Psalms · chapter 79 · verse 12
Psalm 79:12 in Kannada
ಓ ಕರ್ತನೇ, ಅವರು ನಿನ್ನನ್ನು ನಿಂದಿಸಿದ ನಿಂದೆ ಯನ್ನು ನಮ್ಮ ನೆರೆಯವರಿಗೆ ಏಳರಷ್ಟು ಅವರ ಉಡಿ ಯಲ್ಲಿ ತಿರಿಗಿ ಹಾಕು.ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.
O kartane, avaru ninnannu nindisida ninde yannu namma nereyavarige elarashtu avara udi yalli tirigi haaku.aaga ninna janaroo ninna hullugaavalina kurigaloo aagiruva naavu endendigoo ninnannu kondaadi talatalaantarakkoo ninna stotravannu saaruvevu.
Psalm 79:12 in English
- King James Version (KJV)
- And render unto our neighbours sevenfold into their bosom their reproach, wherewith they have reproached thee, O Lord.
- World English Bible (WEB)
- Pay back to our neighbors seven times into their bosom their reproach with which they have reproached you, Lord.
- American Standard Version (ASV)
- And render unto our neighbors sevenfold into their bosom Their reproach, wherewith they have reproached thee, O Lord.
- Bible in Basic English (BBE)
- And give punishment seven times over into the breast of our neighbours for the bitter words which they have said against you, O Lord.
- Darby Translation (DBY)
- And render unto our neighbours, sevenfold into their bosom, their reproach, wherewith they have reproached thee, O Lord.
- Webster's Bible (WBS)
- And render to our neighbors seven-fold into their bosom their reproach, with which they have reproached thee, O LORD.
- Young's Literal Translation (YLT)
- And turn Thou back to our neighbours, Sevenfold unto their bosom, their reproach, Wherewith they reproached Thee, O Lord.
Read in context
- 10ಅವರ ದೇವರು ಎಲ್ಲಿ ಎಂದು ಅನ್ಯಜನಾಂಗಗಳು ಯಾಕೆ ಹೇಳಬೇಕು? ಚೆಲ್ಲಿರುವ ನಿನ್ನ ಸೇವಕರ ರಕ್ತದ ಪ್ರತಿ ದಂಡನೆಯನ್ನು ನಮ್ಮ ಕಣ್ಣುಗಳ ಮುಂದೆ ಅನ್ಯ ಜನಾಂಗಗಳಲ್ಲಿ ತಿಳಿಯಲ್ಪಡಲಿ.
- 11ಸೆರೆಯವನ ನಿಟ್ಟುಸಿರು ನಿನ್ನ ಮುಂದೆ ಬರಲಿ--ನಿನ್ನ ಮಹಾ ಶಕ್ತಿಯಿಂದ ಸಾಯುವದಕ್ಕಿರುವವರನ್ನು ಕಾಪಾಡು.
- 12ಓ ಕರ್ತನೇ, ಅವರು ನಿನ್ನನ್ನು ನಿಂದಿಸಿದ ನಿಂದೆ ಯನ್ನು ನಮ್ಮ ನೆರೆಯವರಿಗೆ ಏಳರಷ್ಟು ಅವರ ಉಡಿ ಯಲ್ಲಿ ತಿರಿಗಿ ಹಾಕು.ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.
- 13ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.
Cross references
- Jeremiah 32:18 ಯೆರೆಮೀಯ 32:18ನೀನು ಸಾವಿರಾರು ತಲೆಗಳ ವರೆಗೆ ಪ್ರೀತಿ, ದಯೆ ತೋರಿಸಿ ತಂದೆಗಳ ಅಕ್ರಮವನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸಲ್ಲಿಸುವವನಾಗಿದ್ದೀ; ಮಹತ್ವ ವುಳ್ಳವನೂ ಪರಾಕ್ರಮವುಳ್ಳ ದೇವರೂ ಸೈನ್ಯಗಳ ಕರ್ತನೂ ಎಂಬದು ಆತನ ಹೆಸರು.
- Genesis 4:15 ಆದಿಕಾಂಡ 4:15ಆದದರಿಂದ ಕರ್ತನು ಅವನಿಗೆ--ಕಾಯಿನನನ್ನು ಕೊಲ್ಲುವವನು ಯಾವನೋ ಅವನು ಏಳರಷ್ಟು ಪ್ರತಿದಂಡನೆ ಹೊಂದುವನು ಎಂದು ಹೇಳಿದನು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಕರ್ತನು ಅವನ ಮೇಲೆ ಒಂದು ಗುರುತು ಇಟ್ಟನು.
- Leviticus 26:21 ಯಾಜಕಕಾಂಡ 26:21ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧ ವಾಗಿ ನಡೆದರೆ ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ನಿಮ್ಮ ಮೇಲೆ ವ್ಯಾಧಿಗಳನ್ನು ಬರಮಾಡುವೆನು.
- Proverbs 6:31 ಜ್ಞಾನೋಕ್ತಿಗಳು 6:31ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡುವನು; ತನ್ನ ಮನೆಯ ಆಸ್ತಿಯನ್ನೆಲ್ಲಾ ಅವನು ಕೊಡುವನು.
- Psalm 74:18–22 ಕೀರ್ತನೆಗಳು 74:18–22ಓ ಕರ್ತನೇ, ವೈರಿಯು ನಿಂದಿಸಿ ಮೂರ್ಖರು ನಿನ್ನ ನಾಮವನ್ನು ದೂಷಿಸಿದ್ದನ್ನು ಜ್ಞಾಪಿಸಿಕೋ. ನಿನ್ನ ಬೆಳವಕ್ಕಿಯ ಪ್ರಾಣವನ್ನು ದುಷ್ಟರ ಸಮೂ ಹಕ್ಕೆ ಒಪ್ಪಿಸ ಬೇಡ; ನಿನ್ನ ದೀನರ ಸಭೆಯನ್ನು ಸದಾ ಕಾಲಕ್ಕೆ ಮರೆತುಬಿಡಬೇಡ. ಒಡಂಬಡಿಕೆಗೆ ಗೌರ ವವನ್ನು ಕೊಡು; ಭೂಮಿಯ ಕತ್ತಲಿನ ಸ್ಥಳಗಳು ಕ್ರೂರತನದ ನಿವಾಸಗಳಿಂದ ತುಂಬಿಯವೆ. ಕುಗ್ಗಿ ದವನು ಅವಮಾನಕ್ಕೆ ತಿರಿಗಿಕೊಳ್ಳದೆ ಇರಲಿ; ದೀನನೂ ಬಡವನೂ ನಿನ್ನ ಹೆಸರನ್ನು ಸ್ತುತಿಸಲಿ. ಓ ದೇವರೇ, ಏಳು; ನಿನ್ನ ಸ್ವಂತ ವ್ಯಾಜ್ಯವನ್ನು ವಿವಾದಿಸು; ದಿನವೆಲ್ಲಾ ಮೂರ್ಖನು ನಿನ್ನನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪ ಕಮಾಡಿಕೋ.ನಿನ್ನ ವೈರಿಗಳ ಸ್ವರವನ್ನು ಮರೆತು ಬಿಡಬೇಡ; ನಿನ್ನ ವಿರೋಧಿಗಳ ಘೋಷವು ಯಾವಾ ಗಲೂ ಏಳುತ್ತದೆ.
- Leviticus 26:28 ಯಾಜಕಕಾಂಡ 26:28ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.
- Luke 6:38 ಲೂಕನು 6:38ಕೊಡಿರಿ, ಆಗ ನಿಮಗೂ ಕೊಡ ಲ್ಪಡುವದು. ಒಳ್ಳೆಯ ಅಳತೆ ಒತ್ತಿ ಅಲ್ಲಾಡಿಸಿ ಹೊರಗೆ ಚೆಲ್ಲುವಂತೆ ಮನುಷ್ಯರು ನಿಮ್ಮ ಉಡಿಲಲ್ಲಿ ಹಾಕುವರು; ಯಾಕಂದರೆ ನೀವು ಅಳೆಯುವ ಅಳತೆಯಿಂದಲೇ ನಿಮಗೂ ತಿರಿಗಿ ಅಳೆಯಲ್ಪಡುವದು.
- Psalm 44:16 ಕೀರ್ತನೆಗಳು 44:16ದಿನವೆಲ್ಲಾ ನನ್ನ ಗಲಿಬಿಲಿಯು ನನ್ನ ಮುಂದೆ ಇದೆ; ನನ್ನ ಮುಖದ ನಾಚಿಕೆಯು ನನ್ನನ್ನು ಮುಚ್ಚಿಯದೆ.
- Isaiah 65:5–7 ಯೆಶಾಯ 65:5–7ನಿನ್ನ ಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ, ಯಾಕಂದರೆ ನಿನಗಿಂತ ನಾನು ಪರಿಶುದ್ಧನಾಗಿದ್ದೇ ನೆಂದು ಹೇಳುವವರು; ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ ಹಗಲೆಲ್ಲಾ ಉರಿಯುವ ಬೆಂಕಿ ಯಾಗಿಯೂ ಇದ್ದಾರೆ. ಇಗೋ, ನನ್ನ ಮುಂದೆ ಅದು ಬರೆಯಲ್ಪಟ್ಟಿದೆ; ನಾನು ಸುಮ್ಮನಿರದೆ ಪ್ರತಿಫಲ ಕೊಡುತ್ತೇನೆ; ಅವರ ಉಡಿಯಲ್ಲಿ ಪ್ರತಿಫಲ ಕೊಡು ತ್ತೇನೆ. ನಿಮ್ಮ ಅಕ್ರಮಗಳಿಗೂ ನಿಮ್ಮ ತಂದೆಗಳ ಅಕ್ರ ಮಗಳಿಗೂ ಪ್ರತಿಫಲ ಕೊಡುತ್ತೇನೆಂದು ಕರ್ತನು ಹೇಳುತ್ತಾನೆ; ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು ಗುಡ್ಡಗಳ ಮೇಲೆ ನನ್ನನ್ನು ದೂಷಿಸಿದರಲ್ಲಾ. ಹೀಗಿರು ವದರಿಂದ ಅವರ ಹಿಂದಿನ ಕೆಲಸಗಳನ್ನು ಅವರ ಉಡಿ ಯಲ್ಲಿ ಅಳೆದುಬಿಡುವೆನು.
- Psalm 74:10 ಕೀರ್ತನೆಗಳು 74:10ಓ ದೇವರೇ, ವೈರಿಯು ನಿಂದಿಸುವದು ಎಷ್ಟರ ವರೆಗೆ? ಶತ್ರುವು ನಿನ್ನ ಹೆಸರನ್ನು ಎಂದೆಂದಿಗೂ ದೂಷಿ ಸುವನೋ?