Psalms · chapter 69 · verse 24
Psalm 69:24 in Kannada
ಅವರ ಮೇಲೆ ನಿನ್ನ ರೋಷವನ್ನು ಹೊಯ್ಯಿ; ನಿನ್ನ ಕೋಪದ ಉರಿಯು ಅವರನ್ನು ಹಿಡಿಯಲಿ.
Avara mele ninna roshavannu hoyyi; ninna kopada uriyu avarannu hidiyali.
Psalm 69:24 in English
- King James Version (KJV)
- Pour out thine indignation upon them, and let thy wrathful anger take hold of them.
- World English Bible (WEB)
- Pour out your indignation on them. Let the fierceness of your anger overtake them.
- American Standard Version (ASV)
- Pour out thine indignation upon them, And let the fierceness of thine anger overtake them.
- Bible in Basic English (BBE)
- Let your curse come on them; let the heat of your wrath overtake them.
- Darby Translation (DBY)
- Pour out thine indignation upon them, and let the fierceness of thine anger take hold of them.
- Webster's Bible (WBS)
- Pour out thy indignation upon them, and let thy wrathful anger take hold of them.
- Young's Literal Translation (YLT)
- Pour upon them Thine indignation, And the fierceness of Thine anger doth seize them.
Read in context
- 22ಅವರ ಮೇಜು ಅವರ ಮುಂದೆ ಉರುಲಾ ಗಲಿ, ಸುಖವಾಗಿರುವವರಿಗೆ ಅದು ನೇಣೂ ಆಗಲಿ.
- 23ಅವರ ಕಣ್ಣಗಳು ಕಾಣದ ಹಾಗೆ ಕತ್ತಲಾಗಲಿ; ಅವರ ಸೊಂಟಗಳನ್ನು ಯಾವಾಗಲೂ ಕದಲಿಸು.
- 24ಅವರ ಮೇಲೆ ನಿನ್ನ ರೋಷವನ್ನು ಹೊಯ್ಯಿ; ನಿನ್ನ ಕೋಪದ ಉರಿಯು ಅವರನ್ನು ಹಿಡಿಯಲಿ.
- 25ಅವರ ವಾಸಸ್ಥಳವು ನಾಶವಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ.
- 26ನೀನು ಹೊಡೆದ ವನನ್ನು ಅವರು ಹಿಂಸಿಸುತ್ತಾರೆ, ನೀನು ಗಾಯಮಾಡಿ ದವರ ವ್ಯಸನವನ್ನು ಮಾತನಾಡಿಕೊಳ್ಳುತ್ತಾರೆ.
Cross references
- Psalm 79:6 ಕೀರ್ತನೆಗಳು 79:6ನಿನ್ನನ್ನು ತಿಳಿಯದ ಜನಾಂಗ ಗಳ ಮೇಲೆಯೂ ನಿನ್ನ ಹೆಸರನ್ನು ಕರೆಯದ ರಾಜ್ಯಗಳ ಮೇಲೆಯೂ ನಿನ್ನ ಕೋಪವನ್ನು ಹೊಯಿದುಬಿಡು.
- Hosea 5:10 ಹೋಶೇಯ 5:10ಯೆಹೂದದ ಪ್ರಭುಗಳು ಮೇರೆಗಳನ್ನು ಬಿಡಿಸುವವರ ಹಾಗೆ ಇದ್ದರು; ಆದದರಿಂದ ಅವರ ಮೇಲೆ ನೀರಿನ ಹಾಗೆ ನನ್ನ ಕೋಪವನ್ನು ಸುರಿಸುವೆನು.
- Revelation 16:1 ಪ್ರಕಟನೆ 16:1ಆಗ ಆಲಯದಿಂದ ಬಂದ ಮಹಾಶಬ್ದ ವನ್ನು ಕೇಳಿದೆನು. ಅದು ಆ ಏಳು ಮಂದಿ ದೂತರಿಗೆ--ನೀವು ಹೋಗಿ ಆ ಪಾತ್ರೆಗಳ ಲ್ಲಿರುವ ದೇವರ ರೌದ್ರವನ್ನು ಭೂಮಿಯ ಮೇಲೆ ಹೊಯ್ಯಿರಿ ಎಂದು ಹೇಳಿತು.
- Luke 21:22 ಲೂಕನು 21:22ಬರೆದಿರುವವುಗಳೆಲ್ಲವೂ ನೆರವೇರುವಂತೆ ಇವು ಮುಯ್ಯಿತೀರಿಸುವ ದಿವಸಗಳಾಗಿವೆ.
- Exodus 15:15 ವಿಮೋಚನಕಾಂಡ 15:15ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.
- Isaiah 13:8 ಯೆಶಾಯ 13:8ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು.
- Deuteronomy 29:18–28 ಧರ್ಮೋಪದೇಶಕಾಂಡ 29:18–28ಈಹೊತ್ತು ನಮ್ಮ ದೇವರಾದ ಕರ್ತನನ್ನು ಬಿಟ್ಟು ಆ ಜನಾಂಗಗಳ ದೇವರುಗಳಿಗೆ ಸೇವೆಮಾಡುವದಕ್ಕೆ ತಿರುಗಿಕೊಳ್ಳುವ ಹೃದಯವುಳ್ಳ ಪುರುಷನಾದರೂ ಸ್ತ್ರೀಯಾದರೂ ಕುಟುಂಬವಾದರೂ ಗೋತ್ರವಾದರೂ ಇರಬಾರದು. ವಿಷವನ್ನೂ ಮಾಚಿಪತ್ರೆಯನ್ನೂ ಬೆಳೆ ಸುವ ಬೇರು ನಿಮ್ಮಲ್ಲಿ ಇರಬಾರದು. ಈ ಶಾಪದ ಮಾತುಗಳನ್ನು ಕೇಳಿ ಅವನು--ನನ್ನ ಹೃದಯದ ಕಲ್ಪನೆ ಯಲ್ಲಿ ನಡೆದುಕೊಂಡು ದಾಹಕ್ಕೆ ಅಮಲನ್ನು ಕುಡಿಸಿ ದರೂ ನನಗೆ ಸಮಾಧಾನವಿರುವದೆಂದು ಹೇಳಿಕೊಂಡು ತನ್ನ ಹೃದಯದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವವ ನಾದರೆ ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು. ಈ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಕರ್ತನು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವನು. ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ ದೂರ ದೇಶದಿಂದ ಬರುವ ಅನ್ಯನೂ ಆ ದೇಶದ ಬಾಧೆಗಳನ್ನೂ ಕರ್ತನು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡಿ ಕರ್ತನು ತನ್ನ ಕೋಪದಲ್ಲಿಯೂ ರೌದ್ರದಲ್ಲಿಯೂ ಕೆಡವಿ ಹಾಕಿದ ಸೊದೋಮ್ ಗೊಮೋರ ಅದ್ಮಾಚೆಬೋ ಯಾಮ್ ಇವುಗಳ ಹಾಗೆ ಆ ದೇಶವೆಲ್ಲಾ ಗಂಧಕವೂ ಉಪ್ಪೂ ಉರಿಯುತ್ತಾ ಬಿತ್ತಲ್ಪಡದೆ ಮೊಳೆಯದೆ ಯಾವ ಹುಲ್ಲನ್ನಾದರೂ ಬೆಳೆಸದೆ ಇರುವದನ್ನು ನೋಡಿ-- ಯಾಕೆ ಕರ್ತನು ಈ ದೇಶಕ್ಕೆ ಹೀಗೆ ಮಾಡಿದ್ದಾನೆ. ಈ ದೊಡ್ಡ ಕೊಪಾಗ್ನಿ ಏನು ಎಂದು ಜನಾಂಗಗಳೆಲ್ಲಾ ಕೇಳುವರು. ಆಗ ಜನರು--ಅವರು ತಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ತರುವಾಗ ತಮ್ಮ ಪಿತೃಗಳ ದೇವರಾದ ಕರ್ತನು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟು, ಹೋಗಿ ಬೇರೆ ದೇವರುಗಳನ್ನೂ ತಮಗೆ ತಿಳಿಯದಂಥ, ಆತನು ತಮಗೆ ನೇಮಿಸದಂಥ ದೇವರುಗಳನ್ನೂ ಸೇವಿಸಿ ಅಡ್ಡಬಿದ್ದ ದರಿಂದ ಕರ್ತನ ಕೋಪವು ಈ ದೇಶದ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಶಾಪವನ್ನೆಲ್ಲಾ ಅವರ ಮೇಲೆ ತರುವ ಹಾಗೆ ಉರಿಯಿತು. ಕರ್ತನು ಅವ ರನ್ನು ಕೋಪದಲ್ಲಿಯೂ ಸಿಟ್ಟಿನಲ್ಲಿಯೂ ಮಹಾರೌದ್ರ ದಲ್ಲಿಯೂ ದೇಶದಲ್ಲಿಂದ ಕಿತ್ತುಹಾಕಿ ಇಂದು ಇರುವ ಪ್ರಕಾರ ಬೇರೆ ದೇಶಕ್ಕೆ ಕಳುಹಿಸಿದ್ದಾನೆ.ರಹಸ್ಯಗಳು ನಮ್ಮ ದೇವರಾದ ಕರ್ತನಿಗೆ ಸೇರಿದ್ದು; ಆದರೆ ಪ್ರಕಟವಾದ ಈ ನ್ಯಾಯಪ್ರಮಾಣದ ಮಾತು ಗಳನ್ನೆಲ್ಲಾ ನಾವು ಮಾಡುವಹಾಗೆ ನಮಗೂ ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.
- Leviticus 26:14–46 ಯಾಜಕಕಾಂಡ 26:14–46ನೀವು ನನ್ನ ಮಾತನ್ನು ಕೇಳದೆ ಈ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ ನನ್ನ ನಿಯಮಗಳನ್ನು ನೀವು ಅಸಡ್ಡೆಮಾಡಿದರೆ ಇಲ್ಲವೆ ನನ್ನ ನಿರ್ಣಯಗಳಲ್ಲಿ ನಿಮ್ಮ ಪ್ರಾಣವು ಅಸಹ್ಯಪಟ್ಟರೆ ನೀವು ನನ್ನ ಒಡಂಬಡಿ ಕೆಯನ್ನು ವಿಾರಿ ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ ನಾನು ಸಹ ಇದನ್ನು ನಿಮಗೆ ಮಾಡು ವೆನು; ನಿಮ್ಮ ಮೇಲೆ ಭೀತಿಯನ್ನೂ ಕಣ್ಣುಗಳನ್ನು ಕ್ಷೀಣಿಸು ವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗು ವಂತೆಯೂ ಮಾಡುವ ಕ್ಷಯರೋಗವನ್ನು ಚಳಿಜ್ವರ ವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ನಿಮ್ಮ ಬೀಜವನ್ನು ಬಿತ್ತುವಿರಿ; ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು. ನಾನು ನಿಮಗೆ ವಿಮುಖನಾಗಿರು ವೆನು. ನಿಮ್ಮ ಶತ್ರುಗಳ ಮುಂದೆ ನೀವು ಕೊಲ್ಲಲ್ಪಡುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗ ಓಡಿ ಹೋಗುವಿರಿ. ಇಷ್ಟಾದರು ನನ್ನ ಮಾತನ್ನು ಕೇಳದೆಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಬಲದ ಗರ್ವವನ್ನು ಮುರಿದು ಹಾಕಿ ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಹಿತ್ತಾಳೆಯಂತೆಯೂ ಮಾಡುವೆನು. ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದು ಹೋಗುವದು. ನಿಮ್ಮ ಭೂಮಿಯು ತನ್ನ ಬೆಳೆಯನ್ನೂ ಮರಗಳ ಫಲಗಳನ್ನೂ ಕೊಡದೆ ಇರುವದು. ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧ ವಾಗಿ ನಡೆದರೆ ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ನಿಮ್ಮ ಮೇಲೆ ವ್ಯಾಧಿಗಳನ್ನು ಬರಮಾಡುವೆನು. ನಿಮ್ಮ ಮೇಲೆ ಕಾಡುಮೃಗಗಳು ಬರುವಂತೆ ಮಾಡುವೆನು. ಅವು ನಿಮ್ಮನ್ನು ಮಕ್ಕಳಿಲ್ಲದ ವರನ್ನಾಗಿ ಮಾಡಿ ನಿಮ್ಮ ದನಗಳನ್ನು ತಿಂದುಬಿಡುವವು ಮತ್ತು ನಿಮ್ಮನ್ನು ಸ್ವಲ್ಪ ಮಂದಿಯಾಗಿ ಮಾಡುವವು; ನಿಮ್ಮ ಮಾರ್ಗಗಳು ಹಾಳಾಗಿಹೋಗುವವು. ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು. ಒಡಂಬಡಿ ಕೆಯ ನಿಮಿತ್ತ ಮುಯ್ಯಿಗೆ ಮುಯ್ಯಿ ತೀರಿಸುವ ಕತ್ತಿಯನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿಬಂದಾಗ ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನೀವು ಶತ್ರುವಿನ ಕೈಗೆ ಒಪ್ಪಿಸಲ್ಪಡು ವಿರಿ. ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ. ಇದೆಲ್ಲಾ ಆದಾಗ್ಯೂ ನೀವು ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು. ನೀವು ನಿಮ್ಮ ಕುಮಾರ ಕುಮಾರ್ತೆಯರ ಮಾಂಸವನ್ನು ತಿನ್ನುವಿರಿ. ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು. ನಿಮ್ಮ ಪಟ್ಟಣಗಳನ್ನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳುಮಾಡಿ, ನಿಮ್ಮ ಸುವಾಸನೆ ಗಳನ್ನು ಮೂಸಿ ನೋಡದೆ ಇರುವೆನು. ನಾನು ದೇಶವನ್ನು ಹಾಳುಮಾಡುವೆನು; ಅದರಲ್ಲಿ ವಾಸ ವಾಗುವ ನಿಮ್ಮ ಶತ್ರುಗಳು ಅದಕ್ಕೆ ಆಶ್ಚರ್ಯಪಡುವರು. ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು. ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವ ವರೆಗೂ ಭೂಮಿ ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ತನ್ನ ಸಬ್ಬತ್ತುಗಳನ್ನು ಅನುಭವಿಸುವದು; ಆಗ ಭೂಮಿ ವಿಶ್ರಮಿಸಿಕೊಂಡು ತನ್ನ ಸಬ್ಬತ್ತುಗಳನ್ನು ಅನುಭವಿ ಸುವದು. ನೀವು ಅದರಲ್ಲಿ ವಾಸವಾಗಿದ್ದಾಗ ನಿಮ್ಮ ಸಬ್ಬತ್ತುಗಳಲ್ಲಿ ಅದಕ್ಕೆ ವಿಶ್ರಾಂತಿ ದೊರೆಯದ ಕಾರಣ ಅದು ಹಾಳುಬಿದ್ದಿರುವ ಕಾಲವೆಲ್ಲಾ ಅನುಭವಿಸುವದು. ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು. ಓಡಿಸುವವ ನಿಲ್ಲದೆ ಒಬ್ಬರ ಮೇಲೊಬ್ಬರು ಕತ್ತಿಯ ಭಯದಿಂದಾದ ಹಾಗೆ ಬೀಳುವರು; ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವದು ನಿಮ್ಮಿಂದಾಗದು. ಜನಾಂಗಗ ಳೊಳಗೆ ನಾಶವಾಗುವಿರಿ; ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ತಿಂದುಬಿಡುವದು. ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು; ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು. ಆಗ ಅವರು ನನಗೆ ಮಾಡಿದ ತಮ್ಮ ಅಕ್ರಮವನ್ನೂ ತಮ್ಮ ಪಿತೃಗಳಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದು ಕೊಂಡದ್ದರಿಂದ ನಾನೂ ಅವರಿಗೆ ವಿರೋಧವಾಗಿ ನಡೆದುಕೊಂಡು ತಮ್ಮ ಶತ್ರುಗಳ ದೇಶಕ್ಕೆ ಬರಮಾಡಿದ್ದನ್ನು ಅರಿಕೆಮಾಡಿ ಪರಿಛೇದನೆ ಇಲ್ಲದ ಅವರ ಹೃದಯವು ತಗ್ಗಿಸಲ್ಪಟ್ಟು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಅವರು ಒಪ್ಪಿಕೊಳ್ಳುವದಾದರೆ ನಾನು ಯಾಕೋಬ್ ಇಸಾಕ್ ಅಬ್ರಹಾಮ್ ಇವ ರಿಗೆ ಮಾಡಿದ ನನ್ನ ಒಡಂಬಡಿಕೆಯನ್ನೂ ಅವರ ದೇಶವನ್ನೂ ಜ್ಞಾಪಕಮಾಡಿಕೊಳ್ಳುವೆನು. ಅವರು ದೇಶದೊಳಗಿಂದ ಹೊರಡಿಸಲ್ಪಟ್ಟು ಅವರಿಲ್ಲದೆ ಹಾಳಾದ ವೇಳೆಯಲ್ಲಿ ಅದು ತನ್ನ ಸಬ್ಬತ್ತು ಗಳನ್ನು ಅನುಭವಿಸುವದು; ಅವರು ತಮ್ಮ ಅಕ್ರಮ ದಿಂದಾದ ಶಿಕ್ಷೆಗೆ ಒಪ್ಪಿಕೊಳ್ಳುವರು; ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ಅಸಹ್ಯಿಸಿದ್ದರಿಂದಲೇ. ಆದಾಗ್ಯೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ತಳ್ಳಿಬಿಡದೆಯೂ ಅಸಹ್ಯಿಸದೆಯೂ ಸಂಪೂರ್ಣವಾಗಿ ನಾಶಮಾಡದೆಯೂ ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು; ಅವರ ದೇವರಾಗಿರುವ ಕರ್ತನು ನಾನೇ. ನಾನು ಅವರಿಗೆ ದೇವರಾಗಿರುವದರಿಂದ ಜನಾಂಗಗಳ ಮುಂದೆ ಐಗುಪ್ತದೇಶದಿಂದ ಹೊರಗೆ ಬರಮಾಡಿದ ಅವರ ಪಿತೃಗಳ ಒಡಂಬಡಿಕೆಯನ್ನು ಅವರಿಗೊಸ್ಕರ ಜ್ಞಾಪಕ ಮಾಡಿಕೊಳ್ಳುವೆನು; ನಾನೇ ಕರ್ತನು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ. ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ.
- Deuteronomy 32:20–26 ಧರ್ಮೋಪದೇಶಕಾಂಡ 32:20–26ಆತನು--ನನ್ನ ಮುಖವನ್ನು ಅವರಿಗೆ ಮರೆ ಮಾಡುವೆನು; ಅವರ ಅಂತ್ಯವು ಏನೆಂದು ನೋಡು ವೆನು; ಅವರು ಮೂರ್ಖ ಸಂತತಿಯೇ, ನಂಬಿಕೆಯಿಲ್ಲದ ಮಕ್ಕಳೇ. ದೇವರಲ್ಲದ್ದರಿಂದ ಅವರು ನನಗೆ ರೋಷ ಹುಟ್ಟಿಸಿ ದರು; ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪ ವನ್ನು ಎಬ್ಬಿಸಿದರು. ಜನವಲ್ಲದ್ದರಿಂದ ನಾನು ಅವರಿಗೆ ರೋಷ ಹುಟ್ಟಿಸುವೆನು; ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು. ನನ್ನ ಕೋಪದಲ್ಲಿ ಬೆಂಕಿಹತ್ತಿತು; ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ ಅದರ ಫಲವನ್ನೂ ತಿಂದುಬಿಟ್ಟು ಬೆಟ್ಟಗಳ ಅಸ್ತಿವಾರವನ್ನು ದಹಿಸುವದು. ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿ ಡುವೆನು; ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು. ಅವರು ಹಸಿವೆಯಿಂದ ಬಳಲಿಹೋಗುವರು, ಜ್ವಾಲೆಯಿಂದಲೂ ಕಠಿಣವಾಗಿ ಸಂಹರಿಸಲ್ಪಡುವರು. ಕಾಡುಮೃಗಗಳ ಹಲ್ಲನ್ನು, ಧೂಳಿನಲ್ಲಿರುವ ಹಾವು ಗಳ ವಿಷದ ಸಂಗಡ ಅವರಿಗೆ ವಿರೋಧವಾಗಿ ಕಳುಹಿಸುವೆನು. ಹೊರಗೆ ಕತ್ತಿಯೂ ಒಳಗೆ ಭಯವೂ ಪ್ರಾಯ ಸ್ಥನನ್ನೂ ಕನ್ನಿಕೆಯನ್ನೂ ನರೇಕೂದಲಿನವನ ಸಂಗಡ ಮೊಲೆ ಕೂಸನ್ನೂ ಸಂಹರಿಸುವವು. ನಾನು--ಅವರನ್ನು ಚದುರಿಸಿಬಿಡುವೆನೆಂದು ಹೇಳಿಕೊಂಡೆನು; ಅವರ ಜ್ಞಾಪಕವನ್ನು ಮನುಷ್ಯರಲ್ಲಿ ಇರದ ಹಾಗೆ ಮಾಡುವೆನು.
- 1 Thessalonians 2:15–16 1 ಥೆಸಲೊನೀಕದವರಿಗೆ 2:15–16ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.
- Zechariah 1:6 ಜೆಕರ್ಯ 1:6ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.
- Deuteronomy 31:17 ಧರ್ಮೋಪದೇಶಕಾಂಡ 31:17ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು.