Romans · chapter 1 · verse 14
Romans 1:14 in Kannada
ನಾನು ಗ್ರೀಕರಿಗೂ ಅನ್ಯಜನರಿಗೂ ಜ್ಞಾನಿಗಳಿಗೂ ಅಜ್ಞಾನಿ ಗಳಿಗೂ ಋಣಸ್ಥನಾಗಿದ್ದೇನೆ.
Naanu greekarigoo anyajanarigoo jnyaanigaligoo ajnyaani galigoo runasthanaagiddene.
Romans 1:14 in English
- King James Version (KJV)
- I am debtor both to the Greeks, and to the Barbarians; both to the wise, and to the unwise.
- World English Bible (WEB)
- I am debtor both to Greeks and to foreigners, both to the wise and to the foolish.
- American Standard Version (ASV)
- I am debtor both to Greeks and to Barbarians, both to the wise and to the foolish.
- Bible in Basic English (BBE)
- I have a debt to Greeks and to the nations outside; to the wise and to those who have no learning.
- Darby Translation (DBY)
- I am a debtor both to Greeks and barbarians, both to wise and unintelligent:
- Webster's Bible (WBS)
- I am debtor both to the Greeks, and to the barbarians, both to the wise, and to the unwise.
- Young's Literal Translation (YLT)
- Both to Greeks and to foreigners, both to wise and to thoughtless, I am a debtor,
Read in context
- 12ಹೀಗೆ ಪರಸ್ಪರ ನಂಬಿಕೆಯ ಮೂಲಕ ನಾನು ನಿಮ್ಮೊಂ ದಿಗೆ ಆದರಿಸಲ್ಪಡುವೆನು.
- 13ಇದಲ್ಲದೆ ಸಹೋದರರೇ, ಬೇರೆ ಅನ್ಯಜನಗಳಲ್ಲಿ ಫಲವುಂಟಾ ದಂತೆ ನಿಮ್ಮಲ್ಲಿಯೂ ನನಗೆ ಯಾವದಾದರೂ ಫಲ ದೊರೆಯಲೆಂದು ನಿಮ್ಮ ಬಳಿಗೆ ಬರುವದಕ್ಕೆ ನಾನು ಅನೇಕಸಾರಿ ಉದ್ದೇಶಿಸಿ ದಾಗ್ಯೂ ಈ ವರೆಗೆ ಅಡ್ಡಿಯಾಯಿತೆಂದು ನೀವು ತಿಳಿದಿರಬೇಕೆಂದು ನಾನು ಆಶಿಸುತ್ತೇನೆ.
- 14ನಾನು ಗ್ರೀಕರಿಗೂ ಅನ್ಯಜನರಿಗೂ ಜ್ಞಾನಿಗಳಿಗೂ ಅಜ್ಞಾನಿ ಗಳಿಗೂ ಋಣಸ್ಥನಾಗಿದ್ದೇನೆ.
- 15ಹೀಗೆ ನಾನಾದರೋ ರೋಮ್ನಲ್ಲಿರುವ ನಿಮಗೂ ಸುವಾರ್ತೆಯನ್ನು ಸಾರಲು ಸಿದ್ಧನಾಗಿದ್ದೇನೆ.
- 16ಕ್ರಿಸ್ತನ ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವದಿಲ್ಲ; ಅದು ಮೊದಲು ಯೆಹೂದ್ಯ ರಿಗೂ ತರುವಾಯ ಗ್ರೀಕರಿಗೂ ಅಂತೂ ನಂಬುವ ಪ್ರತಿಯೊಬ್ಬನಿಗೂ ರಕ್ಷಣೆಗಾಗಿ ದೇವರ ಶಕ್ತಿಯಾಗಿದೆ.
Cross references
- 1 Corinthians 9:16–23 1 ಕೊರಿಂಥದವರಿಗೆ 9:16–23ನಾನು ಸುವಾರ್ತೆಯನ್ನು ಸಾರಿದರೂ ಹೆಚ್ಚಳ ಪಡುವದಕ್ಕೆ ನನಗೇನೂ ಇಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲೆ ಇದೆ. ಹೌದು, ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ! ನಾನು ಇದನ್ನು ಇಷ್ಟಪೂರ್ವಕವಾಗಿ ಮಾಡಿದರೆ ನನಗೆ ಬಹುಮಾನವುಂಟು. ನನ್ನ ಇಷ್ಟಕ್ಕೆ ವಿರೋಧ ವಾಗಿ ಮಾಡಿದರೆ ಸುವಾರ್ತೆಯ ವಿಷಯವಾದ ದೈವನೇಮವು ನನ್ನ ವಶಕ್ಕೆ ಕೊಡಲ್ಪಟ್ಟಿದೆ. ಹಾಗಾ ದರೆ ನನ್ನ ಬಹುಮಾನ ಯಾವದು? ನಿಶ್ಚಯವಾಗಿ ನಾನು ಸುವಾರ್ತೆಯನ್ನು ಸಾರುವಾಗ ಸುವಾರ್ತೆ ಯಲ್ಲಿರುವ ನನ್ನ ಅಧಿಕಾರವನ್ನು ನಾನು ದುರುಪ ಯೋಗ ಮಾಡದಂತೆ ಕ್ರಿಸ್ತನ ಸುವಾರ್ತೆಯನ್ನು ಉಚಿತವಾಗಿ ಸಾರುವದೇ ನನ್ನ ಬಹುಮಾನ. ಎಲ್ಲರಿಂದಲೂ ನಾನು ಸ್ವತಂತ್ರನಾಗಿದ್ದರೂ ಇನ್ನೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳುವದಕ್ಕೋಸ್ಕರ ನನ್ನನ್ನು ಎಲ್ಲರಿಗೂ ಸೇವಕನನ್ನಾಗಿ ಮಾಡಿಕೊಂಡಿದ್ದೇನೆ. ಇದಲ್ಲದೆ ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ನಾನು ಯೆಹೂದ್ಯನಾಗಿಯೂ ನ್ಯಾಯ ಪ್ರಮಾಣದ ಅಧೀನದಲ್ಲಿರುವವರನ್ನು ಸಂಪಾದಿಸಿ ಕೊಳ್ಳುವಂತೆ ನ್ಯಾಯಪ್ರಮಾಣಕ್ಕೆ ಅಧೀನರಾಗಿರು ವವರಿಗೆ ನ್ಯಾಯಪ್ರಮಾಣಕ್ಕೆ ಅಧೀನನಾಗಿಯೂ (ನಾನು ದೇವರ ನ್ಯಾಯಪ್ರಮಾಣವಿಲ್ಲದವ ನಂತಲ್ಲ, ಕ್ರಿಸ್ತನ ನ್ಯಾಯಪ್ರಮಾಣಕ್ಕೆ ಒಳಗಾದವನೇ;) ನ್ಯಾಯಪ್ರಮಾಣವಿಲ್ಲದವರನ್ನು ಸಂಪಾದಿಸಿಕೊಳ್ಳು ವದಕ್ಕಾಗಿ ಅವರಿಗೆ ನ್ಯಾಯಪ್ರಮಾಣವಿಲ್ಲದವ ನಂತೆಯೂ ಆದೆನು. ಬಲವಿಲ್ಲದವರನ್ನು ಸಂಪಾದಿಸು ವದಕ್ಕೆ ಅವರಿಗೆ ಬಲವಿಲ್ಲದವನಂತಾದೆನು; ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥವನಾಗಿದ್ದೇನೆ. ನಾನು ನಿಮ್ಮೊಂದಿಗೆ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಸುವಾರ್ತೆ ಗೋಸ್ಕರವೇ ಇದನ್ನು ಮಾಡುತ್ತೇನೆ.
- Colossians 3:11 ಕೊಲೊಸ್ಸೆಯವರಿಗೆ 3:11ಇದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿ ಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ಮ್ಲೇಚ್ಛ ಹೂನರೆಂದಿಲ್ಲ; ದಾಸನು ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾನೆ.
- Acts 9:15 ಅಪೊಸ್ತಲರ ಕೃತ್ಯಗಳು 9:15ಆದರೆ ಕರ್ತನು ಅವನಿಗೆ--ನೀನು ಹೋಗು; ಯಾಕಂದರೆ ಆ ಮನುಷ್ಯನು ಅನ್ಯಜನರ ಮುಂದೆಯೂ ಅರಸುಗಳ ಮುಂದೆಯೂ ಇಸ್ರಾಯೇಲ್ಯರ ಮುಂದೆಯೂ ನನ್ನ ಹೆಸರನ್ನು ಹೊರುವದಕ್ಕಾಗಿ ನಾನು ಆರಿಸಿಕೊಂಡ ಪಾತ್ರೆಯಾಗಿದ್ದಾನೆ.
- Acts 22:21 ಅಪೊಸ್ತಲರ ಕೃತ್ಯಗಳು 22:21ಅದಕ್ಕೆ ಆತನು--ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುವೆನು ಎಂದು ನನಗೆ ಹೇಳಿದನು.
- James 3:17–18 ಯಾಕೋಬನು 3:17–18ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ. ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- Acts 26:17–18 ಅಪೊಸ್ತಲರ ಕೃತ್ಯಗಳು 26:17–18ಈ ಜನರಿಂದ ಮತ್ತು ಈಗ ನಾನು ನಿನ್ನನ್ನು ಕಳುಹಿಸುವ ಅನ್ಯಜನರಿಂದ ನಿನ್ನನ್ನು ಬಿಡಿಸುವದಕ್ಕೂ ಅವರ ಕಣ್ಣುಗಳನ್ನು ತೆರೆಯುವದಕ್ಕೂ ಮತ್ತು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೆ ಅವರನ್ನು ತಿರುಗಿಸುವದಕ್ಕೂ ಅವರು ನನ್ನಲ್ಲಿ ಇಡುವ ನಂಬಿಕೆಯಿಂದಾಗುವ ಪಾಪಕ್ಷಮಾ ಪಣೆಯನ್ನೂ ಪವಿತ್ರರಾದವರಲ್ಲಿ ಸ್ವಾಸ್ಥ್ಯವನ್ನೂ ಹೊಂದುವಂತೆ ಮಾಡುವದಕ್ಕಾಗಿ ನಾನು
- Romans 12:16 ರೋಮಾಪುರದವರಿಗೆ 12:16ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
- Acts 13:2–4 ಅಪೊಸ್ತಲರ ಕೃತ್ಯಗಳು 13:2–4ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿ ತ್ರಾತ್ಮನು--ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕೆ ನನಗಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು. ಆಗ ಅವರು ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ಅವರನ್ನು ಕಳುಹಿಸಿ ಕೊಟ್ಟರು. ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವ ರಾಗಿ ಸೆಲ್ಯೂಕ್ಯಕ್ಕೆ ಹೊರಟುಹೋದರು. ಅಲ್ಲಿಂದ ಸಮುದ್ರ ಪ್ರಯಾಣವಾಗಿ ಕುಪ್ರಕ್ಕೆ ಹೋದರು.
- Romans 1:22 ರೋಮಾಪುರದವರಿಗೆ 1:22ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು;
- Romans 16:19 ರೋಮಾಪುರದವರಿಗೆ 16:19ನಿಮ್ಮ ವಿಧೇಯತ್ವವು ಎಲ್ಲರಿಗೂ ಪ್ರಸಿದ್ಧವಾಗಿದ್ದದರಿಂದ ನಿಮ್ಮ ವಿಷಯದಲ್ಲಿ ನಾನು ಆನಂದಪಡುತ್ತೇನೆ. ಆದಾಗ್ಯೂ ನೀವು ಒಳ್ಳೇತನದ ವಿಷಯದಲ್ಲಿ ಜಾಣರೂ ಕೆಟ್ಟತನದ ವಿಷಯದಲ್ಲಿ ಕಳಂಕವಿಲ್ಲದವರೂ ಆಗಿರಬೇಕೆಂದು ಅಪೇಕ್ಷಿಸುತ್ತೇನೆ.
- Isaiah 35:8 ಯೆಶಾಯ 35:8ಅಲ್ಲಿ ರಾಜ ಮಾರ್ಗವಿರುವದು, ಅದು ಪರಿಶುದ್ಧ ಮಾರ್ಗವೆನಿಸಿಕೊಳ್ಳುವದು; ಯಾವ ಅಶು ದ್ಧನು ಅದರ ಮೇಲೆ ಹಾದುಹೋಗನು; ಅವರಿಗೋ ಸ್ಕರವೇ ಇರುವದು; ಅಲ್ಲಿ ಹೋಗುವ ಮೂಢನೂ ದಾರಿತಪ್ಪನು.
- Ephesians 5:15–17 ಎಫೆಸದವರಿಗೆ 5:15–17ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿ ರದೆ ಜ್ಞಾನವಂತರಾಗಿರ್ರಿ. ದಿನಗಳು ಕೆಟ್ಟವುಗಳಾಗಿರು ವದರಿಂದ ಕಾಲವನ್ನು ಸುಮ್ಮನೆ ಕಳೆಯದೆ ಉಪಯೋಗಿ ಸಿಕೊಳ್ಳಿರಿ. ಬುದ್ದಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.