Psalms · chapter 70 · verse 1
Psalm 70:1 in Kannada
ಓ ದೇವರೇ, ನನ್ನನ್ನು ಬಿಡಿಸುವದಕ್ಕೂ ಕರ್ತನೇ, ನನ್ನ ಸಹಾಯಕ್ಕೂ ತ್ವರೆಪಡು.
O devare, nannannu bidisuvadakkoo kartane, nanna sahaayakkoo tvarepadu.
Psalm 70:1 in English
- King James Version (KJV)
- To the chief Musician, [A Psalm] of David, to bring to remembrance. [Make haste], O God, to deliver me; make haste to help me, O LORD.
- World English Bible (WEB)
- For the Chief Musician. By David. A reminder. Hurry, God, to deliver me. Come quickly to help me, LORD.
- American Standard Version (ASV)
- For the Chief Musician. [A Psalm] of David; to bring to remembrance. [Make haste], O God, to deliver me; Make haste to help me, O Jehovah.
- Bible in Basic English (BBE)
- To the chief music-maker. Of David. To keep in memory. Let your salvation come quickly, O God; come quickly to my help, O Lord.
- Darby Translation (DBY)
- To the chief Musician. [A Psalm] of David: to bring to remembrance. Make haste, O God, to deliver me; Jehovah, [hasten] to my help.
- Webster's Bible (WBS)
- To the chief Musician, [A Psalm] of David to bring to remembrance. [Make haste] , O God, to deliver me; make haste to help me, O LORD.
- Young's Literal Translation (YLT)
- To the Overseer, by David. — 'To cause to remember.' O God, to deliver me, O Jehovah, for my help, haste.
Read in context
- 1ಓ ದೇವರೇ, ನನ್ನನ್ನು ಬಿಡಿಸುವದಕ್ಕೂ ಕರ್ತನೇ, ನನ್ನ ಸಹಾಯಕ್ಕೂ ತ್ವರೆಪಡು.
- 2ನನ್ನ ಪ್ರಾಣವನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಿಸುವವರು ಹಿಂದಿರುಗಿ ಗಲಿಬಿಲಿಯಾಗಲಿ.
- 3ಆಹಾ, ಆಹಾ ಎಂದು ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ತಿರುಗಲಿ.
Cross references
- Psalm 40:13–17 ಕೀರ್ತನೆಗಳು 40:13–17ಓ ಕರ್ತನೇ, ನನ್ನನ್ನು ಬಿಡಿಸು ವದಕ್ಕೆ ಇಷ್ಟವುಳ್ಳವನಾಗಿ, ಓ ಕರ್ತನೆ, ನನ್ನ ಸಹಾ ಯಕ್ಕೆ ತ್ವರೆಪಡು. ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ. ಆಹಾ, ಆಹಾ ಎಂದು ನನಗೆ ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ಹಾಳಾಗಲಿ; ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡುವ ವರು--ಕರ್ತನು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ. ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.
- Psalm 143:7 ಕೀರ್ತನೆಗಳು 143:7ಓ ಕರ್ತನೇ, ನನಗೆ ಬೇಗನೆ ಉತ್ತರಕೊಡು; ನನ್ನ ಪ್ರಾಣವು ಕುಂದಿಹೋಗಿದೆ; ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನವಾಗದ ಹಾಗೆ ನಿನ್ನ ಮುಖ ವನ್ನು ನನಗೆ ಮರೆಮಾಡಬೇಡ.
- Psalm 71:12 ಕೀರ್ತನೆಗಳು 71:12ಓ ದೇವರೇ, ನನ್ನಿಂದ ದೂರವಾಗಿರ ಬೇಡ. ಓ ದೇವರೇ, ನನ್ನ ಸಹಾಯಕ್ಕೆ ತ್ವರೆಪಡು.
- Psalm 69:18 ಕೀರ್ತನೆಗಳು 69:18ಸವಿಾಪವಾಗಿದ್ದು ನನ್ನ ಪ್ರಾಣವನ್ನು ರಕ್ಷಿಸು ನನ್ನನ್ನು ನನ್ನ ಶತ್ರುಗಳ ನಿಮಿತ್ತ ವಾಗಿ ವಿಮೋಚಿಸು.
- Psalm 38:1 ಕೀರ್ತನೆಗಳು 38:1ಓ ಕರ್ತನೇ, ನಿನ್ನ ರೌದ್ರದಿಂದ ನನ್ನನ್ನು ಗದರಿಸಬೇಡ; ನಿನ್ನ ರೋಷದಿಂದ ನನ್ನನ್ನು ಶಿಕ್ಷಿಸಬೇಡ.
- 2 Samuel 17:1–21 2 ಸಮುವೇಲನು 17:1–21ಇದಲ್ಲದೆ ಅಹೀತೋಫೆಲನು ಅಬ್ಷಾ ಲೋಮನಿಗೆ--ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆದುಕೊಳ್ಳುವೆನು. ಅವನು ದಣಿದವನೂ ಧೈರ್ಯಗುಂದಿದವನೂ ಆಗಿ ರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗು ವರು. ಆಗ ನಾನು ಅರಸನನ್ನು ಮಾತ್ರ ಕೊಂದು ಜನರೆಲ್ಲರನ್ನು ತಿರಿಗಿ ನಿನ್ನ ಬಳಿಗೆ ತಕ್ಕೊಂಡು ಬರು ವೆನು. ನೀನು ಹುಡುಕುವವನು ಸಿಕ್ಕಿದರೆ ಜನರೆಲ್ಲರೂ ಹಿಂತಿರುಗಿದ ಹಾಗೆ ಆಗುವದು; ಜನರೆಲ್ಲರೂ ಸಮಾ ಧಾನವಾಗಿರುವರು ಅಂದನು. ಈ ಮಾತು ಅಬ್ಷಾಲೋಮನಿಗೂ ಇಸ್ರಾಯೇಲಿನ ಎಲ್ಲಾ ಹಿರಿಯರ ದೃಷ್ಟಿಗೂ ಸರಿಯಾಗಿತ್ತು. ಆದರೆ ಅಬ್ಷಾಲೋಮನು ಅರ್ಕೀಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ ಅಂದನು. ಹೂಷೈಯು ಅಬ್ಷಾಲೋಮನ ಬಳಿಗೆ ಬಂದಾಗ ಅಬ್ಷಾಲೋಮನು ಅವನಿಗೆ--ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ, ನೀನು ಮಾತ ನಾಡು ಅಂದನು. ಆಗ ಹೂಷೈ ಅಬ್ಷಾಲೋಮ ನಿಗೆ--ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೇದಲ್ಲ. ನಿನ್ನ ತಂದೆಯೂ ಅವನ ಜನರೂ ಪರಾಕ್ರಮಶಾಲಿಗಳು; ಅವರು ಅಡವಿಯಲ್ಲಿ ಮರಿಗಳನ್ನು ಕಳಕೊಂಡ ಕರಡಿಯ ಹಾಗೆ ರೋಷ ವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು; ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವದಿಲ್ಲ. ಇಗೋ, ಅವನು ಈಗ ಒಂದು ಗವಿಯಲ್ಲಾದರೂ ಒಂದು ಸ್ಥಳದಲ್ಲಾದರೂ ಅಡಗಿಕೊಂಡಿರುವನು. ಮೊದಲೇ ಇವರಲ್ಲಿ ಕೆಲವರು ಸತ್ತರೆ ಅದನ್ನು ಕೇಳು ವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು. ಆಗ ಸಿಂಹದ ಹೃದಯವುಳ್ಳ ಪರಾಕ್ರಮಶಾಲಿಯ ಹೃದಯವೂ ಸಹ ಸಂಪೂರ್ಣ ಕರಗುವದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ ಅವನ ಸಂಗಡ ಇರುವವರು ಪರಾ ಕ್ರಮಶಾಲಿಗಳೆಂದೂ ಇಸ್ರಾಯೇಲ್ಯರೆಲ್ಲರು ಬಲ್ಲರು. ನಾನು ಹೇಳುವ ಆಲೋಚನೆ ಏನಂದರೆ, ದಾನಿ ನಿಂದ ಬೇರ್ಷೆಬದ ವರೆಗೂ ಇರುವ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಇಸ್ರಾಯೇಲ್ಯರು ನಿನ್ನ ಬಳಿಯಲ್ಲಿ ಕೂಡಿಸಲ್ಪಟ್ಟ ತರುವಾಯ ನೀನೇ ಯುದ್ಧಕ್ಕೆ ಹೋಗಬೇಕು. ಆಗ ನಾವು ಅವನನ್ನು ಕಂಡು ಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ ಅವನ ಸಂಗಡವಿರುವ ಎಲ್ಲಾ ಜನರಲ್ಲಿ ಒಬ್ಬನಾದರೂ ಉಳಿಯುವದಿಲ್ಲ. ಅವನು ಒಂದು ವೇಳೆ ಒಂದು ಪಟ್ಟಣದಲ್ಲಿ ಹೊಕ್ಕರೆ ಇಸ್ರಾಯೇಲ್ಯರೆಲ್ಲರು ಆ ಪಟ್ಟಣಕ್ಕೆ ಹಗ್ಗಗಳನ್ನು ತಂದು ಹಾಕಿದ ತರುವಾಯ ನಾವು ಒಂದು ಹರಳಾದರೂ ಅಲ್ಲಿ ಕಾಣದ ಹಾಗೆ ಅದನ್ನು ನದಿಗೆ ಎಳೆದು ಹಾಕುವೆವು ಅಂದನು. ಆಗ ಅಬ್ಷಾ ಲೋಮನೂ ಇಸ್ರಾಯೇಲಿನ ಎಲ್ಲಾ ಜನರೂಅಹೀತೋಫೆಲನ ಆಲೋಚನೆಗಿಂತ ಅರ್ಕೀಯನಾದ ಹೂಷೈಯ ಆಲೋಚನೆ ಒಳ್ಳೇದು ಅಂದರು. ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೇ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ಕರ್ತನು ನೇಮಿಸಿದ್ದನು. ಹೂಷೈಯು ಯಾಜಕರಾದ ಚಾದೋಕನಿಗೂ ಎಬ್ಯಾತಾರನಿಗೂ--ಅಹೀತೋಫೆಲನು ಅಬ್ಷಾಲೋ ಮನಿಗೂ ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು. ಆದರೆ ನಾನು ಇಂಥಿಂಥ ಆಲೋಚನೆ ಹೇಳಿದೆನು. ಆದದರಿಂದ ನೀವು ತ್ವರೆ ಯಾಗಿ ಕಳುಹಿಸಿ ದಾವೀದನಿಗೆ ತಿಳಿಸಬೇಕಾದದ್ದೇ ನಂದರೆ--ನೀನು ರಾತ್ರಿಯಲ್ಲಿ ಅರಣ್ಯದ ಬೈಲುಗಳಲ್ಲಿ ತಂಗಬೇಡ; ಅರಸನೂ ಅವನ ಸಂಗಡವಿರುವ ಎಲ್ಲಾ ಜನರೂ ನಾಶವಾಗದ ಹಾಗೆ ಬೇಗ ದಾಟಿಹೋಗು ಅಂದನು. ಆದರೆ ಯೋನಾತಾನನೂ ಅಹೀಮಾ ಚನೂ ಪಟ್ಟಣದಲ್ಲಿ ಪ್ರವೇಶಿಸಿ ಯಾರೂ ನೋಡ ದಂತೆ ಎನ್ರೋಗೆಲಿನ ಬಳಿಯಲ್ಲಿ ಇದ್ದರು. ಆದದರಿಂದ ಅವರು ಅರಸನಾದ ದಾವೀದನಿಗೆ ಅದನ್ನು ತಿಳಿಸುವ ಹಾಗೆ ಒಬ್ಬ ದಾಸಿಯು ಹೋಗಿ ಅವರಿಗೆ ಹೇಳಿದಳು. ಆದರೆ ಒಬ್ಬ ಹುಡುಗನು ಅವರನ್ನು ನೋಡಿ ಅಬ್ಷಾ ಲೋಮನಿಗೆ ತಿಳಿಸಿದನು. ಆದದರಿಂದ ಅವರಿಬ್ಬರು ಶೀಘ್ರವಾಗಿ ಹೋಗಿ ಬಹುರೀಮಿನಲ್ಲಿರುವ ಒಬ್ಬ ಮನುಷ್ಯನ ಮನೆಯಲ್ಲಿ ಪ್ರವೇಶಿಸಿ ಅವನ ಅಂಗಳ ದಲ್ಲಿರುವ ಬಾವಿಯಲ್ಲಿ ಇಳಿದರು. ಆಗ ಆ ಮನೆ ಯವಳು ಬಾವಿಯ ಮೇಲೆ ಒಂದು ವಸ್ತ್ರವನ್ನು ಹಾಸಿ ನುಚ್ಚನ್ನು ಹರವಿಬಿಟ್ಟಳು. ಆದದರಿಂದ ಕಾರ್ಯ ತಿಳಿ ಯದೆ ಹೋಯಿತು. ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು--ಅಹೀಮಾ ಚನೂ ಯೋನಾತಾನನೂ ಎಲ್ಲಿ ಎಂದು ಕೇಳಿದಾಗ ಅವಳು ಅವರಿಗೆ--ಹಳ್ಳವನ್ನು ದಾಟಿಹೋದರು ಅಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂತಿರುಗಿದರು. ಆದರೆ ಇವರು ಹೋದ ತರುವಾಯ ಅವರು ಬಾವಿಯೊಳಗಿಂದ ಏರಿ ಹೋಗಿ ಅರಸನಾದ ದಾವೀದನಿಗೆ--ನೀನು ಶೀಘ್ರ ವಾಗಿ ಎದ್ದು ಹೊಳೆ ದಾಟಿಹೋಗು; ಯಾಕಂದರೆ ಈ ಪ್ರಕಾರ ಅಹೀತೋಫೆಲನು ನಿನಗೆ ವಿರೋಧ ವಾಗಿ ಆಲೋಚನೆ ಹೇಳಿದನು ಅಂದರು.