Skip to content
ThuthiThuthiThuthi
Psalms · chapter 5 of 150 · 12 verses

Psalm 5 in Kannada

ಕೀರ್ತನೆಗಳು 5

  1. ಕರ್ತನೇ, ನನ್ನ ಮಾತುಗಳಿಗೆ ಕಿವಿಗೊಡು, ನನ್ನ ಧ್ಯಾನವನ್ನು ಲಕ್ಷ್ಯಕ್ಕೆ ತಂದುಕೋ.

    To the chief Musician upon Nehiloth, A Psalm of David. Give ear to my words, O LORD, consider my meditation.

  2. ನನ್ನ ಅರಸನೇ, ನನ್ನ ದೇವರೇ, ನನ್ನ ಮೊರೆಯ ಶಬ್ದವನ್ನು ಆಲೈಸು; ನಿನ್ನನ್ನೇ ಪ್ರಾರ್ಥಿಸುತ್ತೇನೆ.

    Hearken unto the voice of my cry, my King, and my God: for unto thee will I pray.

  3. ಓ ಕರ್ತನೇ, ಬೆಳಿಗ್ಗೆ ನನ್ನ ಸ್ವರವನ್ನು ಕೇಳುವಿ; ಹೊತ್ತಾರೆಯಲ್ಲಿ ನಿನಗೆ ಪ್ರಾರ್ಥಿಸಿ ಮೇಲಕ್ಕೆ ನೋಡುವೆನು.

    My voice shalt thou hear in the morning, O LORD; in the morning will I direct [my prayer] unto thee, and will look up.

  4. ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಇಲ್ಲವೆ ಕೆಟ್ಟತನವು ನಿನ್ನ ಬಳಿಯಲ್ಲಿ ತಂಗಲಾರದು.

    For thou [art] not a God that hath pleasure in wickedness: neither shall evil dwell with thee.

  5. ನಿನ್ನ ದೃಷ್ಟಿಯಲ್ಲಿ ಮೂರ್ಖರು ನಿಂತುಕೊಳ್ಳುವದಿಲ್ಲ. ದುಷ್ಟ ಕೆಲಸ ಮಾಡುವವರೆಲ್ಲರನ್ನು ನೀನು ಹಗೆ ಮಾಡುತ್ತೀ.

    The foolish shall not stand in thy sight: thou hatest all workers of iniquity.

  6. ಸುಳ್ಳಾಡುವವರನ್ನು ನೀನು ನಾಶಮಾಡುತ್ತೀ; ಕೊಲೆಗಾರರನ್ನು ಮತ್ತು ಮೋಸಗಾರರನ್ನು ಕರ್ತನು ಅಸಹ್ಯಿಸುತ್ತಾನೆ.

    Thou shalt destroy them that speak leasing: the LORD will abhor the bloody and deceitful man.

  7. ನಾನಾದರೋ, ನಿನ್ನ ಕರುಣಾತಿಶಯದಿಂದ ನಿನ್ನ ಆಲಯಕ್ಕೆ ಬರುವೆನು; ನಿನಗೆ ಭಯಪಟ್ಟು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಆರಾಧಿಸುವೆನು.

    But as for me, I will come [into] thy house in the multitude of thy mercy: [and] in thy fear will I worship toward thy holy temple.

  8. ಓ ಕರ್ತನೇ, ನನ್ನ ವಿರೋಧಿಗಳ ನಿಮಿತ್ತ ನಿನ್ನ ನೀತಿಯಲ್ಲಿ ನನ್ನನ್ನು ನಡಿಸು; ನಿನ್ನ ಮಾರ್ಗವನ್ನು ನನ್ನ ಮುಂದೆ ಸರಾಗಮಾಡು.

    Lead me, O LORD, in thy righteousness because of mine enemies; make thy way straight before my face.

  9. ಅವರ ಬಾಯಲ್ಲಿ ನಂಬಿಗಸ್ತಿಕೆಯು ಇಲ್ಲವೇ ಇಲ್ಲ. ಅವರ ಒಳಭಾಗವು ಅತಿ ದುಷ್ಟತ್ವವೇ. ಅವರ ಗಂಟಲು ತೆರೆದ ಸಮಾ ಧಿಯೇ; ತಮ್ಮ ನಾಲಿಗೆಯಿಂದ ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ.

    For [there is] no faithfulness in their mouth; their inward part [is] very wickedness; their throat [is] an open sepulchre; they flatter with their tongue.

  10. ಓ ದೇವರೇ, ಅವರನ್ನು ನಾಶಮಾಡು; ಅವರು ತಮ್ಮ ಸ್ವಂತ ಆಲೋಚನೆಗಳಿಂದ ಬಿದ್ದು ಹೋಗಲಿ; ಅವರ ಅಪಾರವಾದ ದ್ರೋಹಗಳ ನಿಮಿತ್ತ ಅವರನ್ನು ಹೊರಗೆ ಹಾಕು; ಯಾಕಂದರೆ ಅವರು ನಿನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾರೆ.

    Destroy thou them, O God; let them fall by their own counsels; cast them out in the multitude of their transgressions; for they have rebelled against thee.

  11. ಆದರೆ ನಿನ್ನಲ್ಲಿ ಭರವಸವಿಟ್ಟವರೆಲ್ಲರು ಸಂತೋಷಿ ಸಲಿ, ನೀನು ಅವರನ್ನು ಕಾಯುವದರಿಂದ ಯುಗ ಯುಗಕ್ಕೂ ಹರ್ಷಿಸಲಿ; ನಿನ್ನ ನಾಮವನ್ನು ಪ್ರೀತಿ ಮಾಡುವವರು ನಿನ್ನಲ್ಲಿ ಉತ್ಸಾಹಪಡಲಿ.ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ.

    But let all those that put their trust in thee rejoice: let them ever shout for joy, because thou defendest them: let them also that love thy name be joyful in thee.

  12. ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ.

    For thou, LORD, wilt bless the righteous; with favour wilt thou compass him as [with] a shield.

All chapters of Psalms · Kannada Bible · Psalm 5 in Tamil

Kannada Bible: Kannada Old Version, public domain.

King James Version: public domain.