Psalms · chapter 7 · verse 8
Psalm 7:8 in Kannada
ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು.
Kartanu janagalige nyaaya teerisuvanu. O kartane, nannalliruva nanna neetiya prakaaravoo yathaarthateya prakaaravoo nanage nyaayateerisu.
Psalm 7:8 in English
- King James Version (KJV)
- The LORD shall judge the people: judge me, O LORD, according to my righteousness, and according to mine integrity [that is] in me.
- World English Bible (WEB)
- The LORD administers judgment to the peoples. Judge me, LORD, according to my righteousness, and to my integrity that is in me.
- American Standard Version (ASV)
- Jehovah ministereth judgment to the peoples: Judge me, O Jehovah, according to my righteousness, and to mine integrity that is in me.
- Bible in Basic English (BBE)
- The Lord will be judge of the peoples; give a decision for me, O Lord, because of my righteousness, and let my virtue have its reward.
- Darby Translation (DBY)
- Jehovah shall minister judgment to the peoples. Judge me, Jehovah, according to my righteousness, and according to mine integrity which is in me.
- Webster's Bible (WBS)
- The LORD shall judge the people: judge me, O LORD, according to my righteousness, and according to my integrity [that is] in me.
- Young's Literal Translation (YLT)
- Jehovah doth judge the peoples; Judge me, O Jehovah, According to my righteousness, And according to mine integrity on me,
Read in context
- 6ಓ ಕರ್ತನೇ, ನಿನ್ನ ಕೋಪದಿಂದ ಏಳು; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು; ನನ್ನ ನಿಮಿತ್ತ ಎಚ್ಚರಗೊಳ್ಳು; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ.
- 7ಹೀಗೆ ಪ್ರಜೆಗಳ ಸಭೆಯು ನಿನ್ನನ್ನು ಸುತ್ತಿಕೊಳ್ಳುವದು. ಆದದರಿಂದ ಅವರ ನಿಮಿತ್ತ ನೀನು ಉನ್ನತಕ್ಕೆ ತಿರುಗಿಕೋ.
- 8ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು.
- 9ದುಷ್ಟರ ದುಷ್ಟತನವು ಮುಗಿದು ಹೋಗಲಿ, ಆದರೆ ನೀತಿವಂತನನ್ನು ದೃಢಪಡಿಸು. ನೀತಿಯುಳ್ಳ ದೇವರು ಹೃದಯವನ್ನೂ ಅಂತರಿಂದ್ರಿ ಯಗಳನ್ನೂ ಶೋಧಿಸುತ್ತಾನಲ್ಲಾ.
- 10ಯಥಾರ್ಥ ಹೃದ ಯವುಳ್ಳವನನ್ನು ರಕ್ಷಿಸುವ ದೇವರಲ್ಲಿ ನನ್ನ ರಕ್ಷಣೆ ಉಂಟು.
Cross references
- Psalm 96:13 ಕೀರ್ತನೆಗಳು 96:13ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
- Romans 14:10–12 ರೋಮಾಪುರದವರಿಗೆ 14:10–12ಆದರೆ ನೀನು ನಿನ್ನ ಸಹೋದರನಿಗೆ ತೀರ್ಪುಮಾಡುವದು ಯಾಕೆ? ಇಲ್ಲವೆ ನಿನ್ನ ಸಹೋದರನನ್ನು ಹೀನೈಸುವದು ಯಾಕೆ? ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ನಿಂತುಕೊಳ್ಳಬೇಕಲ್ಲಾ. ನನ್ನ ಜೀವದಾಣೆ, ಪ್ರತಿಯೊಬ್ಬನು ನನ್ನ ಮುಂದೆ ಮೊಣಕಾಲೂರುವನು ಮತ್ತು ಪ್ರತಿಯೊಂದು ನಾಲಿಗೆಯು ದೇವರಿಗೆ ಅರಿಕೆ ಮಾಡುವದು ಎಂಬದಾಗಿ ಕರ್ತನು ಹೇಳುತ್ತಾನೆ ಎಂದು ಬರೆದದೆ. ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕ ಒಪ್ಪಿಸಬೇಕು.
- Psalm 43:1 ಕೀರ್ತನೆಗಳು 43:1ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
- 2 Corinthians 1:12 2 ಕೊರಿಂಥದವರಿಗೆ 1:12ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.
- 1 Thessalonians 2:10 1 ಥೆಸಲೊನೀಕದವರಿಗೆ 2:10ನಂಬುವವರಾದ ನಿಮ್ಮ ವಿಷಯದಲ್ಲಿ ನಾವು ಎಷ್ಟೋ ಶುದ್ಧರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬದಕ್ಕೆ ನೀವು ಸಾಕ್ಷಿಗಳು. ದೇವರೂ ಸಾಕ್ಷಿ.
- Psalm 98:9 ಕೀರ್ತನೆಗಳು 98:9ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.
- Psalm 78:72 ಕೀರ್ತನೆಗಳು 78:72ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು.
- Psalm 26:1 ಕೀರ್ತನೆಗಳು 26:1ಓ ಕರ್ತನೇ, ನನಗೆ ನ್ಯಾಯತೀರಿಸು; ಯಾಕಂದರೆ ನಾನು ನನ್ನ ಯಥಾರ್ಥತ್ವ ದಲ್ಲಿ ನಡೆದುಕೊಂಡಿದ್ದೇನೆ. ನಾನು ಕರ್ತನಲ್ಲಿ ಭರ ವಸವಿಟ್ಟಿದ್ದೇನೆ; ನಾನು ಕದಲುವದಿಲ್ಲ.
- 1 Corinthians 4:4–5 1 ಕೊರಿಂಥದವರಿಗೆ 4:4–5ನಾನೇ ನಾನಾಗಿ ಏನೂ ತಿಳಿಯದವನಾಗಿದ್ದೇನೆ; ಆದಾಗ್ಯೂ ಅದರಿಂದ ನಾನು ನೀತಿವಂತನಾಗಲಿಲ್ಲ; ನನ್ನನ್ನು ವಿಚಾರಿಸುವಾತನು ಕರ್ತನೇ. ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.
- Psalm 35:24–27 ಕೀರ್ತನೆಗಳು 35:24–27ಓ ಕರ್ತನೇ, ನನ್ನ ದೇವರೇ, ನಿನ್ನ ನೀತಿಯ ಪ್ರಕಾರ ನನಗೆ ನ್ಯಾಯತೀರಿಸು; ಅವರು ನನ್ನ ವಿಷಯವಾಗಿ ಸಂತೋಷಪಡದೆ ಇರಲಿ. ಅವರು ತಮ್ಮ ಹೃದಯ ದಲ್ಲಿ--ಹಾ, ನಮ್ಮ ಇಷ್ಟವೇ ನೆರವೇರಿತು ಎಂದು ಹೇಳದಿರಲಿ. ಅವನನ್ನು ನುಂಗಿ ಬಿಟ್ಟೆವೆಂದೂ ಅವರು ಹೇಳದೆ ಇರಲಿ; ನನ್ನ ಕೇಡಿನಲ್ಲಿ ಸಂತೋಷ ಪಡುವವರು ಕೂಡ ನಾಚಿಕೊಂಡು ಒಟ್ಟಿಗೆ ಗಲಿಬಿಲಿ ಯಾಗಿಲಿ, ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊದ್ದುಕೊಳ್ಳಲಿ. ನನ್ನ ನೀತಿಯಲ್ಲಿ ಸಂತೋಷ ಪಡುವವರು ಉತ್ಸಾಹಧ್ವನಿಮಾಡಿ ಆನಂದಪಡಲಿ; ಹೌದು, ತನ್ನ ಸೇವಕನ ಅಭಿವೃದ್ಧಿಯಲ್ಲಿ ಸಂತೋ ಷಪಡುವ ಕರ್ತನು ಮಹಿಮೆಹೊಂದಲಿ ಎಂದು ಅವರು ಯಾವಾಗಲೂ ಹೇಳಲಿ.ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.
- Genesis 31:53 ಆದಿಕಾಂಡ 31:53ಅಬ್ರಹಾ ಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯ ತೀರಿಸಲಿ ಅಂದನು. ಆಗ ಯಾಕೋಬನು ತನ್ನ ತಂದೆಯಾದ ಇಸಾಕನು ಭಯದಿಂದ ಸೇವಿಸುವ ದೇವರ ಮೇಲೆ ಪ್ರಮಾಣಮಾಡಿದನು.
- Psalm 17:2–3 ಕೀರ್ತನೆಗಳು 17:2–3ನಿನ್ನ ಸನ್ನಿಧಿಯೊಳಗಿಂದ ನನಗೆ ನ್ಯಾಯತೀರ್ಪು ಹೊರಬರಲಿ; ನಿನ್ನ ಕಣ್ಣುಗಳು ನ್ಯಾಯವಾದವುಗಳನ್ನು ದೃಷ್ಟಿಸಲಿ. ನೀನು ನನ್ನ ಹೃದಯವನ್ನು ಶೋಧಿಸಿದ್ದೀ, ರಾತ್ರಿಯಲ್ಲಿ ನನ್ನನ್ನು ದರ್ಶಿಸಿದ್ದೀ; ನನ್ನನ್ನು ಪುಟಕ್ಕೆ ಹಾಕಿ ಏನೂ ಕಂಡುಕೊಳ್ಳಲಿಲ್ಲ. ನನ್ನ ಬಾಯಿ ಅತಿ ಕ್ರಮಿಸದಂತೆ ನಾನು ನಿಶ್ಚಯ ಮಾಡಿದ್ದೇನೆ.