Revelation · chapter 12 · verse 8
Revelation 12:8 in Kannada
ಆಗ ಪರಲೋಕದಲ್ಲಿ ಅವರಿಗೆ ಸ್ಥಾನವು ಇನ್ನೆಂದಿಗೂ ಇಲ್ಲದೆ ಹೋಯಿತು.
Aaga paralokadalli avarige sthaanavu innendigoo illade hoyitu.
Revelation 12:8 in English
- King James Version (KJV)
- And prevailed not; neither was their place found any more in heaven.
- World English Bible (WEB)
- They didn’t prevail. No place was found for them any more in heaven.
- American Standard Version (ASV)
- and they prevailed not, neither was their place found any more in heaven.
- Bible in Basic English (BBE)
- And they were overcome, and there was no more place for them in heaven.
- Darby Translation (DBY)
- and he prevailed not, nor was their place found any more in the heaven.
- Webster's Bible (WBS)
- And prevailed not; neither was their place found any more in heaven.
- Young's Literal Translation (YLT)
- and they did not prevail, nor was their place found any more in the heaven;
Read in context
- 6ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು; ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದನು.
- 7ಇದಲ್ಲದೆ ಪರಲೋಕದಲ್ಲಿ ಯುದ್ಧ ನಡೆಯಿತು. ವಿಾಕಾಯೇಲನೂ ಅವನ ದೂತರೂ ಘಟಸರ್ಪಕ್ಕೆ ವಿರೋಧವಾಗಿ ಯುದ್ಧಮಾಡಿದರು; ಘಟಸರ್ಪನೂ ಅವನ ದೂತರೂ ಯುದ್ದಮಾಡಿ ಸೋತು ಹೋದರು.
- 8ಆಗ ಪರಲೋಕದಲ್ಲಿ ಅವರಿಗೆ ಸ್ಥಾನವು ಇನ್ನೆಂದಿಗೂ ಇಲ್ಲದೆ ಹೋಯಿತು.
- 9ಭೂಲೋಕದವರನ್ನೆಲ್ಲಾ ಮೋಸಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾ ತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.
- 10ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.
Cross references
- Psalm 37:10 ಕೀರ್ತನೆಗಳು 37:10ಇನ್ನು ಸ್ಪಲ್ಪ ಸಮಯದಲ್ಲಿ ದುಷ್ಟನು ಇರನು; ಹೌದು, ಅವನ ಸ್ಥಳವನ್ನು ನೀನು ಜಾಗ್ರತೆಯಾಗಿ ವಿಚಾರಿಸಿದರೂ ಇಗೋ, ಅದು ಇರು ವದಿಲ್ಲ.
- Revelation 12:11 ಪ್ರಕಟನೆ 12:11ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವ ನನ್ನು ಜಯಿಸಿದರು.
- Jeremiah 1:19 ಯೆರೆಮೀಯ 1:19ಅವರು ನಿನಗೆ ವಿರೋಧವಾಗಿ ಯುದ್ಧ ಮಾಡುವರು; ಆದರೆ ನಿನ್ನನ್ನು ಗೆಲ್ಲುವದಿಲ್ಲ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.
- Jude 1:6 ಯೂದನು 1:6ತಮ್ಮ ಮೊದಲಿನ ಸ್ಥಿತಿಯನ್ನು ಕಾಪಾಡದೆ ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೂತರಿಗೆ ಆತನು ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದ ತೀರ್ಪಿಗಾಗಿ ಅವರನ್ನು ಕತ್ತಲೆ ಯೊಳಗೆ ಕಾದಿಟ್ಟಿದ್ದಾನೆ.
- Acts 1:25 ಅಪೊಸ್ತಲರ ಕೃತ್ಯಗಳು 1:25ಯೂದನು ತನ್ನ ಸ್ವಸ್ಥಳಕ್ಕೆ ಹೋಗುವ ದಕ್ಕಾಗಿ ಅಪರಾಧದ ನಿಮಿತ್ತ ಈ ಸೇವೆಯಿಂದಲೂ ಅಪೊಸ್ತಲತನದಿಂದಲೂ ಬಿದ್ದು ಹೋದನು. ಈಗ ಈ ಸೇವೆಯಲ್ಲಿಯೂ ಅಪೊಸ್ತಲತನದಿಂದಲೂ ಒಬ್ಬನು ಪಾಲುಹೊಂದುವಂತೆ ಈ ಇಬ್ಬರಲ್ಲಿ ಯಾರನ್ನು ನೀನು ಆರಿಸಿಕೊಳ್ಳುತ್ತೀಯೋ ತೋರಿಸು ಎಂದು ಹೇಳಿದರು.ತರುವಾಯ ಅವರು ತಮ್ಮ ಚೀಟುಗಳನ್ನು ಹಾಕಿದಾಗ ಚೀಟು ಮತ್ತೀಯನಿಗೆ ಬಂದದ್ದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸ ಲ್ಪಟ್ಟನು.
- Psalm 13:4 ಕೀರ್ತನೆಗಳು 13:4ನನ್ನ ಶತ್ರುವು--ಅವನನ್ನು ಗೆದ್ದೆನೆಂದು ಹೇಳದ ಹಾಗೆಯೂ ನಾನು ಕದಲುವಾಗ ನನ್ನನ್ನು ಹಿಂಸಿಸುವವರು ಉಲ್ಲಾಸಪಡದ ಹಾಗೆಯೂ ನನ್ನ ಕಣ್ಣುಗಳನ್ನು ಬೆಳಗುವ ಹಾಗೆ ಮಾಡು.
- Job 7:10 ಯೋಬನು 7:10ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು.
- Matthew 16:18 ಮತ್ತಾಯನು 16:18ನಾನು ಸಹ ನಿನಗೆ ಹೇಳುವದೇ ನಂದರೆ--ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು; ನರಕದ ದ್ವಾರಗಳು ಅದನ್ನು ಜಯಿಸಲಾರವು.
- Job 27:21–23 ಯೋಬನು 27:21–23ಮೂಡಣಗಾಳಿ ಅವನನ್ನು ಎತ್ತಿಕೊಂಡು ಹೋಗು ತ್ತದೆ; ಅವನು ಹೋಗಿಬಿಡುತ್ತಾನೆ; ಬಿರುಗಾಳಿ ಅವನನ್ನು ಅವನ ಸ್ಥಳದಿಂದ ಹಾರಿಸಿ ಬಿಡುತ್ತದೆ. ಆತನು ಕರುಣೆ ಇಲ್ಲದೆ ಅವನ ಮೇಲೆ ಹಾಕು ತ್ತಾನೆ. ಆತನ ಕೈಯಲ್ಲಿಂದ ಅವನು ಓಡಿಯೇ ಓಡುತ್ತಾನೆ.ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ. ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ.
- Romans 8:31–39 ರೋಮಾಪುರದವರಿಗೆ 8:31–39ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ದೇವರು ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೊಸ್ಕರ ಒಪ್ಪಿಸಿಕೊಟ್ಟ ಮೇಲೆ ಆತನೊಂದಿಗೆ ಎಲ್ಲವುಗಳನ್ನು ಉಚಿತವಾಗಿ ನಮಗೆ ಕೊಡದೆ ಇರುವನೇ? ದೇವರಾದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ. ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತನು ಮರಣವನ್ನು ಹೊಂದಿದ್ದಲ್ಲದೆ (ಜೀವಿತನಾಗಿ) ಎದ್ದು ದೇವರ ಬಲಗಡೆಯಲ್ಲಿ ನಮಗೋಸ್ಕರ ವಿಜ್ಞಾಪನೆ ಮಾಡು ವಾತನಾಗಿದ್ದಾನೆ; ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಬರಗಾಲವೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ. ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ. ಹೇಗಂದರೆ ಮರಣವಾಗಲಿ ಜೀವವಾಗಲಿ ದೂತರಾಗಲಿ ರಾಜತ್ವಗಳಾಗಲಿ ಅಧಿಕಾರಗಳಾಗಲಿ ಈಗಿನವುಗಳಾ ಗಲಿ ಮುಂಬರುವವುಗಳಾಗಲಿಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು. ಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.
- Jeremiah 5:22 ಯೆರೆಮೀಯ 5:22ನೀವು ನನಗೆ ಭಯಪಡುವದಿಲ್ಲವೋ? ನನ್ನ ಸಮ್ಮುಖದಲ್ಲಿ ನಡುಗುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ; ಸಮುದ್ರವು ದಾಟಕೂಡದ ಹಾಗೆ ಮರಳನ್ನು ನಿತ್ಯ ನೇಮಕದಿಂದ ನಾನು ಮೇರೆಯಾಗಿಟ್ಟಿದ್ದೇನೆ; ಅದರ ತೆರೆಗಳು ಎದ್ದರೂ ದಡ ವಿಾರಲಾರವು, ಘೋಷಿಸಿ ದರೂ ಅದನ್ನು ದಾಟಲಾರವು.
- Job 20:9 ಯೋಬನು 20:9ಅವನನ್ನು ನೋಡಿದ ಕಣ್ಣು ಇನ್ನು ನೋಡದು; ಅವನ ಸ್ಥಳವನ್ನು ಇನ್ನು ಅವನನ್ನು ಕಾಣದು.