Revelation · chapter 17 · verse 1
Revelation 17:1 in Kannada
ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿ--ಇಲ್ಲಿಗೆ ಬಾ, ಬಹಳ ನೀರುಗಳ ಮೇಲೆ ಕೂತಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ.
Elu paatregalannu hidididda elu mandi dootaralli obbanu bandu nanna sangada maatanaadi--illige baa, bahala neerugala mele kootiruva mahaa jaarastreege baruva dandaneyannu naanu ninage torisuttene.
Revelation 17:1 in English
- King James Version (KJV)
- And there came one of the seven angels which had the seven vials, and talked with me, saying unto me, Come hither; I will shew unto thee the judgment of the great whore that sitteth upon many waters:
- World English Bible (WEB)
- One of the seven angels who had the seven bowls came and spoke with me, saying, “Come here. I will show you the judgment of the great prostitute who sits on many waters,
- American Standard Version (ASV)
- And there came one of the seven angels that had the seven bowls, and spake with me, saying, Come hither, I will show thee the judgment of the great harlot that sitteth upon many waters;
- Bible in Basic English (BBE)
- And one of the seven angels who had the seven vessels came and said to me, Come here, so that you may see the judging of the evil woman who is seated on the great waters;
- Darby Translation (DBY)
- And one of the seven angels, which had the seven bowls, came and spoke with me, saying, Come here, I will shew thee the sentence of the great harlot who sits upon the many waters;
- Webster's Bible (WBS)
- And there came one of the seven angels who had the seven vials, and talked with me, saying to me, Come hither; I will show to thee the judgment of the great harlot that sitteth upon many waters;
- Young's Literal Translation (YLT)
- And there came one of the seven messengers, who were having the seven vials, and he spake with me, saying to me, 'Come, I will shew to thee the judgment of the great whore, who is sitting upon the many waters,
Read in context
- 1ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿ--ಇಲ್ಲಿಗೆ ಬಾ, ಬಹಳ ನೀರುಗಳ ಮೇಲೆ ಕೂತಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ.
- 2ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಅವಳ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು ಎಂದು ಹೇಳಿದನು.
- 3ಆಗ ಅವನು ಆತ್ಮದಲ್ಲಿ ನನ್ನನ್ನು ಎತ್ತಿಕೊಂಡು ಅಡವಿಗೆ ಹೋದನು; ಅಲ್ಲಿ ದೇವದೂಷಣೆಯ ಹೆಸರುಗಳಿಂದ ತುಂಬಿದ್ದು ಏಳು ತಲೆಗಳು ಹತ್ತು ಕೊಂಬುಗಳೂ ಇದ್ದ ಕೆಂಪುಬಣ್ಣದ ಮೃಗದ ಮೇಲೆ ಕೂತಿದ್ದ ಒಬ್ಬ ಸ್ತ್ರೀಯನ್ನು ನಾನು ಕಂಡೆನು.
Cross references
- Revelation 19:2 ಪ್ರಕಟನೆ 19:2ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು.
- Revelation 17:1–17 ಪ್ರಕಟನೆ 17:1–17ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿ--ಇಲ್ಲಿಗೆ ಬಾ, ಬಹಳ ನೀರುಗಳ ಮೇಲೆ ಕೂತಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಅವಳ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು ಎಂದು ಹೇಳಿದನು. ಆಗ ಅವನು ಆತ್ಮದಲ್ಲಿ ನನ್ನನ್ನು ಎತ್ತಿಕೊಂಡು ಅಡವಿಗೆ ಹೋದನು; ಅಲ್ಲಿ ದೇವದೂಷಣೆಯ ಹೆಸರುಗಳಿಂದ ತುಂಬಿದ್ದು ಏಳು ತಲೆಗಳು ಹತ್ತು ಕೊಂಬುಗಳೂ ಇದ್ದ ಕೆಂಪುಬಣ್ಣದ ಮೃಗದ ಮೇಲೆ ಕೂತಿದ್ದ ಒಬ್ಬ ಸ್ತ್ರೀಯನ್ನು ನಾನು ಕಂಡೆನು. ಆ ಸ್ತ್ರೀಯು ಧೂಮ್ರ ಮತ್ತು ಕೆಂಪುವರ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮತ್ತು ಮುತ್ತುಗಳು ಇವುಗಳಿಂದ ಅಲಂಕರಿಸಿಕೊಂಡಿದ್ದಳು; ಅವಳ ಕೈಯಲ್ಲಿ ಒಂದು ಚಿನ್ನದ ಬಟ್ಟಲು ಇತ್ತು; ಅದು ಅವಳ ಜಾರತ್ವದ ಅಸಹ್ಯವಾದವುಗಳಿಂದಲೂ ಅಶುದ್ಧತ್ವದಿಂದಲೂ ತುಂಬಿತು ಇದಲ್ಲದೆ ಮರ್ಮ, ಮಹಾ ಬಾಬೆಲು, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ವುಗಳಿಗೂ ತಾಯಿ ಎಂಬ ಹೆಸರು ಅವಳ ಹಣೆಯ ಮೇಲೆ ಬರೆದಿತ್ತು. ಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕ ಆಗ ಆ ದೂತನು ನನಗೆ--ನೀನೇಕೆ ಆಶ್ಚರ್ಯಪಟ್ಟೆ? ಆ ಸ್ತ್ರೀಯ ವಿಷಯವಾಗಿಯೂ ಅವಳನ್ನು ಹೊತ್ತುಕೊಂಡಿದ್ದ ಏಳು ತಲೆಗಳು ಮತ್ತು ಹತ್ತು ಕೊಂಬುಗಳುಳ್ಳ ಮೃಗದ ವಿಷಯವಾಗಿಯೂ ಇರುವ ಮರ್ಮವನ್ನು ನಾನು ನಿನಗೆ ತಿಳಿಸುತ್ತೇನೆ. ನೀನು ಕಂಡ ಈ ಮೃಗವು ಮೊದಲು ಇತ್ತು. ಈಗ ಇಲ್ಲ, ಅದು ತಳವಿಲ್ಲದ ತಗ್ಗಿನಿಂದ ಏರಿ ಬಂದು ನಾಶನಕ್ಕೆ ಹೋಗುವದು. ಭೂಮಿಯಲ್ಲಿ ವಾಸಿಸುವವರೊಳಗೆ ಯಾರಾರ ಹೆಸರು ಗಳು ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಜೀವಗ್ರಂಥ ದಲ್ಲಿ ಬರೆದಿರುವದಿಲ್ಲವೋ ಅವರು ಮೊದಲು ಇದ್ದು ಈಗ ಇಲ್ಲದ ಇನ್ನು ಇದರಲ್ಲಿ ಜ್ಞಾನವುಳ್ಳ ಮನಸ್ಸು ಇರುತ್ತದೆ. ಆ ಏಳು ತಲೆಗಳು ಆ ಸ್ತ್ರೀ ಕೂತು ಕೊಂಡಿರುವ ಏಳು ಬೆಟ್ಟಗಳೇ. ಇದಲ್ಲದೆ ಅವು ಏಳು ಮಂದಿ ರಾಜರು; ಐದು ಮಂದಿ ಬಿದ್ದು ಹೋಗಿದ್ದಾರೆ. ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ. ಬಂದ ಮೇಲೆ ಅವನು ಸ್ವಲ್ಪಕಾಲ ಇರಲೇ ಬೇಕು. ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯವನು; ಅವನು ಆ ಏಳು ಮಂದಿಗೆ ಸೇರಿದವನಾಗಿದ್ದು ನಾಶನಕ್ಕೆ ಹೋಗುತ್ತಾನೆ. ನೀನು ಕಂಡ ಆ ಹತ್ತು ಕೊಂಬುಗಳು ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ರಾಜರು. ಅವರು ಮೃಗದೊಂದಿಗೆ ರಾಜರಂತೆ ಒಂದು ತಾಸಿನವರೆಗೆ ಅಧಿಕಾರವನ್ನು ಹೊಂದುತ್ತಾರೆ. ಅವರು ಒಂದೇ ಮನಸ್ಸುಳ್ಳವರಾಗಿದ್ದು ತಮ್ಮ ಅಧಿಕಾರವನ್ನೂ ಶಕ್ತಿಯನ್ನೂ ಮೃಗಕ್ಕೆ ಕೊಡುತ್ತಾರೆ. ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ. ಅವನು ನನಗೆ--ನೀನು ಕಂಡ ಆ ಜಾರಸ್ತ್ರೀಯು ಕೂತುಕೊಂಡಿರುವ ನೀರುಗಳು ಅಂದರೆ ಪ್ರಜೆಗಳೂ ಸಮೂಹಗಳೂ ಜನಾಂಗಗಳೂ ಭಾಷೆಗಳೂ ಆಗಿವೆ. ಮೃಗದ ಮೇಲೆ ನೀನು ನೋಡಿದ ಹತ್ತು ಕೊಂಬು ಗಳು ಆ ಜಾರ ಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟ ವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವವು. ಯಾಕಂದರೆ ಅವರು ದೇವರ ಚಿತ್ತವನ್ನು ನೆರವೇರಿಸುವದಕ್ಕೆ ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಮ್ಮ ರಾಜ್ಯವನ್ನು ಮೃಗಕ್ಕೆ ಕೊಡುವಂತೆ ದೇವರು ತನ್ನ ವಾಕ್ಯಗಳು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರೇಪಿಸಿದನು.ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುತ್ತಿರುವ ಮಹಾನಗರಿಯೇ ಎಂದು ಹೇಳಿದನು.
- Jeremiah 51:13 ಯೆರೆಮೀಯ 51:13ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳ ವಳೇ, ನಿನ್ನ ಅಂತ್ಯವೂ ನಿನ್ನ ದುರ್ಲಾಭದ ಅಳತೆಯೂ ಬಂತು.
- Revelation 16:19 ಪ್ರಕಟನೆ 16:19ಆ ಮಹಾಪಟ್ಟಣವು ಮೂರು ಭಾಗಗಳಾಗಿ ವಿಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು; ಇದಲ್ಲದೆ ಮಹಾಬಾಬೆಲಿಗೆ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು ಕೊಡು ವಂತೆ ದೇವರ ಮುಂದೆ ಅದು ಜ್ಞಾಪಕಕ್ಕೆ ಬಂತು.
- Revelation 21:9 ಪ್ರಕಟನೆ 21:9ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ--ಇಲ್ಲಿಗೆ ಬಾ, ಕುರಿಮರಿಯಾದಾತನಿಗೆ ಹೆಂಡತಿಯಾಗ ತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು ಎಂದು ಹೇಳಿದನು.
- Jeremiah 2:20 ಯೆರೆಮೀಯ 2:20ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ.
- Isaiah 1:21 ಯೆಶಾಯ 1:21ನಂಬಿಗಸ್ತಿಕೆಯ ಪಟ್ಟಣವು ಸೂಳೆಯಂತಾದ ಳಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆ ಯಾಗಿತ್ತು; ಆದರೆ ಈಗ ಕೊಲೆಗಾರರಿಂದ ತುಂಬಿದೆ.
- Nahum 3:4–5 ನಹೂಮ 3:4–5ಸೌಂದರ್ಯವುಳ್ಳ ಮಾಟಗಾರ್ತಿಯಾದ ಸೂಳೆಯ ಸೂಳೆತನಗಳು ಬಹಳ; ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ ತನ್ನ ಮಾಟಗಳಿಂದ ಗೋತ್ರಗಳನ್ನೂ ಮಾರಿದಳಲ್ಲಾ? ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
- Isaiah 57:3 ಯೆಶಾಯ 57:3ಆದರೆ ನೀವು ಮಾಟಗಾರತಿಯ ಮಕ್ಕಳೇ, ಸೂಳೆಯ ಮತ್ತು ಜಾರನ ಸಂತಾನದವರೇ, ಇಲ್ಲಿಗೆ ಬನ್ನಿರಿ.
- Revelation 15:1 ಪ್ರಕಟನೆ 15:1ಪರಲೋಕದಲ್ಲಿ ದೊಡ್ಡ ಅದ್ಭುತಕರವಾದ ಮತ್ತೊಂದು ಗುರುತನ್ನು ನಾನು ನೋಡಿ ದೆನು. ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವ ಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.
- Revelation 18:16–19 ಪ್ರಕಟನೆ 18:16–19ಅಯ್ಯೋ, ಅಯ್ಯೋ, ಮಹಾನಗರಿಯೇ, ನಯವಾದ ನಾರುಮಡಿಯನ್ನೂ ಧೂಮ್ರವರ್ಣದ ವಸ್ತ್ರವನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮುತ್ತುಗಳು ಇವುಗಳಿಂದ ಅಲಂಕರಿಸಲ್ಪಟ್ಟವಳೇ, ಅಷ್ಟು ದೊಡ್ಡ ಐಶ್ವರ್ಯವು ಒಂದೇ ಗಳಿಗೆಯಲ್ಲಿ ಇಲ್ಲದೆ ಹೋಯಿತಲ್ಲಾ ಅನ್ನುವರು. ಇದಲ್ಲದೆ ಹಡಗುಗಳ ಯಜಮಾನರೂ ಹಡಗುಗಳಲ್ಲಿ ಜೊತೆಯಾಗಿರುವವರೂ ನಾವಿಕರೂ ಸಮುದ್ರದ ಮೇಲೆ ವ್ಯಾಪಾರ ಮಾಡುವವರೆಲ್ಲರೂ ದೂರದಲ್ಲಿ ನಿಂತು ಅವಳ ದಹನದ ಹೊಗೆಯನ್ನು ನೋಡುತ್ತಾ--ಈ ಮಹಾ ಪಟ್ಟಣಕ್ಕೆ ಸಮಾನವಾದ ಪಟ್ಟಣವು ಯಾವದು ಎಂದು ಕೂಗಿ ಹೇಳಿದರು. ಆಗ ಅವರು ತಮ್ಮ ತಲೆಗಳ ಮೇಲೆ ಧೂಳನು ಹೊಯಿದುಕೊಂಡು ಕೂಗುತ್ತಾ ಅಳುತ್ತಾ, ಗೋಳಾ ಡುತ್ತಾ--ಅಯ್ಯೋ, ಅಯ್ಯೋ ಸಮುದ್ರದ ಮೇಲೆ ಹಡಗುಗಳಿದ್ದವರೆಲ್ಲರನ್ನು ತನ್ನ ಅಮೂಲ್ಯ ದ್ರವ್ಯ ಗಳಿಂದ ಐಶ್ವರ್ಯವಂತರನ್ನಾಗಿ ಮಾಡಿದ ಆ ಮಹಾ ನಗರಿಯು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ ಎಂದು
- Revelation 15:6–7 ಪ್ರಕಟನೆ 15:6–7ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿರುವ ಸಾಕ್ಷೀ ಗುಡಾರದ ಆಲಯವು ತೆರೆಯಲ್ಪಟ್ಟಿತು. ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.ದೇವರ ಮಹಿಮೆ ಯಿಂದಲೂ ಆತನ ಶಕ್ತಿಯಿಂದಲೂ ಉಂಟಾದ ಹೊಗೆ ಯಿಂದ ಆಲಯವು ತುಂಬಿದ ಕಾರಣ ಆ ಏಳುಮಂದಿ ದೂತರ ಏಳು ಉಪದ್ರವಗಳು ತೀರುವ ತನಕ ಆ ಆಲಯದೊಳಗೆ ಪ್ರವೇಶಿಸುವದಕ್ಕೆ ಯಾರಿಂದಲೂ ಆಗಲಿಲ್ಲ.
Original words (Greek)
- And · G2532καί kaí
- came · G2064ἔρχομαι érchomai
- one · G1520εἷς heîs
- of · G1537ἐκ ek
- seven · G2033ἑπτά heptá
- angels · G32ἄγγελος ángelos
- had · G2192ἔχω échō
- seven · G2033ἑπτά heptá
- vials · G5357φιάλη phiálē
- and · G2532καί kaí
- talked · G2980λαλέω laléō
- with · G3326μετά metá
- me · G1700ἐμοῦ emoû
- saying · G3004λέγω légō
- me · G3427μοί moí
- hither · G1204δεῦρο deûro
- shew · G1166δεικνύω deiknýō
- thee · G4671σοί soí
- judgment · G2917κρίμα kríma
- great · G3173μέγας mégas
- whore · G4204πόρνη pórnē
- sitteth · G2521κάθημαι káthēmai
- upon · G1909ἐπί epí
- many · G4183πολύς polýs
- waters · G5204ὕδωρ hýdōr