Titus · chapter 3 · verse 2
Titus 3:2 in Kannada
ಯಾರ ವಿಷಯವಾಗಿಯೂ ಕೆಟ್ಟ ಮಾತನ್ನಾಡದವರೂ ಜಗಳವಾಡದವರೂ ಆಗಿದ್ದು ಸಾಧು ಸ್ವಭಾವವುಳ್ಳವರಾಗಿ ಎಲ್ಲಾ ಮನುಷ್ಯರಿಗೆ ಪೂರ್ಣ ಸಾತ್ವಿಕತ್ವವನ್ನು ತೋರಿಸಬೇಕೆಂತಲೂ ಅವ ರಿಗೆ ಜ್ಞಾಪಕಮಾಡು.
Yaara vishayavaagiyoo ketta maatannaadadavaroo jagalavaadadavaroo aagiddu saadhu svabhaavavullavaraagi ellaa manushyarige poorna saatvikatvavannu torisabekentaloo ava rige jnyaapakamaadu.
Titus 3:2 in English
- King James Version (KJV)
- To speak evil of no man, to be no brawlers, [but] gentle, shewing all meekness unto all men.
- World English Bible (WEB)
- to speak evil of no one, not to be contentious, to be gentle, showing all humility toward all men.
- American Standard Version (ASV)
- to speak evil of no man, not to be contentious, to be gentle, showing all meekness toward all men.
- Bible in Basic English (BBE)
- To say no evil of any man, not to be fighters, to give way to others, to be gentle in behaviour to all men.
- Darby Translation (DBY)
- to speak evil of no one, not to be contentious, [to be] mild, shewing all meekness towards all men.
- Webster's Bible (WBS)
- To speak evil of no man, to be no brawlers, [but] gentle, showing all meekness to all men.
- Young's Literal Translation (YLT)
- of no one to speak evil, not to be quarrelsome — gentle, showing all meekness to all men,
Read in context
- 1ದೊರೆತನಗಳಿಗೂ ಅಧಿಕಾರಿಗಳಿಗೂ ಒಳಗಾಗಿ ನ್ಯಾಯಾಧಿಪತಿಗಳಿಗೆ ವಿಧೇಯ ರಾಗಿರಬೇಕೆಂತಲೂ ಪ್ರತಿಯೊಂದು ಸತ್ಕ್ರಿಯೆಗೆ ಸಿದರಾಗಿರಬೇಕೆಂತಲೂ
- 2ಯಾರ ವಿಷಯವಾಗಿಯೂ ಕೆಟ್ಟ ಮಾತನ್ನಾಡದವರೂ ಜಗಳವಾಡದವರೂ ಆಗಿದ್ದು ಸಾಧು ಸ್ವಭಾವವುಳ್ಳವರಾಗಿ ಎಲ್ಲಾ ಮನುಷ್ಯರಿಗೆ ಪೂರ್ಣ ಸಾತ್ವಿಕತ್ವವನ್ನು ತೋರಿಸಬೇಕೆಂತಲೂ ಅವ ರಿಗೆ ಜ್ಞಾಪಕಮಾಡು.
- 3ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
- 4ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ
Cross references
- Ephesians 4:31 ಎಫೆಸದವರಿಗೆ 4:31ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿ ದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾ ಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವ ರಾಗಿಯೂ ಇರ್ರಿ.
- 2 Timothy 2:24–25 2 ತಿಮೊಥೆಯನಿಗೆ 2:24–25ಕರ್ತನ ಸೇವ ಕನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ತಾಳ್ಮೆಯುಳ್ಳವನೂ ಆಗಿರಬೇಕು. ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.
- Colossians 3:12–13 ಕೊಲೊಸ್ಸೆಯವರಿಗೆ 3:12–13ಆದದರಿಂದ ನೀವು ದೇವರಿಂದ ಆರಿಸಿಕೊಂಡ ವರೂ ಪರಿಶುದ್ಧರೂ ಪ್ರಿಯರೂ ಆಗಿರುವವರಿಗೆ ತಕ್ಕಂತೆ ಕನಿಕರ ದಯೆ ದೀನಮನಸ್ಸು ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಯಾವನಿ ಗಾದರೂ ಒಬ್ಬನಿಗೆ ಇನ್ನೊಬ್ಬನ ಮೇಲೆ ವಿರೋಧವಾಗಿ ವ್ಯಾಜ್ಯವಿದ್ದರೂ ಒಬ್ಬರಿಗೊಬ್ಬರು ತಾಳಿಕೊಂಡು ಕ್ರಿಸ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಒಬ್ಬರಿಗೊಬ್ಬರು ಕ್ಷಮಿಸಿರಿ.
- Ephesians 4:2 ಎಫೆಸದವರಿಗೆ 4:2ನೀವು ಪೂರ್ಣ ವಿನಯ ಸಾತ್ವಿಕತ್ವ ಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವ ರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
- 1 Timothy 3:3 1 ತಿಮೊಥೆಯನಿಗೆ 3:3ಅವನು ಕುಡಿಯುವವನಾಗಿರಬಾರದು. ಹೊಡೆದಾಡುವವನಾಗಿರಬಾರದು, ದ್ರವ್ಯಾಶೆಯುಳ್ಳವ ನಾಗಿರಬಾರದು; ಆದರೆ ತಾಳ್ಮೆಯುಳ್ಳವನೂ ಕುತರ್ಕ ಮಾಡದವನೂ ದುರಾಶೆಯಿಲ್ಲದವನೂ ಆಗಿರಬೇಕು.
- 1 Peter 3:10 1 ಪೇತ್ರನು 3:10ಜೀವವನ್ನು ಪ್ರೀತಿಸಿ ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟ ದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದ ಹಾಗೆ ತನ್ನ ತುಟಿಗಳನ್ನೂ ಬಿಗಿ ಹಿಡಿಯಲಿ.
- 1 Peter 3:8 1 ಪೇತ್ರನು 3:8ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
- Galatians 5:22 ಗಲಾತ್ಯದವರಿಗೆ 5:22ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ
- Matthew 11:29 ಮತ್ತಾಯನು 11:29ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
- 1 Peter 2:17–18 1 ಪೇತ್ರನು 2:17–18ಎಲ್ಲರನ್ನು ಸನ್ಮಾನಿ ಸಿರಿ, ಸಹೋದರರನ್ನು ಪ್ರೀತಿಸಿರಿ, ದೇವರಿಗೆ ಭಯ ಪಡಿರಿ, ಅರಸನನ್ನು ಸನ್ಮಾನಿಸಿರಿ. ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಭಯದಿಂದ ಅಧೀನ ರಾಗಿರ್ರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯ ರಾಗಿರ್ರಿ.
- Galatians 6:10 ಗಲಾತ್ಯದವರಿಗೆ 6:10ಆದದ ರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ವಿಶ್ವಾಸದ ಮನೆತನ ದವರಿಗೆ ಮಾಡೋಣ.
- 1 Peter 2:1 1 ಪೇತ್ರನು 2:1ಆದಕಾರಣ ಎಲ್ಲಾ ಕೆಟ್ಟತನವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೇ ಕಿಚ್ಚನ್ನೂ ಎಲ್ಲಾ ಕೆಟ್ಟ ಮಾತುಗಳನ್ನೂ ವಿಸರ್ಜಿಸಿರಿ.