Song of Solomon · chapter 1 · verse 3
Song of Solomon 1:3 in Kannada
ನಿನ್ನ ಒಳ್ಳೇ ತೈಲಗಳ ಪರಿಮಳದಂತೆ ನಿನ್ನ ಹೆಸರು ಹೊಯ್ಯಲ್ಪಟ್ಟ ತೈಲವಾಗಿದೆ; ಆದದರಿಂದ ಕನ್ನಿಕೆಯರು ನಿನ್ನನ್ನು ಪ್ರೀತಿಮಾಡುತ್ತಾರೆ.
Ninna olle tailagala parimaladante ninna hesaru hoyyalpatta tailavaagide; aadadarinda kannikeyaru ninnannu preetimaaduttaare.
Song of Solomon 1:3 in English
- King James Version (KJV)
- Because of the savour of thy good ointments thy name [is as] ointment poured forth, therefore do the virgins love thee.
- World English Bible (WEB)
- Your oils have a pleasing fragrance. Your name is oil poured out, therefore the virgins love you.
- American Standard Version (ASV)
- Thine oils have a goodly fragrance; Thy name is [as] oil poured forth; Therefore do the virgins love thee.
- Bible in Basic English (BBE)
- Sweet is the smell of your perfumes; your name is as perfume running out; so the young girls give you their love.
- Darby Translation (DBY)
- Thine ointments savour sweetly; Thy name is an ointment poured forth: Therefore do the virgins love thee.
- Webster's Bible (WBS)
- Because of the savor of thy good ointments thy name [is as] ointment poured forth, therefore do the virgins love thee.
- Young's Literal Translation (YLT)
- For fragrance [are] thy perfumes good. Perfume emptied out — thy name, Therefore have virgins loved thee!
Read in context
- 1ಸೊಲೊಮೋನನ ಗೀತಗಳ ಗೀತ.
- 2ತನ್ನ ಬಾಯಿಯ ಮುದ್ದುಗಳಿಂದ ನನಗೆ ಮುದ್ದಿ ಡಲಿ; ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ.
- 3ನಿನ್ನ ಒಳ್ಳೇ ತೈಲಗಳ ಪರಿಮಳದಂತೆ ನಿನ್ನ ಹೆಸರು ಹೊಯ್ಯಲ್ಪಟ್ಟ ತೈಲವಾಗಿದೆ; ಆದದರಿಂದ ಕನ್ನಿಕೆಯರು ನಿನ್ನನ್ನು ಪ್ರೀತಿಮಾಡುತ್ತಾರೆ.
- 4ನನ್ನನ್ನು ಎಳಕೋ, ನಾವು ನಿನ್ನ ಹಿಂದೆ ಓಡುವೆವು; ಅರಸನು ನನ್ನನ್ನು ತನ್ನ ಕೊಠಡಿಗಳಿಗೆ ಕರಕೊಂಡು ಬಂದಿದ್ದಾನೆ. ನಾವು ನಿನ್ನಲ್ಲಿ ಉಲ್ಲಾಸಪಟ್ಟು ಸಂತೋಷಪಡುತ್ತೇವೆ; ದ್ರಾಕ್ಷಾರಸ ಕ್ಕಿಂತ ನಿನ್ನ ಪ್ರೀತಿಯನ್ನು ಜ್ಞಾಪಕಮಾಡುತ್ತೇವೆ; ಯಥಾ ರ್ಥರು ನಿನ್ನನ್ನು ಪ್ರೀತಿಮಾಡುತ್ತಾರೆ.
- 5ನಾನು ಕಪ್ಪಾದವಳು; ಆದರೂ ಓ ಯೆರೂಸ ಲೇಮಿನ ಕುಮಾರ್ತೆಯರೇ, ಕೆದಾರಿನ ಗುಡಾರಗಳ ಹಾಗೆಯೂ ಸೊಲೊಮೋನನ ತೆರೆಗಳ ಹಾಗೆಯೂ ಸುಂದರಿಯಾಗಿದ್ದೇನೆ.
Cross references
- Ecclesiastes 7:1 ಪ್ರಸಂಗಿ 7:1ಅಮೂಲ್ಯವಾದ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಒಬ್ಬನ ಜನ್ಮದಿನಕ್ಕಿಂತ ಮರಣದ ದಿನವೇ ಮೇಲು.
- Song of Solomon 4:10 ಪರಮಗೀತೆ 4:10ನಿನ್ನ ಪ್ರೀತಿಯು ಎಷ್ಟೋ ಚಂದ! ನನ್ನ ಸಹೋದರಿಯೇ, ವಧುವೇ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧ ಗಳಿಗಿಂತ ನಿನ್ನ ತೈಲಗಳ ವಾಸನೆಯು ಎಷ್ಟೋ ಉತ್ತಮ!
- John 12:3 ಯೋಹಾನನು 12:3ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆಯ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು; ಆ ತೈಲದ ಪರಿ ಮಳವು ಮನೆಯಲ್ಲಿ ತುಂಬಿಕೊಂಡಿತ್ತು.
- Exodus 30:23–28 ವಿಮೋಚನಕಾಂಡ 30:23–28ಉತ್ತಮ ವಾದ ತೈಲಗಳನ್ನು ಅಂದರೆ ಐದುನೂರು ಶೆಕೆಲ್ ಸ್ವಚ್ಚವಾದ ರಕ್ತ ಬೋಳವು, ಅದರ ಅರ್ಧದಷ್ಟು ಅಂದರೆ ಇನ್ನೂರೈವತ್ತು ಶೆಕೆಲಿನ ಸುಗಂಧವಾದ ಲವಂಗ ಪಟ್ಟೆ ಯನ್ನು ಮತ್ತು ಇನ್ನೂರೈವತ್ತು ಶೆಕೆಲ್ ಸುಗಂಧವಾದ ಬಜೆಯನ್ನು, ಐದುನೂರು ಶೆಕೆಲ್ದಾಲ್ಚಿನ್ನಿಯನ್ನು, ಪರಿಶುದ್ಧ ಸ್ಥಳದ ಶೆಕೆಲಿನ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಹಿಪ್ಪೆ ಎಣ್ಣೆಯ ಒಂದು ಹಿನ್ನೆಯನ್ನು ಸಹ ತೆಗೆದುಕೊಂಡು, ಅದರಿಂದ ತೈಲಗಾರರ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡು, ಇದು ಪರಿಶುದ್ಧವಾದ ಅಭಿಷೇಕದ ತೈಲವಾಗಿ ರುವದು. ಅದರಿಂದ ಸಭೆಯ ಗುಡಾರವನ್ನೂ ಸಾಕ್ಷಿಯ ಹಲಗೆಗಳ ಮಂಜೂಷವನ್ನೂ ನೀನು ಅಭಿಷೇ ಕಿಸಬೇಕು. ಮೇಜನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ದೀಪಸ್ತಂಭವನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ಧೂಪವೇದಿಯನ್ನೂ ದಹನಬಲಿಯ ವೇದಿಯನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಗಂಗಾ ಳವನ್ನೂ ಅದರ ಪೀಠವನ್ನೂ ಅಭಿಷೇಕಿಸು.
- Philippians 2:9–10 ಫಿಲಿಪ್ಪಿಯವರಿಗೆ 2:9–10ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
- Psalm 45:7–8 ಕೀರ್ತನೆಗಳು 45:7–8ನೀನು ನೀತಿಯನ್ನು ಪ್ರೀತಿ ಮಾಡುತ್ತೀ; ದುಷ್ಟತ್ವವನ್ನು ಹಗೆಮಾಡುತ್ತೀ; ಆದದ ರಿಂದ ದೇವರು, ನಿನ್ನ ದೇವರು, ನಿನ್ನ ಸಂಗಡಿಗರಿಗಿಂತ ಹೆಚ್ಚಾಗಿ ನಿನ್ನನ್ನು ಆನಂದ ತೈಲದಿಂದ ಅಭಿಷೇಕಿಸಿ ದ್ದಾನೆ. ನಿನ್ನ ವಸ್ತ್ರಗಳೆಲ್ಲಾ ಬೋಳವು ಅಗರು ದಾಲ್ಚಿನ್ನಿ ಇವುಗಳ ಸುವಾಸನೆಯಿಂದ ಇರುತ್ತವೆ. ಇವುಗಳಿಂದ ಅವರು ದಂತದ ಅರಮನೆಗಳೊಳಗಿಂದ ನಿನ್ನನ್ನು ಸಂತೋಷಪಡಿಸುತ್ತಾರೆ.
- Revelation 14:4 ಪ್ರಕಟನೆ 14:4ಸ್ತ್ರೀಯ ರೊಂದಿಗೆ ಮಲಿನರಾಗದವರು ಇವರೇ. ಯಾಕಂದರೆ ಇವರು ಕನ್ನಿಕೆಯರು. ಕುರಿಮರಿಯಾದಾತನು ಎಲ್ಲಿಗೆ ಹೋದರೂ ಆತನ ಹಿಂದೆ ಹೋಗುವವರು ಇವರೇ. ದೇವರಿಗೂ ಕುರಿಮರಿಯಾದಾತನಿಗೂ ಪ್ರಥಮ ಫಲ ವಾಗಿರುವ ಇವರು ಮನುಷ್ಯರೊಳಗಿಂದ ವಿಮೋಚಿಸ ಲ್ಪಟ್ಟವರು.
- 2 Corinthians 2:14–16 2 ಕೊರಿಂಥದವರಿಗೆ 2:14–16ಕ್ರಿಸ್ತನಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವ ದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನ ವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ; ರಕ್ಷಣೆ ಹೊಂದಿದವರಲ್ಲಿಯೂ ನಾಶವಾಗುವವರಲ್ಲಿಯೂ ನಾವು ದೇವರಿಗಾಗಿ ಕ್ರಿಸ್ತನ ಪರಿಮಳವಾಗಿದ್ದೇವೆ. ನಾವು ನಾಶವಾಗುವವರಿಗೆ ಮರಣದಿಂದಾದ ಮರಣದ ವಾಸನೆಯಾಗಿಯೂ ರಕ್ಷಿಸಲ್ಪಟ್ಟವರಿಗೆ ಜೀವದಿಂದಾದ ಜೀವದ ಸುವಾಸನೆ ಯಾಗಿಯೂ ಇದ್ದೇವೆ; ಹೀಗಿರುವಾಗ ಇವುಗಳಿಗೆ ಯೋಗ್ಯನು ಯಾರು?ನಾವು ದೇವರ ವಾಕ್ಯವನ್ನು ಕಲಬೆರಿಕೆ ಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಹೊಂದಿದ ವರಿಗೆ ತಕ್ಕ ಹಾಗೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತನಾಡುತ್ತೇವೆ.
- Psalm 133:2 ಕೀರ್ತನೆಗಳು 133:2ಅದು ತಲೆಯ ಮೇಲಿದ್ದು ಗಡ್ಡದ ಮೇಲೆ ಅಂದರೆ ಆರೋನನ ಗಡ್ಡದ ಮೇಲೆ ಇಳಿದು ಅವನ ವಸ್ತ್ರಗಳ ಅಂಚಿನ ವರೆಗೂ ಇಳಿಯುವ ಶ್ರೇಷ್ಠ ತೈಲದ ಹಾಗೆಯೂಚೀಯೋನಿನ ಪರ್ವತಗಳ ಮೇಲೆ ಬೀಳುವ ಹೆರ್ಮೋನಿನ ಮಂಜಿನ ಹಾಗೆಯೂ ಅದೆ; ಅಲ್ಲಿ ಕರ್ತನು ಆಶೀರ್ವಾದವನ್ನೂ ಯುಗಯುಗಕ್ಕಿರುವ ಜೀವವನ್ನೂ ಆಜ್ಞಾಪಿಸಿದ್ದಾನೆ.
- Philippians 4:18 ಫಿಲಿಪ್ಪಿಯವರಿಗೆ 4:18ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆ ಯಾದದ್ದು; ಸುಗಂಧವಾಸನೆಯೇ, ಇಷ್ಟಯಜ್ಞವೇ
- Psalm 45:14 ಕೀರ್ತನೆಗಳು 45:14ಇವಳು ಕಸೂತಿ ವಸ್ತ್ರಗಳನ್ನುಟ್ಟು ಅರಸನ ಬಳಿಗೆ ತರಲ್ಪಡುತ್ತಾಳೆ; ಅವಳ ಹಿಂದೆ ಇರುವ ಕನ್ಯೆಯರಾದ ಅವಳ ಸಂಗಡಿಗರು ನಿನ್ನ ಬಳಿಗೆ ತರಲ್ಪಡುತ್ತಾರೆ.
- Isaiah 61:3 ಯೆಶಾಯ 61:3ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.