Psalms · chapter 89 · verse 19
Psalm 89:19 in Kannada
ಆಗ ದರ್ಶನದಲ್ಲಿ ನಿನ್ನ ಪರಿಶುದ್ಧನ ಸಂಗಡ ಮಾತಾಡಿ ಹೇಳಿದ್ದೇನಂದರೆ --ಪರಾಕ್ರಮಶಾಲಿಯ ಮೇಲೆ ಸಹಾಯವನ್ನು ಇಟ್ಟಿ ದ್ದೇನೆ. ಆಯಲ್ಪಟ್ಟವನನ್ನು ಜನರೊಳಗಿಂದ ಉನ್ನತಕ್ಕೇರಿ ಸಿದ್ದೇನೆ.
Aaga darshanadalli ninna parishuddhana sangada maataadi heliddenandare --paraakramashaaliya mele sahaayavannu itti ddene. Aayalpattavanannu janarolaginda unnatakkeri siddene.
Psalm 89:19 in English
- King James Version (KJV)
- Then thou spakest in vision to thy holy one, and saidst, I have laid help upon [one that is] mighty; I have exalted [one] chosen out of the people.
- World English Bible (WEB)
- Then you spoke in vision to your saints, and said, “I have given strength to the warrior. I have exalted a young man from the people.
- American Standard Version (ASV)
- Then thou spakest in vision to thy saints, And saidst, I have laid help upon one that is mighty; I have exalted one chosen out of the people.
- Bible in Basic English (BBE)
- Then your voice came to your holy one in a vision, saying, I have put the crown on a strong one, lifting up one taken from among the people.
- Darby Translation (DBY)
- Then thou spakest in vision of thy Holy One, and saidst, I have laid help upon a mighty one; I have exalted one chosen out of the people.
- Webster's Bible (WBS)
- Then thou didst speak in vision to thy holy one, and say, I have laid help upon [one that is] mighty; I have exalted [one] chosen out of the people.
- Young's Literal Translation (YLT)
- Then Thou hast spoken in vision, To Thy saint, yea, Thou sayest, I have placed help upon a mighty one, Exalted a chosen one out of the people,
Read in context
- 17ಅವರ ಬಲದ ಮಹಿಮೆಯು ನೀನೇ ಮತ್ತು ನಿನ್ನ ಕಟಾಕ್ಷದಿಂದ ನಮ್ಮ ಕೊಂಬು ಉನ್ನತವಾಗುವದು.
- 18ನಮ್ಮ ಗುರಾಣಿಯು ಕರ್ತನೇ; ನಮ್ಮ ಅರಸನು ಇಸ್ರಾಯೇಲಿನ ಪರಿಶುದ್ಧನೇ.
- 19ಆಗ ದರ್ಶನದಲ್ಲಿ ನಿನ್ನ ಪರಿಶುದ್ಧನ ಸಂಗಡ ಮಾತಾಡಿ ಹೇಳಿದ್ದೇನಂದರೆ --ಪರಾಕ್ರಮಶಾಲಿಯ ಮೇಲೆ ಸಹಾಯವನ್ನು ಇಟ್ಟಿ ದ್ದೇನೆ. ಆಯಲ್ಪಟ್ಟವನನ್ನು ಜನರೊಳಗಿಂದ ಉನ್ನತಕ್ಕೇರಿ ಸಿದ್ದೇನೆ.
- 20ನನ್ನ ಸೇವಕನಾದ ದಾವೀದನನ್ನು ಕಂಡು ಕೊಂಡಿದ್ದೇನೆ; ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.
- 21ಅವನ ಸಂಗಡಲೇ ನನ್ನ ಕೈ ಸ್ಥಿರವಾಗಿರುವದು; ನನ್ನ ತೋಳು ಅವನನ್ನು ಬಲಪಡಿಸು ವುದು.
Cross references
- 1 Samuel 16:18 1 ಸಮುವೇಲನು 16:18ಆಗ ಸೇವಕರಲ್ಲಿ ಒಬ್ಬನು ಅವನಿಗೆ ಪ್ರತ್ಯುತ್ತರವಾಗಿ--ಇಗೋ, ಬಾರಿಸಲು ನಿಪುಣನಾ ದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದೆನು. ಅವನು ಧೈರ್ಯಸ್ಥನೂ ಪರಾಕ್ರಮ ಶಾಲಿಯೂ ರಣಶೂರನಾಗಿಯೂ ಕಾರ್ಯಗಳಲ್ಲಿ ಬುದ್ಧಿವಂತನಾಗಿಯೂ ಚೆಲುವಿಕೆಯುಳ್ಳವನಾಗಿಯೂ ಇದ್ದಾನೆ. ಇದಲ್ಲದೆ ಕರ್ತನು ಅವನ ಸಂಗಡ ಇದ್ದಾನೆ ಅಂದನು.
- 1 Kings 11:34 1 ಅರಸುಗಳು 11:34ಆದರೂ ನನ್ನ ಆಜ್ಞೆಗಳನ್ನೂ ಕಟ್ಟಳೆ ಗಳನ್ನೂ ಕೈಕೊಂಡದ್ದರಿಂದ ನಾನು ಆದು ತೆಗೆದು ಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದು ಕೊಳ್ಳದೆ ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು.
- 2 Samuel 7:8–17 2 ಸಮುವೇಲನು 7:8–17ಈಗ ನೀನು ನನ್ನ ಸೇವಕನಾದ ದಾವೀದನಿಗೆ--ನೀನು ನನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿರುವಂತೆ ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡೆನು; ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಕೂಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಕಡಿದುಬಿಟ್ಟು ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ದೊಡ್ಡ ಹೆಸರನ್ನು ನಿನಗೆ ಉಂಟುಮಾಡಿದೆನು. ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಏರ್ಪಡಿಸಿ ಅವರು ಇನ್ನು ಮೇಲೆ ಚಲಿಸದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಡು ವೆನು. ಪೂರ್ವದ ಹಾಗೆಯೂ ನಾನು ನನ್ನ ಜನವಾದ ಇಸ್ರಾಯೇಲಿನ ಮೇಲೆ ನ್ಯಾಯಾಧಿಪತಿಗಳನ್ನು ನೇಮಿ ಸಿದ ದಿವಸದಿಂದಾದ ಹಾಗೆಯೂ ದುಷ್ಟತನದ ಮಕ್ಕಳು ಇನ್ನು ಮೇಲೆ ಅವರನ್ನು ಕುಂದಿಸದೆ ಇರುವರು. ನಿನ್ನನ್ನು ನಿನ್ನ ಎಲ್ಲಾ ಶತ್ರುಗಳಿಗೆ ತಪ್ಪಿಸಿ ನಿನಗೆ ವಿಶ್ರಾಂತಿಯನ್ನು ಉಂಟುಮಾಡಿದೆನು. ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು. ಅವನು ನನ್ನ ಹೆಸ ರಿಗೆ ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯದ ಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು. ನಾನು ಅವನ ತಂದೆಯಾಗಿರುವೆನು; ಅವನು ನನ್ನ ಮಗನಾಗಿರುವನು. ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು. ಆದರೆ ನಾನು ನಿನ್ನ ಮುಂದೆ ತೊರೆದುಬಿಟ್ಟ ಸೌಲ ನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ನಿನ್ನ ಮನೆಯೂ ನಿನ್ನ ರಾಜ್ಯವೂ ನಿನ್ನ ಮುಂದೆ ಸದಾಕಾಲಕ್ಕೂ ಸ್ಥಿರಮಾಡಲ್ಪಡುವವು; ನಿನ್ನ ಸಿಂಹಾಸನವು ಯುಗ ಯುಗಾಂತರಕ್ಕೂ ಶಾಶ್ವತವಾಗಿರುವದು ಎಂದು ಹೇಳಿ ದನು. ನಾತಾನನು ಈ ಸಕಲ ವಾಕ್ಯಗಳ ಪ್ರಕಾರ ವಾಗಿಯೂ ಸಕಲ ದರ್ಶನದ ಪ್ರಕಾರವಾಗಿಯೂ ದಾವೀದನ ಸಂಗಡ ಮಾತನಾಡಿದನು.
- Isaiah 9:6 ಯೆಶಾಯ 9:6ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
- Philippians 2:6–11 ಫಿಲಿಪ್ಪಿಯವರಿಗೆ 2:6–11ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವದು.
- Hebrews 2:9–17 ಇಬ್ರಿಯರಿಗೆ 2:9–17ಆದರೂ ದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ; ಆತನು ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು; ಆತನು ದೇವರ ಕೃಪೆ ಯಿಂದ ಎಲ್ಲರಿಗೋಸ್ಕರ ಮರ ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು. ಯಾಕಂದರೆ ಪವಿತ್ರ ಮಾಡುವಾತನೂ ಪವಿತ್ರರಾದವರೆಲ್ಲರೂ ಒಬ್ಬಾತನಿಗೆ ಸಂಬಂಧಪಟ್ಟವರಾಗಿದ್ದಾರೆ. ಈ ಕಾರಣದಿಂದ ಆತನು ಅವರನ್ನು ಸಹೋದರರೆಂದು ಕರೆಯುವದಕ್ಕೆ ನಾಚಿಕೆ ಪಡದೆ-- ನಿನ್ನ ನಾಮವನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿ ಪದಗಳನ್ನು ಹಾಡುವೆನು ಎಂತಲೂ ನಾನು ಆತನ ಮೇಲೆ ಭರವಸವಿಡುವೆನು ಎಂತಲೂ ತಿರಿಗಿ--ಇಗೋ, ನಾನೂ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಎಂತಲೂ ಹೇಳುತ್ತಾನೆ. ಇದಲ್ಲದೆ ಮಕ್ಕಳು ರಕ್ತಮಾಂಸಗಳಲ್ಲಿ ಪಾಲುಗಾರರಾದದರಿಂದ ಆತನು ಸಹ ಅವರಂತೆಯೇ ಆದನು; ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶ ಮಾಡುವದಕ್ಕೂ ಮರಣ ಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಗಳಲ್ಲಿ ಭಾಗ ವಹಿಸಿದನು. ಆತನು ನಿಜವಾಗಿಯೂ ದೂತರ ಸ್ವಭಾವವನ್ನು ಧರಿಸಿಕೊಳ್ಳದೆ ಅಬ್ರಹಾಮನ ಸಂತತಿಯ ಸ್ವಭಾವವನ್ನು ಧರಿಸಿಕೊಂಡನು. ಆದದರಿಂದ ಆತನು ಎಲ್ಲವುಗಳಲ್ಲಿ ತನ್ನ ಸಹೋದರರಿಗೆ ಸಮಾನ ವಾಗಿ ಮಾಡಲ್ಪಟ್ಟನು. ಹೀಗೆ ಆತನು ಜನರ ಪಾಪಗಳಿ ಗೋಸ್ಕರ ಶಾಂತಿ ಮಾಡುವದಕ್ಕೆ ದೇವರ ಕಾರ್ಯ ಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು.ತಾನೇ ಶೋಧಿಸಲ್ಪಟ್ಟು ಬಾಧೆ ಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡು ವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.
- Psalm 89:3 ಕೀರ್ತನೆಗಳು 89:3ನಾನು ಆದು ಕೊಂಡವನೊಂದಿಗೆ ಒಡಂಬಡಿಕೆ ಮಾಡಿದ್ದೇನೆ; ನನ್ನ ಸೇವಕನಾದ ದಾವೀದನಿಗೆ ಆಣೆ ಇಟ್ಟು ಹೇಳಿದ್ದೇ ನಂದರೆ--
- 2 Peter 3:2 2 ಪೇತ್ರನು 3:2ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ಅಪೊಸ್ತಲರಾದ ನಮ್ಮ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕ ಮಾಡಿಕೊಳ್ಳಬೇಕು.
- 2 Samuel 17:10 2 ಸಮುವೇಲನು 17:10ಆಗ ಸಿಂಹದ ಹೃದಯವುಳ್ಳ ಪರಾಕ್ರಮಶಾಲಿಯ ಹೃದಯವೂ ಸಹ ಸಂಪೂರ್ಣ ಕರಗುವದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ ಅವನ ಸಂಗಡ ಇರುವವರು ಪರಾ ಕ್ರಮಶಾಲಿಗಳೆಂದೂ ಇಸ್ರಾಯೇಲ್ಯರೆಲ್ಲರು ಬಲ್ಲರು.
- Revelation 3:7 ಪ್ರಕಟನೆ 3:7ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ: ಪರಿಶುದ್ಧನೂ ಸತ್ಯವಂತನೂ ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚಕೂಡದಂತೆ ತೆರೆಯು ವಾತನೂ ಯಾರು ತೆರೆಯದಂತೆ ಮುಚ್ಚುವಾತನೂ ಆಗಿರುವವನು ಹೇಳುವಂಥವುಗಳೇನಂದರೆ,
- Psalm 42:3 ಕೀರ್ತನೆಗಳು 42:3ನಿನ್ನ ದೇವರು ಎಲ್ಲಿ ಎಂದು ಅವರು ದಿನವೆಲ್ಲಾ ನನಗೆ ಹೇಳುವ ದರಿಂದ ನನ್ನ ಕಣ್ಣೀರು ನನಗೆ ಹಗಲಿರುಳು ಆಹಾರ ವಾಗಿದೆ.
- Jeremiah 30:21 ಯೆರೆಮೀಯ 30:21ಅವರ ಪ್ರಧಾನರು ಅವರೊಳಗೆ ಇರುವರು; ಅವರನ್ನಾಳುವವನು ಅವರ ಮಧ್ಯದಲ್ಲಿಂದ ಹೊರಡುವನು; ನಾನು ಅವನನ್ನು ಹತ್ತಿರ ಬರಮಾಡು ವೆನು; ಅವನು ನನಗೆ ಸವಿಾಪಿಸುವನು; ಆದರೆ ನನಗೆ ಸವಿಾಪಿಸುವದಕ್ಕೆ ತನ್ನ ಹೃದಯ ನಿಶ್ಚಯ ಮಾಡಿಕೊಂಡ ಇವನಾರೆಂದು ಕರ್ತನು ಅನ್ನುತ್ತಾನೆ.