Romans · chapter 13 · verse 6
Romans 13:6 in Kannada
ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕಂದರೆ ಅವರು ದೇವರ ಉದ್ಯೋಗಿಗಳಾಗಿದ್ದು ಆ ಕೆಲಸ ದಲ್ಲಿಯೇ ನಿರತರಾಗಿರುತ್ತಾರೆ.
Ee kaaranadindale neevu kandaayavannu kooda kodutteeri. Yaakandare avaru devara udyogigalaagiddu aa kelasa dalliye nirataraagiruttaare.
Romans 13:6 in English
- King James Version (KJV)
- For for this cause pay ye tribute also: for they are God’s ministers, attending continually upon this very thing.
- World English Bible (WEB)
- For this reason you also pay taxes, for they are servants of God’s service, continually doing this very thing.
- American Standard Version (ASV)
- For for this cause ye pay tribute also; for they are ministers of God’s service, attending continually upon this very thing.
- Bible in Basic English (BBE)
- For the same reason, make payment of taxes; because the authority is God's servant, to take care of such things at all times.
- Darby Translation (DBY)
- For on this account ye pay tribute also; for they are God's officers, attending continually on this very thing.
- Webster's Bible (WBS)
- For, for this cause ye pay tribute also: for they are God's ministers, attending continually upon this very thing.
- Young's Literal Translation (YLT)
- for because of this also pay ye tribute; for servants of God they are, on this very thing attending continually;
Read in context
- 4ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ; ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದಂಡನೆಯನ್ನು ವಿಧಿಸುತ್ತಾನೆ.
- 5ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿನ ನಿಮಿತ್ತವಾಗಿಯೂ (ಅವನಿಗೆ) ಅಧೀನ ನಾಗುವದು ಅವಶ್ಯ.
- 6ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕಂದರೆ ಅವರು ದೇವರ ಉದ್ಯೋಗಿಗಳಾಗಿದ್ದು ಆ ಕೆಲಸ ದಲ್ಲಿಯೇ ನಿರತರಾಗಿರುತ್ತಾರೆ.
- 7ಅವರವರಿಗೆ ಸಲ್ಲ ತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕ ವನ್ನು, ಯಾರಿಗೆ ಭಯವೋ ಅವರಿಗೆ ಭಯವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆ ಯನ್ನು ಸಲ್ಲಿಸಿರಿ.
- 8ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರ ಬಾರದು. ಮತ್ತೊಬ್ಬರನ್ನು ಪ್ರೀತಿಸುವವನು ನ್ಯಾಯಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ.
Cross references
- Matthew 22:17–21 ಮತ್ತಾಯನು 22:17–21ಆದದರಿಂದ-- ಕೈಸರನಿಗೆ ಕಪ್ಪವನ್ನು ಕೊಡುವದು ನ್ಯಾಯವೋ ನ್ಯಾಯವಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು. ಯೇಸು ಅವರ ಕೆಟ್ಟತನವನ್ನು ತಿಳಿದು ಕೊಂಡವನಾಗಿ--ಕಪಟಿಗಳೇ, ನೀವು ನನ್ನನ್ನು ಯಾಕೆ ಶೋಧಿಸುತ್ತೀರಿ? ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ ಅಂದನು. ಆಗ ಅವರು ಒಂದು ಪಾವಲಿ ಯನ್ನು ತಂದುಕೊಟ್ಟರು. ಆತನು ಅವರಿಗೆ--ಈ ರೂಪವೂ ಮೇಲ್ಬರಹವೂ ಯಾರದು ಎಂದು ಕೇಳಿ ದನು. ಅದಕ್ಕೆ ಅವರು ಆತನಿಗೆ--ಕೈಸರನದು ಅಂದರು. ಆಗ ಆತನು ಅವರಿಗೆ-ಕೈಸರನದವುಗಳನ್ನು ಕೈಸರನಿಗೆ ಕೊಡಿರಿ; ದೇವರವುಗಳನ್ನು ದೇವರಿಗೆ ಕೊಡಿರಿ ಅಂದನು.
- Luke 23:2 ಲೂಕನು 23:2ಅವರು ಆತನ ಮೇಲೆ ದೂರು ಹೇಳಲಾರಂಭಿಸಿ--ಈ ಮನುಷ್ಯನು ಜನಾಂಗವನ್ನು ತಪ್ಪು ದಾರಿಗೆ ನಡಿಸುವನಾಗಿ ತಾನೇ ಕ್ರಿಸ್ತನೆಂಬ ಅರಸನಾಗಿದ್ದನೆಂದೂ ಹೇಳಿ ಕೈಸರನಿಗೆ ಕಂದಾಯ ಕೊಡದಂತೆ ಇವನು ಅಡ್ಡಿ ಮಾಡುತ್ತಿರುವದನ್ನು ನಾವು ನೋಡಿದ್ದೇವೆಅಂದರು.
- Luke 20:21–26 ಲೂಕನು 20:21–26ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು. ಆದರೆ ಕೈಸರನಿಗೆ ಕಪ್ಪವನ್ನು ಸಲ್ಲಿಸುವದು ನ್ಯಾಯವೋ ಅಥವಾ ಅಲ್ಲವೋ ಎಂದು ಕೇಳಿದರು. ಆದರೆ ಆತನು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ--ನನ್ನನ್ನು ಯಾಕೆ ಶೋಧಿಸುತ್ತೀರಿ? ನನಗೆ ಒಂದು ನಾಣ್ಯವನ್ನು ತೋರಿಸಿರಿ. ಇದಕ್ಕೆ ಯಾವನ ರೂಪವೂ ಮೇಲ್ಬರಹವೂ ಇದೆ ಎಂದು ಅವರನ್ನು ಕೇಳಲು ಅವರು ಪ್ರತ್ಯುತ್ತರವಾಗಿ--ಕೈಸರನದು ಅಂದರು. ಆತನು ಅವರಿಗೆ--ಹಾಗಾದರೆ ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಅಂದನು. ಆಗ ಅವರು ಜನರ ಮುಂದೆ ಆತನನ್ನು ಮಾತುಗಳಲ್ಲಿ ಸಿಕ್ಕಿಸಲಾರದೆ ಆತನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಿದ್ದರು.
- Matthew 17:24–27 ಮತ್ತಾಯನು 17:24–27ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು. ಅವನು ಮನೆ ಯೊಳಕ್ಕೆ ಬಂದಾಗ ಯೇಸು ಮುಂದಾಗಿ ಅವನಿಗೆ--ಸೀಮೋನನೇ, ನಿನಗೆ ಹೇಗೆ ತೋರುತ್ತದೆ? ಭೂಲೋ ಕದ ರಾಜರು ಯಾರಿಂದ ಕಪ್ಪವನ್ನು ಇಲ್ಲವೆ ತೆರಿಗೆ ಯನ್ನು ತಕ್ಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ ಇಲ್ಲವೆ ಅನ್ಯರಿಂದಲೋ ಎಂದು ಕೇಳಿದನು. ಪೇತ್ರನು ಆತನಿಗೆ-- ಅನ್ಯರಿಂದ ಎಂದು ಹೇಳಲಾಗಿ ಆತನು ಅವನಿಗೆ--ಹಾಗಾದರೆ ಮಕ್ಕಳು ಸ್ವತಂತ್ರರೇ.ಹೀಗಿದ್ದರೂ ನಾವು ಅವರನ್ನು ಅಭ್ಯಂತರಪಡಿಸದಂತೆ ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಬರುವ ಮಾನನ್ನು ಹಿಡಿದು ಅದರ ಬಾಯನ್ನು ತೆರೆದರೆ ಅದರಲ್ಲಿ ಒಂದು ನಾಣ್ಯವನ್ನು ಕಾಣುವಿ; ಅದನ್ನು ತಕ್ಕೊಂಡು ನನ್ನದೂ ನಿನ್ನದೂ ಎಂದು ಹೇಳಿ ಅವರಿಗೆ ಕೊಡು ಎಂದು ಹೇಳಿದ ಹೀಗಿದ್ದರೂ ನಾವು ಅವರನ್ನು ಅಭ್ಯಂತರಪಡಿಸದಂತೆ ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಬರುವ ಮಾನನ್ನು ಹಿಡಿದು ಅದರ ಬಾಯನ್ನು ತೆರೆದರೆ ಅದರಲ್ಲಿ ಒಂದು ನಾಣ್ಯವನ್ನು ಕಾಣುವಿ; ಅದನ್ನು ತಕ್ಕೊಂಡು ನನ್ನದೂ ನಿನ್ನದೂ ಎಂದು ಹೇಳಿ ಅವರಿಗೆ ಕೊಡು ಎಂದು ಹೇಳಿದ
- Mark 12:14–17 ಮಾರ್ಕನು 12:14–17ಅವರು ಬಂದು ಆತನಿಗೆ--ಬೋಧಕನೇ, ನೀನು ಸತ್ಯವಂತನೂ ಯಾವ ಮನುಷ್ಯನನ್ನು ಲಕ್ಷಿಸದವನೂ ಎಂದು ನಮಗೆ ತಿಳಿದದೆ; ಯಾಕಂದರೆ ನೀನು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀ; ಕೈಸರನಿಗೆ ಕಪ್ಪಕೊಡುವದು ನ್ಯಾಯವೋ, ನ್ಯಾಯವಲ್ಲವೋ? ನಾವು ಕೊಡಬೇಕೋ ಇಲ್ಲವೆ ಕೊಡಬಾರದೋ ಎಂದು ಕೇಳಿದರು. ಆದರೆ ಆತನು ಅವರ ಕಪಟವನ್ನು ತಿಳಿದು ಅವರಿಗೆ--ನೀವು ನನ್ನನ್ನು ಯಾಕೆ ಶೋಧಿ ಸುತ್ತೀರಿ? ಒಂದು ನಾಣ್ಯವನ್ನು ತಂದು ನನಗೆ ತೋರಿಸಿರಿ ಎಂದು ಹೇಳಿದನು. ಅವರು ಅದನ್ನು ತಂದಾಗ ಆತನು ಅವರಿಗೆ--ಇದರ ರೂಪವು ಮತ್ತು ಮೇಲ್ಬರಹವು ಯಾರದು ಎಂದು ಕೇಳಿದ್ದಕ್ಕೆ ಅವರು ಆತನಿಗೆ--ಕೈಸರನದು ಎಂದು ಉತ್ತರ ಕೊಟ್ಟರು. ಆಗ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಎಂದು ಹೇಳಿದನು. ಇದಕ್ಕೆ ಅವರು ಆತನ ವಿಷಯದಲ್ಲಿ ಆಶ್ಚರ್ಯಪಟ್ಟರು.
- 1 Chronicles 18:14 1 ಪೂರ್ವಕಾಲವೃತ್ತಾಂತ 18:14ಹೀಗೆಯೇ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ, ತನ್ನ ಸಮಸ್ತ ಜನರಿಗೆ ನ್ಯಾಯವನ್ನೂ ನೀತಿಯನ್ನೂ ನಡಿಸಿದನು.
- Ezra 6:8 ಎಜ್ರನು 6:8ಇದಲ್ಲದೆ ದೇವರ ಈ ಆಲಯವನ್ನು ಕಟ್ಟುವದಕ್ಕೆ ಯೆಹೂದ್ಯರ ಹಿರಿಯರಿಗೆ ನೀವು ಮಾಡತಕ್ಕದ್ದನ್ನು ಕುರಿತು ನಾನು ಕೊಡುವ ಅಪ್ಪಣೆ ಏನಂದರೆ--ಅವರು ಅಭ್ಯಂತರ ಮಾಡಲ್ಪಡದ ಹಾಗೆ ನದಿಯ ಆಚೆಯಲ್ಲಿಂದ ಬರುವ ಅರಸನ ಕಪ್ಪದಿಂದಲೇ ಈ ಮನುಷ್ಯರಿಗೆ ಖರ್ಚು ಕೊಡಲ್ಪಡಲಿ.
- Exodus 18:13–27 ವಿಮೋಚನಕಾಂಡ 18:13–27ಮರುದಿನದಲ್ಲಿ ಮೋಶೆಯು ಜನರಿಗೆ ನ್ಯಾಯತೀರಿಸುವದಕ್ಕೆ ಕೂತುಕೊಂಡಾಗ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ಮೋಶೆಯ ಬಳಿಯಲ್ಲಿ ನಿಂತಿ ದ್ದರು. ಮೋಶೆಯು ಜನರಿಗೆ ಮಾಡುವದನ್ನೆಲ್ಲಾ ಮೋಶೆಯ ಮಾವನು ನೋಡಿ ಮೋಶೆಗೆ--ಇದೇನು ಜನರಿಗೆ ನೀನು ಮಾಡುವದು? ಯಾಕೆ ನೀನೊಬ್ಬನೇ ಕೂತಿರಲಾಗಿ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ನಿನ್ನ ಬಳಿಯಲ್ಲಿ ನಿಂತಿದ್ದಾರೆ ಅಂದನು. ಅದಕ್ಕೆ ಮೋಶೆಯು ತನ್ನ ಮಾವನಿಗೆ--ದೇವರ ವಿಷಯದಲ್ಲಿ ಕೇಳುವದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ. ಅವರಿಗೆ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ ಆತನ ನ್ಯಾಯ ಪ್ರಮಾಣಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ ಅಂದನು. ಮೋಶೆಯ ಮಾವನು ಅವನಿಗೆ--ನೀನು ಮಾಡುವ ಈ ಕಾರ್ಯವು ಸರಿಯಲ್ಲ; ನೀನೂ ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ, ಯಾಕಂದರೆ ಇದು ನಿನಗೆ ಬಹು ಭಾರ; ನೀನು ಸ್ವತಃ ಇದನ್ನು ಮಾಡಲಾರಿ. ಆದದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ; ದೇವರು ನಿನ್ನ ಸಂಗಡ ಇರಲಿ; ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು ಅವರ ವ್ಯಾಜ್ಯಗಳನ್ನು ಆತನ ಮುಂದೆ ತರಬೇಕು. ನೇಮಕಗಳನ್ನೂ ನ್ಯಾಯ ಪ್ರಮಾಣಗಳನ್ನೂ ಅವರಿಗೆ ಕಲಿಸಿ, ಅವರು ಹೋಗ ತಕ್ಕ ಮಾರ್ಗವನ್ನೂ ಅವರು ಮಾಡತಕ್ಕ ಕೆಲಸವನ್ನೂ ಅವರಿಗೆ ತೋರಿಸಬೇಕು. ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯ ಪಡುವವರೂ ಸತ್ಯವಂತರೂ ದುರಾಶೆಯನ್ನು ಹಗೆ ಮಾಡುವವರೂ ಆಗಿರುವ ಇಂಥವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು. ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ದೊಡ್ಡ ವ್ಯಾಜ್ಯ ಗಳನ್ನೆಲ್ಲಾ ನಿನ್ನ ಮುಂದೆ ತಂದು ಸಣ್ಣಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಬೇಕು. ಹೀಗೆ ನಿನಗೆ ಸುಲಭವಾಗು ವದು. ಅವರು ನಿನ್ನ ಸಂಗಡ ಭಾರವನ್ನು ಹೊರುವರು. ಈ ಕಾರ್ಯವನ್ನು ಮಾಡುವದಕ್ಕೆ ದೇವರು ನಿನಗೆ ಅಪ್ಪಣೆಕೊಟ್ಟರೆ ನೀನು ಇದನ್ನು ನಿರ್ವಹಿಸಲು ಶಕ್ತ ನಾಗುವಿ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು ಅಂದನು. ಮೋಶೆಯು ತನ್ನ ಮಾವನ ಮಾತನ್ನು ಕೇಳಿ ಅವನು ಹೇಳಿದ್ದನ್ನೆಲ್ಲಾ ಮಾಡಿದನು. ಮೋಶೆಯು ಇಸ್ರಾಯೇಲ್ಯರಲ್ಲಿ ಸಮರ್ಥರನ್ನು ಆರಿಸಿಕೊಂಡು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು. ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ಕಠಿಣ ವ್ಯಾಜ್ಯ ಗಳನ್ನು ಮೋಶೆಯ ಬಳಿಗೆ ತಂದು ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.ತರುವಾಯ ಮೋಶೆಯು ತನ್ನ ಮಾವನನ್ನು ಕಳುಹಿಸಲು ಅವನು ಸ್ವದೇಶಕ್ಕೆ ಹೋದನು. ತರುವಾಯ ಮೋಶೆಯು ತನ್ನ ಮಾವನನ್ನು ಕಳುಹಿಸಲು ಅವನು ಸ್ವದೇಶಕ್ಕೆ ಹೋದನು.
- Deuteronomy 1:9–17 ಧರ್ಮೋಪದೇಶಕಾಂಡ 1:9–17ಆ ಕಾಲದಲ್ಲಿ ನಾನು ನಿಮ್ಮೊಂದಿಗೆ ಮಾತನಾಡಿ-- ನಾನೊಬ್ಬನೇ ನಿಮ್ಮನ್ನು ಹೊರಲಾರೆನಂದೆನು. ನಿಮ್ಮ ದೇವರಾದ ಕರ್ತನು ನಿಮ್ಮನ್ನು ಹೆಚ್ಚಿಸಿದ್ದಾನೆ. ಇಗೋ, ನೀವು ಈ ಹೊತ್ತು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿದ್ದೀರಿ. ನೀವು ಈಗ ಇರುವದಕ್ಕಿಂತಲೂ ನಿಮ್ಮನ್ನು ಸಾವಿರದಷ್ಟು ಹೆಚ್ಚು ಮಾಡಿ ನಿಮಗೆ ಪ್ರಮಾಣ ಮಾಡಿದ ಹಾಗೆ ನಿಮ್ಮ ಪಿತೃಗಳ ದೇವರಾದ ಕರ್ತನು ಆಶೀರ್ವದಿಸಲಿ. ನಿಮ್ಮ ಚಿಂತೆಯನ್ನೂ ಭಾರವನ್ನೂ ವ್ಯಾಜ್ಯವನ್ನೂ ನಾನೊಬ್ಬನೇ ಹೇಗೆ ಹೊರಲಿ? ನಿಮ್ಮ ಗೋತ್ರಗಳಲ್ಲಿ ಪ್ರಸಿದ್ಧರಾಗಿದ್ದು ಜ್ಞಾನವೂ ಬುದ್ಧಿಯೂಳ್ಳ ಮನುಷ್ಯರನ್ನು ಆರಿಸಿಕೊಳ್ಳಿರಿ; ಆಗ ನಾನು ಅವರನ್ನು ನಿಮಗೆ ಮುಖ್ಯಸ್ಥರನ್ನಾಗಿ ಮಾಡುವೆನು ಅಂದನು. ಅದಕ್ಕೆ ನೀವು ನನಗೆ ಉತ್ತರ ಕೊಟ್ಟು ಹೇಳಿದ್ದೇನಂದರೆ--ನಿನ್ನ ಆಲೋ ಚನೆಯಂತೆ ಮಾಡುವದು ನಮಗೆ ಒಳ್ಳೇದು ಅಂದಾಗ ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ ನಿಮ್ಮ ಗೋತ್ರಗಳಿಗೆ ಅಧಿಕಾರಿಗಳಾಗಿಯೂ ಮಾಡಿದೆನು. ಆ ಕಾಲದಲ್ಲಿ ನಿಮ್ಮ ನ್ಯಾಯಾಧಿಪತಿಗಳಿಗೆ ಕೊಟ್ಟ ಅಪ್ಪಣೆ ಏನಂದರೆ--ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ಕೇಳಿ ಒಬ್ಬೊಬ್ಬ ನಿಗೂ ಅವನ ಸಹೋದರನಿಗೂ ಅವನ ಪರವಾ ಸಿಗೂ ನೀತಿಯಾಗಿ ನ್ಯಾಯತೀರಿಸಿರಿ. ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.
- 2 Samuel 8:5 2 ಸಮುವೇಲನು 8:5ಆದರೆ ದಮಸ್ಕದಲ್ಲಿರುವ ಅರಾಮ್ಯರು ಚೋಬದ ಅರಸನಾದ ಹದದೆಜೆರನಿಗೆ ಸಹಾಯಮಾಡುವದಕ್ಕೆ ಬಂದಾಗ ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದು ಹಾಕಿದನು.
- Nehemiah 5:4 ನೆಹೆಮೀಯ 5:4ಇನ್ನು ಕೆಲವರು--ಅರಸನಿಗೆ ಕಪ್ಪವನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ ನಮ್ಮ ದ್ರಾಕ್ಷೇ ತೋಟಗಳ ಮೇಲೆಯೂ ಸಾಲವನ್ನು ತೆಗೆದು ಕೊಂಡಿದ್ದೇವೆ.
- Romans 12:8 ರೋಮಾಪುರದವರಿಗೆ 12:8ಇಲ್ಲವೆ ಎಚ್ಚರಿಸುವವನು ಎಚ್ಚರಿಸುವದರಲ್ಲಿ ನಿರತನಾಗಿರಲಿ ಮತ್ತು ಕೊಡುವವನು ಯಥಾರ್ಥವಾಗಿ ಕೊಡಲಿ. ಆಳುವವನು ಶ್ರದ್ಧೆಯಿಂದ ಆಳಲಿ, ಕರುಣೆಯನ್ನು ತೋರಿಸುವವನು ಸಂತೋಷಪೂರ್ವಕವಾಗಿ ತೋರಿಸಲಿ.
Original words (Greek)
- For · G1063γάρ gár
- for · G1223διά diá
- cause · G5124τοῦτο toûto
- ye · G5055τελέω teléō
- tribute · G5411φόρος phóros
- also · G2532καί kaí
- for · G1063γάρ gár
- are · G1526εἰσί eisí
- God’s · G2316θεός theós
- ministers · G3011λειτουργός leitourgós
- continually · G4342προσκαρτερέω proskarteréō
- upon · G1519εἰς eis
- this · G5124τοῦτο toûto
- thing · G846αὐτός autós