Romans · chapter 4 · verse 2
Romans 4:2 in Kannada
ಅಬ್ರಹಾ ಮನು ಕ್ರಿಯೆಗಳಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವದಕ್ಕೆ ಅವನಿಗೆ ಅಸ್ಪದವಿರುವದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಆಸ್ಪದವಿರುವದಿಲ್ಲ.
Abrahaa manu kriyegalindale neetivantanaada pakshadalli hogalikolluvadakke avanige aspadaviruvadu; aadare devara munde hogalikolluvadakke aaspadaviruvadilla.
Romans 4:2 in English
- King James Version (KJV)
- For if Abraham were justified by works, he hath [whereof] to glory; but not before God.
- World English Bible (WEB)
- For if Abraham was justified by works, he has something to boast about, but not toward God.
- American Standard Version (ASV)
- For if Abraham was justified by works, he hath whereof to glory; but not toward God.
- Bible in Basic English (BBE)
- For if Abraham got righteousness by works, he has reason for pride; but not before God.
- Darby Translation (DBY)
- For if Abraham has been justified on the principle of works, he has whereof to boast: but not before God;
- Webster's Bible (WBS)
- For if Abraham were justified by works, he hath [whereof] to glory, but not before God.
- Young's Literal Translation (YLT)
- for if Abraham by works was declared righteous, he hath to boast — but not before God;
Read in context
- 1ಹಾಗಾದರೆ ನಮ್ಮ ಮೂಲಪಿತೃವಾಗಿರುವ ಅಬ್ರಹಾಮನು ಶರೀರಸಂಬಂಧವಾಗಿ ಏನು ಪಡೆದುಕೊಂಡನೆಂದು ಹೇಳಬೇಕು?
- 2ಅಬ್ರಹಾ ಮನು ಕ್ರಿಯೆಗಳಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವದಕ್ಕೆ ಅವನಿಗೆ ಅಸ್ಪದವಿರುವದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಆಸ್ಪದವಿರುವದಿಲ್ಲ.
- 3ಹಾಗಾದರೆ ಬರಹವು ಹೇಳುವ ದೇನು? ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು.
- 4ಕೆಲಸ ಮಾಡಿದವನಿಗೆ ಬರುವ ಸಂಬಳವು ಕೃಪೆಯಿಂದ ದೊರಕುವಂಥದ್ದೆಂದು ಎಣಿಕೆ ಯಾಗುವದಿಲ್ಲ; ಅದು ಸಲ್ಲತಕ್ಕದ್ದೇ.
Cross references
- 1 Corinthians 1:31 1 ಕೊರಿಂಥದವರಿಗೆ 1:31ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
- 2 Corinthians 11:30 2 ಕೊರಿಂಥದವರಿಗೆ 11:30ನಾನು ಹೆಚ್ಚಳಪಡಲೇಬೇಕಾದರೆ ನನ್ನ ಬಲ ಹೀನತೆಗಳಲ್ಲಿ ಹೆಚ್ಚಳಪಡುವೆನು.
- Philippians 3:9 ಫಿಲಿಪ್ಪಿಯವರಿಗೆ 3:9ನಾನು ಕ್ರಿಸ್ತನಲ್ಲಿರುವ ವನಾಗಿ ಕಾಣಿಸಿಕೊಳ್ಳಬೇಕೆಂದು ನ್ಯಾಯಪ್ರಮಾಣ ದಿಂದಾಗುವ ಸ್ವನೀತಿಯನ್ನಾಶ್ರಯಿಸದೆ ಆತನನ್ನು ನಂಬು ವದರಿಂದ ದೊರಕುವಂಥ ಅಂದರೆ ನಂಬಿಕೆಯ ಆಧಾರ ದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ದ್ದೇನೆ.
- Galatians 3:22 ಗಲಾತ್ಯದವರಿಗೆ 3:22ಹಾಗಾದರೆ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡು ವದರಿಂದ ಉಂಟಾಗುವ ಆ ವಾಗ್ದಾನವು ನಂಬುವ ವರಿಗೇ ಕೊಡಲ್ಪಡುವಂತೆ ಎಲ್ಲರೂ ಪಾಪಕ್ಕೊಳ ಗಾಗಿದ್ದಾರೆಂದು ಬರಹವು ತೀರ್ಮಾನಿಸಿತು.
- Ephesians 2:9 ಎಫೆಸದವರಿಗೆ 2:9ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ.
- Romans 3:20–28 ರೋಮಾಪುರದವರಿಗೆ 3:20–28ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ. ಈಗಲಾದರೋ ದೇವರ ನೀತಿಯು ನ್ಯಾಯ ಪ್ರಮಾಣವಿಲ್ಲದೆ ಪ್ರಕಟವಾಗಿದೆ. ಅದು ನ್ಯಾಯ ಪ್ರಮಾಣದಿಂದಲೂ ಪ್ರವಾದಿಗಳಿಂದಲೂ ಸಾಕ್ಷಿಗೊಂ ಡಿದೆ. ದೇವರಿಂದಾಗುವ ಆ ನೀತಿಯು ಯಾವ ದೆಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ. ನಂಬುವವರೆಲ್ಲರಿಗೆ ಮತ್ತು ಎಲ್ಲರ ಮೇಲೆಯೂ ದೊರ ಕುವಂಥದು. ಹೆಚ್ಚು ಕಡಿಮೆ ಏನೂ ಇಲ್ಲ; ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿ ದ್ದಾರೆ. ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು. ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿವಂತನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತ ರೆಂದು ನಿರ್ಣಯಿಸುವವನಾಗಿಯೂ ಪ್ರಸಿದ್ಧಿಪಡಿಸಿ ಕೊಂಡನು. ಹಾಗಾದರೆ ಹೊಗಳಿಕೊಳ್ಳುವದು ಹೇಗೆ? ಅದು ಇಲ್ಲದೆ ಹೋಯಿತು. ಯಾವ ನಿಯಮದಿಂದ? ಕ್ರಿಯೆಗಳಿಂದಲೋ? ಅಲ್ಲ; ವಿಶ್ವಾಸ ನಿಯಮವನ್ನು ಅನುಸರಿಸುವದರಿಂದಲೇ. ಆದದರಿಂದ ನ್ಯಾಯ ಪ್ರಮಾಣದ ಕ್ರಿಯೆಗಳಿಲ್ಲದೆ ನಂಬಿಕೆಯಿಂದಲೇ ಮನು ಷ್ಯನು ನೀತಿವಂತನೆಂದು ನಿರ್ಣಯಿಸಲ್ಪಡುವನೆಂಬ ದಾಗಿ ನಾವು ತೀರ್ಮಾನಿಸಿಕೊಂಡಿದ್ದೇವಲ್ಲಾ.
- 1 Corinthians 9:16 1 ಕೊರಿಂಥದವರಿಗೆ 9:16ನಾನು ಸುವಾರ್ತೆಯನ್ನು ಸಾರಿದರೂ ಹೆಚ್ಚಳ ಪಡುವದಕ್ಕೆ ನನಗೇನೂ ಇಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲೆ ಇದೆ. ಹೌದು, ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ!
- Galatians 6:13–14 ಗಲಾತ್ಯದವರಿಗೆ 6:13–14ಸುನ್ನತಿ ಮಾಡಿಸಿಕೊಳ್ಳುವ ತಾವಾದರೊ ನ್ಯಾಯಪ್ರಮಾಣ ವನ್ನು ಕೈಕೊಂಡು ನಡೆಯುವದಿಲ್ಲ. ಆದರೆ ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳ ಪಡುವದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ. ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ. ಆತನ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡಿತು. ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ.
- 1 Corinthians 1:29 1 ಕೊರಿಂಥದವರಿಗೆ 1:29ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
- 2 Corinthians 12:1–9 2 ಕೊರಿಂಥದವರಿಗೆ 12:1–9ಹೆಚ್ಚಳಪಡುವದು ಹೇಗೂ ವಿಹಿತವಲ್ಲ ದಿದ್ದರೂ ಅದು ನನಗೆ ಅವಶ್ಯವಾಗಿದೆ; ಆದದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳ ಮತ್ತು ಪ್ರಕಟನೆಗಳ ವಿಷಯವಾಗಿ ಹೇಳುತ್ತೇನೆ. ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು ಹದಿನಾಲ್ಕು ವರುಷಗಳ ಹಿಂದೆ ಮೂರನೇ ಪರಲೋಕಕ್ಕೆ ಒಯ್ಯಲ್ಪಟ್ಟನು. (ಅವನ ದೇಹಸಹಿತನಾಗಿ ಒಯ್ಯಲ್ಪಟ್ಟನೋ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನು ಹೇಳಲಾರೆನು; ದೇವರೇ ಬಲ್ಲನು.) ಅಂಥ ಮನುಷ್ಯನೊಬ್ಬನನ್ನು ನಾನು ಬಲ್ಲೆನು; (ಅವನು ದೇಹಸಹಿತನಾಗಿದ್ದನೋ ದೇಹ ರಹಿತನಾಗಿದ್ದನೋ ನಾನು ಹೇಳಲಾರೆನು, ದೇವರೇ ಬಲ್ಲನು;) ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯನು ನುಡಿಯಲಶಕ್ಯವಾದ ಆಡಲಾಗದ ಮಾತುಗಳನ್ನು ಕೇಳಿದನು. ಅಂಥವನನ್ನು ಕುರಿತು ಹೆಚ್ಚಳಪಡುವೆನು, ನನ್ನನ್ನು ಕುರಿತಾದರೋ ನನ್ನ ನಿರ್ಬಲಾವಸ್ಥೆಗಳಲ್ಲಿಯೇ ಹೊರತು ಬೇರೆ ಹೆಚ್ಚಳ ಪಡುವದಿಲ್ಲ. ಹೊಗಳಿಕೊಳ್ಳುವದಕ್ಕೆ ನನಗೆ ಮನಸ್ಸಿ ದ್ದರೂ ನಾನು ಬುದ್ದಿಹೀನನಾಗುವದಿಲ್ಲ. ಯಾಕಂದರೆ ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾವನೂ ನನ್ನಲ್ಲಿ ಕಾಣುವದಕ್ಕಿಂತಲೂ ನನ್ನಿಂದ ಕೇಳುವದ ಕ್ಕಿಂತಲೂ ಹೆಚ್ಚಾಗಿ ನನ್ನನ್ನು ಕುರಿತು ಎಣಿಸದಂತೆ ನಾನು ಮೌನವಾಗಿರುವೆನು; ಇದಲ್ಲದೆ ಹೇರಳವಾದ ಪ್ರಕಟಣೆಗಳ ಮೂಲಕ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಬಾರದೆಂದು ನನ್ನನ್ನು ಗುದ್ದುವದಕ್ಕಾಗಿ ಸೈತಾನನ ದೂತನಂತೆ ನನ್ನ ಶರೀರದಲ್ಲಿ ಒಂದು ಮುಳ್ಳು ನನಗೆ ಕೊಡಲ್ಪಟ್ಟಿದೆ; ಹೀಗೆ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಲಾರದಂತೆ ಇದಾಯಿತು. ಈ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು. ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು.
- Romans 15:17 ರೋಮಾಪುರದವರಿಗೆ 15:17ಆದದರಿಂದ ದೇವರಿಗೆ ಸಂಬಂಧಪಟ್ಟವುಗಳಲ್ಲಿ ಯೇಸು ಕ್ರಿಸ್ತನ ಮೂಲಕ ನಾನು ಹೆಚ್ಚಳಪಡುತ್ತೇನೆ.
- Jeremiah 9:23–24 ಯೆರೆಮೀಯ 9:23–24ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ. ಆದರೆ ಹೆಚ್ಚಳ ಪಡುವವನು ಇದರಲ್ಲಿ ಹೆಚ್ಚಳಪಡಲಿ; ಯಾವದರಲ್ಲಿ ಅಂದರೆ ಕರ್ತನಾದ ನಾನು ಭೂಮಿಯಲ್ಲಿ ಕೃಪೆಯನ್ನೂ ನ್ಯಾಯವನ್ನೂ ನೀತಿಯನ್ನೂ ನಡಿಸುವವನಾಗಿದ್ದೇ ನೆಂದು ನನ್ನನ್ನು ಗ್ರಹಿಸಿ ತಿಳುಕೊಳ್ಳುವದರಲ್ಲಿಯೇ; ಇವುಗಳಲ್ಲಿ ನಾನು ಸಂತೋಷ ಪಡುತ್ತೇನೆಂದು ಕರ್ತನು ಅನ್ನುತ್ತಾನೆ.