Zechariah · chapter 9 · verse 11
Zechariah 9:11 in Kannada
ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ.
Ninna vishayavaagi saha ninna odambadikeya raktadinda, ninna sereyavarannu neerillada kuniyo laginda kaluhisibiduttene.
Zechariah 9:11 in English
- King James Version (KJV)
- As for thee also, by the blood of thy covenant I have sent forth thy prisoners out of the pit wherein [is] no water.
- World English Bible (WEB)
- As for you also, because of the blood of your covenant, I have set free your prisoners from the pit in which is no water.
- American Standard Version (ASV)
- As for thee also, because of the blood of thy covenant I have set free thy prisoners from the pit wherein is no water.
- Bible in Basic English (BBE)
- And as for you, because of the blood of your agreement, I have sent out your prisoners from the deep hole in which there is no water.
- Darby Translation (DBY)
- As for thee also, by the blood of thy covenant, I will send forth thy prisoners out of the pit wherein is no water.
- Webster's Bible (WBS)
- As for thee also, by the blood of thy covenant I have sent forth thy prisoners out of the pit in which [is] no water.
- Young's Literal Translation (YLT)
- Also thou — by the blood of thy covenant, I have sent thy prisoners out of the pit, There is no water in it.
Read in context
- 9ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.
- 10ಇದಲ್ಲದೆ ಎಫ್ರಾಯಾಮಿನೊಳಗಿಂದ ರಥ ಗಳನ್ನೂ ಯೆರೂಸಲೇಮಿನೊಳಗಿಂದ ಕುದುರೆಗಳನ್ನೂ ತೆಗೆದುಬಿಡುವೆನು; ಯುದ್ಧದ ಬಿಲ್ಲು ಸಹ ತೆಗೆದು ಹಾಕಲ್ಪಡುವದು; ಆತನು ಅನ್ಯ ಜನಾಂಗಗಳಿಗೆ ಸಮಾ ಧಾನವನ್ನು ಹೇಳುವನು; ಆತನ ದೊರೆತನವು ಸಮುದ್ರ ದಿಂದ ಸಮುದ್ರಕ್ಕೂ ನದಿಯಿಂದ ಭೂಮಿಯ ಅಂತ್ಯಗಳ ವರೆಗೂ ಇರುವದು.
- 11ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ.
- 12ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರಿಗಿರಿ, ಎರಡ ರಷ್ಟು ನಿಮಗೆ ಕೊಡುವೆನೆಂದು ಈ ಹೊತ್ತೇ ಪ್ರಕಟಿ ಸುತ್ತೇನೆ.
- 13ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ.
Cross references
- Exodus 24:8 ವಿಮೋಚನಕಾಂಡ 24:8ತರು ವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ--ಇಗೋ, ಈ ಎಲ್ಲಾ ಮಾತುಗಳ ವಿಷಯದಲ್ಲಿ ಕರ್ತನು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತವು ಇದೇ ಅಂದನು.
- Isaiah 51:14 ಯೆಶಾಯ 51:14ಸೆರೆಯವನು ತಾನು ಕುಣಿಯಲ್ಲಿ ಸಾಯದಂತೆಯೂ ಇಲ್ಲವೆ ತನಗೆ ಆಹಾರದ ಕೊರತೆ ಇರದಂತೆಯೂ ತಾನು ಬಿಡುಗಡೆ ಹೊಂದುವಂತೆಯೂ ಆತುರಪಡುತ್ತಾನೆ.
- Psalm 102:19–21 ಕೀರ್ತನೆಗಳು 102:19–21ಜನಾಂಗಗಳೂ ರಾಜ್ಯಗಳೂ ಕರ್ತ ನನ್ನು ಸೇವಿಸುವದಕ್ಕೆ ಒಟ್ಟಾಗಿ ಕೂಡಿ ಬರುವಾಗ ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ. ಕರ್ತನು ಸೆರೆಯವರ ನರಳುವಿಕೆಯನ್ನು ಕೇಳುವ ದಕ್ಕೂ ಮರಣಕ್ಕೆ ನೇಮಕವಾದವರನ್ನು ಬಿಡಿಸು ವದಕ್ಕೂ
- Matthew 26:28 ಮತ್ತಾಯನು 26:28ಯಾಕಂದರೆ ಇದು ಬಹು ಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆ ಯ ನನ್ನ ರಕ್ತವಾಗಿದೆ ಅಂದನು.
- Isaiah 42:7 ಯೆಶಾಯ 42:7ಕರ್ತನಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
- Psalm 40:2 ಕೀರ್ತನೆಗಳು 40:2ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
- Isaiah 49:9 ಯೆಶಾಯ 49:9ನೀನು ಬಂದಿ ಸಲ್ಪಟ್ಟವರಿಗೆ--ಹೊರಗೆ ಹೋಗಿರಿ, ಕತ್ತಲೆಯಲ್ಲಿರು ವವರಿಗೆ--ನಿಮ್ಮನ್ನು ತೋರ್ಪಡಿಸಿಕೊಳ್ಳಿರಿ ಎಂದು ಹೇಳಬಹುದು. ಅವರು ದಾರಿಗಳಲ್ಲಿ ಮೇಯಿಸುವರು, ಅವರ ಎಲ್ಲಾ ಎತ್ತರವಾದ ಪ್ರದೇಶಗಳು ಕೂಡ ಅವ ರಿಗೆ ಹುಲ್ಲುಗಾವಲಾಗಿರುವವು.
- 1 Corinthians 11:25 1 ಕೊರಿಂಥದವರಿಗೆ 11:25ಅದೇ ರೀತಿಯಾಗಿ ಊಟವಾದ ಮೇಲೆ ಆತನು ಪಾತ್ರೆಯನ್ನು ತೆಗೆದುಕೊಂಡು--ಈ ಪಾತ್ರೆಯು ನನ್ನ ರಕ್ತದಲ್ಲಿರುವ ಹೊಸಒಡಂಬಡಿಕೆ ಯಾಗಿದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡಿರಿ ಅಂದನು.
- Mark 14:24 ಮಾರ್ಕನು 14:24ಆಗ ಆತನು ಅವರಿಗೆ--ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆಯ ನನ್ನ ರಕ್ತ.
- Hebrews 10:29 ಇಬ್ರಿಯರಿಗೆ 10:29ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
- Isaiah 61:1 ಯೆಶಾಯ 61:1ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ
- Psalm 107:10–16 ಕೀರ್ತನೆಗಳು 107:10–16ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು ದೇವರ ಮಾತುಗಳನ್ನು ಎದುರಿಸಿ, ಮಹೋನ್ನತನ ಆಲೋಚನೆಯನ್ನು ಅಸಹ್ಯಿಸಿದ್ದರಿಂದ ಆತನು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕ ನಿಲ್ಲದೆ ಕೆಳಗೆ ಬಿದ್ದರು. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳ ಗಿಂದ ಅವರನ್ನು ರಕ್ಷಿಸಿ ಕತ್ತಲೆಯೊಳಗಿಂದಲೂ ಮರಣದ ನೆರಳಿನಿಂದಲೂ ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟನು. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋ ಸ್ಕರವೂ ಕೊಂಡಾಡಲಿ. ಆತನು ಹಿತ್ತಾಳೆಯ ಕದ ಗಳನ್ನು ಮುರಿದು ಕಬ್ಬಿಣದ ಅಗುಳಿಗಳನ್ನು ಕಡಿದು ಬಿಟ್ಟಿದ್ದಾನೆ.