Song of Solomon · chapter 7 · verse 9
Song of Solomon 7:9 in Kannada
ನಿನ್ನ ಬಾಯಿಯ ಅಂಗಳವು ನನ್ನ ಪ್ರಿಯನ ಉತ್ತಮವಾದ ದ್ರಾಕ್ಷಾರಸದ ಹಾಗಿರುವದು. ಅದು ಸಿಹಿಯಾಗಿ ಹೋಗುವಂಥದ್ದು, ನಿದ್ರೆಮಾಡುವವರ ತುಟಿಗಳನ್ನು ಮಾತಾಡಿಸುವಂಥದ್ದು.
Ninna baayiya angalavu nanna priyana uttamavaada draakshaarasada haagiruvadu. Adu sihiyaagi hoguvanthaddu, nidremaaduvavara tutigalannu maataadisuvanthaddu.
Song of Solomon 7:9 in English
- King James Version (KJV)
- And the roof of thy mouth like the best wine for my beloved, that goeth [down] sweetly, causing the lips of those that are asleep to speak.
- World English Bible (WEB)
- Your mouth is like the best wine, that goes down smoothly for my beloved, gliding through the lips of those who are asleep.
- American Standard Version (ASV)
- And thy mouth like the best wine, That goeth down smoothly for my beloved, Gliding through the lips of those that are asleep.
- Bible in Basic English (BBE)
- And the roof of your mouth like good wine flowing down smoothly for my loved one, moving gently over my lips and my teeth.
- Darby Translation (DBY)
- And the roof of thy mouth like the best wine, ...That goeth down smoothly for my beloved, And stealeth over the lips of them that are asleep.
- Webster's Bible (WBS)
- And the roof of thy mouth like the best wine for my beloved, that goeth [down] sweetly, causing the lips of those that are asleep to speak.
- Young's Literal Translation (YLT)
- And thy palate as the good wine — 'Flowing to my beloved in uprightness, Strengthening the lips of the aged!
Read in context
- 7ನಿನ್ನ ನೀಳವು ಖರ್ಜೂರ ಮರದ ಹಾಗೆ ಇದೆ; ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲುಗಳ ಹಾಗೆ ಇವೆ.
- 8ನಾನು ಖರ್ಜೂರದ ಮರದ ಬಳಿಗೆ ಹೋಗಿ ಅದರ ಗರಿಗಳನ್ನು ಹಿಡುಕೊಳ್ಳುವೆ ಅಂದುಕೊಂಡೆನು. ಇದಲ್ಲದೆ ಈಗ ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲು ಗಳ ಹಾಗೆಯೂ ನಿನ್ನ ಮೂಗಿನ ವಾಸನೆಯು ಸೇಬುಹಣ್ಣಿನ ಹಾಗೆಯೂ ಇರುವವು.
- 9ನಿನ್ನ ಬಾಯಿಯ ಅಂಗಳವು ನನ್ನ ಪ್ರಿಯನ ಉತ್ತಮವಾದ ದ್ರಾಕ್ಷಾರಸದ ಹಾಗಿರುವದು. ಅದು ಸಿಹಿಯಾಗಿ ಹೋಗುವಂಥದ್ದು, ನಿದ್ರೆಮಾಡುವವರ ತುಟಿಗಳನ್ನು ಮಾತಾಡಿಸುವಂಥದ್ದು.
- 10ನಾನು ನನ್ನ ಪ್ರಿಯನವಳು; ಅವನ ಇಚ್ಛೆಯು ನನ್ನ ಕಡೆಗಿರುವದು.
- 11ನನ್ನ ಪ್ರಿಯನೇ, ನಾವು ಹೊಲಕ್ಕೆ ಹೋಗಿ ಗ್ರಾಮಗಳಲ್ಲಿ ವಸತಿಯಾಗಿರುವ ಬಾ.
Cross references
- Song of Solomon 5:16 ಪರಮಗೀತೆ 5:16ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
- Proverbs 16:24 ಜ್ಞಾನೋಕ್ತಿಗಳು 16:24ಮನೋಹರವಾದ ಮಾತುಗಳು ಜೇನು ತುಪ್ಪದಂತೆ ಪ್ರಾಣಕ್ಕೆ ಮಧುರವೂ ಎಲುಬು ಗಳಿಗೆ ಕ್ಷೇಮವೂ ಆಗಿವೆ.
- Ephesians 4:29 ಎಫೆಸದವರಿಗೆ 4:29ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ.
- Song of Solomon 2:14 ಪರಮಗೀತೆ 2:14ಗುಪ್ತವಾದ ಹಂತಗ ಳಲ್ಲಿಯೂ ಕಲ್ಲು ಸಂದುಗಳ ಮರೆಯಲ್ಲಿಯೂ ಇರುವ ಓ ನನ್ನ ಪಾರಿವಾಳವೇ, ನಿನ್ನ ಮುಖವನ್ನು ನನಗೆ ತೋರ ಮಾಡು. ನಿನ್ನ ಸ್ವರವನ್ನು ಕೇಳಿಸು. ನಿನ್ನ ಸ್ವರವು ರಮ್ಯವಾಗಿಯೂ ನಿನ್ನ ಮುಖವು ಸೌಂದರ್ಯ ವಾಗಿಯೂ ಅದೆ.
- Hebrews 13:15 ಇಬ್ರಿಯರಿಗೆ 13:15ಆದದರಿಂದ ಆತನ ಮೂಲಕ ವಾಗಿಯೇ ದೇವರಿಗೆ ಸ್ತೋತ್ರದ ಯಜ್ಞವನ್ನು ಎಡೆ ಬಿಡದೆ ಸಮರ್ಪಿಸೋಣ, ಅಂದರೆ ನಮ್ಮ ತುಟಿಗಳಿಂದ ಆತನ ನಾಮಕ್ಕೆ ಸಲ್ಲಿಸುವ ಸ್ತೋತ್ರಗಳ ಫಲವೇ ಆದಾಗಿದೆ.
- Song of Solomon 5:2 ಪರಮಗೀತೆ 5:2ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು.
- Colossians 3:16–17 ಕೊಲೊಸ್ಸೆಯವರಿಗೆ 3:16–17ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ. ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
- Isaiah 62:8–9 ಯೆಶಾಯ 62:8–9ಕರ್ತನು ತನ್ನ ಬಲಗೈ ಯಿಂದಲೂ ತನ್ನ ತ್ರಾಣವುಳ್ಳ ತೋಳಿನಿಂದಲೂ ಆಣೆ ಯಿಟ್ಟುಕೊಂಡದ್ದೇನಂದರೆ--ನಿಶ್ಚಯವಾಗಿ ನಾನು ಇನ್ನು ಮೇಲೆ ನಿನ್ನ ಧಾನ್ಯಗಳನ್ನು ನಿನ್ನ ಶತ್ರುಗಳಿಗೆ ಆಹಾರವಾಗಿ ಕೊಡುವದಿಲ್ಲ, ಮತ್ತು ನೀನು ಕಷ್ಟಪಟ್ಟು ಮಾಡಿದ ನಿನ್ನ ದ್ರಾಕ್ಷಾರಸವನ್ನು ಅನ್ಯರ ಪುತ್ರರು ಕುಡಿಯುವದಿಲ್ಲ; ಆದರೆ ಅದನ್ನು ಕೂಡಿಸಿದವರು ಅದನ್ನು ತಿಂದು ಕರ್ತನನ್ನು ಸ್ತುತಿಸುವರು; ಅದನ್ನು ಸೇರಿಸಿ ತಂದವರು ನನ್ನ ಪರಿಶುದ್ಧ ಅಂಗಳಗಳಲ್ಲಿ ಅದನ್ನು ಕುಡಿಯುವರು.
- Acts 16:30–34 ಅಪೊಸ್ತಲರ ಕೃತ್ಯಗಳು 16:30–34ಅವರನ್ನು ಹೊರಗೆ ಕರಕೊಂಡು ಬಂದು--ಅಯ್ಯಗಳಿರಾ, ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಲು ಅವರು--ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆ ಹೊಂದು ವರು ಎಂದು ಹೇಳಿದರು. ಅವನಿಗೂ ಅವನ ಮನೆಯಲ್ಲಿದ್ದವರೆಲ್ಲರಿಗೂ ಅವರು ಕರ್ತನ ವಾಕ್ಯವನ್ನು ತಿಳಿಸಿದರು. ಆಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು; ಕೂಡಲೆ ತಾನು ತನ್ನವ ರೆಲ್ಲರ ಸಹಿತವಾಗಿ ಬಾಪ್ತಿಸ್ಮ ಮಾಡಿಸಿಕೊಂಡನು. ತರುವಾಯ ಅವರನ್ನು ತನ್ನ ಮನೆಗೆ ಕರಕೊಂಡು ಹೋಗಿ ಊಟಮಾಡಿಸಿ ತನ್ನ ಮನೆಯವರೆಲ್ಲರ ಸಂಗಡ ದೇವರಲ್ಲಿ ನಂಬಿಕೆಯಿಟ್ಟು ಉಲ್ಲಾಸಗೊಂಡನು.
- Zechariah 9:15–17 ಜೆಕರ್ಯ 9:15–17ಸೈನ್ಯಗಳ ಕರ್ತನು ಅವರನ್ನು ಕಾಪಾಡುವನು; ಅವರು ನುಂಗಿ ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿ ಕೊಳ್ಳುವರು; ಕುಡಿದು ದ್ರಾಕ್ಷಾರಸದಿಂದಾದ ಹಾಗೆ ಓಲಾಡುವರು, ಪಾತ್ರೆಯ ಹಾಗೆಯೂ ಬಲಿಪೀಠದ ಮೂಲೆಗಳ ಹಾಗೆಯೂ ತುಂಬಿರುವರು. ಇದಲ್ಲದೆ ಅವರ ದೇವರಾದ ಕರ್ತನು ಆ ದಿವಸದಲ್ಲಿ ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು; ಅವರು ಕಿರೀಟದ ಕಲ್ಲುಗಳಂತೆ ಆತನ ದೇಶದ ಮೇಲೆ ಧ್ವಜವಾಗಿ ಎತ್ತಲ್ಪಡುವರು.ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು. ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.
- Acts 2:11–13 ಅಪೊಸ್ತಲರ ಕೃತ್ಯಗಳು 2:11–13ಕ್ರೇತ್ಯರು ಮತ್ತು ಅರಬಿಯರು ಆಗಿರುವ ನಾವು ನಮ್ಮ ಭಾಷೆಗಳಲ್ಲಿ ದೇವರ ಮಹತ್ಕಾರ್ಯಗಳನ್ನು ಇವರು ಹೇಳುವದನ್ನು ಕೇಳುತ್ತೇವೆ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರೆ ಲ್ಲರೂ ವಿಸ್ಮಯಗೊಂಡು ಸಂದೇಹಪಟ್ಟವರಾಗಿ-- ಇದರ ಅರ್ಥವೇನು ಎಂದು ಒಬ್ಬರನ್ನೊಬ್ಬರು ಕೇಳುವವರಾದರು. ಕೆಲವರು--ಈ ಮನುಷ್ಯರು ಹೊಸ ಮದ್ಯಪಾನ ಮಾಡಿ ಮತ್ತರಾಗಿದ್ದಾರೆ ಎಂದು ಹೇಳಿ ಹಾಸ್ಯ ಮಾಡಿದರು.
- Acts 4:31–32 ಅಪೊಸ್ತಲರ ಕೃತ್ಯಗಳು 4:31–32ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು. ನಂಬಿದ್ದ ಸಮೂಹದವರ ಹೃದಯವೂ ಪ್ರಾಣವೂ ಒಂದೇ ಆಗಿತ್ತು; ಇದಲ್ಲದೆ ಅವರಲ್ಲಿ ಯಾವನೂ ತನ್ನಗಿದ್ದ ಯಾವದೊಂದನ್ನೂ ತನ್ನ ಸ್ವಂತ ದ್ದೆಂದು ಹೇಳಲಿಲ್ಲ; ಆದರೆ ಎಲ್ಲವೂ ಅವರಿಗೆ ಹುದು ವಾಗಿತ್ತು.