Zechariah · chapter 4 · verse 2
Zechariah 4:2 in Kannada
ಒಬ್ಬನನ್ನು ನಿದ್ರೆಯಿಂದ ಎಬ್ಬಿಸುವಂತೆ ನನ್ನನ್ನು ಎಬ್ಬಿಸಿದನು. ಆಗ ಅವನು ನನಗೆ--ನೀನು ಏನು ನೋಡುತ್ತೀ ಅಂದನು. ಅದಕ್ಕೆ--ನಾನು ನೋಡಿದ್ದೇನೆ; ಇಗೋ, ಒಂದು ದೀಪಸ್ತಂಭವು, ಅದು ಎಲ್ಲಾ ಬಂಗಾರದ್ದೇ; ಅದರ ತಲೆಯ ಮೇಲೆ ಪಾತ್ರೆ ಉಂಟು; ಅದರ ಮೇಲೆ ಅದರ ಏಳು ದೀಪಗಳುಂಟು.
Obbanannu nidreyinda ebbisuvante nannannu ebbisidanu. Aaga avanu nanage--neenu enu noduttee andanu. Adakke--naanu nodiddene; igo, ondu deepastambhavu, adu ellaa bangaaradde; adara taleya mele paatre untu; adara mele adara elu deepagaluntu.
Zechariah 4:2 in English
- King James Version (KJV)
- And said unto me, What seest thou? And I said, I have looked, and behold a candlestick all [of] gold, with a bowl upon the top of it, and his seven lamps thereon, and seven pipes to the seven lamps, which [are] upon the top thereof:
- World English Bible (WEB)
- He said to me, “What do you see?” I said, “I have seen, and behold, a lamp stand all of gold, with its bowl on the top of it, and its seven lamps on it; there are seven pipes to each of the lamps which are on the top of it;
- American Standard Version (ASV)
- And he said unto me, What seest thou? And I said, I have seen, and, behold, a candlestick all of gold, with its bowl upon the top of it, and its seven lamps thereon; there are seven pipes to each of the lamps, which are upon the top thereof;
- Bible in Basic English (BBE)
- And he said to me, What do you see? And I said, I see a light-support, made all of gold, with its cup on the top of it and seven lights on it; and there are seven pipes to every one of the lights which are on the top of it;
- Darby Translation (DBY)
- And he said unto me, What seest thou? And I said, I see, and behold, a lamp-stand all of gold, with a bowl upon the top of it, and its seven lamps thereon, seven [lamps] and seven pipes to the lamps, which are upon the top thereof;
- Webster's Bible (WBS)
- And said to me, What seest thou? And I said, I have looked, and behold a candlestick: all [of] gold, with a bowl upon the top of it, and its seven lamps, and seven pipes to the seven lamps, which [were] upon the top of it.
- Young's Literal Translation (YLT)
- and he saith unto me, 'What art thou seeing?' And I say, 'I have looked, and lo, a candlestick of gold — all of it, and its bowl [is] on its top, and its seven lamps [are] upon it, and twice seven pipes [are] to the lights that [are] on its top,
Read in context
- 1ಇದಲ್ಲದೆ ನನ್ನ ಸಂಗಡ ಮಾತನಾಡಿದ ದೂತನು ತಿರಿಗಿ ಬಂದು
- 2ಒಬ್ಬನನ್ನು ನಿದ್ರೆಯಿಂದ ಎಬ್ಬಿಸುವಂತೆ ನನ್ನನ್ನು ಎಬ್ಬಿಸಿದನು. ಆಗ ಅವನು ನನಗೆ--ನೀನು ಏನು ನೋಡುತ್ತೀ ಅಂದನು. ಅದಕ್ಕೆ--ನಾನು ನೋಡಿದ್ದೇನೆ; ಇಗೋ, ಒಂದು ದೀಪಸ್ತಂಭವು, ಅದು ಎಲ್ಲಾ ಬಂಗಾರದ್ದೇ; ಅದರ ತಲೆಯ ಮೇಲೆ ಪಾತ್ರೆ ಉಂಟು; ಅದರ ಮೇಲೆ ಅದರ ಏಳು ದೀಪಗಳುಂಟು.
- 3ಅದರ ತಲೆಯ ಮೇಲಿರುವ ಏಳು ದೀಪಗಳಿಗೆ ಏಳು ಕೊಳವೆಗಳುಂಟು, ಅದರ ಬಳಿಯಲ್ಲಿ ಎರಡು ಇಪ್ಪೇಮರಗಳು, ಪಾತ್ರೆಯ ಬಲಗಡೆಯಲ್ಲಿ ಒಂದೂ ಪಾತ್ರೆಯ ಎಡಗಡೆಯಲ್ಲಿ ಒಂದೂ ಉಂಟು ಅಂದೆನು.
- 4ಹೀಗೆ ನಾನು ಉತ್ತರ ಕೊಟ್ಟು ನನ್ನ ಸಂಗಡ ಮಾತನಾಡಿದ ದೂತನಿಗೆ --ನನ್ನ ಒಡೆಯನೇ, ಇವೇನು ಅಂದೆನು.
Cross references
- Revelation 4:5 ಪ್ರಕಟನೆ 4:5ಸಿಂಹಾಸನದೊಳಗಿಂದ ಮಿಂಚುಗಳೂ ಗುಡುಗುಗಳೂ ಶಬ್ದಗಳೂ ಹೊರಟವು; ಅದರ ಮುಂದೆ ದೇವರ ಏಳು ಆತ್ಮಗಳಾಗಿರುವ ಏಳು ಬೆಂಕಿಯ ದೀಪಗಳು ಉರಿಯುತ್ತಿದ್ದವು.
- Revelation 1:12 ಪ್ರಕಟನೆ 1:12ನನ್ನ ಸಂಗಡ ಮಾತ ನಾಡುತ್ತಿದ್ದ ಶಬ್ದವನ್ನು ನೋಡುವದಕ್ಕಾಗಿ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಚಿನ್ನದ ಏಳು ದೀಪಸ್ತಂಭ ಗಳನ್ನು ನಾನು ನೋಡಿದೆನು.
- Matthew 5:14–16 ಮತ್ತಾಯನು 5:14–16ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಇರುವ ಪಟ್ಟಣವು ಮರೆಯಾಗಿರಲಾರದು. ಇಲ್ಲವೆ ಮನುಷ್ಯರು ದೀಪವನ್ನು ಹೊತ್ತಿಸಿ ಕೊಳಗದೊಳಗೆ ಇಡದೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವದು. ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.
- Exodus 25:31–38 ವಿಮೋಚನಕಾಂಡ 25:31–38ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು. ದೀಪಸ್ತಂಭದ ಉಭಯ ಪಾರ್ಶ್ವಗಳಿಂದ ಆರು ಕೊಂಬೆಗಳು, ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು. ಒಂದು ಕೊಂಬೆ ಯಲ್ಲಿ ಬಾದಾಮಿಯ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇರಬೇಕು. ದೀಪಸ್ತಂಭದಲ್ಲಿಯೇ ಗುಂಡುಗಳೂ ಪುಷ್ಪಗಳೂ ಸೇರಿದಂತೆ ಬಾದಾಮಿ ಪುಷ್ಪವಿರುವ ನಾಲ್ಕು ಹಣತೆಗಳು ಇರಬೇಕು. ಇದಲ್ಲದೆ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳ ಪ್ರಕಾರ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗುಂಡು ಇರಬೇಕು. ಅದರ ಗುಂಡುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ಅದೆಲ್ಲಾ ಶುದ್ಧ ಬಂಗಾ ರದ ಒಂದೇ ನಕ್ಷೆಯ ಕೆಲಸವಾಗಿರಬೇಕು. ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು. ಇದಲ್ಲದೆ ಅದರ ಚಿಮಟಿಗೆಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು.
- Jeremiah 52:19 ಯೆರೆಮೀಯ 52:19ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು.
- Zechariah 5:2 ಜೆಕರ್ಯ 5:2ಆಗ ಅವನು ನನಗೆ--ಏನು ನೋಡುತ್ತೀ ಅಂದಾಗ ನಾನು--ಹಾರುವ ಸುರಳಿಯನ್ನು ನೋಡು ತ್ತೇನೆ; ಅದರ ಉದ್ದವು ಇಪ್ಪತ್ತು ಮೊಳಗಳಾಗಿಯೂ ಅದರ ಅಗಲವು ಹತ್ತು ಮೊಳಗಳಾಗಿಯೂ ಇದೆ ಅಂದೆನು.
- Jeremiah 1:11–13 ಯೆರೆಮೀಯ 1:11–13ಇದಲ್ಲದೆ ಕರ್ತನ ವಾಕ್ಯವು ನನಗೆ--ಯೆರೆವಿಾ ಯನೇ, ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬಾದಾಮಿ ಮರದ ಕೋಲನ್ನು ನೋಡುತ್ತೇನೆ ಅಂದೆನು. ಆಗ ಕರ್ತನು ನನಗೆ--ನೀನು ಚೆನ್ನಾಗಿ ನೋಡಿದ್ದೀ; ನನ್ನ ವಾಕ್ಯವನ್ನು ನೆರವೇರಿಸಲು ತ್ವರೆಪಡುವೆನು ಅಂದನು. ಎರಡನೇ ಸಾರಿ ಕರ್ತನ ವಾಕ್ಯವು ನನಗೆ ಉಂಟಾಗಿ--ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬೇಯುವ ಮಡಿಕೆಯನ್ನು ನೋಡುತ್ತೇನೆ; ಅದರ ಬಾಯಿ ಉತ್ತರದ ಕಡೆಗೆ ಇದೆ ಅಂದೆನು.
- Exodus 37:17–24 ವಿಮೋಚನಕಾಂಡ 37:17–24ಅವನು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು; ಆ ದೀಪಸ್ತಂಭವನ್ನು ಅವನು ನಕ್ಷೆಯ ಕೆಲಸಮಾಡಿದ ಅಚ್ಚಿನ ಮೇಲೆ ಬಡಿದು ತಯಾರಿಸಿದನು. ಆ ದೀಪ ಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಒಂದು ಭಾಗದಿಂದ ಮೂರು ಮತ್ತೊಂದು ಭಾಗದಿಂದ ಮೂರು. ಒಂದು ಕೊಂಬೆಯಲ್ಲಿ ಬಾದಾ ಮಿಯ ಹೂವುಳ್ಳ ಮೂರು ಹಣತೆಗಳೂ, ಗುಂಡೂ ಹೂವೂ, ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಹೂವುಳ್ಳ ಮೂರು ಹಣತೆಗಳೂ ಗುಂಡೂ ಹೂವೂ; ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇದ್ದವು. ದೀಪಸ್ತಂಭದಲ್ಲಿ ಗೂಡುಗಳೂ ಹೂವುಗಳೂ ಕೂಡಿದ ಬಾದಾವಿ ಹೂವುಳ್ಳ ನಾಲ್ಕು ಹಣತೆಗಳು. ದೀಪಸ್ತಂಭದೊಳ ಗಿಂದ ಹೊರಗೆ ಬರುವ ಆರು ಕೊಂಬೆಗಳಿಗೆ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗೂಡು. ಅದರ ಗೂಡುಗಳೂ ಕೊಂಬೆಗಳೂ ಅದರಿಂದಲೇ ಉಂಟಾಗಿದ್ದವು; ಅದೆಲ್ಲಾ ಚೊಕ್ಕ ಬಂಗಾರದ ಒಂದೇ ಕಲಾಕೃತಿಯಾಗಿತ್ತು. ಅವನು ಏಳು ಬತ್ತಿಯ ದೀವಿಗೆಗಳನ್ನೂ ಕುಡಿ ಕತ್ತರಿಸಲು ಕತ್ತರಿ ಗಳನ್ನೂ ಕುಡಿ ಹಾಕಲು ಪಾತ್ರೆಗಳನ್ನೂ ಚೊಕ್ಕ ಬಂಗಾರ ದಿಂದ ಮಾಡಿದನು. ಇವೆಲ್ಲವುಗಳನ್ನೂ ಸಮಸ್ತ ಪಾತ್ರೆಗಳನ್ನೂ ಅವನು ಒಂದು ತಲಾಂತು ಚೊಕ್ಕ ಬಂಗಾರದಿಂದ ಮಾಡಿದನು.
- 2 Chronicles 4:7 2 ಪೂರ್ವಕಾಲವೃತ್ತಾಂತ 4:7ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.
- 1 Chronicles 28:15 1 ಪೂರ್ವಕಾಲವೃತ್ತಾಂತ 28:15ಬಂಗಾರದ ದೀಪಸ್ತಂಭಗಳಿಗೋಸ್ಕ ರವೂ ಅದರ ಬಂಗಾರದ ದೀಪಗಳಿಗೋಸ್ಕರವೂ ಒಂದೊಂದು ಸ್ತಂಭಕ್ಕೋಸ್ಕರ ತೂಕಮಾಡಿ ಕೊಟ್ಟನು. ಹಾಗೆಯೇ ಬೆಳ್ಳಿಯ ದೀಪಸ್ತಂಭಗಳಿಗೋಸ್ಕರ ದೀಪ ಸ್ತಂಭಕ್ಕೂ ಅದರ ದೀಪಗಳಿಗೂ ಒಂದೊಂದು ದೀಪ ಸ್ತಂಭದ ಕೆಲಸದ ಪ್ರಕಾರ ತೂಕಮಾಡಿ ಕೊಟ್ಟನು.
- 1 Kings 7:49–50 1 ಅರಸುಗಳು 7:49–50ಎಡ ಪಾರ್ಶ್ವದಲ್ಲಿ ಐದು, ಅಪರಂಜಿಯ ದೀಪ ಸ್ತಂಭಗಳು, ಚಿನ್ನದ ಅದರ ಹೂವುಗಳು, ದೀಪಗಳು, ಚಿಮಟಗಳು, ಅಪರಂಜಿಯ ತಂಬಿಗೆಗಳು, ಕತ್ತರಿಗಳು, ಸಲಿಕೆಗಳು, ಸೌಟುಗಳು, ಅಗ್ನಿ ಪಾತ್ರೆಗಳು, ಮಹಾಪರಿಶುದ್ಧ ಸ್ಥಳ ವಾದ ಒಳಗಿನ ಮನೆಯ ಕದಗಳಿಗೋಸ್ಕರವೂ ಮಂದಿ ರವೆಂಬ ಮನೆಯ ಕದಗಳಿಗೋಸ್ಕರವೂ ಬಂಗಾರದ ಕೀಲುಗಳನ್ನೆಲ್ಲಾ ಮಾಡಿಸಿದನು.ಹೀಗೆ ಅರಸನಾ ಗಿರುವ ಸೊಲೊಮೋನನು ಕರ್ತನ ಮನೆಗೋಸ್ಕರ ಮಾಡಿಸಿದ ಕೆಲಸವೆಲ್ಲಾ ತೀರಿಸಿದ ನಂತರ ತನ್ನ ತಂದೆ ಯಾದ ದಾವೀದನು ಪ್ರತಿಷ್ಟೆಮಾಡಿದ ಬೆಳ್ಳಿಯನ್ನೂ ಚಿನ್ನವನ್ನೂ ಸಾಮಾನುಗಳನ್ನೂ ತಕ್ಕೊಂಡು ಬಂದು ಕರ್ತನ ಮನೆಯ ಉಗ್ರಾಣಗಳಲ್ಲಿ ಇಟ್ಟನು.
Original words (Hebrew)
- said · H559אָמַר ʼâmar
- seest · H7200רָאָה râʼâh
- said · H559אָמַר ʼâmar
- looked · H7200רָאָה râʼâh
- candlestick · H4501מְנוֹרָה mᵉnôwrâh
- gold · H2091זָהָב zâhâb
- bowl · H1531גֹּל gôl
- top · H7218רֹאשׁ rôʼsh
- seven · H7651שֶׁבַע shebaʻ
- lamps · H5216נִיר nîyr
- seven · H7651שֶׁבַע shebaʻ
- pipes · H4166מוּצָקָה mûwtsâqâh
- seven · H7651שֶׁבַע shebaʻ
- lamps · H5216נִיר nîyr
- top · H7218רֹאשׁ rôʼsh