Psalms · chapter 77 · verse 12
Psalm 77:12 in Kannada
ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.
Ninna kelasavannellaa smarisi ninna krutyagalannu kuritu maatanaaduvenu.
Psalm 77:12 in English
- King James Version (KJV)
- I will meditate also of all thy work, and talk of thy doings.
- World English Bible (WEB)
- I will also meditate on all your work, and consider your doings.
- American Standard Version (ASV)
- I will meditate also upon all thy work, And muse on thy doings.
- Bible in Basic English (BBE)
- I will give thought to all your work, while my mind goes over your acts of power.
- Darby Translation (DBY)
- And I will meditate upon all thy work, and muse upon thy doings.
- Webster's Bible (WBS)
- I will meditate also of all thy work, and talk of thy doings.
- Young's Literal Translation (YLT)
- And I have meditated on all Thy working, And I talk concerning Thy doings.
Read in context
- 10ಇದೇ ನನ್ನ ಬಲಹೀನತೆ ಎಂದು ನಾನು ಅಂದುಕೊಂಡೆನು. ಮಹೋನ್ನತನ ಬಲಗೈಯ ವರ್ಷ ಗಳನ್ನು ಜ್ಞಾಪಕಮಾಡಿಕೊಳ್ಳುವೆನು;
- 11ಕರ್ತನ ಕ್ರಿಯೆಗಳನ್ನು ನೆನಸಿ ನಿಶ್ಚಯವಾಗಿ ಪುರಾತನ ಅದ್ಭುತ ಗಳನ್ನು ಜ್ಞಾಪಿಸಿಕೊಳ್ಳುವೆನು.
- 12ನಿನ್ನ ಕೆಲಸವನ್ನೆಲ್ಲಾ ಸ್ಮರಿಸಿ ನಿನ್ನ ಕೃತ್ಯಗಳನ್ನು ಕುರಿತು ಮಾತನಾಡುವೆನು.
- 13ಓ ದೇವರೇ, ನಿನ್ನ ಮಾರ್ಗವು ಪರಿಶುದ್ಧ ಆಲಯದಲ್ಲಿದೆ; ನಮ್ಮ ದೇವರಂತೆ ದೊಡ್ಡ ದೇವರು ಯಾರು?
- 14ಅದ್ಭುತಗಳನ್ನು ನಡಿಸುವ ದೇವರು ನೀನೇ; ನಿನ್ನ ಬಲವನ್ನು ಜನರಲ್ಲಿ ತೋರಿಸಿದ್ದೀ.
Cross references
- Psalm 71:24 ಕೀರ್ತನೆಗಳು 71:24ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.
- Psalm 145:11 ಕೀರ್ತನೆಗಳು 145:11ನಿನ್ನ ರಾಜ್ಯದ ಘನವನ್ನು ಹೇಳುವರು; ನಿನ್ನ ಪರಾಕ್ರಮವನ್ನು ನುಡಿಯುವರು.
- Psalm 105:2 ಕೀರ್ತನೆಗಳು 105:2ಆತನಿಗೆ ಹಾಡಿರಿ, ಆತನಿಗೆ ಕೀರ್ತನೆ ಹಾಡಿರಿ; ಆತನ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
- Deuteronomy 6:7 ಧರ್ಮೋಪದೇಶಕಾಂಡ 6:7ಅವು ಗಳನ್ನು ನಿನ್ನ ಮಕ್ಕಳಿಗೆ ಅಭ್ಯಾಸಮಾಡಿಸಿ ನಿನ್ನ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ಹೋಗುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ವಾಗಿ ಮಾತನಾಡಬೇಕು.
- Luke 24:14–32 ಲೂಕನು 24:14–32ಅವರು ನಡೆದ ಈ ಎಲ್ಲಾ ವಿಷಯಗಳ ಕುರಿತಾಗಿ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುತ್ತಿದ್ದರು. ಇದಾದ ಮೇಲೆ ಅವರು ಜೊತೆ ಯಾಗಿ ಮಾತನಾಡುತ್ತಾ ತರ್ಕಿಸುತ್ತಾ ಇರಲು ಯೇಸು ತಾನೇ ಅವರನ್ನು ಸವಿಾಪಿಸಿ ಅವರೊಂದಿಗೆ ಹೋದನು. ಆದರೆ ಅವರ ಕಣ್ಣುಗಳು ಮುಚ್ಚಿದ್ದರಿಂದ ಅವರು ಆತನ ಗುರುತನ್ನು ತಿಳಿಯಲಿಲ್ಲ. ಆಗ ಆತನು ಅವರಿಗೆ--ನೀವು ಮಾರ್ಗದಲ್ಲಿ ನಡೆಯುತ್ತಾ ವ್ಯಸನವುಳ್ಳವರಾಗಿ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುತ್ತಿರುವ ಈ ವಿಷಯಗಳು ಯಾವ ತರದವುಗಳು ಎಂದು ಕೇಳಿದನು. ಆಗ ಅವರಲ್ಲಿ ಕ್ಲಿಯೊಫಾಸ್ ಎಂಬ ಹೆಸರಿದ್ದವನು ಪ್ರತ್ಯುತ್ತರವಾಗಿ ಆತನಿಗೆ--ಈ ದಿವಸಗಳಲ್ಲಿ ಯೆರೂಸಲೇಮಿನೊಳಗೆ ನಡೆದಿರುವ ಸಂಗತಿಗಳನ್ನು ತಿಳಿಯದ ಪರಸ್ಥಳದವನು ನೀನೊಬ್ಬನು ಮಾತ್ರವೋ ಎಂದು ಕೇಳಿದನು. ಅದಕ್ಕೆ ಆತನು ಅವರಿಗೆ--ಯಾವ ವಿಷಯಗಳು ಎಂದು ಕೇಳಲು ಅವರು ಆತನಿಗೆ--ದೇವರ ಸನ್ನಿಧಿಯಲ್ಲಿಯೂ ಎಲ್ಲಾ ಜನರ ಮುಂದೆಯೂ ಪ್ರವಾದಿಯಾಗಿದ್ದು ಕೃತ್ಯಗಳ ಲ್ಲಿಯೂ ಮಾತುಗಳಲ್ಲಿಯೂ ಸಮರ್ಥನಾಗಿದ್ದ ನಜ ರೇತಿನ ಯೇಸುವಿನ ವಿಷಯಗಳೇ; ಪ್ರಧಾನ ಯಾಜಕರೂ ನಮ್ಮ ಅಧಿಕಾರಿಗಳೂ ಆತನನ್ನು ಮರಣ ದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿದರು. ಆದರೆ ಇಸ್ರಾಯೇಲ್ಯರನ್ನು ವಿಮೋಚಿಸುವಾತನು ಆತನೇ ಎಂದು ನಾವು ನಂಬಿದ್ದೆವು; ಇದಲ್ಲದೆ ಈ ವಿಷಯಗಳು ನಡೆದು ಇದು ಮೂರನೆಯ ದಿನವಾಗಿದೆ; ಹೌದು, ನಮ್ಮವರಲ್ಲಿ ಕೆಲವು ಸ್ತ್ರೀಯರು ಬೆಳಗಿನ ಜಾವದಲ್ಲಿ ಸಮಾಧಿಯ ಬಳಿಯಲ್ಲಿದ್ದು ಆತನ ದೇಹವನ್ನು ಕಾಣದೆ ಬಂದು ಆತನು ಜೀವದಿಂದೆ ದ್ದಿದ್ದಾನೆ ಎಂದು ದೇವದೂತರು ಹೇಳಿದ್ದನ್ನೂ ಆ ದೂತರ ದೃಶ್ಯವನ್ನು ಕಂಡದ್ದನ್ನೂ ನಮಗೆ ಹೇಳಿ ಆಶ್ಚರ್ಯವನ್ನುಂಟು ಮಾಡಿದರು. ಇದಲ್ಲದೆ ನಮ್ಮೊಂದಿಗಿದ್ದ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದಂತೆಯೇ ಕಂಡರು; ಆದರೆ ಅವರು ಆತನನ್ನು ನೋಡಲಿಲ್ಲ ಅಂದರು. ಆಗ ಆತನು ಅವರಿಗೆ--ಓ ಬುದ್ದಿಹೀನರೇ, ಪ್ರವಾದಿಗಳು ಹೇಳಿ ದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯದವರೇ, ಕ್ರಿಸ್ತನು ಇವೆಲ್ಲಾ ಶ್ರಮೆಗಳನ್ನು ಅನುಭವಿಸಿ ತನ ಮಹಿಮೆಯಲ್ಲಿ ಪ್ರವೇಶಿಸುವದು ಅಗತ್ಯವಾಗಿತ್ತಲ್ಲವೇ ಎಂದು ಹೇಳಿ ಮೋಶೆಯ ಮತ್ತು ಎಲ್ಲಾ ಪ್ರವಾದಿ ಗಳಿಂದ ಆರಂಭಿಸಿ ಸಮಸ್ತ ಬರಹಗಳಲ್ಲಿ ತನ್ನ ವಿಷಯವಾದವುಗಳನ್ನು ಅವರಿಗೆ ವಿವರಿಸಿದನು. ಅವರು ಹೋಗಬೇಕಾಗಿದ್ದ ಹಳ್ಳಿಯನ್ನು ಸವಿಾಪಿಸು ತ್ತಿರುವಾಗ ಆತನು ಮುಂದೆ ಹೋಗುವವನಂತೆ ತೋರಿಸಿಕೊಂಡನು. ಆದರೆ ಅವರು ಆತನಿಗೆ--ನಮ್ಮೊಂದಿಗೆ ಇರು; ಯಾಕಂದರೆ ಈಗ ಸಾಯಂಕಾಲ ವಾಗುತ್ತಾ ಇದೆ ಮತ್ತು ಹಗಲು ಬಹಳ ಮಟ್ಟಿಗೆ ಕಳೆಯಿತು ಎಂದು ಹೇಳಿ ಆತನನ್ನು ಬಲವಂತ ಮಾಡಿ ದರು. ಆಗ ಆತನು ಅವರೊಂದಿಗೆ ಇರುವದಕ್ಕಾಗಿ ಹೋದನು. ಇದಾದ ಮೇಲೆ ಆತನು ಅವರೊಂದಿಗೆ ಊಟಕ್ಕೆ ಕೂತುಕೊಂಡಿರಲು ರೊಟ್ಟಿಯನ್ನು ತೆಗೆದು ಕೊಂಡು ಆಶೀರ್ವದಿಸಿ ಮುರಿದು ಅವರಿಗೆ ಕೊಟ್ಟನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟದ್ದರಿಂದ ಅವರು ಆತನ ಗುರುತು ಹಿಡಿದರು; ಆತನು ಅವರ ದೃಷ್ಟಿಗೆ ಅದೃಶ್ಯನಾದನು. ಆಗ ಅವರು ಒಬ್ಬರಿಗೊಬ್ಬರು--ಆತನು ದಾರಿಯಲ್ಲಿ ನಮ್ಮ ಕೂಡ ಮಾತನಾಡುತ್ತಾ ಬರಹಗಳನ್ನು ನಮಗೆ ವಿವರಿಸಿದಾಗ ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ ಎಂದು ಅಂದುಕೊಂಡರು.
- Psalm 145:4 ಕೀರ್ತನೆಗಳು 145:4ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.
- Psalm 104:34 ಕೀರ್ತನೆಗಳು 104:34ಆತನ ವಿಷಯವಾದ ನನ್ನ ಧ್ಯಾನವು ಸಿಹಿಯಾಗಿ ರುವದು; ನಾನು ಕರ್ತನಲ್ಲಿ ಸಂತೋಷಪಡುವೆನು.ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.
- Psalm 143:5 ಕೀರ್ತನೆಗಳು 143:5ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.