು ಳ್ಳವನೂ ಶ್ರೇಷ್ಠನೂ ಆಗಿದ್ದೀ. ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ.
- Isaiah 4:5–6 ಯೆಶಾಯ 4:5–6ಕರ್ತನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೂ ಅವಳ ಸಭೆಗಳ ಮೇಲೂ ಹಗಲಿನಲ್ಲಿ ಹೊಗೆಯನ್ನೂ ಮೇಘವನ್ನೂ ಇರುಳಿನಲ್ಲಿ ಪ್ರಜ್ವಲಿ ಸುವ ಅಗ್ನಿಪ್ರಕಾಶವನ್ನೂ ಉಂಟುಮಾಡುವನು; ಎಲ್ಲಾ ಮಹಿಮೆಯ ಮೇಲೆ ಕಾವಲಿರುವದು.ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ ಬಿರುಗಾಳಿಗೂ ಮಳೆಗೂ ಮರೆಯಾಗಲು ಆಶ್ರಯ ಸ್ಥಾನವಾಗಿ ಒಂದು ಗುಡಾರವಿರುವದು. ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ ಬಿರುಗಾಳಿಗೂ ಮಳೆಗೂ ಮರೆಯಾಗಲು ಆಶ್ರಯ ಸ್ಥಾನವಾಗಿ ಒಂದು ಗುಡಾರವಿರುವದು.
- 2 Chronicles 12:7 2 ಪೂರ್ವಕಾಲವೃತ್ತಾಂತ 12:7ಅವರು ತಮ್ಮನ್ನು ತಗ್ಗಿಸಿ ಕೊಂಡದ್ದನ್ನು ಕರ್ತನು ನೋಡಿದಾಗ ಕರ್ತನ ವಾಕ್ಯವು ಶೆಮಾಯನಿಗೆ ಉಂಟಾಯಿತು. ಏನಂದರೆಅವರು ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವ ರನ್ನು ನಾಶಮಾಡದೆ ಅವರು ಸ್ವಲ್ಪಮಟ್ಟಿಗೆ ತಪ್ಪಿಸಿ ಕೊಳ್ಳುವಂತೆ ಮಾಡುವೆನು. ಶೀಶಕನ ಕೈಯಿಂದ ನನ್ನ ಕೋಪವು ಯೆರೂಸಲೇಮಿನ ಮೇಲೆ ಹೊಯ್ಯಲ್ಪಡು ವದಿಲ್ಲ.
- 2 Chronicles 20:1–37 2 ಪೂರ್ವಕಾಲವೃತ್ತಾಂತ 20:1–37ಇದರ ತರುವಾಯ ಏನಾಯಿತಂದರೆ, ಮೋವಾಬಿನ ಮಕ್ಕಳೂ ಅಮ್ಮೋನಿನ ಮಕ್ಕಳೂ ಅಮ್ಮೋನ್ಯರ ಕೊಡ ಇತರರೂ ಯೆಹೋ ಷಾಫಾಟನ ಮೇಲೆ ಯುದ್ಧಮಾಡಲು ಬಂದರು. ಆಗ ಕೆಲವರು ಬಂದು ಯೆಹೋಷಾಫಾಟನಿಗೆ--ಸಮು ದ್ರದ ಆಚೆಯಿಂದ ನಿನಗೆ ವಿರೋಧವಾಗಿ ಅರಾಮಿನ ಬಹುಗುಂಪು ಈ ಕಡೆ ಬರುತ್ತದೆ; ಇಗೋ, ಅವರು ಏಂಗೆದಿ ಎಂಬ ಹಚೆಚೋನ್ ತಾಮಾರಿನಲ್ಲಿ ಇದ್ದಾ ರೆಂದು ತಿಳಿಸಿದರು. ಆಗ ಯೆಹೋಷಾಫಾಟನು ಭಯಪಟ್ಟು ಕರ್ತನನ್ನು ಹುಡುಕಲು ನಿರ್ಣಯಿಸಿ ಕೊಂಡು ಸಮಸ್ತ ಯೆಹೂದದಲ್ಲಿ ಉಪವಾಸಮಾಡ ಬೇಕೆಂದು ಸಾರಿಸಿದನು. ಆದದರಿಂದ ಯೆಹೂದ ದವರು ಕರ್ತನನ್ನು ಹುಡುಕಲು ಕೂಡಿಕೊಂಡರು. ನಿಶ್ಚಯವಾಗಿ ಸಮಸ್ತ ಯೆಹೂದದ ಪಟ್ಟಣಗಳಿಂದ ಕರ್ತನನ್ನು ಹುಡುಕಲು ಬಂದರು. ಆಗ ಯೆಹೋಷಾ ಫಾಟನು ಹೊಸ ಅಂಗಳದ ಮುಂದೆ ಕರ್ತನ ಮಂದಿರ ದಲ್ಲಿರುವ ಯೆಹೂದದ ಯೆರೂಸಲೇಮಿನ ಸಭೆಯ ಮಧ್ಯದಲ್ಲಿ ನಿಂತು--ನಮ್ಮ ಪಿತೃಗಳ ದೇವರಾದ ಓ ಕರ್ತನೇ, ಪರಲೋಕದಲ್ಲಿರುವ ದೇವರು ನೀನಲ್ಲವೋ? ನೀನು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀಯಲ್ಲವೋ? ಯಾವನೂ ನಿನ್ನನ್ನು ಎದುರಿಸಕೂಡದ ಹಾಗೆ ನಿನ್ನ ಕೈಯಲ್ಲಿ ಶಕ್ತಿಯೂ ಪರಾಕ್ರಮವೂ ಇಲ್ಲವೋ? ನೀನು ನಿನ್ನ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗ ಳನ್ನು ಓಡಿಸಿಬಿಟ್ಟು ಅದನ್ನು ನಿನ್ನ ಸ್ನೇಹಿತನಾದ ಅಬ್ರ ಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀನು ನಮ್ಮ ದೇವರಲ್ಲವೋ? ಅವರು ಅದರಲ್ಲಿ ನಿವಾಸ ಮಾಡಿ ನಿನ್ನ ಹೆಸರಿಗೆ ಪರಿಶುದ್ಧವಾದ ಸ್ಥಾನವನ್ನು ಕಟ್ಟಿಸಿ ನಿನ್ನ ಹೆಸರು ಈ ಆಲಯದಲ್ಲಿರುವದರಿಂದ ಕತ್ತಿಯೂ ನ್ಯಾಯತೀರಿಸುವ ಶಿಕ್ಷೆಯೂ ಜಾಡ್ಯವೂ ಬರವೂ ಏನಾದರೂ ನಮ್ಮ ಮೇಲೆ ಬಂದರೆ ನಾವು ಈ ಆಲಯದ ಮುಂದೆಯೂ ನಿನ್ನ ಸಮ್ಮುಖದಲ್ಲಿಯೂ ನಿಂತು ನಮ್ಮ ಇಕ್ಕಟ್ಟಿನಲ್ಲಿ ನಿನ್ನನ್ನು ಕೂಗುವಾಗ ನೀನು ಕೇಳಿ ರಕ್ಷಿಸುವವನಾಗಿದ್ದೀ ಎಂದು ಹೇಳಿದರು. ಈಗ ಇಗೋ, ಅಮ್ಮೋನ್ ಮೋವಾಬ್, ಸೇಯಾರ್ ಬೆಟ್ಟದ ಮಕ್ಕಳನ್ನು ನೋಡು; ಇಸ್ರಾಯೇಲ್ಯರು ಐಗುಪ್ತದೇಶ ದೊಳಗಿಂದ ಹೊರಟು ಬರುವಾಗ ಅವರ ಕಡೆಗೆ ಹೋಗಲು ನೀನು ಇವರಿಗೆ ಅಪ್ಪಣೆಕೊಡದೆ ಇದ್ದದ ರಿಂದ ಇವರು ತೊಲಗಿ ಅವರನ್ನು ನಾಶಮಾಡದೆ ಹೋದರು. ಇಗೋ, ನಮಗೆ ನೀನು ಸ್ವಾಧೀನ ಮಾಡಿಕೊಳ್ಳಲು ಕೊಟ್ಟ ನಿನ್ನ ಸ್ವಾಸ್ಥ್ಯದೊಳಗಿಂದ ಅವರು ಬಂದು ನಮ್ಮನ್ನು ಹೊರಡಿಸಬೇಕೆಂದು ನಮಗೆ ಪ್ರತೀಕಾರ ಮಾಡುತ್ತಾರೆ. ಓ ನಮ್ಮ ದೇವರೇ, ನೀನು ಅವರಿಗೆ ನ್ಯಾಯತೀರಿಸುವದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾಗುಂಪನ್ನು ಎದು ರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ ನಮ್ಮ ಕಣ್ಣುಗಳು ನಿನ್ನ ಮೇಲೆ ಅವೆ ಅಂದರು. ಹೀಗೆಯೇ ಯೆಹೂದದವರೆಲ್ಲರು ತಮ್ಮ ಹೆಂಡತಿಯರು, ಮಕ್ಕಳು, ಚಿಕ್ಕವರು ಸಹಿತವಾಗಿ ಕರ್ತನ ಮುಂದೆ ನಿಂತರು. ಆಗ ಸಭೆಯ ಮಧ್ಯದಲ್ಲಿ ಆಸಾಫನ ಮಕ್ಕಳಲ್ಲಿ ಒಬ್ಬನಾದಂಥ, ಲೇವಿಯನಾದಂಥ, ಮತ್ತನ್ಯನ ಮಗ ನಾದ ಯೆಗೀಯೇಲನ ಮಗನಾದ ಬೆನಾಯನ ಮಗ ನಾದ ಜೆಕರೀಯನ ಮಗನಾದ ಯಹಜೀಯೇಲನ ಮೇಲೆ ಕರ್ತನ ಆತ್ಮನು ಬಂದನು. ಆಗ ಅವನುಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿ ಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಕರ್ತನು ನಿಮಗೆ ಹೀಗೆ ಹೇಳುತ್ತಾನೆ--ಈ ಮಹಾಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರ ಬೇಡಿರಿ. ಯಾಕಂದರೆ ಯುದ್ಧವು ನಿಮ್ಮದಲ್ಲ, ದೇವ ರದೇ. ಮಾರನೇ ದಿವಸ ನೀವು ಅವರಿಗೆ ಎದು ರಾಗಿ ಹೋಗಿರಿ. ಇಗೋ, ಅವರು ಹಚ್ಚೀಚು ಎಂಬ ಕಣಿವೆಯಿಂದ ಬರುತ್ತಾರೆ; ಯೆರೂವೇಲಿನ ಅರಣ್ಯದ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ. ಇದರಲ್ಲಿ ನೀವು ಯುದ್ಧ ಮಾಡಲು ಅವಶ್ಯವಿಲ್ಲ; ನೀವು ನೆಲೆಯಾಗಿ ನಿಂತು ಕೊಂಡು ಕರ್ತನು ನಿಮಗೆ ಮಾಡುವ ರಕ್ಷಣೆಯನ್ನು ನೋಡಿರಿ; ಯೆಹೂದದವರೇ, ಯೆರೂಸಲೇಮಿನ ವರೇ, ಭಯಪಡಬೇಡಿರಿ, ಹೆದರಬೇಡಿರಿ; ಮಾರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ; ಕರ್ತನು ನಿಮ್ಮ ಸಂಗಡ ಇದ್ದಾನೆ ಅಂದನು. ಆಗ ಯೆಹೋ ಷಾಫಾಟನು ತನ್ನ ಮುಖವನ್ನು ನೆಲಕ್ಕೆ ಬಾಗಿಸಿದನು; ಯೆಹೂದದವರೆಲ್ಲರೂ ಯೆರೂಸಲೇಮಿನ ನಿವಾಸಿಗಳೆ ಲ್ಲರೂ ಕರ್ತನ ಮುಂದೆ ಅಡ್ಡಬಿದ್ದು ಕರ್ತನನ್ನು ಆರಾ ಧಿಸಿದರು. ಇದಲ್ಲದೆ ಕೆಹಾತ್ಯರ ಮಕ್ಕಳಲ್ಲಿಯೂ ಕೋರಹಿಯರ ಮಕ್ಕಳಲ್ಲಿಯೂ ಇರುವ ಲೇವಿಯರು ಗಟ್ಟಿಯಾಗಿ ದೊಡ್ಡ ಶಬ್ದದಿಂದ ಇಸ್ರಾಯೇಲಿನ ದೇವ ರಾದ ಕರ್ತನನ್ನು ಸ್ತುತಿಸಲು ಎದ್ದು ನಿಂತರು. ಅವರು ಉದಯದಲ್ಲಿ ಎದ್ದು ತೆಕೋವದ ಅರ ಣ್ಯಕ್ಕೆ ಹೊರಟರು. ಅವರು ಹೊರಟು ಹೋಗುತ್ತಿ ರುವಾಗ ಯೆಹೋಷಾಫಾಟನು ನಿಂತುಕೊಂಡು--ಓ ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆತನ ಪ್ರವಾದಿಗಳನ್ನು ನಂಬಿಕೊಳ್ಳಿರಿ; ಆಗ ಜಯಹೊಂದುವಿರಿ ಅಂದನು. ಅವನು ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಸೈನ್ಯದ ಮುಂದೆ ಅವರು ಹೊರಡುವಾಗ ಪರಿಶುದ್ಧತ್ವದ ಪ್ರಭೆಯನ್ನು ಸ್ತುತಿಸುವದಕ್ಕೆ ಕರ್ತನನ್ನು ಕೊಂಡಾಡಿರಿ, ಯಾಕಂದರೆ ಆತನ ಕೃಪೆಯು ಯುಗ ಯುಗಕ್ಕೂ ಇರುವದೆಂದು ಹೇಳುವದಕ್ಕೆ ಕರ್ತ ನಿಗೆ ಸಂಗೀತಗಾರರನ್ನು ನೇಮಿಸಿದನು. ಅವರು ಹಾಡುವದಕ್ಕೂ ಸ್ತುತಿಸುವದಕ್ಕೂ ಆರಂಭಿಸಿದಾಗಲೇ ಕರ್ತನು ಯೆಹೂದದ ಮೇಲೆ ಬಂದ ಅಮ್ಮೋನ್, ಮೋವಾಬ್, ಸೇಯಾರ್ ಪರ್ವತಗಳ ಮಕ್ಕಳಿಗೆ ವಿರೋಧವಾಗಿ ಹೊಂಚಿಕೊಳ್ಳುವವರನ್ನು ಇಟ್ಟಿದ್ದ ರಿಂದ ಅವರು ಹೊಡೆಯಲ್ಪಟ್ಟಿದ್ದರು. ಅಮ್ಮೋನ್, ಮೋವಾಬ್ಯರ ಮಕ್ಕಳು ಸೇಯಾರ್ ಪರ್ವತದ ನಿವಾಸಿ ಗಳನ್ನು ಸಂಪೂರ್ಣವಾಗಿ ನಾಶಮಾಡಲು ನಿಂತರು. ಅವರು ಸೇಯಾರಿನ ನಿವಾಸಿಗಳನ್ನು ಮುಗಿಸಿಬಿಟ್ಟ ತರುವಾಯ ತಾವೇ ಒಬ್ಬರನ್ನೊಬ್ಬರು ನಾಶಮಾಡಲು ಸಹಾಯ ಕೊಟ್ಟರು. ಯೆಹೂದದವರು ಅರಣ್ಯದಲ್ಲಿ ರುವ ಬುರುಜಿನ ಸ್ಥಳಕ್ಕೆ ಬಂದಾಗ ಅವರು ಗುಂಪನ್ನು ದೃಷ್ಟಿಸಿದರು; ಇಗೋ, ಅವರಲ್ಲಿ ಒಬ್ಬನೂ ತಪ್ಪದ ಹಾಗೆ ಎಲ್ಲರೂ ನೆಲಕ್ಕೆ ಬಿದ್ದು ಹೆಣಗಳಾಗಿದ್ದರು. ಯೆಹೋಷಾಫಾಟನೂ ಅವನ ಜನರೂ ಅವರ ವಸ್ತುಗಳನ್ನು ಕೊಳ್ಳೆಮಾಡಲು ಬಂದಾಗ ಅವರು ಹೆಣ ಗಳ ಬಳಿಯಲ್ಲಿ ದ್ರವ್ಯವನ್ನೂ ಪ್ರಿಯವಾದ ಆಭರಣ ಗಳನ್ನೂ ಬಹಳವಾಗಿ ಕಂಡುಕೊಂಡು ತಾವು ಹೊರ ಲಾರದಷ್ಟು ಸುಲುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದದರಿಂದ ಅದನ್ನು ಮೂರು ದಿವಸಗಳ ವರೆಗೂ ಸುಲುಕೊಳ್ಳುತ್ತಾ ಇದ್ದರು. ನಾಲ್ಕನೇ ದಿವಸ ದಲ್ಲಿ ಅವರು ಬೆರಾಕವೆಂಬ ತಗ್ಗಿನಲ್ಲಿ ಕೂಡಿಕೊಂಡು ಅಲ್ಲಿ ಕರ್ತನನ್ನು ಸ್ತುತಿಸಿದರು. ಆದಕಾರಣ ಇಂದಿನ ವರೆಗೂ ಆ ಸ್ಥಳಕ್ಕೆ ಬೆರಾಕ ತಗ್ಗು ಎಂದು ಕರೆಯುತ್ತಾರೆ. ಕರ್ತನು ಅವರ ಶತ್ರುಗಳ ಮೇಲೆ ಅವರನ್ನು ಸಂತೋ ಷಪಡುವಂತೆ ಮಾಡಿದ್ದರಿಂದ ಅವರು ಸಂತೋಷವಾಗಿ ಯೆರೂಸಲೇಮಿಗೆ ತಿರಿಗಿ ಹೋಗುವದಕ್ಕೆ ಯೆಹೂದ ಯೆರೂಸಲೇಮಿನವರೆಲ್ಲರೂ ಅವರ ಮುಂಭಾಗ ದಲ್ಲಿ ಯೆಹೋಷಾಫಾಟನೂ ಹೊರಟು ವೀಣೆಗ ಳಿಂದಲೂ ಕಿನ್ನರಿಗಳಿಂದಲೂ ತುತೂರಿಗಳಿಂದಲೂ ಯೆರೂಸಲೇಮಿನಲ್ಲಿ ಪ್ರವೇಶಿಸಿ ಕರ್ತನ ಆಲಯಕ್ಕೆ ಬಂದರು. ಕರ್ತನು ಇಸ್ರಾಯೇಲಿನ ಶತ್ರುಗಳ ಮೇಲೆ ಯುದ್ಧಮಾಡಿದನೆಂದು ಅವರು ಕೇಳಿದಾಗ ದೇವರ ಭಯವು ಆ ದೇಶಗಳ ಸಕಲ ರಾಜ್ಯಗಳ ಮೇಲೆ ಬಿತ್ತು. ಆದದರಿಂದ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು; ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿ ಕೊಟ್ಟನು. ಹೀಗೆ ಯೆಹೋಷಾಫಾಟನು ಯೆಹೂದದ ಮೇಲೆ ಆಳಿದನು. ಅವನು ಆಳಲು ಆರಂಭಿಸಿದಾಗ ಮೂವತ್ತೈದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಇಪ್ಪತ್ತೈದು ವರುಷ ಆಳಿದನು. ಅವನ ತಾಯಿಯ ಹೆಸರು ಅಜೂಬಳು; ಆಕೆಯು ಶಿಲ್ಹಿಯ ಮಗಳಾ ಗಿದ್ದಳು. ಅವನು ತನ್ನ ತಂದೆಯಾದ ಆಸನ ಮಾರ್ಗ ದಲ್ಲಿ ನಡೆದು ಅದನ್ನು ಬಿಟ್ಟುಬಿಡದೆ ಕರ್ತನ ಸಮ್ಮುಖ ದಲ್ಲಿ ಸರಿಯಾದದ್ದನ್ನು ಮಾಡಿದನು. ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ; ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನೂ ಬಹು ದುಷ್ಟನಾಗಿ ನಡೆದವನೂ ಆದ ಅಹಜ್ಯನ ಸಂಗಡ ಸಹವಾಸಮಾಡಿದನು. ಇದಲ್ಲದೆ ತಾರ್ಷಿ ಷಿಗೆ ಹೋಗುವ ನಿಮಿತ್ತ ಹಡಗುಗಳನ್ನು ಮಾಡಿಸಲು ಅವನ ಸಂಗಡ ಸೇರಿಕೊಂಡನು. ಅವರು ಎಚ್ಯೋನ್ಗೆಬೆ ರಿನಲ್ಲಿ ಹಡಗುಗಳನ್ನು ಮಾಡಿಸಿದನು.ಆಗ ಮಾರೇ ಷಾದವನಾಗಿರುವ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧ ವಾಗಿ ಪ್ರವಾದಿಸಿ--ನೀನು ಅಹಜ್ಯನ ಸಂಗಡ ಸೇರಿ ಕೊಂಡಿದ್ದರಿಂದ ಕರ್ತನು ನಿನ್ನ ಕ್ರಿಯೆಗಳನ್ನು ಹಾಳು ಮಾಡಿಬಿಟ್ಟನೆಂದು ಹೇಳಿದನು. ಹಡಗುಗಳು ತಾರ್ಷಿ ಷಿಗೆ ಹೋಗ ಕೂಡದ ಹಾಗೆ ಒಡೆಯಲ್ಪಟ್ಟವು. ಆಗ ಮಾರೇ ಷಾದವನಾಗಿರುವ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧ ವಾಗಿ ಪ್ರವಾದಿಸಿ--ನೀನು ಅಹಜ್ಯನ ಸಂಗಡ ಸೇರಿ ಕೊಂಡಿದ್ದರಿಂದ ಕರ್ತನು ನಿನ್ನ ಕ್ರಿಯೆಗಳನ್ನು ಹಾಳು ಮಾಡಿಬಿಟ್ಟನೆಂದು ಹೇಳಿದನು. ಹಡಗುಗಳು ತಾರ್ಷಿ ಷಿಗೆ ಹೋಗ ಕೂಡದ ಹಾಗೆ ಒಡೆಯಲ್ಪಟ್ಟವು.
- 2 Chronicles 14:9–15 2 ಪೂರ್ವಕಾಲವೃತ್ತಾಂತ 14:9–15ಆದರೆ ಕೂಷಿಯನಾದ ಜೆರಹನು ಅವರಿಗೆ ವಿರೋ ಧವಾಗಿ ಹೊರಟು ಮಾರೇಷದ ಮಟ್ಟಿಗೂ ಬಂದನು. ಅವನ ಸಂಗಡ ಹತ್ತು ಲಕ್ಷ ಜನ ರಾಣುವೆಯೂ ಮುನ್ನೂರು ರಥಗಳೂ ಇದ್ದವು. ಆಸನು ಅವನಿ ಗೆದುರಾಗಿ ಹೊರಟುಹೋದನು. ಮಾರೇಷದ ಬಳಿ ಯಲ್ಲಿ ಚೆಫಾತಾ ತಗ್ಗಿನಲ್ಲಿ ವ್ಯೂಹ ಕಟ್ಟಿದರು. ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು. ಆಗ ಕರ್ತನು ಕೂಷಿಯರನ್ನು ಆಸನ ಮುಂದೆಯೂ ಯೆಹೂ ದದವರ ಮುಂದೆಯೂ ಹೊಡೆದನು. ಆದದರಿಂದ ಕೂಷಿಯರು ಓಡಿಹೋದರು. ಆಗ ಆಸನೂ ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನ ವರೆಗೂ ಹಿಂದಟ್ಟಿದರು. ಕೂಷಿಯರು ತಮಗೆ ತ್ರಾಣವಿಲ್ಲದ ಹಾಗೆ ಸೋತುಹೋದರು. ಅವರು ಕರ್ತನ ಮುಂದೆಯೂ ಆತನ ಸೈನ್ಯದ ಮುಂದೆಯೂ ನಾಶ ವಾದರು. ಯೆಹೂದದವರು ಬಹು ಕೊಳ್ಳೆಯನ್ನು ಒಯ್ದರು. ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ಹೊಡೆದರು. ಕರ್ತನ ಭಯವು ಅವರ ಮೇಲೆ ಬಂತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದದ್ದರಿಂದ ಇವುಗಳನ್ನೆಲ್ಲಾ ಕೊಳ್ಳೆಮಾಡಿದರು.ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು. ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು.