Psalms · chapter 63 · verse 8
Psalm 63:8 in Kannada
ನನ್ನ ಪ್ರಾಣವು ನಿನ್ನನ್ನು ಹಿಂಬಾಲಿಸಿ ಬರುತ್ತದೆ; ನಿನ್ನ ಬಲಗೈ ನನ್ನನ್ನು ಗಟ್ಟಿ ಯಾಗಿ ಎತ್ತಿಹಿಡಿಯುತ್ತದೆ.
Nanna praanavu ninnannu himbaalisi baruttade; ninna balagai nannannu gatti yaagi ettihidiyuttade.
Psalm 63:8 in English
- King James Version (KJV)
- My soul followeth hard after thee: thy right hand upholdeth me.
- World English Bible (WEB)
- My soul stays close to you. Your right hand holds me up.
- American Standard Version (ASV)
- My soul followeth hard after thee: Thy right hand upholdeth me.
- Bible in Basic English (BBE)
- My soul keeps ever near you: your right hand is my support.
- Darby Translation (DBY)
- My soul followeth hard after thee: thy right hand upholdeth me.
- Webster's Bible (WBS)
- My soul followeth hard after thee: thy right hand upholdeth me.
- Young's Literal Translation (YLT)
- Cleaved hath my soul after Thee, On me hath Thy right hand taken hold.
Read in context
- 6ಸಾರದಿಂದಲೂ ಕೊಬ್ಬಿನಿಂದಲೂ ನನ್ನ ಪ್ರಾಣವು ತೃಪ್ತಿಯಾಗುವದು; ಆಗ ನನ್ನ ಬಾಯಿಯು ಉತ್ಸಾಹದ ತುಟಿಗಳಿಂದ ನಿನ್ನನ್ನು ಸ್ತುತಿಸುವದು.
- 7ನೀನು ನನ್ನ ಸಹಾಯಕನಾಗಿರುವದರಿಂದ ನಿನ್ನ ರೆಕ್ಕೆಗಳ ನೆರಳಿನಲ್ಲಿ ನಾನು ಉತ್ಸಾಹಪಡುವೆನು.
- 8ನನ್ನ ಪ್ರಾಣವು ನಿನ್ನನ್ನು ಹಿಂಬಾಲಿಸಿ ಬರುತ್ತದೆ; ನಿನ್ನ ಬಲಗೈ ನನ್ನನ್ನು ಗಟ್ಟಿ ಯಾಗಿ ಎತ್ತಿಹಿಡಿಯುತ್ತದೆ.
- 9ಆದರೆ ನನ್ನ ಪ್ರಾಣವನ್ನು ನಾಶಮಾಡುವದಕ್ಕೆ ಹುಡುಕುವವರು ಭೂಮಿಯ ಕೆಳಭಾಗಗಳಿಗೆ ಹೋಗು ವರು.
- 10ಕತ್ತಿಯಿಂದ ಅವರು ಬೀಳುವರು; ನರಿಗಳ ಪಾಲಾಗುವರು.ಆದರೆ ಅರಸನು ದೇವರಲ್ಲಿ ಸಂತೋಷಿಸುವನು; ಆತನ ಮೇಲೆ ಆಣೆ ಇಡುವ ವರೆಲ್ಲರು ಹೆಚ್ಚಳಪಡುವರು; ಆದರೆ ಸುಳ್ಳಾಡುವವರ ಬಾಯಿ ಮುಚ್ಚಲ್ಪಡುವದು.
Cross references
- Isaiah 41:10 ಯೆಶಾಯ 41:10ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
- Psalm 18:35 ಕೀರ್ತನೆಗಳು 18:35ನಿನ್ನ ರಕ್ಷಣೆಯ ಗುರಾಣಿಯನ್ನು ಸಹ ನನಗೆ ನೀನು ಕೊಟ್ಟಿದ್ದೀ; ನಿನ್ನ ಬಲಗೈ ನನ್ನನ್ನು ಹಿಡಿದಿದೆ. ನಿನ್ನ ಸಾತ್ವಿಕತ್ವವು ನನ್ನನ್ನು ಹೆಚ್ಚಿಸಿಯದೆ.
- Psalm 73:23 ಕೀರ್ತನೆಗಳು 73:23ಆದಾಗ್ಯೂ ನಾನು ನಿನ್ನ ಸಂಗಡ ಯಾವಾಗಲೂ ಇದ್ದೇನೆ; ನೀನು ನನ್ನ ಬಲಗೈಯನ್ನು ಹಿಡಿದಿದ್ದೀ.
- Song of Solomon 2:6 ಪರಮಗೀತೆ 2:6ಅವನ ಎಡಗೈ ನನ್ನ ತಲೆಯ ಕೆಳಗದೆ; ಅವನ ಬಲಗೈ ನನ್ನನ್ನು ಅಪ್ಪಿ ಕೊಳ್ಳುತ್ತದೆ.
- Psalm 37:24 ಕೀರ್ತನೆಗಳು 37:24ಅವನು ಬಿದ್ದು ಹೋದಾಗ್ಯೂ ಪೂರ್ಣ ವಾಗಿ ಕೆಡವಲ್ಪಡುವದಿಲ್ಲ. ಯಾಕಂದರೆ ಕರ್ತನು ತನ್ನ ಕೈಯಿಂದ ಅವನನ್ನು ಮೇಲೆ ಎತ್ತುತ್ತಾನೆ.
- Psalm 73:25 ಕೀರ್ತನೆಗಳು 73:25ಪರ ಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರಿದ್ದಾರೆ? ನಿನ್ನ ಹೊರತಾಗಿ ಭೂಮಿಯಲ್ಲಿ ನಾನು ಅಪೇಕ್ಷಿಸುವವರು ಯಾರೂ ಇಲ್ಲ.
- Isaiah 42:1 ಯೆಶಾಯ 42:1ಇಗೋ, ನಾನು ಆಧಾರವಾಗಿರುವ ನನ್ನ ಸೇವಕನು; ನಾನು ಆದುಕೊಂಡವನಲ್ಲಿ ನನ್ನ ಆತ್ಮ ಆನಂದಿಸುವದು. ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಅನ್ಯಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.
- Psalm 94:18 ಕೀರ್ತನೆಗಳು 94:18ನನ್ನ ಕಾಲುಜಾರಿತೋ ಎಂದು ನಾನು ಅಂದಾಗಲೇ ಓ ಕರ್ತನೇ, ನಿನ್ನ ಕರುಣೆಯು ನನ್ನನ್ನು ಎತ್ತಿಹಿಡಿಯಿತು.
- Psalm 41:12 ಕೀರ್ತನೆಗಳು 41:12ನನ್ನನ್ನಾದರೋ ನನ್ನ ಯಥಾರ್ಥ ತ್ವದಲ್ಲಿ ನೀನು ಉದ್ಧರಿಸಿ ನಿನ್ನ ಸಮ್ಮುಖದಲ್ಲಿ ಎಂದೆಂದಿಗೂ ನನ್ನನ್ನು ನಿಲ್ಲಿಸಿದ್ದೀ.ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಕ್ಕೂ ಕೊಂಡಾಟ ವಾಗಲಿ. ಆಮೆನ್. ಆಮೆನ್.
- Genesis 32:26–28 ಆದಿಕಾಂಡ 32:26–28ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು. ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು. ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
- Philippians 2:12–13 ಫಿಲಿಪ್ಪಿಯವರಿಗೆ 2:12–13ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ಯಾವಾ ಗಲೂ ವಿಧೇಯರಾದಂತೆ ಈಗಲೂ ವಿಧೇಯರಾಗಿ ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರು ವಾಗಲೂ ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯ ವನ್ನೂ ಸಾಧಿಸುವಾತನು ದೇವರೇ.
- Isaiah 26:9 ಯೆಶಾಯ 26:9ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಬಯಸಿದ್ದೇನೆ, ಹೌದು, ನನ್ನಲ್ಲಿ ರುವ ನನ್ನ ಆತ್ಮದೊಂದಿಗೆ ನಿನ್ನನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ; ಭೂಮಿಗೆ ನಿನ್ನ ನ್ಯಾಯತೀರ್ವಿಕೆ ಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.