Romans · chapter 6 · verse 15
Romans 6:15 in Kannada
ಹಾಗಾದರೇನು? ನಾವು ನ್ಯಾಯಪ್ರಮಾಣಾ ಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಹಾಗೆ ಎಂದಿಗೂ ಅಲ್ಲ.
Haagaadarenu? Naavu nyaayapramaanaa dheenaralla, krupege adheenaraagiddevendu paapavannu maadabahudo? Haage endigoo alla.
Romans 6:15 in English
- King James Version (KJV)
- What then? shall we sin, because we are not under the law, but under grace? God forbid.
- World English Bible (WEB)
- What then? Shall we sin because we are not under law but under grace? May it never be!
- American Standard Version (ASV)
- What then? shall we sin, because we are not under law, but under grace? God forbid.
- Bible in Basic English (BBE)
- What then? are we to go on in sin because we are not under law but under grace? Let it not be so.
- Darby Translation (DBY)
- What then? should we sin because we are not under law but under grace? Far be the thought.
- Webster's Bible (WBS)
- What then? shall we sin, because we are not under the law, but under grace? By no means.
- Young's Literal Translation (YLT)
- What then? shall we sin because we are not under law but under grace? let it not be!
Read in context
- 13ಇಲ್ಲವೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಳಪಡಿಸುವವರಾಗಿದ್ದು ಅನೀತಿಯನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿಸುವವರೋ ಎಂಬಂತೆ ನೀತಿಕಾರ್ಯಗಳನ್ನು ನಡಿಸುವ ಸಾಧನಗಳನ್ನಾಗಿ ನಿಮ್ಮ ಅಂಗಗಳನ್ನು ದೇವರಿಗೆ ಒಳಪಡಿಸಿರಿ.
- 14ಯಾಕಂದರೆ ಪಾಪವು ನಿಮ್ಮ ಮೇಲೆ ಪ್ರಭುತ್ವ ನಡಿಸಬಾರದು; ಕಾರಣವೇನಂದರೆ ನೀವು ನ್ಯಾಯಪ್ರಮಾಣಾಧೀನ ರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
- 15ಹಾಗಾದರೇನು? ನಾವು ನ್ಯಾಯಪ್ರಮಾಣಾ ಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಹಾಗೆ ಎಂದಿಗೂ ಅಲ್ಲ.
- 16ನೀವು ಯಾರಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತಿರೋ ಅವರಿಗೆ ದಾಸರಾಗಿಯೇ ವಿಧೇ ಯರಾಗಿರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ; ಇಲ್ಲವೆ ವಿಧೇಯತ್ವಕ್ಕೆ ದಾಸ ರಾದರೆ ನೀತಿಯೇ.
- 17ಆದರೆ ನೀವು ಪಾಪಕ್ಕೆ ದಾಸ ರಾಗಿದ್ದರೂ ನಿಮಗೆ ಒಪ್ಪಿಸಲ್ಪಟ್ಟ ಬೋಧನೆಗೆ ನೀವು ಹೃದಯಪೂರ್ವಕವಾಗಿ ಅಧೀನರಾದದರಿಂದ ದೇವ ರಿಗೆ ಸ್ತೋತ್ರವಾಗಲಿ.
Cross references
- Titus 2:11–14 ತೀತನಿಗೆ 2:11–14ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು. ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ. ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ. ಆತನು ನಮ್ಮನ್ನು ಸಕಲ ದುಷ್ಟತನದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಅಸಮಾನ್ಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ತಾನೇ ಒಪ್ಪಿಸಿ ಕೊಟ್ಟನು.ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
- Ephesians 2:8–10 ಎಫೆಸದವರಿಗೆ 2:8–10ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ. ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ. ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
- Romans 6:1–2 ರೋಮಾಪುರದವರಿಗೆ 6:1–2ಹಾಗಾದರೆ ಏನು ಹೇಳೋಣ? ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ? ಹಾಗೆ ಎಂದಿಗೂ ಅಲ್ಲ; ಪಾಪದ ಪಾಲಿಗೆ ಸತ್ತವರಾದ ನಾವು ಇನ್ನೂ ಅದರಲ್ಲಿ ಬದುಕು ವದು ಹೇಗೆ?
- 2 Corinthians 7:1 2 ಕೊರಿಂಥದವರಿಗೆ 7:1ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.
- Jude 1:4 ಯೂದನು 1:4ಯಾಕಂದರೆ ಭಕ್ತಿಹೀನರೂ ನಮ್ಮ ದೇವರ ಕೃಪೆಯನ್ನು ನೆವ ಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಕರ್ತನಾದ ದೇವರನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಈ ಕೆಲವು ಜನರು ರಹಸ್ಯವಾಗಿ ಒಳಗೆ ಹೊಕ್ಕಿದ್ದಾರೆ; ಇವರು ಈ ದಂ
- 1 Corinthians 9:20–21 1 ಕೊರಿಂಥದವರಿಗೆ 9:20–21ಇದಲ್ಲದೆ ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ನಾನು ಯೆಹೂದ್ಯನಾಗಿಯೂ ನ್ಯಾಯ ಪ್ರಮಾಣದ ಅಧೀನದಲ್ಲಿರುವವರನ್ನು ಸಂಪಾದಿಸಿ ಕೊಳ್ಳುವಂತೆ ನ್ಯಾಯಪ್ರಮಾಣಕ್ಕೆ ಅಧೀನರಾಗಿರು ವವರಿಗೆ ನ್ಯಾಯಪ್ರಮಾಣಕ್ಕೆ ಅಧೀನನಾಗಿಯೂ (ನಾನು ದೇವರ ನ್ಯಾಯಪ್ರಮಾಣವಿಲ್ಲದವ ನಂತಲ್ಲ, ಕ್ರಿಸ್ತನ ನ್ಯಾಯಪ್ರಮಾಣಕ್ಕೆ ಒಳಗಾದವನೇ;) ನ್ಯಾಯಪ್ರಮಾಣವಿಲ್ಲದವರನ್ನು ಸಂಪಾದಿಸಿಕೊಳ್ಳು ವದಕ್ಕಾಗಿ ಅವರಿಗೆ ನ್ಯಾಯಪ್ರಮಾಣವಿಲ್ಲದವ ನಂತೆಯೂ ಆದೆನು.
- Galatians 2:17–18 ಗಲಾತ್ಯದವರಿಗೆ 2:17–18ಆದರೆ ನಾವು ಕ್ರಿಸ್ತನ ಮೂಲಕ ನೀತಿವಂತರೆಂಬ ನಿರ್ಣಯ ಹೊಂದು ವದಕ್ಕೆ ಪ್ರಯತ್ನಿಸುತ್ತಿರುವಾಗ ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸೇವಕನೆಂದು ಹೇಳ ಬೇಕೇನು? ಹಾಗೆ ಎಂದಿಗೂ ಹೇಳಬಾರದು. ನಾನು ಕೆಡವಿದವುಗಳನ್ನು ತಿರಿಗಿ ಕಟ್ಟಿದರೆ ನನ್ನನ್ನು ನಾನೇ ಅಪರಾಧಿಯನ್ನಾಗಿ ಮಾಡಿಕೊಳ್ಳುತ್ತೇನಲ್ಲಾ.
- Romans 3:9 ರೋಮಾಪುರದವರಿಗೆ 3:9ಹಾಗಾದರೆ ಏನು? ನಾವು ಅವರಿಗಿಂತಲೂ ಉತ್ತಮರಾಗಿದ್ದೇವೋ? ಇಲ್ಲವೇ ಇಲ್ಲ; ಯಾಕಂದರೆ ಯೆಹೂದ್ಯರೂ ಅನ್ಯಜನರೂ ಎಲ್ಲರೂ ಪಾಪಕ್ಕೊಳಗಾಗಿದ್ದಾರೆಂದು ಮೊದಲೇ ನಾವು ಸ್ಥಾಪಿಸಿ ದ್ದೇವಲ್ಲಾ.