1 Chronicles · chapter 13 · verse 2
1 Chronicles 13:2 in Kannada
ಇದಲ್ಲದೆ ದಾವೀದನು ಇಸ್ರಾಯೇಲಿನ ಸಮಸ್ತ ಸಭೆಗೆ ಹೇಳಿದ್ದೇನಂದರೆ--ನಿಮಗೆ ಒಳ್ಳೆಯ ದಾಗಿ ಕಂಡರೆ ನಮ್ಮ ದೇವರಾದ ಕರ್ತನ ಅಪ್ಪಣೆ ಯಾದರೆ ಅವರು ನಮ್ಮ ಬಳಿಯಲ್ಲಿ ಕೂಡಿಬರುವ ಹಾಗೆ ಇಸ್ರಾಯೇಲಿನ ದೇಶವೆಲ್ಲಾದರಲ್ಲಿ ಉಳಿದಿ ರುವ ನಮ್ಮ ಸಹೋದರರನ್ನೂ ತಮ್ಮ ಪಟ್ಟಣ ಗಳಲ್ಲಿ ಮತ್ತು ಉಪನಗರಗಳಲ್ಲಿ ಇರುವ ಯಾಜಕ ರನ್ನೂ ಲೇವಿಯರನ್ನೂ ಎಲ್ಲಾ ಕಡೆಯಿಂದ ಕರೇ ಕಳುಹಿಸಿ
Idallade daaveedanu israayelina samasta sabhege heliddenandare--nimage olleya daagi kandare namma devaraada kartana appane yaadare avaru namma baliyalli koodibaruva haage israayelina deshavellaadaralli ulidi ruva namma sahodararannoo tamma pattana galalli mattu upanagaragalalli iruva yaajaka rannoo leviyarannoo ellaa kadeyinda kare kaluhisi
1 Chronicles 13:2 in English
- King James Version (KJV)
- And David said unto all the congregation of Israel, If [it seem] good unto you, and [that it be] of the LORD our God, let us send abroad unto our brethren every where, [that are] left in all the land of Israel, and with them [also] to the priests and Levites [which are] in their cities [and] suburbs, that they may gather themselves unto us:
- World English Bible (WEB)
- David said to all the assembly of Israel, “If it seems good to you, and if it is of the LORD our God, let’s send word everywhere to our brothers who are left in all the land of Israel, with whom the priests and Levites are in their cities that have pasture lands, that they may gather themselves to us.
- American Standard Version (ASV)
- And David said unto all the assembly of Israel, If it seem good unto you, and if it be of Jehovah our God, let us send abroad every where unto our brethren that are left in all the land of Israel, with whom the priests and Levites are in their cities that have suburbs, that they may gather themselves unto us;
- Bible in Basic English (BBE)
- And David said to all the men of Israel who had come together there, If it seems good to you and if it is the purpose of the Lord our God, let us send to all the rest of our brothers, everywhere in the land of Israel, and to the priests and the Levites in their towns and the country round them, and get them to come together here to us;
- Darby Translation (DBY)
- And David said to all the congregation of Israel, If it seem good to you, and it be of Jehovah our God, let us send abroad to our brethren everywhere, that are left in all the lands of Israel, and with them to the priests and Levites in their cities and suburbs, that they may gather themselves to us;
- Webster's Bible (WBS)
- And David said to all the congregation of Israel, If [it seemeth] good to you, and [that it is] of the LORD our God, let us send abroad to our brethren every where, [that are] left in all the land of Israel, and with them [also] to the priests and Levites [who are] in their cities [and] suburbs, that they may assemble to us:
- Young's Literal Translation (YLT)
- and David saith to all the assembly of Israel, 'If unto you it be good, and from Jehovah our God it hath broken forth — we send unto our brethren, those left in all the lands of Israel, and with them the priests and the Levites, in the cities of their suburbs, and they are gathered unto us,
Read in context
- 1ದಾವೀದನು ಸಾವಿರ ಮಂದಿಗೂ ನೂರು ಮಂದಿಗೂ ಪ್ರಧಾನರಾದವರ ಸಂಗಡ ಮತ್ತು ಎಲ್ಲಾ ನಾಯಕರ ಸಂಗಡ ಆಲೋಚನೆ ಮಾಡಿದನು.
- 2ಇದಲ್ಲದೆ ದಾವೀದನು ಇಸ್ರಾಯೇಲಿನ ಸಮಸ್ತ ಸಭೆಗೆ ಹೇಳಿದ್ದೇನಂದರೆ--ನಿಮಗೆ ಒಳ್ಳೆಯ ದಾಗಿ ಕಂಡರೆ ನಮ್ಮ ದೇವರಾದ ಕರ್ತನ ಅಪ್ಪಣೆ ಯಾದರೆ ಅವರು ನಮ್ಮ ಬಳಿಯಲ್ಲಿ ಕೂಡಿಬರುವ ಹಾಗೆ ಇಸ್ರಾಯೇಲಿನ ದೇಶವೆಲ್ಲಾದರಲ್ಲಿ ಉಳಿದಿ ರುವ ನಮ್ಮ ಸಹೋದರರನ್ನೂ ತಮ್ಮ ಪಟ್ಟಣ ಗಳಲ್ಲಿ ಮತ್ತು ಉಪನಗರಗಳಲ್ಲಿ ಇರುವ ಯಾಜಕ ರನ್ನೂ ಲೇವಿಯರನ್ನೂ ಎಲ್ಲಾ ಕಡೆಯಿಂದ ಕರೇ ಕಳುಹಿಸಿ
- 3ನಮ್ಮ ದೇವರ ಮಂಜೂಷವನ್ನು ನಮ್ಮ ಬಳಿಗೆ ತಿರಿಗಿ ತರಿಸೋಣ. ಸೌಲನ ದಿವಸಗಳಲ್ಲಿ ಅದನ್ನು ವಿಚಾರಿಸಲಿಲ್ಲ ಅಂದಾಗ
- 4ಹಾಗೆಯೇ ಮಾಡಬೇಕೆಂದು ಕೂಟದವರೆಲ್ಲರೂ ಹೇಳಿದರು. ಆ ಕಾರ್ಯವು ಸಮಸ್ತ ಜನರ ದೃಷ್ಟಿಗೆ ಯುಕ್ತವಾಗಿತ್ತು.
Cross references
- 1 Samuel 31:1 1 ಸಮುವೇಲನು 31:1ಆದರೆ ಫಿಲಿಷ್ಟಿಯರು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು. ಆಗ ಇಸ್ರಾಯೇಲ್ ಜನರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಿ ಗಿಲ್ಬೋವ ಬೆಟ್ಟದಲ್ಲಿ ಕೊಲ್ಲಲ್ಪಟ್ಟವರಾಗಿ ಬಿದ್ದರು.
- Numbers 4:4–20 ಅರಣ್ಯಕಾಂಡ 4:4–20ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ. ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. 7 ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು. ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಇದ ಲ್ಲದೆ ಅವರು ನೀಲಿ ವಸ್ತ್ರವನ್ನು ತಕ್ಕೊಂಡು ಅದರಿಂದ ದೀಪಸ್ತಂಭವನ್ನೂ ಅದರ ದೀಪಗಳನ್ನೂ ಚಮಟಿಕೆಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು. ಅವರು ಅದನ್ನೂ ಅದರ ಎಲ್ಲಾ ವಸ್ತುಗಳನ್ನೂ ಕಡಲು ಹಂದಿಯ ಚರ್ಮಗಳ ಮುಚ್ಚಳ ದೊಳಗೆ ಇಟ್ಟು ಅಡ್ಡದಂಡೆಯ ಮೇಲೆ ಹಾಕಬೇಕು. ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮವನ್ನು ಮುಚ್ಚಳ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವ ಸೇವೆಯ ಎಲ್ಲಾ ವಸ್ತುಗಳನ್ನು ಅವರು ತಕ್ಕೊಂಡು ನೀಲಿ ವಸ್ತ್ರದಿಂದ ಕಟ್ಟಿ ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ ಅಡ್ಡದಂಡೆಯ ಮೇಲೆ ಹಾಕಬೇಕು. ಬಲಿಪೀಠದ ಬೂದಿಯನ್ನು ತೆಗೆದು ಅದರ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು. ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ. ಯಾಜಕನಾದ ಆರೋನನ ಮಗನಾದ ಎಲ್ಲಾಜಾ ರನ ಕೆಲಸ ಯಾವದಂದರೆ: ದೀಪದ ಎಣ್ಣೆಯೂ ಸುಗಂಧ ಧೂಪವೂ ನಿತ್ಯದ ಆಹಾರ ಸಮರ್ಪಣೆಯೂ ಅಭಿಷೇಕದ ತೈಲವೂ ಸಮಸ್ತಗುಡಾರವೂ ಅದರ ಲ್ಲಿರುವ ಸಕಲವೂ ಪರಿಶುದ್ಧ ಸ್ಥಳದಲ್ಲಿಯೂ ಅದರ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು. ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ನೀವು ಲೇವಿಯರೊಳಗಿಂದ ಕೆಹಾತಿಯರ ಗೋತ್ರದ ಕುಟುಂಬಗಳನ್ನು ಕಡಿದು ಹಾಕಬೇಡಿರಿ. ಆದರೆ ಅವರು ಅತಿ ಪರಿಶುದ್ಧವಾ ದವುಗಳನ್ನು ಸವಿಾಪಿಸುವಾಗ ಅವರು ಸಾಯದೆ ಬದುಕುವ ಹಾಗೆ ಅವರಿಗೆ ಮಾಡಬೇಕಾದದ್ದೇ ನೆಂದರೆ--ಆರೋನನೂ ಅವನ ಕುಮಾರರೂ ಒಳಗೆ ಪ್ರವೇಶಿಸಿ ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಗೂ ನೇಮಿಸಬೇಕು. ಆದರೆ ಅವರು ಸಾಯದ ಹಾಗೆ ಪರಿಶುದ್ಧವಾದವುಗಳನ್ನು ನೋಡಲು ಒಳಗೆ ಹೋಗಬಾರದು.
- 2 Kings 9:15 2 ಅರಸುಗಳು 9:15ಆದರೆ ಅರಸನಾದ ಯೋರಾಮನು ಅರಾಮ್ಯರ ಅರಸನಾದ ಹಜಾಯೇಲನ ಸಂಗಡ ಯುದ್ಧಮಾಡುವಾಗ ಅರಾ ಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಸ್ವಸ್ಥಮಾಡಿ ಕೊಳ್ಳುವ ನಿಮಿತ್ತ ಇಜ್ರೇಲಿಗೆ ಹೋಗಿದ್ದನು.
- Exodus 18:23 ವಿಮೋಚನಕಾಂಡ 18:23ಈ ಕಾರ್ಯವನ್ನು ಮಾಡುವದಕ್ಕೆ ದೇವರು ನಿನಗೆ ಅಪ್ಪಣೆಕೊಟ್ಟರೆ ನೀನು ಇದನ್ನು ನಿರ್ವಹಿಸಲು ಶಕ್ತ ನಾಗುವಿ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು ಅಂದನು.
- 2 Chronicles 31:4–21 2 ಪೂರ್ವಕಾಲವೃತ್ತಾಂತ 31:4–21ಯಾಜಕರೂ ಲೇವಿಯರೂ ಕರ್ತನ ನ್ಯಾಯಪ್ರಮಾಣದಲ್ಲಿ ಬಲ ಗೊಳ್ಳುವ ನಿಮಿತ್ತ ಅವರಿಗೆ ತಕ್ಕ ಭಾಗವನ್ನು ಕೊಡ ಬೇಕೆಂದು ಯೆರೂಸಲೇಮಿನಲ್ಲಿರುವ ಜನರಿಗೆ ಅವನು ಆಜ್ಞಾಪಿಸಿದನು. ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲ್ ಮಕ್ಕಳು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ ಇವುಗಳ ಮೊದಲನೇ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳ ವಾಗಿ ತಂದರು; ಇದಲ್ಲದೆ ಯೆಹೂದ ಪಟ್ಟಣಗಳಲ್ಲಿ ನಿವಾಸವಾಗಿರುವ ಇಸ್ರಾಯೇಲ್ ಯೆಹೂದ ಮಕ್ಕಳು ದನಗಳಲ್ಲಿಯೂ ಕುರಿಗಳಲ್ಲಿಯೂ ದಶಮಾಂಶ ತಂದರು. ತಮ್ಮ ದೇವರಾದ ಕರ್ತನಿಗೆ ಪರಿಶುದ್ಧ ಮಾಡಿದ ಪರಿಶುದ್ಧ ವಸ್ತುಗಳಲ್ಲಿ ದಶ ಮಾಂಶದ ಪಾಲು ತಂದು ರಾಶಿರಾಶಿಯಾಗಿ ಇಟ್ಟರು. ಮೂರನೇ ತಿಂಗಳಲ್ಲಿ ರಾಶಿಗಳ ತಳಹದಿ ಆರಂಭಿಸಿ ಏಳನೇ ತಿಂಗಳಲ್ಲಿ ತೀರಿಸಿದರು. ಹಿಜ್ಕೀಯನೂ ಪ್ರಧಾನರೂ ಬಂದು ರಾಶಿಗಳನ್ನು ನೋಡಿದಾಗ ಅವರು ಕರ್ತನನ್ನೂ ಆತನ ಜನವಾದ ಇಸ್ರಾಯೇ ಲನ್ನೂ ಸ್ತುತಿಸಿದರು. ಆಗ ಹಿಜ್ಕೀಯನು ರಾಶಿಗಳನ್ನು ಕುರಿತು ಯಾಜಕರನ್ನೂ ಲೇವಿಯರನ್ನೂ ವಿಚಾರಿಸಿದನು. ಚಾದೋಕನ ಮನೆಯವನಾಗಿರುವ ಪ್ರಧಾನ ಯಾಜಕನಾದ ಅಜರ್ಯನು ಅವನಿಗೆ -- ಕರ್ತನ ಮನೆಗೆ ಕಾಣಿಕೆಗಳನ್ನು ತರಲು ಆರಂಭಿಸಿದಂದಿನಿಂದ ನಿಮಗೆ ತಿನ್ನುವದಕ್ಕೆ ಸಂಪೂರ್ಣವಿತ್ತು; ಉಳಿದದ್ದು ಬಹಳವಾಯಿತು; ಯಾಕಂದರೆ ಕರ್ತನು ತನ್ನ ಜನ ರನ್ನು ಆಶೀರ್ವದಿಸಿದ್ದಾನೆ. ಆದದರಿಂದ ಉಳಿದದ್ದು ಈ ರಾಶಿಯಾಯಿತು ಎಂದು ಹೇಳಿದನು. ಆಗ ಹಿಜ್ಕೀಯನು ಕರ್ತನ ಮನೆಯಲ್ಲಿ ಉಗ್ರಾಣಗಳನ್ನು ಸಿದ್ಧಮಾಡಲು ಹೇಳಿದನು. ಅವರು ಅವುಗಳನ್ನು ಸಿದ್ಧಮಾಡಿದ ಮೇಲೆ ಕಾಣಿಕೆಗಳನ್ನೂ ದಶಮಾಂಶ ವನ್ನೂ ಪ್ರತಿಷ್ಠಿಸಲ್ಪಟ್ಟವುಗಳನ್ನೂ ನಂಬಿಕೆಯಾಗಿ ಒಳಗೆ ತಂದರು. ಇವುಗಳ ಮೇಲೆ ಲೇವಿಯನಾದ ಕೋನನ್ಯನು ಅಧಿಕಾರಿಯಾಗಿದ್ದನು. ಅವನ ತರು ವಾಯ ಸಹೋದರನಾದ ಶಿಮ್ಮಿಯು ಅಧಿಕಾರಿಯಾಗಿ ದ್ದನು. ಇದಲ್ಲದೆ ಅರಸನಾದ ಹಿಜ್ಕೀಯನ ಅಪ್ಪಣೆ ಯಿಂದಲೂ ದೇವರ ಆಲಯದ ಅಧಿಕಾರಿಯಾದ ಅಜರ್ಯನ ಅಪ್ಪಣೆಯಿಂದಲೂ ಯೆಹೀಯೇಲನೂ ಅಜಜ್ಯನೂ ನಹತನೂ ಅಸಾಹೇಲನೂ ಯೆರೀಮೋ ತನೂ, ಯೋಜಾಬಾದನೂ, ಎಲೀಯೇಲನೂ, ಇಸ್ಮ ಕ್ಯನೂ ಮಹತನೂ ಬೆನಾಯನೂ ಇವರು ಕೋನನ್ಯನ ಅವನ ಸಹೋದರನಾದ ಶಿಮ್ಮಿಯ ಕೈಕೆಳಗೆ ವಿಚಾರಣಾ ಕರ್ತರಾಗಿದ್ದರು. ಇದಲ್ಲದೆ ಲೇವಿಯನಾಗಿರುವ ಇಮ್ನನ ಮಗನಾದ ಕೋರೆ ಎಂಬವನು ಪೂರ್ವದಿಕ್ಕಿ ನಲ್ಲಿರುವ ದ್ವಾರಪಾಲಕನು ಕರ್ತನ ಕಾಣಿಕೆಗಳನ್ನೂ ಮಹಾ ಪರಿಶುದ್ಧವಾದವುಗಳನ್ನೂ ಪಾಲು ಹಂಚುವ ದಕ್ಕೆ ದೇವರಿಗೆ ಉಚಿತಾರ್ಥವಾಗಿ ಅರ್ಪಿಸಿದ ಅರ್ಪಣೆ ಗಳ ಮೇಲೆ ಇದ್ದನು. ಇವನ ತರುವಾಯ ಯಾಜಕರ ಪಟ್ಟಣಗಳಲ್ಲಿ ತಮ್ಮ ಸಹೋದರರಿಗೆ ಸರತಿ ಸರತಿಯಾಗಿ ಹಿರಿಯರಿಗೂ ಕಿರಿಯರಿಗೂ ಪಾಲು ಹಂಚುವದಕ್ಕೆ ಎದೆನನೂ ವಿಾನ್ಯವಿಾನನೂ ಯೇಷೂವನೂ ಶೆಮಾ ಯನೂ ಅಮರ್ಯನೂ ಶೆಕನ್ಯನೂ ಇದ್ದರು. ಲೆಕ್ಕ ದಲ್ಲಿ ಬರೆಯಲ್ಪಟ್ಟ ಮೂರು ವರುಷ ಪ್ರಾಯ ಮೊದಲು ಗೊಂಡು ಮೇಲಿರುವ ಗಂಡು ಮಕ್ಕಳು ಹೊರತಾಗಿ ಕರ್ತನ ಮನೆಯಲ್ಲಿ ಪ್ರವೇಶಿಸುವವರೆಲ್ಲರಿಗೆ ಅವರ ಕೆಲಸಗಳಲ್ಲಿ ಅವರ ಸರತಿಗಳ ಪ್ರಕಾರ ಅವರ ಸೇವೆಗೆ ಅವರವರ ದಿನದ ಭಾಗವನ್ನು ಕೊಡುವದಕ್ಕೂ ಹಾಗೆಯೇ ಇಪ್ಪತ್ತು ವರುಷ ಪ್ರಾಯ ಮೊದಲು ಗೊಂಡು ಅವರ ತಂದೆಗಳ ಮನೆಯ ಹಾಗೆ ಬರೆಯ ಲ್ಪಟ್ಟ ಅವರವರ ಕೆಲಸಗಳಲ್ಲಿಯೂ ಅವರವರ ಸರತಿ ಗಳಲ್ಲಿಯೂ ಇರುವ ಯಾಜಕರಿಗೂ ಲೇವಿಯ ರಿಗೂ ಅವರ ಸಮಸ್ತ ಕೂಟದಲ್ಲಿ ಲೆಕ್ಕದೊಳಗೆ ಬರೆ ಯಲ್ಪಟ್ಟ ಅವರ ಚಿಕ್ಕವರಿಗೂ ಹೆಂಡತಿಯರಿಗೂ ಕುಮಾರರಿಗೂ ಕುಮಾರ್ತೆಯರಿಗೂ ಕೊಡುವದಕ್ಕೆ ಇದ್ದರು. ಅವರು ತಮ್ಮ ಉದ್ಯೋಗದಲ್ಲಿ ತಮ್ಮನ್ನು ಪರಿಶುದ್ಧತೆಯಲ್ಲಿ ಪರಿಶುದ್ಧ ಮಾಡಿಕೊಂಡರು. ಇದ ಲ್ಲದೆ ಯಾಜಕರಲ್ಲಿರುವ ಸಮಸ್ತ ಗಂಡಸರಿಗೂ ಲೇವಿ ಯರಲ್ಲಿ ಬರೆಯಲ್ಪಟ್ಟಿದ್ದ ಸಮಸ್ತರಿಗೂ ಪಾಲನ್ನು ಕೊಡುವದಕ್ಕೆ ತಮ್ಮ ಪಟ್ಟಣಗಳ ವಲಯಗಳಲ್ಲಿರುವ ಯಾಜಕರಾದ ಆರೋನನ ಮಕ್ಕಳಲ್ಲಿ ಹೆಸರಿನಿಂದ ಬರೆಯಲ್ಪಟ್ಟ ಮನುಷ್ಯರು ಪ್ರತಿ ಪಟ್ಟಣದಲ್ಲಿ ಇದ್ದರು. ಹೀಗೆಯೇ ಹಿಜ್ಕೀಯನು ಸಮಸ್ತ ಯೆಹೂದದಲ್ಲಿ ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಉತ್ತಮವಾದ ದ್ದನ್ನೂ ಸರಿಯಾದದ್ದನ್ನೂ ಸತ್ಯವಾದದ್ದನ್ನೂ ನಡಿಸಿ ದನು.ಇದಲ್ಲದೆ ದೇವರ ಆಲಯದ ಸೇವೆಯ ಲ್ಲಿಯೂ ನ್ಯಾಯಪ್ರಮಾಣದಲ್ಲಿಯೂ ಆಜ್ಞೆಗಳಲ್ಲಿಯೂ ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳಲ್ಲಿ ಅವನು ತನ್ನ ಪೂರ್ಣಹೃದಯದಿಂದ ಮಾಡಿ ವೃದ್ಧಿಹೊಂದಿದನು. ಇದಲ್ಲದೆ ದೇವರ ಆಲಯದ ಸೇವೆಯ ಲ್ಲಿಯೂ ನ್ಯಾಯಪ್ರಮಾಣದಲ್ಲಿಯೂ ಆಜ್ಞೆಗಳಲ್ಲಿಯೂ ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳಲ್ಲಿ ಅವನು ತನ್ನ ಪೂರ್ಣಹೃದಯದಿಂದ ಮಾಡಿ ವೃದ್ಧಿಹೊಂದಿದನು.
- 1 Chronicles 15:2–14 1 ಪೂರ್ವಕಾಲವೃತ್ತಾಂತ 15:2–14ಆಗ ದಾವೀದನು -- ಲೇವಿಯರ ಹೊರತಾಗಿ ಮತ್ತಾರೂ ದೇವರ ಮಂಜೂಷವನ್ನು ಹೊರಬಾರದು; ಯಾಕಂದರೆ ದೇವರ ಮಂಜೂಷವನ್ನು ಹೊರಲೂ ಯುಗಯುಗಕ್ಕೆ ಆತನಿಗೆ ಸೇವೆಮಾಡಲೂ ಕರ್ತನು ಅವರನ್ನು ಆರಿಸಿಕೊಂಡಿದ್ದಾನೆ ಅಂದನು. ದಾವೀ ದನು ಕರ್ತನ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತಕ್ಕೊಂಡು ಬರುವ ನಿಮಿತ್ತ ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲನ್ನು ಕೂಡಿಸಿ ಬರಮಾಡಿದನು. ಇದಲ್ಲದೆ ದಾವೀದನು ಆರೋನನ ಮಕ್ಕಳನ್ನೂ ಲೇವಿಯರನ್ನೂ ಬರಮಾಡಿದನು. ಕೆಹಾತನ ಕುಮಾರರಲ್ಲಿ ಮುಖ್ಯಸ್ಥನಾದ ಉರೀ ಯೇಲನೂ ಅವನ ಸಹೋದರರಾದ ನೂರ ಇಪ್ಪತ್ತು ಮಂದಿಯೂ; ಮೆರಾರೀಯ ಕುಮಾರರಲ್ಲಿ ಮುಖ್ಯಸ್ಥ ನಾದ ಅಸಾಯನೂ ಅವನ ಸಹೋದರರಾದ ಇನ್ನೂರ ಇಪ್ಪತ್ತು ಮಂದಿಯೂ; ಗೆರ್ಷೋಮನ ಕುಮಾರರಲ್ಲಿ ಮುಖ್ಯಸ್ಥನಾದ ಯೋವೇಲನೂ ಅವನ ಸಹೋದರ ರಾದ ನೂರ ಮೂವತ್ತು ಮಂದಿಯೂ; ಎಲೀ ಚಾಫಾನನ ಕುಮಾರರಲ್ಲಿ ಮುಖ್ಯಸ್ಥನಾದ ಶೆಮಾ ಯನೂ ಅವನ ಸಹೋದರರಾದ ಇನ್ನೂರು ಮಂದಿಯೂ; ಹೆಬ್ರೋನನ ಕುಮಾರರಲ್ಲಿ ಮುಖ್ಯಸ್ಥ ನಾದ ಎಲೀಯೇಲನೂ ಅವನ ಸಹೋದರರಾದ ಎಂಭತ್ತು ಮಂದಿಯೂ; ಉಜ್ಜೀಯೇಲನ ಕುಮಾರ ರಲ್ಲಿ ಮುಖ್ಯಸ್ಥನಾದ ಅವ್ಮೆಾನಾದಾಬನೂ ಅವನ ಸಹೋದರರಾದ ನೂರ ಹನ್ನೆರಡು ಮಂದಿಯೂ. ಆಗ ದಾವೀದನು ಚಾದೋಕ್, ಎಬ್ಯಾತ್ಯಾರ್ ಎಂಬ ಯಾಜಕರನ್ನೂ ಉರೀಯೇಲ್, ಅಸಾಯನು, ಯೋವೇಲನು, ಶೆಮಾಯನು, ಎಲೀಯೇಲನು, ಅವ್ಮೆಾನಾದಾಬ ಎಂಬ ಲೇವಿಯರನ್ನೂ ಕರೇಕಳುಹಿಸಿ ಅವರಿಗೆ ಹೇಳಿದ್ದೇನಂದರೆ-- ನೀವು ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದದರಿಂದ ಇಸ್ರಾಯೇಲಿನ ದೇವರಾದ ಕರ್ತನ ಮಂಜೂಷವನ್ನು ನಾನು ಅದ ಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ನೀವು ತರುವ ಹಾಗೆ ನಿಮ್ಮನ್ನೂ ನಿಮ್ಮ ಸಹೋದರರನ್ನೂ ಪರಿಶುದ್ಧ ಮಾಡಿಕೊಳ್ಳಿರಿ. ನೀವು ಮೊದಲಿನ ಹಾಗೆ ಮಾಡದೆ ಇದದ್ದರಿಂದ ಕರ್ತನಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದನು. ನ್ಯಾಯದ ಪ್ರಕಾರ ನಾವು ಆತನನ್ನು ಹುಡುಕಲಿಲ್ಲ ಅಂದನು. ಆಗ ಇಸ್ರಾಯೇಲಿನ ದೇವರಾದ ಕರ್ತನ ಮಂಜೂ ಷವನ್ನು ತರುವದಕ್ಕೆ ಯಾಜಕರೂ ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು.
- Proverbs 15:22 ಜ್ಞಾನೋಕ್ತಿಗಳು 15:22ಆಲೋಚನೆಯಿಲ್ಲದೆ ಉದ್ದೇಶಗಳು ಸಫಲವಾಗುವದಿಲ್ಲ; ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸ್ಥಿರಗೊಳ್ಳುತ್ತವೆ.
- Numbers 35:2–9 ಅರಣ್ಯಕಾಂಡ 35:2–9ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು. ಪಟ್ಟಣಗಳು ಅವರಿಗೆ ವಾಸಮಾಡುವದಕ್ಕೂ ಅವುಗಳ ಉಪನಗರ ಗಳು ಅವರ ಪಶುಗಳಿಗೋಸ್ಕರವೂ ಸಮಸ್ತ ಸರಕುಗಳಿ ಗೋಸ್ಕರವೂ ಸಮಸ್ತ ಪ್ರಾಣಿಗಳಿಗೋಸ್ಕರವೂ ಇರ ಬೇಕು. ನೀವು ಲೇವಿಯರಿಗೆ ಕೊಡಬೇಕಾದ ಪಟ್ಟಣ ಗಳ ಉಪನಗರಗಳು ಪಟ್ಟಣದ ಗೋಡೆಯಿಂದ ಸುತ್ತಲೂ ಸಾವಿರ ಮೊಳ ಅಗಲವಾಗಿರಬೇಕು. ನೀವು ಪಟ್ಟಣದ ಹೊರಗೆ ಪೂರ್ವ ಕಡೆಯಲ್ಲಿ ಎರಡು ಸಾವಿರ ಮೊಳ, ದಕ್ಷಿಣ ಕಡೆಯಲ್ಲಿ ಎರಡು ಸಾವಿರ ಮೊಳ, ಪಶ್ಚಿಮ ಕಡೆಯಲ್ಲಿ ಎರಡು ಸಾವಿರ ಮೊಳ, ಉತ್ತರ ಕಡೆಯಲ್ಲಿ ಎರಡು ಸಾವಿರ ಮೊಳ ಅಳೆಯಬೇಕು; ಮಧ್ಯದಲ್ಲಿ ಪಟ್ಟಣವಿರಬೇಕು; ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು. ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು. ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು. ನೀವು ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು. ಕರ್ತನು ಮೋಶೆಯ ಸಂಗಡ ಮಾತನಾಡಿ--
- Isaiah 37:4 ಯೆಶಾಯ 37:4ನಿನ್ನ ದೇವರಾಗಿರುವ ಕರ್ತನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ಮಾತುಗಳನ್ನು ಕೇಳಿರುವನು; ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂ ಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿ ತೀರಿಸಾನು; ಆದದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಆತನನ್ನು ಪ್ರಾರ್ಥಿಸು ಎಂಬದಾಗಿ ಹಿಜ್ಕೀಯನು ಅನ್ನುತ್ತಾನೆ ಎಂದು ಹೇಳಿದರು.
- 2 Samuel 7:2–5 2 ಸಮುವೇಲನು 7:2–5ಅರ ಸನು ಪ್ರವಾದಿಯಾದ ನಾತಾನನಿಗೆ--ನೋಡು, ನಾನು ದೇವದಾರುಗಳ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಮಂಜೂಷವು ತೆರೆಗಳ ಮಧ್ಯದಲ್ಲಿ ವಾಸವಾಗಿದೆ ಅಂದನು. ಆಗ ನಾತಾನನು ಅರಸ ನಿಗೆ--ನೀನು ಹೋಗಿ ನಿನ್ನ ಹೃದಯದಲ್ಲಿರುವದನ್ನೆಲ್ಲಾ ಮಾಡು; ಕರ್ತನು ನಿನ್ನ ಸಂಗಡ ಇದ್ದಾನೆ ಅಂದನು. ಆ ರಾತ್ರಿಯಲ್ಲಿ ಏನಾಯಿತಂದರೆ, ಕರ್ತನ ವಾಕ್ಯವು ನಾತಾನನಿಗೆ ಉಂಟಾಗಿ-- ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ--ಕರ್ತನು ಹೇಳಬೇಕಾದ ದ್ದೇನಂದರೆ--ನಾನು ವಾಸವಾಗಿರುವದಕ್ಕೆ ನೀನು ನನಗೆ ಮನೆಯನ್ನು ಕಟ್ಟುವಿಯೋ?
- 1 Kings 12:7 1 ಅರಸುಗಳು 12:7ಅವರು ಅವನಿಗೆ--ನೀನು ಇಂದು ಈ ಜನರಿಗೆ ಸೇವಕನಾಗಿ ಅವರನ್ನು ಸೇವಿಸಿ ಒಳ್ಳೇ ಮಾತುಗಳಿಂದ ಅವರಿಗೆ ಪ್ರತ್ಯುತ್ತರವನ್ನು ಕೊಡು, ಆಗ ಅವರು ನಿರಂತರವಾಗಿ ನಿನ್ನ ಸೇವಕರಾಗಿರುವರು ಎಂದು ಹೇಳಿದರು.
- Philemon 1:8–9 ಫಿಲೆಮೋನನಿಗೆ 1:8–9ಆದಕಾರಣ ನಿನಗೆ ಯುಕ್ತವಾದದ್ದನ್ನು ಆಜ್ಞಾಪಿಸು ವದಕ್ಕೆ ಕ್ರಿಸ್ತನಲ್ಲಿ ನನಗೆ ಬಹು ಧೈರ್ಯವಿದ್ದರೂ ಹಾಗೆ ಆಜ್ಞಾಪಿಸದೆ ಮುದುಕನೂ ಈಗ ಯೇಸು ಕ್ರಿಸ್ತನ ಸೆರೆಯವನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ.
Original words (Hebrew)
- David · H1732דָּוִד Dâvid
- said · H559אָמַר ʼâmar
- congregation · H6951קָהָל qâhâl
- Israel · H3478יִשְׂרָאֵל Yisrâʼêl
- good · H2895טוֹב ṭôwb
- God · H430אֱלֹהִים ʼĕlôhîym
- send · H7971שָׁלַח shâlach
- abroad · H6555פָּרַץ pârats
- brethren · H251אָח ʼâch
- left · H7604שָׁאַר shâʼar
- land · H776אֶרֶץ ʼerets
- Israel · H3478יִשְׂרָאֵל Yisrâʼêl
- priests · H3548כֹּהֵן kôhên
- Levites · H3881לֵוִיִּי Lêvîyîy
- cities · H5892עִיר ʻîyr
- suburbs · H4054מִגְרָשׁ migrâsh
- gather · H6908קָבַץ qâbats