Psalms · chapter 78 · verse 60
Psalm 78:60 in Kannada
ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು,
Silovina gudaaravannoo manushyarolage aatanu haakida gudaaravannoo bittu,
Psalm 78:60 in English
- King James Version (KJV)
- So that he forsook the tabernacle of Shiloh, the tent [which] he placed among men;
- World English Bible (WEB)
- so that he abandoned the tent of Shiloh, the tent which he placed among men,
- American Standard Version (ASV)
- So that he forsook the tabernacle of Shiloh, The tent which he placed among men;
- Bible in Basic English (BBE)
- So that he went away from the holy place in Shiloh, the tent which he had put among men;
- Darby Translation (DBY)
- And he forsook the tabernacle at Shiloh, the tent where he had dwelt among men,
- Webster's Bible (WBS)
- So that he forsook the tabernacle of Shiloh, the tent [which] he placed among men;
- Young's Literal Translation (YLT)
- And He leaveth the tabernacle of Shiloh, The tent He had placed among men,
Read in context
- 58ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು.
- 59ದೇವರು ಇದನ್ನು ಕೇಳಿ ಉಗ್ರನಾಗಿ ಇಸ್ರಾಯೇಲನ್ನು ಬಹು ಅಸಹ್ಯಿಸಿ ಬಿಟ್ಟು,
- 60ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು,
- 61ತನ್ನ ಬಲ ವನ್ನು ಸೆರೆಗೂ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟನು.
- 62ತನ್ನ ಜನರನ್ನು ಕತ್ತಿಗೆ ಒಪ್ಪಿಸಿಕೊಟ್ಟು ತನ್ನ ಬಾಧ್ಯತೆಗೆ ವಿರೋಧವಾಗಿ ಉಗ್ರನಾದನು.
Cross references
- Joshua 18:1 ಯೆಹೋಶುವ 18:1ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಶೀಲೋವಿನಲ್ಲಿ ಒಟ್ಟುಗೂಡಿ ಅಲ್ಲಿ ಸಭೆಯ ಗುಡಾರವನ್ನು ನಿಲ್ಲಿಸಿದರು. ದೇಶವು ಅವರ ವಶವಾಯಿತು.
- 1 Samuel 4:4–11 1 ಸಮುವೇಲನು 4:4–11ಹಾಗೆಯೇ ಜನರನ್ನು ಕೆರೂಬಿಗಳ ಮಧ್ಯ ದಲ್ಲಿರುವ ಸೈನ್ಯಗಳ ಕರ್ತನ ಒಡಂಬಡಿಕೆಯ ಮಂಜೂ ಷವನ್ನು ತಕ್ಕೊಂಡು ಬರುವಂತೆ ಶೀಲೋವಿಗೆ ಕಳು ಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು; ಕರ್ತನ ಒಡಂಬಡಿ ಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ ಇಸ್ರಾಯೇ ಲ್ಯರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು. ಅವರು ಆರ್ಭಟಿಸುವ ಶಬ್ದ ವನ್ನು ಫಿಲಿಷ್ಟಿಯರು ಕೇಳಿದಾಗ--ಇಬ್ರಿಯರ ಪಾಳೆ ಯದ ಈ ಮಹಾ ಆರ್ಭಟವೇನು ಎಂದು ಹೇಳಿ ಕರ್ತನ ಒಡಂಬಡಿಕೆಯ ಮಂಜೂಷವು ಪಾಳೆಯದಲ್ಲಿ ಬಂತೆಂದು ತಿಳುಕೊಂಡರು. ಕರ್ತನು ಪಾಳೆಯದಲ್ಲಿ ಬಂದನೆಂದು ಹೇಳಿಕೊಂಡು ಫಿಲಿಷ್ಟಿಯರು ಭಯ ಪಟ್ಟು--ನಮಗೆ ಅಯ್ಯೋ! ಪೂರ್ವದಲ್ಲಿ ಇಂಥದ್ದು ಆಗಿರಲಿಲ್ಲ. ನಮಗೆ ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವನಾರು ಐಗುಪ್ತ್ಯರನ್ನು ಅರಣ್ಯದಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ. ಓ ಫಿಲಿಷ್ಟಿಯರೇ, ನೀವು ಬಲಗೊಂಡು ಧೈರ್ಯವುಳ್ಳ ಮನುಷ್ಯರಂತೆ ಇರ್ರಿ; ಇಬ್ರಿಯರು ನಿಮಗೆ ಸೇವೆಮಾಡಿದ ಪ್ರಕಾರ ನೀವು ಅವರಿಗೆ ಸೇವೆಮಾಡದ ಹಾಗೆ ಧೈರ್ಯವುಳ್ಳ ಮನುಷ್ಯರಂತೆ ಇದ್ದು ಯುದ್ಧಮಾಡಿರೆಂದು ಹೇಳಿ ಕೊಂಡರು. ಫಿಲಿಷ್ಟಿಯರು ಯುದ್ಧಮಾಡಿದರು. ಇಸ್ರಾಯೇಲ್ಯರು ಹೊಡೆಯಲ್ಪಟ್ಟು ಅವರು ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಅಲ್ಲಿ ಮಹಾಸಂಹಾರ ವಾಯಿತು. ಯಾಕಂದರೆ ಇಸ್ರಾಯೇಲಿನ ಮೂವತ್ತು ಸಾವಿರ ಕಾಲಾಳುಗಳು ಮಡಿದರು. ದೇವರ ಮಂಜೂಷವು ಶತ್ರುವಶವಾಯಿತು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಕೊಲ್ಲಲ್ಪಟ್ಟರು.
- Jeremiah 26:6–9 ಯೆರೆಮೀಯ 26:6–9ಆಗ ನಾನು ಈ ಮನೆಯನ್ನು ಶಿಲೋವಿನ ಹಾಗೆ ಮಾಡುತ್ತೇನೆ; ಈ ಪಟ್ಟಣವನ್ನು ಭೂಮಿಯ ಎಲ್ಲಾ ಜನಾಂಗಗಳಿಗೆ ಶಾಪಕ್ಕೆ ಗುರಿಯಾಗುವಂತೆ ಮಾಡುತ್ತೇನೆ ಅಂದನು. ಹೀಗೆ ಯೆರೆವಿಾಯನು ಈ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಹೇಳುತ್ತಿರಲಾಗಿ ಯಾಜಕರೂ ಪ್ರವಾದಿಗಳೂ ಜನ ರೆಲ್ಲರೂ ಕೇಳುತ್ತಿದ್ದರು. ಯೆರೆವಿಾಯನು ತಾನು ಜನರೆಲ್ಲರಿಗೆ ಹೇಳಬೇಕೆಂದು ಕರ್ತನು ಆಜ್ಞಾಪಿಸಿ ದ್ದನ್ನೆಲ್ಲಾ ಹೇಳಿ ತೀರಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಹಿಡಿದು--ನೀನು ನಿಶ್ಚಯವಾಗಿ ಸಾಯಬೇಕು ಅಂದರು. ಈ ಮನೆಯು ಶಿಲೋವಿನ ಹಾಗೆ ಆಗುವದೆಂದೂ ಈ ಪಟ್ಟಣವು ನಿವಾಸಿಗಳಿಲ್ಲದೆ ಹಾಳಾಗುವದೆಂದೂ ಕರ್ತನ ಹೆಸರಿನಲ್ಲಿ ಯಾಕೆ ನೀನು ಪ್ರವಾದಿಸಿದ್ದೀ ಅಂದರು. ಆಗ ಜನರೆಲ್ಲರೂ ಕರ್ತನ ಆಲಯದಲ್ಲಿ ಯೆರೆವಿಾಯನಿಗೆ ವಿರೋಧವಾಗಿ ಕೂಡಿಕೊಂಡರು.
- Jeremiah 7:12–14 ಯೆರೆಮೀಯ 7:12–14ಆದರೆ ಈಗ ಶಿಲೋವಿನಲ್ಲಿದ್ದ ನನ್ನ ಸ್ಥಳಕ್ಕೆ ಅಂದರೆ ನಾನು ಮೊದಲು ನನ್ನ ಹೆಸರನ್ನು ಇಟ್ಟಲ್ಲಿಗೆ ಹೋಗಿರಿ; ಅದಕ್ಕೆ ನಾನು ನನ್ನ ಜನರಾದ ಇಸ್ರಾಯೇಲಿನ ಕೆಟ್ಟತನದ ನಿಮಿತ್ತ ಏನು ಮಾಡಿದೆನೆಂದು ನೋಡಿರಿ. ಈಗ ಕರ್ತನು ಅನ್ನುವದೇನಂದರೆ--ನೀವು ಈ ಕೆಲಸಗಳ ನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತಾಡಿದರೂ ನೀವು ಕೇಳದೆ ಹೋದಿರಿ. ನಾನು ನಿಮ್ಮನ್ನು ಕರೆದರೂ ನೀವು ಉತ್ತರ ಕೊಡದೆ ಹೋದಿರಿ. ಆದಕಾರಣ ನನ್ನ ಹೆಸರಿನಿಂದ ಕರೆ ಯಲ್ಪಟ್ಟಂಥ ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ ನಿಮ್ಮ ಪಿತೃಗಳಿಗೂ ಕೊಟ್ಟ ಸ್ಥಳಕ್ಕೂ ಶಿಲೋವಿಗೆ ಮಾಡಿದ ಹಾಗೆ ಮಾಡುವೆನು.
- 1 Samuel 1:3 1 ಸಮುವೇಲನು 1:3ಅವನು ಸೈನ್ಯಗಳ ಕರ್ತ ನನ್ನು ಆರಾಧಿಸುವದಕ್ಕೂ ಆತನಿಗೆ ಬಲಿಯನ್ನು ಅರ್ಪಿಸುವದಕ್ಕೂ ಪ್ರತಿ ವರುಷ ತನ್ನ ಪಟ್ಟಣದಿಂದ ಶೀಲೋವಿಗೆ ಹೋಗುತ್ತಿದ್ದನು. ಕರ್ತನ ಯಾಜಕ ರಾದ ಹೊಫ್ನಿಯೂ ಫೀನೆಹಾಸನೂ ಎಂಬ ಏಲಿಯ ಮಕ್ಕಳಿಬ್ಬರು ಅಲ್ಲಿ ಇದ್ದರು.