Psalms · chapter 80 · verse 3
Psalm 80:3 in Kannada
ಓ ದೇವರೇ, ನಮ್ಮನ್ನು ಮತ್ತೆ ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸುವಂತೆ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
O devare, nammannu matte tirugisi ninna mukhavannu prakaashisuvante maadu; aaga naavu rakshisalpaduvevu.
Psalm 80:3 in English
- King James Version (KJV)
- Turn us again, O God, and cause thy face to shine; and we shall be saved.
- World English Bible (WEB)
- Turn us again, God. Cause your face to shine, and we will be saved.
- American Standard Version (ASV)
- Turn us again, O God; And cause thy face to shine, and we shall be saved.
- Bible in Basic English (BBE)
- Take us back again, O God; let us see the shining of your face, and let us be safe.
- Darby Translation (DBY)
- O God, restore us; and cause thy face to shine, and we shall be saved.
- Webster's Bible (WBS)
- Turn us again, O God, and cause thy face to shine; and we shall be saved.
- Young's Literal Translation (YLT)
- O God, cause us to turn back, And cause Thy face to shine, and we are saved.
Read in context
- 1ಯೋಸೇಫ್ಯರನ್ನು ಮಂದೆಯಂತೆ ನಡಿಸುವಾತನೇ, ಇಸ್ರಾಯೇಲ್ಯರ ಕುರುಬನೇ, ಕಿವಿಗೊಡು; ಕೆರೂಬಿಗಳ ಮಧ್ಯದಲ್ಲಿ ವಾಸಿಸುವಾತನೇ, ಪ್ರಕಾಶಿಸು.
- 2ಎಫ್ರಾಯಾಮ್ ಬೆನ್ಯಾವಿಾನ್ ಮನಸ್ಸೆ ಯರ ಮುಂದೆ ನಿನ್ನ ಪರಾಕ್ರಮವನ್ನು ತೋರಿಸಿ ನಮ್ಮನ್ನು ರಕ್ಷಿಸು.
- 3ಓ ದೇವರೇ, ನಮ್ಮನ್ನು ಮತ್ತೆ ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸುವಂತೆ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
- 4ಸೈನ್ಯಗಳ ದೇವರಾದ ಓ ಕರ್ತನೇ, ಎಷ್ಟರವರೆಗೆ ನಿನ್ನ ಜನರ ಪ್ರಾರ್ಥನೆಗೆ ವಿರೋಧವಾಗಿ ಕೋಪ ಗೊಳ್ಳುತ್ತೀ?
- 5ಕಣ್ಣೀರಿನ ರೊಟ್ಟಿಯನ್ನು ಅವರಿಗೆ ತಿನ್ನಿಸಿ, ದೊಡ್ಡ ಅಳತೆಯಿಂದ ಕಣ್ಣೀರನ್ನು ಕುಡಿಯಲು ಕೊಡುತ್ತೀ.
Cross references
- Lamentations 5:21 ಪ್ರಲಾಪಗಳು 5:21ಕರ್ತನೇ, ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ಆಗ ನಾವು ತಿರುಗಿಕೊಳ್ಳುವೆವು, ಹಳೆಯ ದಿನಗಳ ಹಾಗೆ ನಮ್ಮ ದಿನಗಳನ್ನು ನೂತನಮಾಡು.ಆದರೆ ನಮ್ಮನ್ನು ಪೂರ್ಣವಾಗಿ ತಳ್ಳಿಬಿಟ್ಟಿರುವಿ; ನಮಗೆ ವಿರುದ್ಧವಾಗಿ ನೀನು ಬಹಳ ಕೋಪಗೊಂಡಿರುವಿ.
- Numbers 6:25–26 ಅರಣ್ಯಕಾಂಡ 6:25–26ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ. ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಎತ್ತಿ ನಿನಗೆ ಸಮಾಧಾನ ಅನುಗ್ರಹಿಸಲಿ.ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
- Psalm 85:4 ಕೀರ್ತನೆಗಳು 85:4ನಮ್ಮ ರಕ್ಷಣೆಯ ಓ ದೇವರೇ, ನಮ್ಮ ಕಡೆಗೆ ತಿರುಗು; ನಮ್ಮ ಮೇಲಿರುವ ನಿನ್ನ ಕೋಪವನ್ನು ತೊಲ ಗಿಸು.
- Psalm 4:6 ಕೀರ್ತನೆಗಳು 4:6ನಮಗೆ ಒಳ್ಳೇದನ್ನು ಮಾಡುವವರು ಯಾರೆಂದು ಹೇಳುವವರು ಅನೇಕರು. ಕರ್ತನೇ, ನಿನ್ನ ಮುಖದ ಬೆಳಕನ್ನು ನಮ್ಮ ಮೇಲೆ ಪ್ರಕಾಶಗೊಳಿಸು.
- Psalm 80:7 ಕೀರ್ತನೆಗಳು 80:7ಸೈನ್ಯಗಳ ಓ ದೇವರೇ, ನೀನು ನಮ್ಮನ್ನು ಮತ್ತೆ ತಿರಿಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
- Psalm 80:19 ಕೀರ್ತನೆಗಳು 80:19ಸೈನ್ಯಗಳ ದೇವರಾದ ಓ ಕರ್ತನೇ, ಮತ್ತೆ ನಮ್ಮನ್ನು ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
- 1 Kings 18:37 1 ಅರಸುಗಳು 18:37ನೀನು ದೇವರಾದ ಕರ್ತನೆಂದೂ ನೀನು ಅವರ ಹೃದಯವನ್ನು ಮರಳಿ ತಿರಿಗಿಸುತ್ತಿ ಎಂದೂ ಈ ಜನವು ತಿಳಿಯುವ ಹಾಗೆ ನನಗೆ ಉತ್ತರಕೊಡು, ಓ ಕರ್ತನೇ, ನನಗೆ ಉತ್ತರಕೊಡು ಎಂದು ಬೇಡಿದನು.
- Psalm 80:1 ಕೀರ್ತನೆಗಳು 80:1ಯೋಸೇಫ್ಯರನ್ನು ಮಂದೆಯಂತೆ ನಡಿಸುವಾತನೇ, ಇಸ್ರಾಯೇಲ್ಯರ ಕುರುಬನೇ, ಕಿವಿಗೊಡು; ಕೆರೂಬಿಗಳ ಮಧ್ಯದಲ್ಲಿ ವಾಸಿಸುವಾತನೇ, ಪ್ರಕಾಶಿಸು.
- Psalm 67:1 ಕೀರ್ತನೆಗಳು 67:1ದೇವರು ನಮಗೆ ಕರುಣೆಯುಳ್ಳವನಾಗಿದ್ದು ನಮ್ಮನ್ನು ಆಶೀರ್ವದಿಸಲಿ; ಆತನು ತನ್ನ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ. ಸೆಲಾ.
- Psalm 60:1 ಕೀರ್ತನೆಗಳು 60:1ಓ ದೇವರೇ, ಕೋಪಿಸಿಕೊಂಡು ನಮ್ಮನ್ನು ತಳ್ಳಿ ಚದರಿಸಿಬಿಟ್ಟಿದ್ದೀ; ಮತ್ತೆ ನಮ್ಮ ಕಡೆಗೆ ತಿರುಗಿಕೋ.
- Psalm 119:135 ಕೀರ್ತನೆಗಳು 119:135ನಿನ್ನ ಮುಖವನ್ನು ನಿನ್ನ ಸೇವಕನ ಮೇಲೆ ಪ್ರಕಾಶಿಸ ಮಾಡು ಮತ್ತು ನಿನ್ನ ನಿಯಮಗಳನ್ನು ನನಗೆ ಕಲಿಸು.
- Jeremiah 31:18–19 ಯೆರೆಮೀಯ 31:18–19ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ. ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು.