Romans · chapter 11 · verse 12
Romans 11:12 in Kannada
ಅವರ ಬೀಳುವಿಕೆಯು ಲೋಕದ ಐಶ್ವರ್ಯಕ್ಕೂ ಅವರ ಕುಂದುವಿಕೆಯು ಅನ್ಯಜನಗಳ ಸಂಪತ್ತಿಗೂ ಆಗಿರು ವದಾದರೆ ಅವರ ಸಮೃದ್ಧಿಯು ಇನ್ನೂ ಎಷ್ಟೋ ಹೆಚ್ಚಾಗಿರುವದಲ್ಲವೇ?
Avara beeluvikeyu lokada aishvaryakkoo avara kunduvikeyu anyajanagala sampattigoo aagiru vadaadare avara samruddhiyu innoo eshto hechchaagiruvadallave?
Romans 11:12 in English
- King James Version (KJV)
- Now if the fall of them [be] the riches of the world, and the diminishing of them the riches of the Gentiles; how much more their fulness?
- World English Bible (WEB)
- Now if their fall is the riches of the world, and their loss the riches of the Gentiles, how much more their fullness!
- American Standard Version (ASV)
- Now if their fall is the riches of the world, and their loss the riches of the Gentiles; how much more their fulness?
- Bible in Basic English (BBE)
- Now, if their fall is the wealth of the world, and their loss the wealth of the Gentiles, how much greater will be the glory when they are made full?
- Darby Translation (DBY)
- But if their fall [be the] world's wealth, and their loss [the] wealth of [the] nations, how much rather their fulness?
- Webster's Bible (WBS)
- Now if the fall of them [be] the riches of the world, and the diminishing of them the riches of the Gentiles; how much more their fullness?
- Young's Literal Translation (YLT)
- and if the fall of them [is] the riches of a world, and the diminution of them the riches of nations, how much more the fulness of them?
Read in context
- 10ನೋಡದಂತೆ ಅವರ ಕಣ್ಣು ಗಳು ಮೊಬ್ಬಾಗಲಿ; ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರಲಿ ಎಂದು ಅನ್ನುತ್ತಾನೆ.
- 11ಹಾಗಾದರೆ--ಅವರು ಬಿದ್ದುಹೋಗುವಂತೆ ಎಡವಿದರೆಂದು ನಾನು ಹೇಳಬೇಕೋ? ಹಾಗೆ ಎಂದಿಗೂ ಆಗಬಾರದು; ಆದರೆ ಅವರಲ್ಲಿ ಹುರುಡು ಹುಟ್ಟಿಸುವದಕ್ಕಾಗಿ ಅವರ ಬೀಳುವಿಕೆಯ ಮೂಲಕವೇ ಅನ್ಯಜನರಿಗೆ ರಕ್ಷಣೆಯುಂಟಾಯಿತು.
- 12ಅವರ ಬೀಳುವಿಕೆಯು ಲೋಕದ ಐಶ್ವರ್ಯಕ್ಕೂ ಅವರ ಕುಂದುವಿಕೆಯು ಅನ್ಯಜನಗಳ ಸಂಪತ್ತಿಗೂ ಆಗಿರು ವದಾದರೆ ಅವರ ಸಮೃದ್ಧಿಯು ಇನ್ನೂ ಎಷ್ಟೋ ಹೆಚ್ಚಾಗಿರುವದಲ್ಲವೇ?
- 13ಅನ್ಯಜನರಾದ ನಿಮ್ಮೊಂದಿಗೆ ನಾನು ಮಾತನಾಡು ತ್ತೇನೆ. ನಾನು ಅನ್ಯಜನಗಳಿಗೆ ಅಪೊಸ್ತಲನಾಗಿ ರುವದರಿಂದ ನನ್ನ ಉದ್ಯೋಗವನ್ನು ಗಣನೆಗೆ ತರುತ್ತೇನೆ.
- 14ಹೀಗೆ ಯಾವ ವಿಧದಲ್ಲಿಯಾದರೂ ನನ್ನ ಸ್ವಜನರಲ್ಲಿ ಹುರುಡನ್ನು ಹುಟ್ಟಿಸಿ ಅವರಲ್ಲಿ ಕೆಲವರು ರಕ್ಷಣೆ ಹೊಂದುವಂತೆ ಮಾಡೇನು.
Cross references
- Romans 11:25 ರೋಮಾಪುರದವರಿಗೆ 11:25ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ
- Colossians 1:27 ಕೊಲೊಸ್ಸೆಯವರಿಗೆ 1:27ಅನ್ಯಜನಗಳಲ್ಲಿ ಈ ಮರ್ಮದ ಮಹಿಮಾತಿಶಯವು ಎಷ್ಟೆಂಬದನ್ನು ದೇವರು ತನ್ನ ಜನರಿಗೆ (ಪರಿಶುದ್ಧರಿಗೆ) ತಿಳಿಸುವದಕ್ಕೆ ಮನಸ್ಸು ಮಾಡಿ ಕೊಂಡನು. ಈ ಮರ್ಮವು ಏನೆಂದರೆ ನಿಮ್ಮಲ್ಲಿರುವ ಕ್ರಿಸ್ತನು ಮಹಿಮೆಯ ನಿರೀಕ್ಷೆಯಾಗಿದ್ದಾನೆ ಎಂಬದೇ.
- Romans 11:15 ರೋಮಾಪುರದವರಿಗೆ 11:15ಅವರನ್ನು ತಳ್ಳುವದರಿಂದ ಲೋಕವು ಸಮಾಧಾನವಾಗು ವದಾದರೆ ಅವರನ್ನು ಸೇರಿಸಿಕೊಳ್ಳುವದರಿಂದ ಏನಾಗುವದು? ಸತ್ತವರು ಜೀವಿತರಾಗಿ ಎದ್ದು ಬಂದಂತಾಗುವದಿಲ್ಲವೇ.
- Ephesians 3:8 ಎಫೆಸದವರಿಗೆ 3:8ಕ್ರಿಸ್ತನ ಶೋಧಿಸಲ ಶಕ್ಯವಾದ ಐಶ್ವರ್ಯದ ವಿಷಯವಾಗಿ ಅನ್ಯಜನರಿಗೆ ನಾನು ಸಾರುವ ಹಾಗೆ ಪರಿಶುದ್ಧರೊಳಗೆ ಅತ್ಯಲ್ಪ ನಾದ ನನಗೆ ಅನುಗ್ರಹಿಸೋಣವಾಯಿತು.
- Romans 9:23 ರೋಮಾಪುರದವರಿಗೆ 9:23ಮುಂಚಿತ ವಾಗಿಯೇ ತಾನು ಮಹಿಮೆಗೋಸ್ಕರ ಸಿದ್ಧಮಾಡಿದ ಕರುಣೆಯ ಪಾತ್ರೆಗಳಿಗೆ ತನ್ನ ಮಹಿಮಾತಿಶಯವನ್ನು ತಿಳಿಯಪಡಿಸುವವನಾಗಿ
- Micah 5:7 ಮೀಕ 5:7ಇದಲ್ಲದೆ ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ ಕರ್ತನಿಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವದು; ಅದು ಮನುಷ್ಯರಿಗೊಸ್ಕರ ತಡೆಮಾಡುವ ದಿಲ್ಲ; ಮನುಷ್ಯನ ಮಕ್ಕಳಿಗೋಸ್ಕರ ಕಾದುಕೊಳ್ಳುವದಿಲ್ಲ.
- Isaiah 66:8–20 ಯೆಶಾಯ 66:8–20ಇಂಥಾದ್ದನ್ನು ಯಾರು ಕೇಳಿದ್ದಾರೆ? ಇಂಥವುಗಳನ್ನು ಯಾರು ನೋಡಿದ್ದಾರೆ? ಭೂಮಿ ಒಂದೇ ದಿವಸದಲ್ಲಿ ಹೆರುವಂತೆ ಮಾಡಿತೇ? ಅಥವಾ ಜನಾಂಗವು ಕ್ಷಣ ಮಾತ್ರದಲ್ಲಿ ಹುಟ್ಟೀತೇ? ಚೀಯೋನು ಪ್ರಸವವೇದನೆ ಪಟ್ಟಾಗಲೇ ತನ್ನ ಮಕ್ಕಳನ್ನು ಹೆತ್ತಳು. ನಾನು ಪ್ರಸವಕ್ಕೆ ತಂದ ಮೇಲೆ ಹೆರದಂತೆ ಮಾಡೆನೋ ಎಂದು ಕರ್ತನು ಹೇಳುತ್ತಾನೆ; ಇಲ್ಲವೆ ಹೆರುವಂತೆ ಮಾಡುವವನಾದ ನಾನು ಗರ್ಭವನ್ನು ಮುಚ್ಚುವೆನೇ ಎಂದು ನಿನ್ನ ದೇವರು ಹೇಳುತ್ತಾನೆ. ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ. ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ. ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ, ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ. ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು. ಇಗೋ, ಕರ್ತನು ಬೆಂಕಿಯೊಡನೆ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವವು; ಉಗ್ರದಿಂದ ತನ್ನ ಕೋಪವನ್ನೂ ಅಗ್ನಿಜ್ವಾಲೆಗಳಿಂದ ತನ್ನ ಗದರಿಕೆ ಯನ್ನೂ ಸಲ್ಲಿಸುವದಕ್ಕಾಗಿಯೇ ಬರುವನು. ಬೆಂಕಿ ಯಿಂದಲೂ ತನ್ನ ಕತ್ತಿಯಿಂದಲೂ ಕರ್ತನು ಮನುಷ್ಯ ರಿಗೆಲ್ಲಾ ನ್ಯಾಯತೀರಿಸುವನು; ಕರ್ತನಿಂದ ಕೊಲ್ಲಲ್ಪಟ್ಟ ವರು ಅನೇಕರಾಗಿರುವರು. ತೋಟಗಳ ಮಧ್ಯದಲ್ಲಿ ಒಂದು ಮರದ ಹಿಂದೆ ತಮ್ಮನ್ನು ಪರಿಶುದ್ಧ ಮಾಡಿ ಕೊಂಡು ಪವಿತ್ರಮಾಡಿಕೊಳ್ಳುವವರೂ ಹಂದಿ ಮಾಂಸವನ್ನೂ ಅಸಹ್ಯವಾದದ್ದನ್ನೂ ಇಲಿಯನ್ನೂ ತಿನ್ನು ವವರೂ ಒಟ್ಟಾಗಿ ದಹಿಸಲ್ಪಡುವರು ಎಂದು ಕರ್ತನು ಹೇಳುತ್ತಾನೆ. ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗ ಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು; ಆಗ ಅವರು ಬಂದು ನನ್ನ ಮಹಿ ಮೆಯನ್ನು ನೋಡುವರು. ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು. ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ.
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
- Isaiah 60:1–22 ಯೆಶಾಯ 60:1–22ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು. ಇಗೋ, ಕತ್ತಲೆ ಭೂಮಿಯನ್ನೂ ಗಾಢಾಂಧಕಾರವು ಜನಗಳನ್ನೂ ಮುಚ್ಚುವದು; ಆದರೆ ನಿನ್ನ ಮೇಲೆ ಕರ್ತನು ಉದಯಿ ಸುವನು; ಆತನ ಮಹಿಮೆಯು ನಿನ್ನ ಮೇಲೆ ಕಾಣ ಬರುವದು. ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು. ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು, ಅವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ; ನಿನ್ನ ಕುಮಾ ರರು ದೂರದಿಂದ ಬರುವರು ನಿನ್ನ ಕುಮಾರ್ತೆಯರು ನಿನ್ನ ಪಕ್ಕೆಯಲ್ಲಿ ಪೋಷಣೆ ಹೊಂದುವರು. ಆಗ ನೀನು ಅದನ್ನು ನೋಡುವಿ, ನೀವು ಗುಂಪು ಗುಂಪಾಗಿ ಹೋಗುವಿರಿ. ನಿನ್ನ ಹೃದಯವು ಹೆದರಿ ವಿಶಾಲವಾಗು ವದು; ಸಮುದ್ರದ (ವ್ಯಾಪಾರದ) ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವದು; ಅನ್ಯಜನಾಂಗದ ಸೇನಾ ಬಲವು ನಿನ್ನ ಬಳಿಗೆ ಬರುವದು. ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ. ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ. ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು. ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು. ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು. ಹಾದುಹೋಗುವವರಿಲ್ಲದೆ ನೀನು ಬಿಡಲ್ಪಟ್ಟವಳೂ ಹಗೆ ಮಾಡಲ್ಪಟ್ಟವಳೂ ಆಗಿ ದ್ದಕ್ಕೆ ಬದಲಾಗಿ ನಿನ್ನನ್ನು ನಿತ್ಯವಾದ ಘನತೆಯೂ ಅನೇಕ ಸಂತತಿಗಳಲ್ಲಿ ಉಲ್ಲಾಸವಾಗಿಯೂ ಮಾಡು ತ್ತೇನೆ. ಅನ್ಯಜನಾಂಗಗಳ ಹಾಲನ್ನು ಹೀರಿಕೊಳ್ಳುವಿ; ಅರಸರ ಮೊಲೆಯನ್ನು ಸಹ ಹೀರಿಕೊಳ್ಳುವಿ; ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋ ಚಕನೂ ಯಾಕೋಬನ ಪರಾಕ್ರಮಿಯೂ ಎಂದು ತಿಳುಕೊಳ್ಳುವಿ. ಹಿತ್ತಾಳೆಗೆ ಬದಲಾಗಿ ಬಂಗಾರವನ್ನು ತರುವೆನು; ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ ಮರಕ್ಕೆ ಬದಲಾಗಿ ಹಿತ್ತಾಳೆಯನ್ನೂ ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು, ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿಯೂ ನೀತಿಯನ್ನು ನಿನಗೆ ಅಧಿಕಾರಿ ಯನ್ನಾಗಿಯೂ ಮಾಡುವೆನು. ಬಲಾತ್ಕಾರವೂ ನಿನ್ನ ದೇಶದೊಳಗೆ ಹಾಳಾದದ್ದೂ ನಾಶವೂ ನಿನ್ನ ಮೇರೆ ಗಳಲ್ಲಿ ಕೇಳಲ್ಪಡುವದಿಲ್ಲ; ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿ ಡುವಿ. ಇನ್ನು ಮೇಲೆ ಸೂರ್ಯನು ನಿನಗೆ ಹಗಲಿ ನಲ್ಲಿ ಬೆಳಕಾಗಿರುವದಿಲ್ಲ, ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವದಿಲ್ಲ; ಆದರೆ ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು. ನಿನ್ನ ದೇವರು ನಿನ್ನ ಪ್ರಭೆಯಾಗಿರುವನು. ನಿನ್ನ ಸೂರ್ಯನು ಅಸ್ತಮಿಸು ವದಿಲ್ಲ, ನಿನ್ನ ಚಂದ್ರನು ಕಾಣದೆ ಹೋಗುವದಿಲ್ಲ; ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು ನಿನ್ನ ದುಃಖದ ದಿನಗಳು ಮುಗಿದುಹೋಗಿರುವವು. ನಿನ್ನ ಜನರೆಲ್ಲರು ನೀತಿವಂತರಾಗಿರುವರು, ದೇಶವನ್ನು ಸದಾ ಕಾಲಕ್ಕೆ ಸ್ವಾಧೀನ ಮಾಡಿಕೊಳ್ಳುವರು; ನಾನು ಮಹಿಮೆ ಹೊಂದುವದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ ನನ್ನ ಕೈ ಸೃಷ್ಟಿಯೂ ದೇಶವನ್ನು ಸದಾ ಅನುಭವಿಸುವರು.ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು. ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು.
- Romans 11:33 ರೋಮಾಪುರದವರಿಗೆ 11:33ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ!
- Zechariah 8:20–23 ಜೆಕರ್ಯ 8:20–23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
Original words (Greek)
- Now · G1161δέ dé
- if · G1487εἰ ei
- fall · G3900παράπτωμα paráptōma
- them · G846αὐτός autós
- riches · G4149πλοῦτος ploûtos
- world · G2889κόσμος kósmos
- and · G2532καί kaí
- diminishing · G2275ἥττημα hḗttēma
- them · G846αὐτός autós
- riches · G4149πλοῦτος ploûtos
- Gentiles · G1484ἔθνος éthnos
- much · G4214πόσος pósos
- more · G3123μᾶλλον mâllon
- their · G846αὐτός autós
- fulness · G4138πλήρωμα plḗrōma