Psalms · chapter 68 · verse 29
Psalm 68:29 in Kannada
ಯೆರೂಸಲೇಮಿನಲ್ಲಿರುವ ನಿನ್ನ ಮಂದಿ ರದ ನಿಮಿತ್ತ ಅರಸುಗಳು ನಿನಗೆ ಕಾಣಿಕೆಗಳನ್ನು ತರು ವರು.
Yeroosaleminalliruva ninna mandi rada nimitta arasugalu ninage kaanikegalannu taru varu.
Psalm 68:29 in English
- King James Version (KJV)
- Because of thy temple at Jerusalem shall kings bring presents unto thee.
- World English Bible (WEB)
- Because of your temple at Jerusalem, kings will bring presents to you.
- American Standard Version (ASV)
- Because of thy temple at Jerusalem Kings shall bring presents unto thee.
- Bible in Basic English (BBE)
- Out of your Temple in Jerusalem.
- Darby Translation (DBY)
- Because of thy temple at Jerusalem shall kings bring presents unto thee.
- Webster's Bible (WBS)
- Because of thy temple at Jerusalem shall kings bring presents to thee.
- Young's Literal Translation (YLT)
- Because of Thy temple at Jerusalem, To Thee do kings bring a present.
Read in context
- 27ಅಲ್ಲಿ ಅವರನ್ನಾಳುವವರ ಕೂಡ ಚಿಕ್ಕ ಬೆನ್ಯಾ ವಿಾನನು ಅವರ ನಾಯಕರಾದ ಯೆಹೂದನ ಪ್ರಧಾ ನರೂ ಅವರ ಸಮೂಹವೂ ಜೆಬುಲೂನನ, ನಫ್ತಾ ಲಿಯ ಪ್ರಧಾನರೂ ಇದ್ದಾರೆ.
- 28ನಿನ್ನ ದೇವರು ನಿನ್ನ ಬಲವನ್ನು ಆಜ್ಞಾಪಿಸಿದ್ದಾನೆ; ಓ ದೇವರೇ, ನಮಗೋಸ್ಕರ ನಡಿಸಿದ ಕಾರ್ಯವನ್ನು ಬಲಪಡಿಸು.
- 29ಯೆರೂಸಲೇಮಿನಲ್ಲಿರುವ ನಿನ್ನ ಮಂದಿ ರದ ನಿಮಿತ್ತ ಅರಸುಗಳು ನಿನಗೆ ಕಾಣಿಕೆಗಳನ್ನು ತರು ವರು.
- 30ಪ್ರತಿಯೊಬ್ಬನು ಬೆಳ್ಳಿಯ ತುಂಡುಗಳನ್ನು ಸಮರ್ಪಿಸುವ ವರೆಗೆ ಜನರ ಕರುಗಳ ಸಂಗಡ ಹೋರಿ ಗಳ ಗುಂಪನ್ನು ಭಲ್ಲೆಗಾರರ ಗುಂಪುನ್ನು ಗದರಿಸು. ಕಾಳಗದಲ್ಲಿ ಸಂತೋಷ ಪಡುವ ಜನರನ್ನು ನೀನು ಚದರಿಸು.
- 31ಐಗುಪ್ತದಿಂದ ಪ್ರಧಾನರು ಬರುವರು; ಕೂಷ್ ತನ್ನ ಕೈಗಳನ್ನು ದೇವರ ಕಡೆಗೆ ಬೇಗ ಚಾಚುವದು.
Cross references
- 1 Kings 10:10 1 ಅರಸುಗಳು 10:10ಅವಳು ಅರಸನಿಗೆ ನೂರ ಇಪ್ಪತ್ತು ತಲಾಂತು ಚಿನ್ನವನ್ನೂ ಬಹುಸಮೃದ್ಧಿಯಾದ ಸುಗಂಧದ್ರವ್ಯಗ ಳನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಅಪರಿಮಿತವಾದ ಸುಗಂಧಗಳ ಹಾಗೆ ಇನ್ನೆಂದೂ ಬಂದದ್ದಿಲ್ಲ.
- 1 Chronicles 29:3 1 ಪೂರ್ವಕಾಲವೃತ್ತಾಂತ 29:3ಇದಲ್ಲದೆ ನನಗೆ ನನ್ನ ದೇವರ ಮನೆಯ ಮೇಲೆ ಪ್ರೀತಿ ಇರುವದರಿಂದ ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು ನನ್ನ ಸ್ವಸ್ಥಿತಿಯಿಂದ ಬಂಗಾರವನ್ನೂ ಬೆಳ್ಳಿಯನ್ನೂ ನನ್ನ ದೇವರ ಮನೆಗೆ ಕೊಟ್ಟಿದ್ದೇನೆ.
- Psalm 76:11 ಕೀರ್ತನೆಗಳು 76:11ನಿಮ್ಮ ದೇವರಾದ ಕರ್ತನಿಗೆ ಪ್ರಮಾಣಮಾಡಿ ಸಲ್ಲಿಸಿರಿ; ಆತನ ಸುತ್ತಲಿರುವವ ರೆಲ್ಲರು ಭಯಪಡಿಸುವಾತನಿಗೆ ಕಾಣಿಕೆಗಳನ್ನು ತರಲಿ.ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.
- Psalm 45:12 ಕೀರ್ತನೆಗಳು 45:12ತೂರಿನ ಮಗಳು ಕಾಣಿಕೆಯೊಂದಿಗೆ ಅಲ್ಲಿ ಇರುವಳು; ಅಂದರೆ ಪ್ರಜೆ ಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು.
- Isaiah 60:6–11 ಯೆಶಾಯ 60:6–11ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ. ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ.
- Isaiah 60:16–17 ಯೆಶಾಯ 60:16–17ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ. ಹಿತ್ತಾಳೆಗೆ ಬದಲಾಗಿ ಬಂಗಾರವನ್ನು ತರುವೆನು; ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ ಮರಕ್ಕೆ ಬದಲಾಗಿ ಹಿತ್ತಾಳೆಯನ್ನೂ ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು, ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿಯೂ ನೀತಿಯನ್ನು ನಿನಗೆ ಅಧಿಕಾರಿ ಯನ್ನಾಗಿಯೂ ಮಾಡುವೆನು.
- Isaiah 18:7 ಯೆಶಾಯ 18:7ಚದರಿಸಲ್ಪಟ್ಟು ಸೂರೆಯಾಗಿರುವ ಜನರೂ ಅವರು ಹುಟ್ಟಿದಂದಿನಿಂದ ಇಲ್ಲಿಯ ವರೆಗೂ ಭಯಂಕರವಾದ ಜನರೂ ಮಹಾಬಲದಿಂದ ತುಳಿಯಲ್ಪಡುವರು. ನದಿ ಗಳಿಂದ ಹಾಳಾಗಿರುವ ದೇಶದವರು ಸೈನ್ಯಗಳ ಕರ್ತನ ಹೆಸರಿನ ಸ್ಥಳವಾದ ಚೀಯೋನ್ ಪರ್ವತಕ್ಕೆ ಆತನಿ ಗೊಸ್ಕರ ಕಾಣಿಕೆಯನ್ನು ತರುವರು.
- 1 Kings 10:24–25 1 ಅರಸುಗಳು 10:24–25ದೇವರು ಸೊಲೊಮೋನನ ಹೃದಯದಲ್ಲಿ ಉಂಟು ಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯಲ್ಲಿರುವ ಸಮಸ್ತರು ಅವನ ಬಳಿಗೆ ಬಂದರು. ಅವರವರು ಕಾಣಿಕೆಯಾಗಿ ಬೆಳ್ಳಿ ಬಂಗಾರದ ಪಾತ್ರೆಗಳನ್ನೂ ವಸ್ತ್ರಗಳನ್ನೂ ಆಯುಧ ಗಳನ್ನೂ ಸುಗಂಧಗಳನ್ನೂ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ವರುಷ ವರುಷಕ್ಕೂ ನೇಮಕದ ಪ್ರಕಾರ ತರುತ್ತಾ ಇದ್ದರು.
- Psalm 72:10–11 ಕೀರ್ತನೆಗಳು 72:10–11ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು. ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು.
- Ezra 7:13–28 ಎಜ್ರನು 7:13–28ಇಂಥ ಸಮಯದಲ್ಲಿ ನನ್ನ ರಾಜ್ಯದಲ್ಲಿ ರುವ ಇಸ್ರಾಯೇಲಿನ ಸಮಸ್ತ ಜನರಲ್ಲಿಯೂ ಅವರ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಯಾರಾದರೂ ನಿನ್ನ ಸಂಗಡ ಯೆರೂಸಲೇಮಿಗೆ ಹೋಗಲು ಮನಸ್ಸಿ ದ್ದರೆ ಅವರು ಹೋಗಬಹುದೆಂದು ಅಪ್ಪಣೆಯನ್ನು ಕೊಟ್ಟಿದ್ದೇನೆ. ನೀನು ನಿನ್ನ ಕೈಯಲ್ಲಿರುವ ನಿನ್ನ ದೇವರ ನ್ಯಾಯಪ್ರಮಾಣದ ಹಾಗೆ ಯೆಹೂದ ಮತ್ತು ಯೆರೂ ಸಲೇಮನ್ನು ಕುರಿತು ವಿಚಾರಿಸುವದಕ್ಕೂ ಅರಸನೂ ಅವನ ಏಳು ಆಲೋಚನಾಕರ್ತರೂ ಯೆರೂಸಲೇಮಿ ನಲ್ಲಿ ನಿವಾಸವಾಗಿರುವ ಇಸ್ರಾಯೇಲ್ ದೇವರಿಗೆ ಮನಃಪೂರ್ವಕವಾಗಿ ಅರ್ಪಿಸಿದ ಬೆಳ್ಳಿ ಬಂಗಾರವನ್ನೂ ನೀನು ಬಾಬೆಲಿನ ಸಮಸ್ತ ಸೀಮೆಯಲ್ಲಿ ಸಂಪಾದಿಸಿದ ಬೆಳ್ಳಿ ಬಂಗಾರವನ್ನೂ ಅದರ ಸಂಗಡ ಯೆರೂಸ ಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕೋಸ್ಕರ ಜನರಿಂದಲೂ ಯಾಜಕರಿಂದಲೂ ಕೊಡಲ್ಪಟ್ಟ ಮನಃ ಪೂರ್ವಕವಾದ ಅರ್ಪಣೆಯನ್ನೂ ತಕ್ಕೊಂಡು ಹೋಗಿ ಆ ಹಣದಿಂದ ನೀನು ತ್ವರೆಯಾಗಿ ಹೋರಿಗಳನ್ನೂ ಟಗರುಗಳನ್ನೂ ಕುರಿಗಳನ್ನೂ ಅವುಗಳಿಗೆ ಕಾಣಿಕೆಗ ಳನ್ನೂ ಪಾನದ ಅರ್ಪಣೆಗಳನ್ನೂ ಕೊಂಡುಕೊಂಡು ಅವುಗಳನ್ನು ಯೆರೂಸಲೇಮಿನಲ್ಲಿರುವ ನಿಮ್ಮ ದೇವರ ಆಲಯದ ಬಲಿಪೀಠದ ಮೇಲೆ ಅರ್ಪಿಸುವದಕ್ಕೂ ನೀನು ಅರಸನಿಂದಲೂ ಅವನ ಏಳುಮಂದಿ ಸಲಹೆ ಗಾರರಿಂದಲೂ ಕಳುಹಿಸಲ್ಪಟ್ಟಿದ್ದೀ. ಮಿಕ್ಕಾದ ಬೆಳ್ಳಿ ಬಂಗಾರದಿಂದ ನಿನಗೂ ನಿನ್ನ ಸಹೋದರರಿಗೂ ಯಾವ ದನ್ನು ಮಾಡಲು ಯುಕ್ತವಾಗಿ ಕಾಣಿಸುವದೋ ಅದೇ ಪ್ರಕಾರ ನಿಮ್ಮ ದೇವರ ಚಿತ್ತದ ಹಾಗೆಯೇ ಮಾಡಿರಿ. ಇದಲ್ಲದೆ ನಿನ್ನ ದೇವರ ಆಲಯದ ಸೇವೆಯ ನಿಮಿತ್ತವಾಗಿ ನಿನಗೆ ಕೊಡಲ್ಪಟ್ಟ ಪಾತ್ರೆಗಳನ್ನು ನೀನು ಯೆರೂಸಲೇಮಿನ ದೇವರ ಮುಂದೆ ಒಪ್ಪಿಸಿಬಿಡು. ಇನ್ನು ಏನಾದರೂ ನಿನ್ನ ದೇವರ ಆಲಯಕ್ಕೋಸ್ಕರ ಅಗತ್ಯವಿದ್ದು ನೀನು ಕೊಡಬೇಕಾಗಿ ಬಂದರೆ ಅದನ್ನು ಅರಸನ ಬೊಕ್ಕಸದಿಂದ ತಕ್ಕೊಂಡುಕೊಡು. ಇದಲ್ಲದೆ ಅರಸನಾಗಿರುವ ಆರ್ತಷಸ್ತನಾದ ನಾನು ನದಿಯ ಆಚೆಯಲ್ಲಿರುವ ಎಲ್ಲಾ ಬೊಕ್ಕಸದವ ರಿಗೆ ಕೊಡುವ ಅಪ್ಪಣೆ ಏನಂದರೆ-- ಪರಲೋಕದ ದೇವರ ನ್ಯಾಯಪ್ರಮಾಣದ ಶಾಸ್ತ್ರಿಯಾಗಿರುವ ಯಾಜ ಕನಾದ ಎಜ್ರನು ನಿಮ್ಮಿಂದ ಏನಾದರೂ ಕೇಳಿದರೆ ಬೆಳ್ಳಿಯು ನೂರು ತಲಾಂತಿನ ಮಟ್ಟಿಗೂ ಗೋಧಿಯು ನೂರು ಕೊಳಗದ ಮಟ್ಟಿಗೂ ದ್ರಾಕ್ಷಾರಸವು ನೂರು ಬುದ್ದಲಿಯ ವರೆಗೂ ಎಣ್ಣೆಯು ನೂರು ಬುದ್ದಲಿಯ ವರೆಗೂ ಉಪ್ಪು ಬೇಕಾದಷ್ಟು ತ್ವರೆಯಾಗಿ ಕೊಡಲ್ಪಡಲಿ. ಪರಲೋಕದ ದೇವರಿಂದ ಏನಾದರೂ ಆಜ್ಞಾಪಿಸ ಲ್ಪಟ್ಟರೆ ಅದು ಪರಲೋಕದ ದೇವರ ಆಲಯಕ್ಕೋಸ್ಕರ ಜಾಗ್ರತೆಯಾಗಿ ಮಾಡಲ್ಪಡಲಿ. ಯಾಕಂದರೆ ಅರಸನೂ ಅವನ ಕುಮಾರರೂ ಆಳುವ ರಾಜ್ಯದ ಮೇಲೆ ರೌದ್ರ ಯಾಕೆ ಇರಬೇಕು? ಇದಲ್ಲದೆ ಯಾಜಕರೂ ಲೇವಿ ಯರೂ ಹಾಡುಗಾರರೂ ದ್ವಾರಪಾಲಕರೂ ನೆತಿನಿ ಯರೂ ಮೊದಲಾದ ದೇವರ ಆಲಯದ ಸೇವಕರನ್ನು ಕುರಿತು ಏನಂದರೆ--ಅವರ ಮೇಲೆ ತೆರಿಗೆಯನ್ನಾದರೂ ಕಪ್ಪವನ್ನಾದರೂ ಸುಂಕವನ್ನಾದರೂ ಹೊರಿಸಲು ಅಪ್ಪಣೆ ಇಲ್ಲವೆಂದು ನಿಮಗೆ ತಿಳಿಸುತ್ತೇನೆ. ಆದರೆ ಎಜ್ರನೇ, ನೀನು ನಿನ್ನ ದೇವರ ನ್ಯಾಯ ಪ್ರಮಾಣಗಳನ್ನು ತಿಳಿದಿರುವದರಿಂದ ನದಿಯ ಆಚೆಯ ಲ್ಲಿರುವ ಸಮಸ್ತ ಜನರಿಗೆ ನ್ಯಾಯತೀರಿಸುವ ಹಾಗೆಯೂ ಅವುಗಳನ್ನು ಅರಿಯದವರಿಗೆ ಬೋಧಿಸುವ ಹಾಗೆಯೂ ನಿನ್ನ ಕೈಯಲ್ಲಿರುವ ನಿನ್ನ ದೇವರ ಜ್ಞಾನದ ಪ್ರಕಾರ ಯಜಮಾನರನ್ನೂ ನ್ಯಾಯಾಧಿಪತಿಗಳನ್ನೂ ನೇಮಿಸು. ಇದಲ್ಲದೆ ಯಾವನಾದರೂ ನಿನ್ನ ದೇವರ ಕಟ್ಟಳೆ ಯನ್ನೂ ಅರಸನ ಕಟ್ಟಳೆಯನ್ನೂ ಕೈಕೊಳ್ಳದಿದ್ದರೆ ಮರಣಕ್ಕಾದರೂ ಗಡೀಪಾರಿಗಾದರೂ ಆಸ್ತಿ ಹಿಡಿಯು ವದಕ್ಕಾದರೂ ಸೆರೆಗಾದರೂ ಅವನಿಗೆ ಬೇಗ ನ್ಯಾಯ ತೀರಿಸಲ್ಪಡಲಿ ಅಂದನು. ಆಗ ಎಜ್ರನು -- ಯೆರೂಸಲೇಮಿನಲ್ಲಿರುವ ಕರ್ತನ ಆಲಯವನ್ನು ಅಲಂಕರಿಸುವದಕ್ಕೆ ಅರ ಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟು ಅರಸನ ಮುಂದೆಯೂ ಅವನ ಸಲಹೆಗಾರರ ಮುಂದೆಯೂ ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆ ಮಾಡಿದ ನಮ್ಮ ತಂದೆಗಳ ದೇವರಾಗಿ ರುವ ಕರ್ತನು ಸ್ತುತಿಸಲ್ಪಡಲಿ.ಹೀಗೆಯೇ ನನ್ನ ದೇವರಾಗಿರುವ ಕರ್ತನ ಹಸ್ತವು ನನ್ನ ಮೇಲೆ ಇದ್ದದ್ದರಿಂದ ನಾನು ಬಲಗೊಂಡು ಇಸ್ರಾಯೇಲಿ ನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು ಅಂದನು. ಹೀಗೆಯೇ ನನ್ನ ದೇವರಾಗಿರುವ ಕರ್ತನ ಹಸ್ತವು ನನ್ನ ಮೇಲೆ ಇದ್ದದ್ದರಿಂದ ನಾನು ಬಲಗೊಂಡು ಇಸ್ರಾಯೇಲಿ ನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು ಅಂದನು.
- 2 Chronicles 2:5–6 2 ಪೂರ್ವಕಾಲವೃತ್ತಾಂತ 2:5–6ನಾನು ಕಟ್ಟಿಸುವ ಆಲಯವು ದೊಡ್ಡದು; ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವನಾಗಿದ್ದಾನೆ. ಆತನಿಗೆ ಮನೆಯನ್ನು ಕಟ್ಟಿಸಲು ಶಕ್ತಿಯನ್ನು ಹೊಂದಿ ದವನು ಯಾರು? ಆಕಾಶಗಳೂ ಆಕಾಶಾಕಾಶಗಳೂ ಆತನನ್ನು ಹಿಡಿಯಲಾರವು; ಆತನ ಮುಂದೆ ಯಜ್ಞ ವನ್ನು ಸುಡುವದಕ್ಕೆ ಹೊರತಾಗಿ ಆತನಿಗೆ ಮನೆಯನ್ನು ಕಟ್ಟಿಸಲು ನಾನು ಎಷ್ಟರವನು?
- Nehemiah 2:8 ನೆಹೆಮೀಯ 2:8ಇದಲ್ಲದೆ ಆಲಯದ ಸಂಬಂಧವಾದ ಅರಮನೆಯ ಬಾಗಲಿಗೋಸ್ಕರವೂ ಪಟ್ಟಣದ ಗೋಡೆಗೋಸ್ಕರವೂ ನಾನು ಪ್ರವೇಶಿಸುವ ಮನೆಗೋಸ್ಕರವೂ ತೊಲೆಗಳನ್ನು ಮಾಡಲು ಮರ ಗಳನ್ನು ಕೊಡುವ ಹಾಗೆ ಅರಸನವನಾಧಿಪತಿಯಾದ ಆಸಾಫನಿಗೋಸ್ಕರ ನನಗೆ ಪತ್ರ ಕೊಡಲ್ಪಡಲಿ ಅಂದೆನು. ಆಗ ದೇವರ ಒಳ್ಳೇ ಕೈ ನನ್ನ ಮೇಲೆ ಇರುವ ಪ್ರಕಾರ ಅರಸನು ನನಗೆ ಕೊಟ್ಟನು.