Revelation · chapter 14 · verse 16
Revelation 14:16 in Kannada
ಮೇಘದ ಮೇಲೆ ಕೂತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು; ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
Meghada mele kootiddaatanu tanna kudugolannu bhoomiya mele haakidanu; aaga bhoomiya pairu koyyalpattitu.
Revelation 14:16 in English
- King James Version (KJV)
- And he that sat on the cloud thrust in his sickle on the earth; and the earth was reaped.
- World English Bible (WEB)
- He who sat on the cloud thrust his sickle on the earth, and the earth was reaped.
- American Standard Version (ASV)
- And he that sat on the cloud cast his sickle upon the earth; and the earth was reaped.
- Bible in Basic English (BBE)
- And he who was seated on the cloud sent in his blade on the earth; and the grain of the earth was cut.
- Darby Translation (DBY)
- And he that sat on the cloud put his sickle on the earth, and the earth was reaped.
- Webster's Bible (WBS)
- And he that sat on the cloud thrust in his sickle on the earth; and the earth was reaped.
- Young's Literal Translation (YLT)
- and he who is sitting upon the cloud did put forth his sickle upon the earth, and the earth was reaped.
Read in context
- 14ಆಗ ಒಂದು ಬಿಳೀ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯ ಕುಮಾರನಂತಿದ್ದ ಒಬ್ಬಾತನು ಕೂತಿರುವುದನ್ನೂ ನಾನು ಕಂಡೆನು; ಆತನ ತಲೆಯ ಮೇಲೆ ಬಂಗಾರದ ಕಿರೀಟವಿತ್ತು; ಆತನ ಕೈಯಲ್ಲಿ ಹದವಾದ ಕುಡುಗೋಲು ಇತ್ತು.
- 15ಆಗ ಮತ್ತೊಬ್ಬ ದೂತನು ಆಲಯದೊಳಗಿಂದ ಬಂದು ಮೇಘದ ಮೇಲೆ ಕೂತಿದ್ದಾತನಿಗೆ--ನಿನಗೆ ಕೊಯ್ಯುವ ಕಾಲ ಬಂದಿರುವದರಿಂದ ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ; ಯಾಕಂದರೆ ಭೂಮಿಯ ಪೈರು ಮಾಗಿದೆ ಎಂದು ಮಹಾಶಬ್ದದಿಂದ ಕೂಗಿದನು.
- 16ಮೇಘದ ಮೇಲೆ ಕೂತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು; ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
- 17ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು; ಅವನಲ್ಲಿಯೂ ಹದವಾದ ಕುಡುಗೋಲು ಇತ್ತು.
- 18ಬೆಂಕಿಯ ಮೇಲೆ ಅಧಿಕಾರವಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು ಆ ಹದವಾದ ಕುಡುಗೋಲು ಇದ್ದವನಿಗೆ--ನಿನ್ನ ಹದವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷೇ ಗೊಂಚಲುಗಳನ್ನು ಕೂಡಿಸು; ಯಾಕಂದರೆ ಅದರ ಹಣ್ಣುಗಳು ಪೂರಾ ಮಾಗಿವೆ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.
Cross references
- Matthew 16:27 ಮತ್ತಾಯನು 16:27ಯಾಕಂದರೆ ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯಲ್ಲಿ ತನ್ನ ದೂತರೊಡನೆ ಬಂದಾಗ ಆತನು ಪ್ರತಿಯೊಬ್ಬ ನಿಗೂ ಅವನವನ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವನು ಎಂದು ಹೇಳಿದನು.ನಿಮಗೆ ನಿಜವಾಗಿ ಹೇಳುವದೇನಂದರೆ--ಇಲ್ಲಿ ನಿಂತವರಲ್ಲಿ ಕೆಲವರು ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವವರೆಗೆ ಮರಣದ ರುಚಿಯನ್ನು ನೋಡುವದೇ ಇಲ್ಲ ಅಂದನು.
- Revelation 14:19 ಪ್ರಕಟನೆ 14:19ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷೇಹಣ್ಣನ್ನು ಕೂಡಿಸಿ ದೇವರ ರೌದ್ರದ ದೊಡ್ಡ ದ್ರಾಕ್ಷೇತೊಟ್ಟಿಯಲ್ಲಿ ಹಾಕಿದನು.ಆ ದ್ರಾಕ್ಷೇ ತೊಟ್ಟಿಯನ್ನು ಪಟ್ಟಣದ ಹೊರಗೆ ತುಳಿದರು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಇನ್ನೂರು ಮೈಲಿ ದೂರ ಹರಿಯಿತು.
- Revelation 14:14 ಪ್ರಕಟನೆ 14:14ಆಗ ಒಂದು ಬಿಳೀ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯ ಕುಮಾರನಂತಿದ್ದ ಒಬ್ಬಾತನು ಕೂತಿರುವುದನ್ನೂ ನಾನು ಕಂಡೆನು; ಆತನ ತಲೆಯ ಮೇಲೆ ಬಂಗಾರದ ಕಿರೀಟವಿತ್ತು; ಆತನ ಕೈಯಲ್ಲಿ ಹದವಾದ ಕುಡುಗೋಲು ಇತ್ತು.
- Revelation 16:1–21 ಪ್ರಕಟನೆ 16:1–21ಆಗ ಆಲಯದಿಂದ ಬಂದ ಮಹಾಶಬ್ದ ವನ್ನು ಕೇಳಿದೆನು. ಅದು ಆ ಏಳು ಮಂದಿ ದೂತರಿಗೆ--ನೀವು ಹೋಗಿ ಆ ಪಾತ್ರೆಗಳ ಲ್ಲಿರುವ ದೇವರ ರೌದ್ರವನ್ನು ಭೂಮಿಯ ಮೇಲೆ ಹೊಯ್ಯಿರಿ ಎಂದು ಹೇಳಿತು. ಆಗ ಮೊದಲನೆಯವನು ಹೊರಟು ತನ್ನ ಪಾತ್ರೆ ಯಲ್ಲಿದ್ದದ್ದನ್ನು ಭೂಮಿಯ ಮೇಲೆ ಹೊಯಿದನು; ಆಗ ಮೃಗದ ಗುರುತನ್ನು ಹೊಂದಿ ಅದರ ವಿಗ್ರಹಕ್ಕೆ ಆರಾಧನೆ ಮಾಡಿದ ಮನುಷ್ಯರ ಮೇಲೆ ಕೊಳೆಯುವ ಘೋರವಾದ ಹುಣ್ಣು ಎದ್ದಿತು. ಎರಡನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸಮುದ್ರದ ಮೇಲೆ ಹೊಯಿದಾಗ ಅದು ಸತ್ತವನ ರಕ್ತದ ಹಾಗಾಯಿತು; ಸಮುದ್ರದಲ್ಲಿ ಬದುಕುವ ಪ್ರತಿಯೊಂದು ಪ್ರಾಣಿಯು ಸತ್ತಿತು. ಮೂರನೆಯ ದೂತನು ತನ್ನ ಪಾತ್ರೆಯಲ್ಲಿ ದ್ದದ್ದನ್ನು ನದಿಗಳ ಮೇಲೆಯೂ ನೀರಿನ ಬುಗ್ಗೆಗಳ ಮೇಲೆಯೂ ಹೊಯಿದನು; ಅವುಗಳ ನೀರು ರಕ್ತವಾಯಿತು. ಅಮೇಲೆ ಜಲಗಳ ದೂತನು--ಓ ಕರ್ತನೇ, ನೀನು ಇರುವಾತನೂ ಇದ್ದಾತನೂ ಬರುವಾತನೂ ಆಗಿರುವದರಿಂದ ನೀನು ಹೀಗೆ ತೀರ್ಪು ಮಾಡಿದ್ದರಲ್ಲಿ ನೀತಿ ಸ್ವರೂಪನಾಗಿದ್ದೀ. ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು. ಆಮೇಲೆ ಯಜ್ಞವೇದಿಯೊಳಗಿಂದ ಮತ್ತೊಬ್ಬನು--ಹೌದು, ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ ಎಂದು ಹೇಳುವದನ್ನು ನಾನು ಕೇಳಿದೆನು. ನಾಲ್ಕನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸೂರ್ಯನ ಮೇಲೆ ಹೊಯಿದನು. ಆಗ ಸೂರ್ಯ ನಿಗೆ ಬೆಂಕಿಯಿಂದ ಮನುಷ್ಯರನ್ನು ಕಂದಿಸುವ ಶಕ್ತಿಯು ಕೊಡಲ್ಪಟ್ಟಿತು. ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರ ಮಾಡಿಕೊಳ್ಳದೆ ಈ ಉಪದ್ರವ ಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು. ಐದನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಮೃಗದ ಆಸನದ ಮೇಲೆ ಹೊಯ್ಯಲು ಅದರ ರಾಜ್ಯವು ತುಂಬಾ ಕತ್ತಲಾಯಿತು; ಜನರು ತಮಗಾದ ನೋವಿನ ದೆಸೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರ ಮಾಡಿ ಕೊಳ್ಳದೆ ತಮ್ಮ ನೋವಿನ ದೆಸೆಯಿಂದಲೂ ಹುಣ್ಣುಗಳ ದೆಸೆಯಿಂದಲೂ ಪರಲೋಕದೇವರನ್ನು ದೂಷಿಸಿದರು. ಆರನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಹೊಯ್ಯಲು ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಬತ್ತಿ ಹೋಯಿತು. ಘಟಸರ್ಪದ ಬಾಯಿಂದಲೂ ಮೃಗದ ಬಾಯಿಂ ದಲೂ ಸುಳ್ಳು ಪ್ರವಾದಿಯ ಬಾಯಿಂದಲೂ ಕಪ್ಪೆಗಳಂ ತಿದ್ದ ಮೂರು ಅಶುದ್ಧಾತ್ಮಗಳು ಹೊರಗೆ ಬರುವದನ್ನು ನಾನು ಕಂಡೆನು. ಅವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳ ಆತ್ಮಗಳೇ; ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಭೂಲೋಕದ ಮತ್ತು ಪ್ರಪಂಚದ ಎಲ್ಲಾ ರಾಜರನ್ನು ಕೂಡಿಸುವದಕ್ಕಾಗಿ ಅವರ ಬಳಿಗೆ ಹೋಗುವವು. ಇಗೋ, ಕಳ್ಳನು ಬರುವಂತೆ ನಾನು ಬರುತ್ತೇನೆ. ನಿರ್ವಾಣನಾಗಿ ತಿರುಗಾಡುವಾಗ ಜನರು ತನ್ನ ನಾಚಿಕೆಯನ್ನು ನೋಡಿಯಾರೆಂದು ಎಚ್ಚರ ವಾಗಿದ್ದು ತನ್ನ ವಸ್ತ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು. ಅವನು ಅವರನ್ನು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್ ಎಂದು ಕರೆಯಲ್ಪಟ್ಟ ಸ್ಥಳಕ್ಕೆ ಕೂಡಿಸುವನು. ಏಳನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ವಾಯುಮಂಡಲದಲ್ಲಿ ಹೊಯ್ಯಲು ಪರಲೋಕದಲ್ಲಿದ್ದ ಆಲಯದೊಳಗಿಂದಲೂ ಸಿಂಹಾಸನದಿಂದಲೂ ಮಹಾಶಬ್ದವು ಬಂದು--ಮುಗಿಯಿತು ಎಂದು ಹೇಳಿತು. ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಉಂಟಾದವು; ಇದಲ್ಲದೆ ಮಹಾ ಭೂಕಂಪವುಂಟಾಯಿತು; ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ಬಲವಾದ ಮತ್ತು ದೊಡ್ಡ ದಾದ ಭೂಕಂಪವಾಗಿರಲಿಲ್ಲ. ಆ ಮಹಾಪಟ್ಟಣವು ಮೂರು ಭಾಗಗಳಾಗಿ ವಿಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು; ಇದಲ್ಲದೆ ಮಹಾಬಾಬೆಲಿಗೆ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು ಕೊಡು ವಂತೆ ದೇವರ ಮುಂದೆ ಅದು ಜ್ಞಾಪಕಕ್ಕೆ ಬಂತು. ಆಗ ದ್ವೀಪಗಳೆಲ್ಲಾ ಓಡಿಹೋದವು; ಬೆಟ್ಟಗಳು ಸಿಕ್ಕದೆ ಹೋದವು.ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಅನೇ ಕಲ್ಲುಗಳು ಸುರಿದವು; ಒಂದೊಂದು ಕಲ್ಲು ಹೆಚ್ಚು ಕಡಿಮೆ ನಾಲ್ಕು ಮಣ ತೂಕವಾಗಿತ್ತು; ಆ ಆನೆಕಲ್ಲುಗಳ ಉಪದ್ರವವು ಬಹಳ ಅತಿದೊಡ್ಡದಾಗಿ ದ್ದದರಿಂದ ಮನುಷ್ಯರು ದೇವರನ್ನು ದೂಷಿಸಿದರು. ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಅನೇ ಕಲ್ಲುಗಳು ಸುರಿದವು; ಒಂದೊಂದು ಕಲ್ಲು ಹೆಚ್ಚು ಕಡಿಮೆ ನಾಲ್ಕು ಮಣ ತೂಕವಾಗಿತ್ತು; ಆ ಆನೆಕಲ್ಲುಗಳ ಉಪದ್ರವವು ಬಹಳ ಅತಿದೊಡ್ಡದಾಗಿ ದ್ದದರಿಂದ ಮನುಷ್ಯರು ದೇವರನ್ನು ದೂಷಿಸಿದರು.
- John 5:22–23 ಯೋಹಾನನು 5:22–23ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವದಿಲ್ಲ; ಆದರೆ ಎಲ್ಲರೂ ತಂದೆಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತೀರ್ಪು ಮಾಡು ವದನ್ನೆಲ್ಲಾ ಮಗನಿಗೆ ಒಪ್ಪಿಸಿದ್ದಾನೆ. ಮಗನಿಗೆ ಮಾನ ಕೊಡದವನು ಆತನನ್ನು ಕಳುಹಿಸಿದ ತಂದೆಗೂ ಮಾನ ಕೊಡದವನಾಗಿದ್ದಾನೆ.