Song of Solomon · chapter 5 · verse 11
Song of Solomon 5:11 in Kannada
ಅವನ ತಲೆಯು ಅತಿ ಚೊಕ್ಕ ಬಂಗಾರದ ಹಾಗೆಯೂ ಅವನ ಕೂದಲು ಗುಂಗುರು ಕೂದಲೂ ಕಾಗೆಯ ಹಾಗೆ ಕಪ್ಪಾಗಿಯೂ ಅವೆ.
Avana taleyu ati chokka bangaarada haageyoo avana koodalu gunguru koodaloo kaageya haage kappaagiyoo ave.
Song of Solomon 5:11 in English
- King James Version (KJV)
- His head [is as] the most fine gold, his locks [are] bushy, [and] black as a raven.
- World English Bible (WEB)
- His head is like the purest gold. His hair is bushy, black as a raven.
- American Standard Version (ASV)
- His head is [as] the most fine gold; His locks are bushy, [and] black as a raven.
- Bible in Basic English (BBE)
- His head is as the most delicate gold; his hair is thick, and black as a raven.
- Darby Translation (DBY)
- His head is [as] the finest gold; His locks are flowing, black as the raven;
- Webster's Bible (WBS)
- His head [is as] the most fine gold, his locks [are] bushy, [and] black as a raven.
- Young's Literal Translation (YLT)
- His head [is] pure gold — fine gold, His locks flowing, dark as a raven,
Read in context
- 9ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯ ವೇನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನೀನು ನಮಗೆ ಹೀಗೆ ಆಣೆ ಇಡುವದಕ್ಕೆ ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು?
- 10ನನ್ನ ಪ್ರಿಯನು ಬಿಳುಪೂ ಕೆಂಪೂ ಉಳ್ಳವನು; ಹತ್ತು ಸಾವಿರ ಜನರಲ್ಲಿ ಮೇಲಾದವನು.
- 11ಅವನ ತಲೆಯು ಅತಿ ಚೊಕ್ಕ ಬಂಗಾರದ ಹಾಗೆಯೂ ಅವನ ಕೂದಲು ಗುಂಗುರು ಕೂದಲೂ ಕಾಗೆಯ ಹಾಗೆ ಕಪ್ಪಾಗಿಯೂ ಅವೆ.
- 12ಅವನ ಕಣ್ಣುಗಳು ಯುಕ್ತವಾಗಿ ಇರಿಸಲ್ಪಟ್ಟು ಹಾಲಿನಿಂದ ತೊಳೆಯಲ್ಪಟ್ಟ ಜಲದ ಕಾಲಿವೆಗಳ ಬಳಿಯಲ್ಲಿರುವ ಪಾರಿವಾಳಗಳ ಕಣ್ಣುಗಳ ಹಾಗೆ ಅವೆ.
- 13ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ.
Cross references
- Daniel 7:9 ದಾನಿಯೇಲನು 7:9ನಾನು ನೋಡುತ್ತಿದ್ದ ಹಾಗೆಯೇ ಸಿಂಹಾಸನಗಳು ಹಾಕಲ್ಪಟ್ಟು ಅದರ ಮೇಲೆ ಪೂರ್ವಿಕನೊಬ್ಬನು ಕುಳಿತುಕೊಂಡನು. ಆತನ ವಸ್ತ್ರವು ಹಿಮದಂತೆ ಬಿಳುಪಾಗಿಯೂ ಆತನ ತಲೆಕೂದಲು ಶುದ್ಧ ಉಣ್ಣೆಯಂತೆಯೂ ಆತನ ಸಿಂಹಾಸನವು ಅಗ್ನಿಜ್ವಾಲೆಯಂತೆಯೂ ಆತನ ಚಕ್ರಗಳು ಉರಿಯುವ ಬೆಂಕಿಯಂತೆಯೂ ಇದ್ದವು.
- Song of Solomon 5:2 ಪರಮಗೀತೆ 5:2ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು.
- Revelation 1:14 ಪ್ರಕಟನೆ 1:14ಆತನ ತಲೆ ಮತ್ತು ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಉರಿಯಂತೆ ಇದ್ದವು.
- Song of Solomon 7:5 ಪರಮಗೀತೆ 7:5ನಿನ್ನ ತಲೆಯು ಕರ್ಮೆಲಿನ ಹಾಗೆಯೂ ನಿನ್ನ ತಲೆಯ ಕೂದಲು ಧೂಮ್ರದ ಹಾಗೆಯೂ ಇವೆ. ಅರಸನು ವೇದಿಕೆಗಳಲ್ಲಿ ಹಿಡಿಯಲ್ಪಟ್ಟಿದ್ದಾನೆ.
- Ephesians 1:21–22 ಎಫೆಸದವರಿಗೆ 1:21–22ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾಧಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೊಕದೊಳಗೆ ತನ್ನ ಸ್ವಂತ ಬಲಪಾರ್ಶ್ವದಲ್ಲಿ ಆತನನ್ನು ಕೂಡ್ರಿಸಿಕೊಂಡನು. ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿದನು. ಇದಲ್ಲದೆ ಆತನನ್ನು ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು.ಸಭೆಯು ಆತನ ದೇಹವಾಗಿದೆ; ಎಲ್ಲವನ್ನು ಎಲ್ಲಾ ಸಂಬಂಧದಲ್ಲಿ ವ್ಯಾಪಿಸುವಾತನಿಂದ ಅದು ಪರಿಪೂರ್ಣತೆಯುಳ್ಳ ದಾಗಿದೆ.
- Daniel 2:37–38 ದಾನಿಯೇಲನು 2:37–38ಓ ಅರಸನೇ, ನೀನು ಅರಸರಿಗೆ ಅರಸನಾಗಿ ರುವೆ; ಪರಲೋಕದ ದೇವರು ನಿನಗೆ ರಾಜ್ಯವನ್ನೂ ಬಲವನ್ನೂ ಅಧಿಕಾರವನ್ನೂ ಘನವನ್ನೂ ಕೊಟ್ಟಿದ್ದಾನೆ. ಮನುಷ್ಯರ ಮಕ್ಕಳು, ಭೂಮಿಯ ಮೃಗಗಳೂ ಆಕಾಶದ ಪಕ್ಷಿಗಳೂ ವಾಸಿಸುವಂತಾದ್ದೆಲ್ಲವನ್ನೂ ನಿನ್ನ ಕೈಯಲ್ಲಿ ಕೊಟ್ಟು ಅವೆಲ್ಲವುಗಳನ್ನು ಆಳುವಂತೆ ನಿನ್ನನ್ನು ಮಾಡಿದ್ದಾನೆ. ಆ ಬಂಗಾರದ ತಲೆಯು ನೀನೇ.