Romans · chapter 11 · verse 26
Romans 11:26 in Kannada
ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
Heege israayel janarellaa rakshanehonduvaru. Idakke aadhaaravaagi--bidisu vaatanu cheeyoninolaginda horatubandu yaakobinalliruva bhaktiheenateyannu nivaarane maaduvanu.
Romans 11:26 in English
- King James Version (KJV)
- And so all Israel shall be saved: as it is written, There shall come out of Sion the Deliverer, and shall turn away ungodliness from Jacob:
- World English Bible (WEB)
- and so all Israel will be saved. Even as it is written, “There will come out of Zion the Deliverer, and he will turn away ungodliness from Jacob.
- American Standard Version (ASV)
- and so all Israel shall be saved: even as it is written, There shall come out of Zion the Deliverer; He shall turn away ungodliness from Jacob:
- Bible in Basic English (BBE)
- And so all Israel will get salvation: as it is said in the holy Writings, There will come out of Zion the One who makes free; by him wrongdoing will be taken away from Jacob:
- Darby Translation (DBY)
- and so all Israel shall be saved. According as it is written, The deliverer shall come out of Zion; he shall turn away ungodliness from Jacob.
- Webster's Bible (WBS)
- And so all Israel shall be saved: as it is written, There shall come out of Sion the Deliverer, and shall turn away ungodliness from Jacob:
- Young's Literal Translation (YLT)
- and so all Israel shall be saved, according as it hath been written, 'There shall come forth out of Sion he who is delivering, and he shall turn away impiety from Jacob,
Read in context
- 24ಹುಟ್ಟು ಕಾಡು ಮರದಿಂದ ಕಡಿದು ತೆಗೆಯಲ್ಪಟ್ಟಿರುವ ನೀನು ನಿನಗೆ ಸಂಬಂಧಪಡದ ಊರುಮರದಲ್ಲಿ ಕಸಿಕಟ್ಟಿಸಿಕೊಂಡವ ನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವದು ಎಷ್ಟೋ ಸಹಜವಾಗಿದೆಯಲ್ಲವೇ.
- 25ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ
- 26ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
- 27ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.
- 28ಸುವಾರ್ತೆಯ ವಿಷಯದಲ್ಲಿ ಅವರು ನಿಮ್ಮ ನಿಮಿತ್ತವಾಗಿ ವೈರಿಗಳಾ ಗಿದ್ದಾರೆ; ಆದರೆ ಆಯ್ಕೆಯ ವಿಷಯದಲ್ಲಿ ಅವರು ಪಿತೃಗಳ ನಿಮಿತ್ತವಾಗಿ ಪ್ರಿಯರಾಗಿದ್ದಾರೆ.
Cross references
- Isaiah 59:20 ಯೆಶಾಯ 59:20ವಿಮೋಚಕನು ಚೀಯೋನಿಗೂ ಯಾಕೋಬ್ಯರಲ್ಲಿ ತಮ್ಮ ದ್ರೋಹದಿಂದ ತಿರುಗುವವರಿಗೂ ಬರುವೆ ನೆಂದು ಕರ್ತನು ಅನ್ನುತ್ತಾನೆ.ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
- Jeremiah 31:31–37 ಯೆರೆಮೀಯ 31:31–37ಇಗೋ, ನಾನು ಇಸ್ರಾಯೇಲಿನ ಮನೆತನದವರ ಸಂಗಡಲೂ ಯೆಹೂದದ ಮನೆತನದವರ ಸಂಗ ಡಲೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ. ನಾನು ಅವರ ತಂದೆಗಳ ಸಂಗಡ ಅವರನ್ನು ಐಗುಪ್ತದೇಶದಿಂದ ಹೊರತರುವದಕ್ಕೆ ಅವರ ಕೈ ಹಿಡಿದ ದಿನದಲ್ಲಿ ಮಾಡಿದ ಒಡಂಬಡಿಕೆಯ ಹಾಗಲ್ಲ; ನಾನು ಅವರ ಯಜಮಾನನಾಗಿದ್ದಾಗ್ಯೂ ಆ ನನ್ನ ಒಡಂಬಡಿಕೆಯನ್ನು ಅವರು ವಿಾರಿದರೆಂದು, ಕರ್ತನು ಅನ್ನುತ್ತಾನೆ. ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ. ನೆರೆ ಯವನಿಗೆ ನೆರೆಯವನೂ ಸಹೋದರನಿಗೆ ಸಹೋ ದರನೂ-- ಕರ್ತನನ್ನು ತಿಳಿಯಿರಿ ಎಂದು ಇನ್ನು ಮೇಲೆ ಬೋಧಿಸುವದಿಲ್ಲ; ಅವರೆಲ್ಲರೂ ಚಿಕ್ಕವನು ಮೊದಲು ಗೊಂಡು ದೊಡ್ಡವನ ವರೆಗೂ ನನ್ನನ್ನು ತಿಳಿಯುವ ರೆಂದು ಕರ್ತನು ಅನ್ನುತ್ತಾನೆ; ಅವರ ಅಕ್ರಮವನ್ನು ಮನ್ನಿಸುವೆನು; ಪಾಪಗಳನ್ನು ಇನ್ನು ಮೇಲೆ ಜ್ಞಾಪಕ ಮಾಡುವದಿಲ್ಲ. ಕರ್ತನು ಹೀಗೆ ಹೇಳುತ್ತಾನೆ--ಸೂರ್ಯನನ್ನು ಹಗಲಿಗೆ ಬೆಳಕಾಗಿಯೂ ಚಂದ್ರ ನಕ್ಷತ್ರಗಳ ನಿಯಮ ಗಳನ್ನು ರಾತ್ರಿಗೆ ಬೆಳಕಾಗಿಯೂ ಕೊಡುವವನೂ ಅದರ ತೆರೆಗಳು ಘೋಷಿಸುವಾಗ ಸಮುದ್ರವನ್ನು ವಿಭಾಗಿಸು ವವನೂ ಸೈನ್ಯಗಳ ಕರ್ತನೆಂದು ಹೆಸರುಳ್ಳವನೂ ಹೇಳು ವದೇನಂದರೆ-- ಈ ನಿಯಮಗಳು ನನ್ನ ಸನ್ನಿಧಿ ಯಿಂದ ಯಾವಾಗ ಇಲ್ಲದೆ ಹೋಗುವವೋ ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತು ಹೋಗುವ ದೆಂದು ಕರ್ತನು ಅನ್ನುತ್ತಾನೆ. ಕರ್ತನು ಹೀಗೆ ಹೇಳುತ್ತಾನೆ--ಮೇಲಿರುವ ಆಕಾಶವನ್ನು ಅಳೆಯುವ ದಕ್ಕಾದರೆ, ಕೆಳಗಿರುವ ಭೂಮಿಯ ಅಸ್ತಿವಾರಗಳನ್ನು ಶೋಧಿಸುವದಕ್ಕಾದರೆ, ನಾನು ಸಹ ಇಸ್ರಾಯೇಲಿನ ಸಂತಾನವನ್ನೆಲ್ಲಾ ಅವರು ಮಾಡಿದ್ದೆಲ್ಲಾದರ ನಿಮಿತ್ತ ತೆಗೆದು ಬಿಡುವೆನೆಂದು ಕರ್ತನು ಅನ್ನುತ್ತಾನೆ.
- Psalm 14:7 ಕೀರ್ತನೆಗಳು 14:7ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬರಲಿ; ಕರ್ತನು ತನ್ನ ಜನರನ್ನು ಸೆರೆಯಿಂದ ತಿರಿಗಿ ಬರಮಾಡುವಾಗ ಯಾಕೋಬನು ಉಲ್ಲಾಸಿ ಸುವನು, ಇಸ್ರಾಯೇಲನು ಸಂತೋಷಿಸುವನು.
- Zechariah 10:6–12 ಜೆಕರ್ಯ 10:6–12ಇದಲ್ಲದೆ ನಾನು ಯೆಹೂದನ ಮನೆತನದವರನ್ನು ಬಲಪಡಿಸುವೆನು, ಯೋಸೇಫನ ಮನೆತನದವರನ್ನು ರಕ್ಷಿಸುವೆನು; ಅವರನ್ನು ಕನಿಕರಿಸುವದರಿಂದ ತಿರಿಗಿ ತಂದು ನಿವಾಸಿಸ ಮಾಡುವೆನು; ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಅವರು ಇರುವರು; ನಾನೇ ಅವರ ದೇವರಾದ ಕರ್ತನಾಗಿದ್ದು ಅವರಿಗೆ ಉತ್ತರಕೊಡುವೆನು. ಎಫ್ರಾಯಾಮಿನವರು ಶೂರನಂತೆ ಇರುವರು; ಅವರ ಹೃದಯವು ದ್ರಾಕ್ಷಾರಸದಿಂದಾದ ಹಾಗೆ ಸಂತೋಷಪಡುವದು; ಹೌದು, ಅವರ ಮಕ್ಕಳು ನೋಡಿ ಸಂತೋಷಿಸುವರು; ಅವರ ಹೃದಯವು ಕರ್ತ ನಲ್ಲಿ ಉಲ್ಲಾಸಪಡುವದು. ನಾನು ಅವರಿಗೆ ಸಿಳ್ಳುಹಾಕಿ ಅವರನ್ನು ಕೂಡಿಸುವೆನು; ಅವರನ್ನು ವಿಮೋಚಿ ಸಿದ್ದೇನೆ; ಅವರು ಹಿಂದೆ ಹೆಚ್ಚಿದ ಹಾಗೆ ಹೆಚ್ಚುವರು. ನಾನು ಅವರನ್ನು ಜನಗಳಲ್ಲಿ ಬಿತ್ತುವೆನು; ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡುವರು; ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು. ಐಗುಪ್ತದೇಶದೊಳಗಿಂದ ಸಹ ಅವರನ್ನು ತಿರಿಗಿ ತರುವೆನು; ಅಶ್ಯೂರಿನೊಳಗಿಂದ ಅವರನ್ನು ಕೂಡಿಸು ವೆನು; ಗಿಲ್ಯಾದಿನ ಮತ್ತು ಲೆಬನೋನಿನ ದೇಶಕ್ಕೆ ಅವರನ್ನು ತರುವೆನು; ಅವರಿಗೆ ಸ್ಥಳ ಸಾಲದೆ ಇರು ವದು. ಅವನು ಸಮುದ್ರವನ್ನು ಬಾಧೆಯಿಂದ ದಾಟುವನು; ಸಮುದ್ರದಲ್ಲಿ ತೆರೆಗಳನ್ನು ಬಡಿಯು ವನು; ನದಿಯ ಅಗಾಧಗಳೆಲ್ಲಾ ಒಣಗುವವು; ಅಶ್ಯೂರಿನ ಗರ್ವವು ತಗ್ಗಿಸಲ್ಪಡುವದು; ಐಗುಪ್ತದ ಮುದ್ರೆಕೋಲು ಹೋಗಿಬಿಡುವದು.ಕರ್ತನಲ್ಲಿ ನಾನು ಅವರನ್ನು ಬಲಪಡಿಸುವೆನು; ಆತನ ಹೆಸರಿನಲ್ಲಿ ಅವರು ಮೇಲೆ ಕೆಳಗೆ ನಡೆಯುವರು ಎಂದು ಕರ್ತನು ಅನ್ನುತ್ತಾನೆ. ಕರ್ತನಲ್ಲಿ ನಾನು ಅವರನ್ನು ಬಲಪಡಿಸುವೆನು; ಆತನ ಹೆಸರಿನಲ್ಲಿ ಅವರು ಮೇಲೆ ಕೆಳಗೆ ನಡೆಯುವರು ಎಂದು ಕರ್ತನು ಅನ್ನುತ್ತಾನೆ.
- Hosea 3:5 ಹೋಶೇಯ 3:5ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Amos 9:14–15 ಆಮೋಸ 9:14–15ನನ್ನ ಜನರಾದ ಇಸ್ರಾಯೇಲ್ಯರನ್ನು ಸೆರೆಯಿಂದ ತಿರಿಗಿ ಬರಮಾಡುವೆನು; ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು; ದ್ರಾಕ್ಷೇತೋಟ ಗಳನ್ನು ನೆಟ್ಟು ಅವುಗಳ ದ್ರಾಕ್ಷಾರಸವನ್ನು ಕುಡಿಯು ವರು; ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Joel 3:16–21 ಯೋವೇಲ 3:16–21ಕರ್ತನು ಚೀಯೋನಿನೊಳಗಿಂದ ಘರ್ಜಿಸಿ ಯೆರೂಸಲೇಮಿನೊಳಗಿಂದ ತನ್ನ ಶಬ್ದವನ್ನು ಕೊಡುವನು. ಆಕಾಶಗಳೂ ಭೂಮಿಯೂ ಕದಲು ವವು; ಆದರೆ ಕರ್ತನು ತನ್ನ ಜನರಿಗೆ ನಿರೀಕ್ಷೆಯೂ ಇಸ್ರಾಯೇಲನ ಮಕ್ಕಳಿಗೆ ಬಲವೂ ಆಗಿರುವನು. ಹೀಗೆ ನನ್ನ ಪರಿಶುದ್ಧ ಪರ್ವತವಾದ ಚೀಯೋನಿ ನಲ್ಲಿ ವಾಸಿಸುವ ನಿಮ್ಮ ದೇವರಾದ ಕರ್ತನು ನಾನೇ ಎಂದು ನೀವು ತಿಳುಕೊಳ್ಳುವಿರಿ; ಆಗ ಯೆರೂಸಲೇಮು ಪರಿಶುದ್ಧವಾಗಿರುವದು; ಅನ್ಯರು ಇನ್ನು ಅದರಲ್ಲಿ ಹಾದುಹೋಗರು. ಆ ದಿನದಲ್ಲಿ ಆಗುವದೇನಂ ದರೆ, ಬೆಟ್ಟಗಳು ಹೊಸ ದ್ರಾಕ್ಷಾರಸವನ್ನು ಸುರಿಯುವವು; ಗುಡ್ಡಗಳು ಹಾಲಿನಿಂದ ಹರಿಯುವವು; ಯೆಹೂದದ ಹಳ್ಳಗಳೆಲ್ಲಾ ನೀರಿನಿಂದ ಹರಿಯುವವು; ಕರ್ತನ ಆಲಯದೊಳಗಿಂದ ಬುಗ್ಗೆ ಹೊರಟು, ಶಿಟ್ಟೀಮಿನ ತಗ್ಗಿಗೆ ಜಲ ಕೊಡುವದು. ಐಗುಪ್ತವು ಹಾಳಾಗು ವದು; ಎದೋಮು ಹಾಳಾದ ಅರಣ್ಯವಾಗುವದು; ಅವರು ಯೆಹೂದನ ಮಕ್ಕಳನ್ನು ಬಲಾತ್ಕಾರಮಾಡಿ ತಮ್ಮ ದೇಶದಲ್ಲಿ ಅಪರಾಧವಿಲ್ಲದ ರಕ್ತವನ್ನು ಚೆಲ್ಲಿ ದರು. ಆದರೆ ಯೆಹೂದವು ಎಂದೆಂದಿಗೂ ಯೆರೂಸಲೇಮು ತಲತಲಾಂತರಕ್ಕೂ ನಿಲ್ಲುವದು.ನಾನು ಕ್ಷಮಿಸದೆ ಇದ್ದ ಅವರ ರಕ್ತಾಪರಾಧವನ್ನು ಕ್ಷಮಿಸುವೆನು, ಕರ್ತನು ಚೀಯೋನಿನಲ್ಲಿ ವಾಸವಾಗಿರುತ್ತಾನೆ. ನಾನು ಕ್ಷಮಿಸದೆ ಇದ್ದ ಅವರ ರಕ್ತಾಪರಾಧವನ್ನು ಕ್ಷಮಿಸುವೆನು, ಕರ್ತನು ಚೀಯೋನಿನಲ್ಲಿ ವಾಸವಾಗಿರುತ್ತಾನೆ.
- Isaiah 45:17 ಯೆಶಾಯ 45:17ಆದರೆ ಇಸ್ರಾಯೇಲ್ಯರಾದರೋ ಶಾಶ್ವತವಾದ ರಕ್ಷಣೆಯೊಂದಿಗೆ ಕರ್ತನಲ್ಲಿ ರಕ್ಷಿಸಲ್ಪ ಡುವರು; ನೀವು ಯುಗಯುಗಾಂತರಕ್ಕೂ ನಾಚಿಕೆ ಪಡುವದಿಲ್ಲ ಇಲ್ಲವೆ ಮಾನಭಂಗಪಡುವದಿಲ್ಲ.
- Ezekiel 37:21–28 ಯೆಹೆಜ್ಕೇಲನು 37:21–28ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು--ನಾನು ಇಸ್ರಾಯೇಲನ ಮಕ್ಕಳನ್ನು ಅವರು ಹೋಗಿರುವ ಕಡೆಯಿಂದಲೂ ಅವರನ್ನು ಒಂದುಗೂಡಿಸಿ ಅವರನ್ನು ಅವರ ಸ್ವಂತ ದೇಶಕ್ಕೆ ತರುವೆನು. ನಾನು ಅವರನ್ನು ಇಸ್ರಾಯೇಲ್ ಪರ್ವತಗಳಿರುವ ದೇಶದಲ್ಲಿ ಒಂದೇ ಜನಾಂಗವನ್ನಾಗಿ ಮಾಡುತ್ತೇನೆ ಒಬ್ಬ ಅರಸನೇ ಅವರೆಲ್ಲ ರಿಗೂ ಅರಸನಾಗಿರುವನು; ಇನ್ನು ಮೇಲೆ ಅವರು ಎರಡು ಜನಾಂಗಗಳಾಗಲಿ ಅಥವಾ ರಾಜ್ಯಗಳಂತಾ ಗಲಿ ವಿಭಾಗಿಸಲ್ಪಡುವದಿಲ್ಲ. ಇಲ್ಲವೆ ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ಅಸಹ್ಯಗಳಿಂದಲೂ ಎಲ್ಲಾ ಅಕ್ರಮಗಳಿಂದಲೂ ಅಶುದ್ಧವಾಗುವದಿಲ್ಲ; ಆದರೆ ನಾನು ಅವರನ್ನು ಪಾಪಮಾಡಿದವರ ಎಲ್ಲಾ ನಿವಾಸಿ ಗಳಿಂದ ರಕ್ಷಿಸಿ, ಅವರನ್ನು ಶುದ್ಧಮಾಡುವೆನು; ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು. ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು; ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು ನನ್ನ ನ್ಯಾಯನಿಯಮ ಗಳನ್ನೇ ಅನುಸರಿಸುವಂತೆ ಮಾಡುವೆನು. ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ತಂದೆಗಳು(ಪಿತೃಗಳು) ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮಕ್ಕಳ ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ಪ್ರಧಾನನಾಗಿರುವನು. ಇದಾದ ಮೇಲೆ ನಾನು ಅವರೊಂದಿಗೆ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿ ರುವದು; ನಾನು ಅವರನ್ನು ಆ ಸ್ಥಳದಲ್ಲಿರಿಸುವೆನು ಅವರನ್ನು ವೃದ್ಧಿಗೊಳಿಸುವೆನು; ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು. ನನ್ನ ಗುಡಾರವು ಸಹ ಅವರೊಂದಿಗಿರುವದು; ಹೌದು, ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು. ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು.
- Acts 3:26 ಅಪೊಸ್ತಲರ ಕೃತ್ಯಗಳು 3:26ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.
- Isaiah 11:11–16 ಯೆಶಾಯ 11:11–16ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು. ಜನಾಂಗ ಗಳಿಗೆ ಗುರುತಾಗಿ ಇಟ್ಟ ಇಸ್ರಾಯೇಲಿನಿಂದ ತಳ್ಳಿಬಿಟ್ಟವ ರನ್ನು ಕೂಡಿಸುವನು ಮತ್ತು ಯೆಹೂದದಿಂದ ಚದರಿದ ವರನ್ನು ಭೂಮಿಯ ನಾಲ್ಕು ಮೂಲೆಗಳಿಂದ ಒಟ್ಟುಗೂಡಿಸುವನು. ಎಫ್ರಾಯಾಮಿನ ಹೊಟ್ಟೇಕಿಚ್ಚು ತೊಲಗಿ ಯೆಹೂದದ ವಿರೋಧಿಗಳು ಕಡಿದುಹಾಕಲ್ಪಡುವರು; ಹೀಗೆ ಎಫ್ರಾಯಾಮು ಯೆಹೂದದ ಮೇಲೆ ಹೊಟ್ಟೇ ಕಿಚ್ಚುಪಡದು, ಯೆಹೂದವು ಎಫ್ರಾಯಾಮನ್ನು ಹಿಂಸಿ ಸದು. ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಪಿಯರ ಹೆಗಲಿನ ಮೇಲೆ ಎರಗುವರು; ಅವರು ಜೊತೆಯಾಗಿ ಪೂರ್ವದವರನ್ನು ಹಾಳುಮಾಡುವರು; ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ಹಾಕುವರು; ಅಮ್ಮೋನ್ಯರ ಮಕ್ಕಳು ಅವರಿಗೆ ವಿಧೇಯರಾಗುವರು. ಕರ್ತನು ಐಗುಪ್ತ ಸಮುದ್ರದ ನಾಲಿಗೆಯನ್ನು ಸಂಪೂರ್ಣವಾಗಿ ನಾಶಮಾಡುವನು; ಆತನು ತನ್ನ ಬಲವಾದ ಗಾಳಿಯಿಂದ ನದಿಯ ಮೇಲೆ ಕೈಯನ್ನು ಜಾಡಿಸಿ ಅದನ್ನು ಏಳು ಹೊಳೆಗಳಾಗಿ ಹೊಡೆದು ಮನುಷ್ಯರ ಕೆರಗಳು ನೆನೆಯದಂತೆ ದಾಟಿಸು ವನು.ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು. ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು.
- Titus 2:14 ತೀತನಿಗೆ 2:14ಆತನು ನಮ್ಮನ್ನು ಸಕಲ ದುಷ್ಟತನದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಅಸಮಾನ್ಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ತಾನೇ ಒಪ್ಪಿಸಿ ಕೊಟ್ಟನು.ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
Original words (Greek)
- And · G2532καί kaí
- so · G3779οὕτω hoútō
- all · G3956πᾶς pâs
- Israel · G2474Ἰσραήλ Israḗl
- saved · G4982σώζω sṓzō
- as · G2531καθώς kathṓs
- written · G1125γράφω gráphō
- come · G2240ἥκω hḗkō
- of · G1537ἐκ ek
- Sion · G4622Σιών Siṓn
- Deliverer · G4506ῥύομαι rhýomai
- and · G2532καί kaí
- away · G654ἀποστρέφω apostréphō
- ungodliness · G763ἀσέβεια asébeia
- from · G575ἀπό apó
- Jacob · G2384Ἰακώβ Iakṓb