Zechariah · chapter 12 · verse 2
Zechariah 12:2 in Kannada
ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ
Igo, naanu yeroosalemannu suttaliruva ellaa janarige naduguva paatreyaagi maaduttene; yeroosale migoo yehoodakkoo virodhavaagi muttige haakuva
Zechariah 12:2 in English
- King James Version (KJV)
- Behold, I will make Jerusalem a cup of trembling unto all the people round about, when they shall be in the siege both against Judah [and] against Jerusalem.
- World English Bible (WEB)
- “Behold, I will make Jerusalem a cup of reeling to all the surrounding peoples, and it will also be on Judah in the siege against Jerusalem.
- American Standard Version (ASV)
- Behold, I will make Jerusalem a cup of reeling unto all the peoples round about, and upon Judah also shall it be in the siege against Jerusalem.
- Bible in Basic English (BBE)
- See, I will make Jerusalem a cup of shaking fear to all the peoples round about, when Jerusalem is shut in.
- Darby Translation (DBY)
- Behold, I will make Jerusalem a cup of bewilderment unto all the peoples round about, and also against Judah shall it be in the siege against Jerusalem.
- Webster's Bible (WBS)
- Behold, I will make Jerusalem a cup of trembling to all the people around, when they shall be in the siege both against Judah [and] against Jerusalem.
- Young's Literal Translation (YLT)
- Lo, I am making Jerusalem a cup of reeling To all the peoples round about, And also against Judah it is, In the siege against Jerusalem.
Read in context
- 1ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ--
- 2ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ
- 3ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.
- 4ಆ ದಿನದಲ್ಲಿ ಕರ್ತನು--ನಾನು ಕುದುರೆಗಳನ್ನೆಲ್ಲಾ ಬೆದರಿಕೆಯಿಂದಲೂ ಹತ್ತಿ ದವನನ್ನು ಹುಚ್ಚುತನದಿಂದಲೂ ಹೊಡೆಯುವೆನು; ಯೆಹೂದನ ಮನೆಯ ಮೇಲೆ ನನ್ನ ಕಣ್ಣುಗಳನ್ನು ತೆರೆಯುವೆನು; ಜನಗಳ ಕುದುರೆಗಳನ್ನೆಲ್ಲಾ ಕುರುಡುತನ ದಿಂದ ಹೊಡೆಯುವೆನು.
Cross references
- Psalm 75:8 ಕೀರ್ತನೆಗಳು 75:8ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
- Zechariah 14:14 ಜೆಕರ್ಯ 14:14ಯೆಹೂದವು ಸಹ ಯೆರೂಸಲೇಮಿನಲ್ಲಿ ಯುದ್ಧ ಮಾಡುವದು; ಸುತ್ತಲಿರುವ ಎಲ್ಲಾ ಅನ್ಯ ಜನಾಂಗಗಳ ಸಂಪತ್ತಾಗಿ ರುವ, ಚಿನ್ನ, ಬೆಳ್ಳಿ, ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲ್ಪಡುವವು.
- Isaiah 51:22–23 ಯೆಶಾಯ 51:22–23ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ. ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
- Isaiah 51:17 ಯೆಶಾಯ 51:17ಕರ್ತನ ಕೈಯಿಂದ ಆತನ ಉಗ್ರದ ಪಾತ್ರೆಯನ್ನು ಕುಡಿದ ಓ ಯೆರೂಸಲೇಮೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಎದ್ದೇಳು; ನೀನು ತತ್ತರಗೊಳಿಸುವಂಥ ಪಾತ್ರೆಯಲ್ಲಿದ್ದ ಮಡ್ಡಿಯನ್ನು ಕುಡಿದು ಹೀರಿಬಿಟ್ಟಿದ್ದೀ.
- Jeremiah 25:15 ಯೆರೆಮೀಯ 25:15ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ.
- Revelation 18:6 ಪ್ರಕಟನೆ 18:6ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ.
- Habakkuk 2:16 ಹಬಕ್ಕೂಕ 2:16ಘನತೆಗೆ ಬದಲಾಗಿ ನಿಂದೆ ಯಿಂದ ತುಂಬಿದ್ದೀ; ನೀನು ಸಹ ಕುಡಿದು ನಿನ್ನ ಮುಂದೊಗಲು ಮುಚ್ಚಲ್ಪಡದಿರಲಿ. ಕರ್ತನ ಬಲಗೈಯ ಪಾತ್ರೆ ನಿನ್ನ ಕಡೆಗೆ ತಿರುಗುವದು. ನಿನ್ನ ಘನತೆಯ ಮೇಲೆ ಕಾರುವಿಕೆಯೂ ಲಜ್ಜೆಯೂ ಇರುವದು.
- Jeremiah 25:17 ಯೆರೆಮೀಯ 25:17ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು.
- Revelation 16:19 ಪ್ರಕಟನೆ 16:19ಆ ಮಹಾಪಟ್ಟಣವು ಮೂರು ಭಾಗಗಳಾಗಿ ವಿಭಾಗವಾಯಿತು; ಜನಾಂಗಗಳ ಪಟ್ಟಣಗಳು ಬಿದ್ದವು; ಇದಲ್ಲದೆ ಮಹಾಬಾಬೆಲಿಗೆ ಉಗ್ರಕೋಪವೆಂಬ ದ್ರಾಕ್ಷಾರಸದ ಪಾತ್ರೆಯನ್ನು ಕೊಡು ವಂತೆ ದೇವರ ಮುಂದೆ ಅದು ಜ್ಞಾಪಕಕ್ಕೆ ಬಂತು.
- Jeremiah 51:57 ಯೆರೆಮೀಯ 51:57ಇದಲ್ಲದೆ ನಾನು ಅವಳ ಪ್ರಧಾನಿಗಳನ್ನೂ, ಜ್ಞಾನಿಗಳನ್ನೂ, ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಮತ್ತರಾಗಮಾಡುತ್ತೇನೆ; ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವದಿಲ್ಲವೆಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
- Revelation 14:10 ಪ್ರಕಟನೆ 14:10ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು.
- Jeremiah 49:12 ಯೆರೆಮೀಯ 49:12ಕರ್ತನು ಹೀಗೆ ಹೇಳು ತ್ತಾನೆ--ಇಗೋ ಪಾತ್ರೆಯಲ್ಲಿ ಕುಡಿಯುವದಕ್ಕೆ ಯಾರಿಗೆ ನ್ಯಾಯತೀರ್ವಿಕೆ ಆಗಲಿಲ್ಲವೋ? ಅವರು ಸಹ ಕುಡಿದಿದ್ದಾರೆ; ಹಾಗಾದರೆ ನೀನು ಶುದ್ಧವಾಗಿ ಅಪರಾಧ ವಿಲ್ಲದೆ ಇರುವಿಯೋ? ಅಪರಾಧವಿಲ್ಲದೆ ಇರುವದಿಲ್ಲ ನಿಶ್ಚಯವಾಗಿ ಕುಡಿಯುವಿ.