Zechariah · chapter 10 · verse 1
Zechariah 10:1 in Kannada
ಕರ್ತನಿಂದ ಹಿಂಗಾರುಮಳೆಯ ಕಾಲದಲ್ಲಿ ಮಳೆಗಾಗಿ ಬೇಡಿಕೊಳ್ಳಿರಿ. ಹೀಗೆ ಕರ್ತನು ಮಿಂಚುವ ಮೋಡಗಳನ್ನು ಮಾಡಿ ಅವರಿಗೆ ಜಡಿ ಮಳೆಯನ್ನೂ ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವನು.
Kartaninda hingaarumaleya kaaladalli malegaagi bedikolliri. Heege kartanu minchuva modagalannu maadi avarige jadi maleyannoo obbobbanige holadalli hullannoo koduvanu.
Zechariah 10:1 in English
- King James Version (KJV)
- Ask ye of the LORD rain in the time of the latter rain; [so] the LORD shall make bright clouds, and give them showers of rain, to every one grass in the field.
- World English Bible (WEB)
- Ask of the LORD rain in the spring time, the LORD who makes storm clouds, and he gives rain showers to everyone for the plants in the field.
- American Standard Version (ASV)
- Ask ye of Jehovah rain in the time of the latter rain, [even of] Jehovah that maketh lightnings; and he will give them showers of rain, to every one grass in the field.
- Bible in Basic English (BBE)
- Make your request to the Lord for rain in the time of the spring rains, even to the Lord who makes the thunder-flames; and he will give them showers of rain, to every man grass in the field.
- Darby Translation (DBY)
- Ask of Jehovah rain in the time of the latter rain; Jehovah will make lightnings, and he will give them showers of rain, to every one grass in the field.
- Webster's Bible (WBS)
- Ask ye of the LORD rain in the time of the latter rain; [so] the LORD will make bright clouds, and give them showers of rain, to every one grass in the field.
- Young's Literal Translation (YLT)
- They asked of Jehovah rain in a time of latter rain, Jehovah is making lightnings, And rain [in] showers He doth give to them. To each — the herb in the field.
Read in context
- 1ಕರ್ತನಿಂದ ಹಿಂಗಾರುಮಳೆಯ ಕಾಲದಲ್ಲಿ ಮಳೆಗಾಗಿ ಬೇಡಿಕೊಳ್ಳಿರಿ. ಹೀಗೆ ಕರ್ತನು ಮಿಂಚುವ ಮೋಡಗಳನ್ನು ಮಾಡಿ ಅವರಿಗೆ ಜಡಿ ಮಳೆಯನ್ನೂ ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವನು.
- 2ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ.
- 3ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯಿತು; ಮೇಕೆಗಳನ್ನು ದಂಡಿಸಿದೆನು; ಸೈನ್ಯಗಳ ಕರ್ತನು ತನ್ನ ಮಂದೆಯಾಗಿರುವ ಯೆಹೂದನ ಮನೆ ತನದವರನ್ನು ದರ್ಶಿಸಿ ಅವರನ್ನು ಯುದ್ಧದಲ್ಲಿ ತನ್ನ ಘನವಾದ ಕುದುರೆಯ ಹಾಗೆ ಮಾಡಿದ್ದಾನೆ.
Cross references
- James 5:16–18 ಯಾಕೋಬನು 5:16–18ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ. ಎಲೀಯನು ನಮ್ಮಂಥ ಸ್ವಭಾವವುಳ್ಳವ ನಾಗಿದ್ದನು; ಅವನು ಮಳೆ ಬರಬಾರದೆಂದು ಆಸಕ್ತಿ ಯಿಂದ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆ ಬೀಳಲಿಲ್ಲ. ತಿರಿಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಬೆಳೆಯಿತು.
- Isaiah 44:3 ಯೆಶಾಯ 44:3ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
- Matthew 7:7–8 ಮತ್ತಾಯನು 7:7–8ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು. ಯಾಕಂದರೆ ಬೇಡಿ ಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು; ಮತ್ತು ಹುಡುಕುವವನಿಗೆ ಸಿಕ್ಕುವದು; ಇದಲ್ಲದೆ ತಟ್ಟುವವನಿಗೆ ತೆರೆಯಲ್ಪಡುವದು.
- John 16:23 ಯೋಹಾನನು 16:23ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು.
- Psalm 65:9 ಕೀರ್ತನೆಗಳು 65:9ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.
- Deuteronomy 28:23 ಧರ್ಮೋಪದೇಶಕಾಂಡ 28:23ನಿನ್ನ ತಲೆಯ ಮೇಲಿರುವ ಆಕಾಶವು ತಾಮ್ರ ವಾಗಿಯೂ ನಿನ್ನ ಕೆಳಗಿರುವ ಭೂಮಿಯು ಕಬ್ಬಿಣ ವಾಗಿಯೂ ಇರುವವು.
- James 5:7 ಯಾಕೋಬನು 5:7ಸಹೋದರರೇ, ಕರ್ತನು ಬರುವ ತನಕ ದೀರ್ಘ ಶಾಂತಿಯಿಂದಿರ್ರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.
- Ezekiel 36:37 ಯೆಹೆಜ್ಕೇಲನು 36:37ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇದನ್ನು ಅವರಿಗೆ ಮಾಡಲು ನಾನಿನ್ನೂ ಇಸ್ರಾಯೇಲನ ಮನೆ ತನದವರಿಂದ ವಿಚಾರಿಸುವೆನು; ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Isaiah 30:23 ಯೆಶಾಯ 30:23ಆಗ ನೀವು ಹೊಲದಲ್ಲಿ ಬೀಜ ಬಿತ್ತುವದಕ್ಕೆ ಬಿತ್ತನೆಯ ಮಳೆಯನ್ನು ದಯಪಾಲಿಸು ವೆನು. ಭೂಮಿಯ ಬೆಳೆಯಿಂದ ಸಾರವಾದ ಆಹಾರ ವನ್ನು ಸಮೃದ್ಧಿಯಾಗಿ ಒದಗಿಸುವೆನು. ಆ ದಿನದಲ್ಲಿ ನಿನ್ನ ದನಗಳು ವಿಸ್ತಾರವಾದ ಸ್ಥಳದಲ್ಲಿ ಮೇಯುವವು.
- Amos 4:7 ಆಮೋಸ 4:7ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ ಮಳೆಯನ್ನು ನಿಮ್ಮಿಂದ ನಾನು ಹಿಂತೆಗೆದಿದ್ದೇನೆ; ಒಂದು ಪಟ್ಟಣದ ಮೇಲೆ ಮಳೆ ಸುರಿಸಿ ಮತ್ತೊಂದು ಪಟ್ಟಣದ ಮೇಲೆ ಮಳೆ ಸುರಿಸದ ಹಾಗೆ ಮಾಡಿದೆನು; ಮಳೆ ಸುರಿಯದ ಭಾಗವು ಒಣಗಿ ಹೋಯಿತು.
- Micah 5:7 ಮೀಕ 5:7ಇದಲ್ಲದೆ ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ ಕರ್ತನಿಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವದು; ಅದು ಮನುಷ್ಯರಿಗೊಸ್ಕರ ತಡೆಮಾಡುವ ದಿಲ್ಲ; ಮನುಷ್ಯನ ಮಕ್ಕಳಿಗೋಸ್ಕರ ಕಾದುಕೊಳ್ಳುವದಿಲ್ಲ.
- Hosea 10:12 ಹೋಶೇಯ 10:12ನಿಮಗಾಗಿ ನೀತಿಯಲ್ಲಿ ಬಿತ್ತಿರಿ, ಕರುಣೆಯಲ್ಲಿ ಕೊಯ್ಯಿರಿ; ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ; ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವ ವರೆಗೂ ಕರ್ತನನ್ನು ಹುಡುಕುವ ಸಮಯ ಇದೇ.