Zechariah · chapter 11 · verse 9
Zechariah 11:9 in Kannada
ಆಗ ನಾನು ಹೇಳಿದ್ದೇನಂದರೆ-- ನಾನು ನಿಮ್ಮನ್ನು ಮೇಯಿಸುವದಿಲ್ಲ; ಸಾಯುವಂಥದ್ದು ಸಾಯಲಿ; ಕೆಡುವಂಥದ್ದು ಕೆಡಲಿ; ಮಿಕ್ಕಾದವುಗಳ ಒಂದರ ಮಾಂಸವನ್ನು ಒಂದು ತಿನ್ನಲಿ.
Aaga naanu heliddenandare-- naanu nimmannu meyisuvadilla; saayuvanthaddu saayali; keduvanthaddu kedali; mikkaadavugala ondara maansavannu ondu tinnali.
Zechariah 11:9 in English
- King James Version (KJV)
- Then said I, I will not feed you: that that dieth, let it die; and that that is to be cut off, let it be cut off; and let the rest eat every one the flesh of another.
- World English Bible (WEB)
- Then I said, “I will not feed you. That which dies, let it die; and that which is to be cut off, let it be cut off; and let those who are left eat each other’s flesh.”
- American Standard Version (ASV)
- Then said I, I will not feed you: that which dieth, let it die; and that which is to be cut off, let it be cut off; and let them that are left eat every one the flesh of another.
- Bible in Basic English (BBE)
- And I said, I will not take care of you: If death comes to any, let death be its fate; if any is cut off, let it be cut off; and let the rest take one another's flesh for food.
- Darby Translation (DBY)
- And I said, I will not feed you: that which dieth, let it die; and that which perisheth let it perish; and let them which are left eat every one the flesh of another.
- Webster's Bible (WBS)
- Then said I, I will not feed you: that which dieth, let it die; and that which is to be cut off, let it be cut off; and let the rest eat, every one the flesh of another.
- Young's Literal Translation (YLT)
- And I say, 'I do not feed you, the dying, let die; and the cut off, let be cut off; and the remaining ones, let each eat the flesh of its neighbour.'
Read in context
- 7ಆಗ ಕೊಯ್ಗುರಿಗಳ ಮಂದೆ ಯನ್ನು ಹೌದು, ಬಡವಾದ ಮಂದೆಯನ್ನೇ ಮೇಯಿಸಿದೆನು; ನನಗಾಗಿ ಎರಡು ಕೋಲುಗಳನ್ನು ತಕ್ಕೊಂಡೆನು; ಒಂದಕ್ಕೆ ಸೌಂದರ್ಯ ಎಂದೂ ಮತ್ತೊಂದಕ್ಕೆ ಬಂಧ ಗಳೆಂದೂ ಹೆಸರಿಟ್ಟೆನು; ಹೀಗೆ ಮಂದೆಯನ್ನು ಮೇಯಿ ಸಿದೆನು.
- 8ಇದಲ್ಲದೆ ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು; ನನ್ನ ಆತ್ಮವು ಅವರನ್ನು ಹೇಸಿಕೊಂಡಿತು; ಅವರ ಆತ್ಮವು ಸಹ ನನ್ನನ್ನು ಹೇಸಿ ಕೊಂಡಿತು.
- 9ಆಗ ನಾನು ಹೇಳಿದ್ದೇನಂದರೆ-- ನಾನು ನಿಮ್ಮನ್ನು ಮೇಯಿಸುವದಿಲ್ಲ; ಸಾಯುವಂಥದ್ದು ಸಾಯಲಿ; ಕೆಡುವಂಥದ್ದು ಕೆಡಲಿ; ಮಿಕ್ಕಾದವುಗಳ ಒಂದರ ಮಾಂಸವನ್ನು ಒಂದು ತಿನ್ನಲಿ.
- 10ಆಗ ಸೌಂದರ್ಯವೆಂಬ ನನ್ನ ಕೋಲನ್ನು ತಕ್ಕೊಂಡು ಅದನ್ನು ಮುರಿದುಬಿಟ್ಟೆನು; ಹೀಗೆ ಜನರೆಲ್ಲರ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ಮುರಿದುಬಿಟ್ಟೆನು,
- 11ಅದೇ ದಿನದಲ್ಲಿ ಅದು ಮುರಿಯಲ್ಪಟ್ಟಿತು; ಆಗ ನನ್ನಲ್ಲಿ ನಿರೀಕ್ಷೆಯಿಟ್ಟ ಬಡ ಕುರಿಮಂದೆಯು ಅದು ಕರ್ತನ ವಾಕ್ಯವೆಂದು ತಿಳಿದುಕೊಂಡಿತು.
Cross references
- Matthew 13:10–11 ಮತ್ತಾಯನು 13:10–11ತರುವಾಯ ಶಿಷ್ಯರು ಬಂದು ಆತನಿಗೆ--ನೀನು ಸಾಮ್ಯಗಳಲ್ಲಿ ಅವರೊಂದಿಗೆ ಯಾಕೆ ಮಾತನಾಡುತ್ತೀ ಎಂದು ಕೇಳಲು ಆತನು ಪ್ರತ್ಯುತ್ತರವಾಗಿ ಅವ ರಿಗೆ--ಪರಲೋಕರಾಜ್ಯದ ಮರ್ಮಗಳನ್ನು ತಿಳುಕೊಳ್ಳು ವದಕ್ಕೆ ನಿಮಗೆ ಕೊಡಲ್ಪಟ್ಟಿದೆ; ಆದರೆ ಅವರಿಗೆ ಕೊಡ ಲ್ಪಟ್ಟಿಲ್ಲ.
- Jeremiah 43:11 ಯೆರೆಮೀಯ 43:11ಅವನು ಬಂದು ಐಗುಪ್ತದೇಶವನ್ನು ಹೊಡೆದು ಮರಣಕ್ಕೆ ಇರುವವರನ್ನು ಮರಣಕ್ಕೂ ಸೆರೆಗೆ ಇರುವವರನ್ನು ಸೆರೆಗೂ ಕತ್ತಿಗೆ ಇರುವವರನ್ನು ಕತ್ತಿಗೂ ಒಪ್ಪಿಸುವನು.
- Revelation 22:11 ಪ್ರಕಟನೆ 22:11ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ; ಮೈಲಿಗೆಯಾದವನು ಇನ್ನೂ ತನ್ನನ್ನು ಮೈಲಿಗೆ ಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿವಂತ ನಾಗಲಿ; ಪವಿತ್ರನು ತಾನು ಇನ್ನೂ ಪವಿತ್ರನಾಗಿರಲಿ;
- Acts 13:46–47 ಅಪೊಸ್ತಲರ ಕೃತ್ಯಗಳು 13:46–47ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ. ಯಾಕಂ ದರೆ--ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಣೆಗೆ ಕಾರಣವಾಗಿರುವಂತೆ ನಾನು ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ಹೇಳಿದ ಹಾಗೆ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ.
- Matthew 15:14 ಮತ್ತಾಯನು 15:14ಅವರನ್ನು ಬಿಡಿರಿ; ಅವರು ಕುರುಡರನ್ನು ನಡಿಸುವ ಕುರುಡರು. ಕುರುಡನು ಕುರುಡನನ್ನು ನಡಿಸಿದರೆ ಇಬ್ಬರೂ ಕುಣಿಯೊಳಕ್ಕೆ ಬೀಳುವರು ಎಂದು ಹೇಳಿ ದನು.
- Jeremiah 15:2–3 ಯೆರೆಮೀಯ 15:2–3ಅವರು ನಿನಗೆ--ನಾವು ಎಲ್ಲಿ ಹೋಗಬೇಕು ಎಂದು ಹೇಳಿದರೆ, ನೀನು ಅವ ರಿಗೆ--ಕರ್ತನು ಹೀಗೆ ಹೇಳುತ್ತಾನೆ--ಮರಣಕ್ಕೆ ಇರುವವರು ಮರಣಕ್ಕೆ; ಕತ್ತಿಗೆ ಇರುವವರು ಕತ್ತಿಗೆ; ಕ್ಷಾಮಕ್ಕೆ ಇರುವವರು ಕ್ಷಾಮಕ್ಕೆ, ಸೆರೆಗೆ ಇರು ವವರು ಸೆರೆಗೆ ಎಂದು ಹೇಳಬೇಕು. ಕರ್ತನು--ನಾನು ಅವರಿಗೆ ವಿರೋಧವಾಗಿ ನಾಲ್ಕು ತರವಾದವುಗಳನ್ನು ಅಂದರೆ ಕೊಲ್ಲುವದಕ್ಕೆ ಕತ್ತಿಯನ್ನೂ ಹರಿಯುವದಕ್ಕೆ ನಾಯಿಗಳನ್ನೂ ತಿನ್ನುವದಕ್ಕೂ ನಾಶ ಮಾಡುವದಕ್ಕೂ ಆಕಾಶದ ಪಕ್ಷಿಗಳನ್ನೂ ಭೂಮಿಯ ಮೃಗಗಳನ್ನೂ ನೇಮಿಸುತ್ತೇನೆ.
- Jeremiah 19:9 ಯೆರೆಮೀಯ 19:9ಅವರು ತಮ್ಮ ಕುಮಾರರ ಕುಮಾರ್ತೆಯರ ಮಾಂಸವನ್ನೂ ತಿನ್ನುವಂತೆ ಮಾಡುವೆನು; ಮುತ್ತಿಗೆಯಲ್ಲಿ ಸಹ ಅವರ ಶತ್ರುಗಳೂ ಅವರ ಪ್ರಾಣವನ್ನು ಹುಡುಕುವವರೂ ಅವರಿಗೆ ಮಾಡುವ ಇಕ್ಕಟ್ಟಿನಲ್ಲಿಯೂ ಅವರು ತಮ್ಮ ತಮ್ಮ ಸ್ನೇಹಿತರ ಮಾಂಸವನ್ನು ತಿನ್ನುವರು.
- Acts 28:26–28 ಅಪೊಸ್ತಲರ ಕೃತ್ಯಗಳು 28:26–28ನೀವು ಕೇಳಿದರೂ ಕೇಳಿ ಗ್ರಹಿಸುವದಿಲ್ಲ; ನೋಡಿದರೂ ನೋಡಿ ಕಾಣುವದಿಲ್ಲ; ಯಾಕಂದರೆ ಅವರು ತಮ್ಮ ಕಣ್ಣುಗಳಿಂದ ನೋಡಿ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದಂತೆಯೂ ನಾನು ಅವರನ್ನು ಸ್ವಸ್ಥ ಮಾಡ ದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಕೇಳುವದಕ್ಕೆ ಅವರ ಕಿವಿಗಳು ಮಂದವಾದವು; ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು.
- Deuteronomy 28:53–56 ಧರ್ಮೋಪದೇಶಕಾಂಡ 28:53–56ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ. ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು. ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ. ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ
- Matthew 23:38–39 ಮತ್ತಾಯನು 23:38–39ಇಗೋ, ನಿಮ್ಮ ಮನೆಯು ನಿಮಗೆ ಹಾಳಾದದ್ದಾಗಿ ಬಿಡಲ್ಪಡುವದು.ಇಂದಿನಿಂದ ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ವರೆಗೆ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು. ಇಂದಿನಿಂದ ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ವರೆಗೆ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Jeremiah 23:39 ಯೆರೆಮೀಯ 23:39ಕರ್ತನು ಹೀಗೆ ಹೇಳು ತ್ತಾನೆ--ನಾನು ಇಗೋ, ನಾನೇ ನಿಮ್ಮನ್ನು ಪೂರ್ಣವಾಗಿ ಮರೆತುಬಿಡುವೆನು; ನಿಮ್ಮನ್ನು ನಿಮಗೂ ನಿಮ್ಮ ತಂದೆ ಗಳಿಗೂ ಕೊಟ್ಟ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತಳ್ಳಿಬಿಡುವೆನು.ಮರೆತು ಹೋಗಲಾರದ ನಿತ್ಯವಾದ ನಿಂದೆಯನ್ನೂ ನಿತ್ಯವಾದ ಅವಮಾನವನ್ನೂ ನಿನ್ನ ಮೇಲೆ ಬರಮಾಡುತ್ತೇನೆ.
- Matthew 21:19 ಮತ್ತಾಯನು 21:19ಆಗ ಆತನು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಅದರಲ್ಲಿ ಕಾಣಲಿಲ್ಲ. ಆಗ ಆತನು ಅದಕ್ಕೆ--ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ ಅಂದನು. ತಕ್ಷಣವೇ ಆ ಅಂಜೂರದ ಮರವು ಒಣಗಿ ಹೋಯಿತು.